• English
    • Login / Register

    ಈ ಫೆಬ್ರವರಿಯ ಕಾರು ಮಾರಾಟದಲ್ಲಿ Hyundai ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ Mahindra

    ಮಾರ್ಚ್‌ 04, 2025 10:32 pm ರಂದು shreyash ಮೂಲಕ ಪ್ರಕಟಿಸಲಾಗಿದೆ

    • 8 Views
    • ಕಾಮೆಂಟ್‌ ಅನ್ನು ಬರೆಯಿರಿ

    ಸ್ಕೋಡಾ ಕಳೆದ ತಿಂಗಳು ಅತ್ಯಧಿಕ MoM (ತಿಂಗಳಿನಿಂದ ತಿಂಗಳು) ಮತ್ತು ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯನ್ನು ದಾಖಲಿಸಿದೆ

    Maruti, Hyundai, and Mahindra

    2025ರ ಫೆಬ್ರವರಿಯ ಮಾರಾಟ ವರದಿ ಈಗ ನಮ್ಮ ಬಳಿ ಇದೆ, ಮತ್ತು ನಿರೀಕ್ಷೆಯಂತೆ, ಮಾರುತಿ 1.6 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಬಾರಿ ಹ್ಯುಂಡೈಯನ್ನು ಹಿಂದಿಕ್ಕುವ ಮೂಲಕ, ಮಹೀಂದ್ರಾ ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರು ಬ್ರಾಂಡ್ ಆಗಿ ಹೊರಹೊಮ್ಮಿದೆ. ಹಾಗೆಯೇ, ಸ್ಕೋಡಾ ಅತ್ಯಧಿಕ ಮಾಸಿಕ ಮತ್ತು ವಾರ್ಷಿಕ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ. ಫೆಬ್ರವರಿ ತಿಂಗಳ ಬ್ರ್ಯಾಂಡ್‌ವಾರು ಮಾರಾಟವನ್ನು ವಿವರವಾಗಿ ನೋಡೋಣ.

    ಬ್ರ್ಯಾಂಡ್‌

    2025 ಫೆಬ್ರವರಿ 

    2025 ಜನವರಿ 

    MoM ಬೆಳವಣಿಗೆ %

    ಫೆಬ್ರವರಿ 2024

    YoY ಬೆಳವಣಿಗೆ %

    ಮಾರುತಿ ಸುಜುಕಿ

    1,60,791

    1,73,599

    -7.4

    1,60,272

    0.3

    ಮಹೀಂದ್ರಾ

    50,420

    50,659

    -0.5

    42,401

    18.9

    ಹ್ಯುಂಡೈ

    47,727

    54,003

    -11.6

    50,201

    -4.9

    ಟಾಟಾ

    46,437

    48,075

    -3.4

    51,270

    -9.4

    ಟೊಯೋಟಾ

    26,414

    26,178

    0.9

    23,300

    13.4

    ಕಿಯಾ

    25,026

    25,025

    0

    20,200

    23.9

    ಹೋಂಡಾ

    5,616

    6,103

    -8

    7,142

    -21.4

    ಸ್ಕೋಡಾ

    5,583

    4,133

    35.1

    2,254

    147.7

    ಎಂಜಿ

    4,002

    4,455

    -10.2

    4,532

    -11.7

    ವೋಕ್ಸ್‌ವ್ಯಾಗನ್

    3,110

    3,344

    -7

    3,019

    3

    ಗಮನಿಸಿದ ಪ್ರಮುಖ ಅಂಶಗಳು

    Maruti Fronx

    • 2025ರ ಫೆಬ್ರವರಿಯಲ್ಲಿ ಮಾರುತಿ 1.6 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ, ಇದು ಮಹೀಂದ್ರಾ, ಹ್ಯುಂಡೈ ಮತ್ತು ಟಾಟಾಗಳ ಒಟ್ಟು ಮಾರಾಟಕ್ಕಿಂತ ಹೆಚ್ಚಾಗಿದೆ. ಆದರೆ, ಈ ಕಾರು ತಯಾರಕರು ಮಾಸಿಕ ಮಾರಾಟದಲ್ಲಿ 7 ಶೇಕಡಕ್ಕಿಂತ ಹೆಚ್ಚಿನ ನಷ್ಟವನ್ನು ದಾಖಲಿಸಿದ್ದಾರೆ.

    • ಕಳೆದ ತಿಂಗಳು 50,000 ಕ್ಕೂ ಹೆಚ್ಚು ಕಾರುಗಳನ್ನು ಡೆಲಿವೆರಿ ನೀಡುವ ಮೂಲಕ, ಮಹೀಂದ್ರಾ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಆಗಿ ಹುಂಡೈ ಅನ್ನು ಹಿಂದಿಕ್ಕಿದೆ. ತಿಂಗಳಿನಿಂದ ತಿಂಗಳ (MoM) ಬೇಡಿಕೆ ಸ್ಥಿರವಾಗಿದ್ದರೂ, ಭಾರತೀಯ ಮೂಲದ ಈ ಕಾರು ತಯಾರಕರ ವಾರ್ಷಿಕ ಮಾರಾಟದಲ್ಲಿ ಸುಮಾರು ಶೇಕಡಾ 19 ರಷ್ಟು ಹೆಚ್ಚಾಗಿದೆ.

    was this article helpful ?

    Write your ಕಾಮೆಂಟ್

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience