ಬೆಂಝ್‌ನ ಕೈಗೆಟಕುವ ಬೆಲೆಯ ಲಕ್ಷುರಿ ಇವಿ Mercedes-Benz EQA ಬಿಡುಗಡೆ
ಮರ್ಸಿಡಿಸ್ ಇಕ್ಯೂಎ ಗಾಗಿ dipan ಮೂಲಕ ಜುಲೈ 08, 2024 07:23 pm ರಂದು ಪ್ರಕಟಿಸಲಾಗಿದೆ
- 58 Views
- ಕಾಮೆಂಟ್ ಅನ್ನು ಬರೆಯಿರಿ
ಇದು 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು WLTP-ಕ್ಲೈಮ್ ಮಾಡಲಾದ 560 ಕಿಮೀ ರೇಂಜ್ ಅನ್ನು ಹೊಂದಿದೆ
- EQA ಈಗ ಭಾರತದಲ್ಲಿ Mercedes-Benz ನ ಅತ್ಯಂತ ಕೈಗೆಟುಕುವ ಇವಿ ಆಗಿದೆ, EQB ಗಿಂತ ಕೆಳಗಿನ ಸ್ಥಾನದಲ್ಲಿದೆ.
- ಇದು ವಿಭಿನ್ನ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು ಮತ್ತು ಬಂಪರ್‌ಗಳನ್ನು ಅದರ ದಹನ-ಎಂಜಿನ್ ಪ್ರತಿರೂಪವಾದ GLA ಯಿಂದ ಹೊಂದಿದೆ.
- ಇಂಟಿರೀಯರ್‌ನಲ್ಲಿ ವಿಭಿನ್ನ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದೆ, ಎಸಿ ವೆಂಟ್‌ಗಳಲ್ಲಿ ತಾಮ್ರದ ಬಣ್ಣದ ಇನ್ಸರ್ಟ್‌ಗಳು ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಟ್ರೈಸ್ಟಾರ್ ಟ್ರಿಮ್ ಇದೆ.
- ಇದು ಮುಂಭಾಗದ ಚಕ್ರದಲ್ಲಿ (190 PS/385 Nm) ಅಳವಡಿಸಲಾಗಿರುವ ಏಕೈಕ ಇಲೆಕ್ಟ್ರಿಕ್ ಮೋಟರ್ ಅನ್ನು ಬಳಸುತ್ತದೆ.
- ಇದು ಭಾರತದಲ್ಲಿ ಬಿಎಮ್‌ಡಬ್ಲ್ಯೂ ಐಎಕ್ಸ್1 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ಗೆ ಪ್ರತಿಸ್ಪರ್ಧಿಯಾಗಿದೆ.
ಮರ್ಸಿಡೀಸ್-ಬೆಂಜ್ ಇಕ್ಯೂಎ ಅನ್ನು ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆಯು 66 ಲಕ್ಷ ರೂ.ನಿಂದ (ಪರಿಚಯಾತ್ಮಕ ಎಕ್ಸ್ ಶೋ ರೂಂ, ಪ್ಯಾನ್ ಇಂಡಿಯಾ) ಪ್ರಾರಂಭವಾಗಲಿದೆ. ಸಂಪೂರ್ಣ ಲೋಡ್ ಮಾಡಲಾದ ಒಂದೇ 250+ ಟ್ರಿಮ್‌ನಲ್ಲಿ ಲಭ್ಯವಿದೆ, EQA ಈಗ ಭಾರತೀಯ ಮಾರುಕಟ್ಟೆಯಲ್ಲಿ ಕಾರು ತಯಾರಕರ ಅತ್ಯಂತ ಕೈಗೆಟುಕುವ ಐಷಾರಾಮಿ ಇವಿ ಕಾರು ಆಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಬೆಲೆ ಈ ಕೆಳಗಿನಂತಿದೆ:
ಮೊಡೆಲ್ |
ಬೆಲೆ (ಪರಿಚಯಾತ್ಮಕ) |
ಮರ್ಸಿಡೀಸ್-ಬೆಂಜ್ ಇಕ್ಯೂಎ 250+ |
66 ಲಕ್ಷ ರೂ. |
ಎಕ್ಸ್ ಶೋರೂಂ ಬೆಲೆ, ಪ್ಯಾನ್-ಇಂಡಿಯಾ
ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿವರವಾಗಿ ಗಮನಿಸೋಣ
ಎಕ್ಸ್‌ಟಿರೀಯರ್
ಮರ್ಸಿಡೀಸ್-ಬೆಂಜ್ ಇಕ್ಯೂಎಯು ಮರ್ಸಿಡಿಸ್‌ನ ಇತರ ಎಲೆಕ್ಟ್ರಿಕ್ ಮೊಡೆಲ್‌ಗಳಂತೆ ಅದೇ ವಿನ್ಯಾಸದ ಭಾಷೆಯನ್ನು ಹೊಂದಿದೆ. ಅಂತೆಯೇ, ಇದು ಹೊಸ ಸ್ಮೋಕ್ಡ್ ಹೆಡ್‌ಲೈಟ್‌ಗಳನ್ನು ಗ್ರಿಲ್‌ನ ಮೇಲ್ಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಮತ್ತು ಕನೆಕ್ಟೆಡ್ ಟೈಲ್ ಲೈಟ್ ಸೆಟಪ್‌ನೊಂದಿಗೆ ಪಡೆಯುತ್ತದೆ. ಸಾಂಪ್ರದಾಯಿಕ ಮರ್ಸಿಡಿಸ್ ಇವಿ ಶೈಲಿಯಲ್ಲಿ ಗ್ರಿಲ್ ಅನ್ನು ಫಿನಿಶ್ ಮಾಡಲಾಗಿದೆ ಮತ್ತು ಅದರ ಮೇಲೆ ಅನೇಕ ಮೂರು-ಪಾಯಿಂಟ್ ಬೆಳ್ಳಿ ನಕ್ಷತ್ರಗಳನ್ನು ಹೊಂದಿದೆ. ಇದು ಬ್ಯಾಟರಿ ಪ್ಯಾಕ್ ಅನ್ನು ತಂಪಾಗಿಸಲು ಕ್ರಿಯಾತ್ಮಕ ಏರ್ ವೆಂಟ್‌ಗಳೊಂದಿಗೆ ಸ್ವಲ್ಪ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು 19-ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ.


GLA SUVಗೆ ಹೋಲಿಸಿದರೆ EQA ಯ ಗಾತ್ರಗಳು ಈ ಕೆಳಗಿನಂತಿವೆ:
ಗಾತ್ರ |
ಮರ್ಸಿಡೀಸ್-ಬೆಂಜ್ ಇಕ್ಯೂಎ |
ಮರ್ಸಿಡೀಸ್-ಬೆಂಜ್ ಜಿಎಲ್‌ಎ |
ಉದ್ದ |
4,465 ಮಿ.ಮೀ |
4,412 ಮಿ.ಮೀ |
ಅಗಲ |
1,834 ಮಿ.ಮೀ |
1,834 ಮಿ.ಮೀ |
ಎತ್ತರ |
1,624 ಮಿ.ಮೀ |
1,616 ಮಿ.ಮೀ |
ವೀಲ್‌ಬೇಸ್ |
2,729 ಮಿ.ಮೀ |
2,729 ಮಿ.ಮೀ |
ಬೂಟ್ ಸ್ಪೇಸ್ |
340 ಲೀಟರ್‌ಗಳು |
427 ಲೀಟರ್‌ಗಳು |
ಮರ್ಸಿಡಿಸ್ ಇಕ್ಯೂಎಯನ್ನು ಆರು ಮೊನೊಟೋನ್ ಬಣ್ಣಗಳಲ್ಲಿ ನೀಡುತ್ತಿದೆ, ಅವುಗಳೆಂದರೆ ಪೋಲಾರ್ ವೈಟ್, ನೈಟ್ ಬ್ಲಾಕ್, ಕಾಸ್ಮೊಸ್ ಬ್ಲ್ಯಾಕ್, ಮೌಂಟೇನ್ ಗ್ರೇ, ಹೈಟೆಕ್ ಸಿಲ್ವರ್ ಮತ್ತು ಸ್ಪೆಕ್ಟ್ರಲ್ ಬ್ಲೂ, ಹಾಗೆಯೇ ಎರಡು ಮ್ಯಾನುಫ್ಯಾಕ್ಚರ್ ಪೇಂಟ್ ಸ್ಕೀಮ್‌ಗಳಾದ ಪ್ಯಾಟಗೋನಿಯಾ ರೆಡ್ ಮೆಟಾಲಿಕ್ ಮತ್ತು ಮೌಂಟೇನ್ ಗ್ರೇ ಮ್ಯಾಗ್ನೋ ಬಣ್ಣಗಳಲ್ಲಿ ಲಭ್ಯವಿದೆ.
ಇಂಟಿರೀಯರ್
ಮರ್ಸಿಡೀಸ್-ಬೆಂಜ್ ಇಕ್ಯೂಎ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಹಾಗೆಯೇ, ಇದು ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ ನಕ್ಷತ್ರಗಳು, ಕಾಪರ್ ಫಿನಿಶ್ಡ್ ಪ್ರಕಾಶಿತ AC ವೆಂಟ್‌ಗಳು ಮತ್ತು ಟ್ರಿಮ್‌ಗಳು ಮತ್ತು ವಿಭಿನ್ನ ರೋಸ್ ಗೋಲ್ಡ್ ಮತ್ತು ಟೈಟಾನಿಯಂ ಗ್ರೇ ಪರ್ಲ್ ಥೀಮ್‌ನ ಇಂಟಿರೀಯರ್ ಸೇರಿದಂತೆ ಕೆಲವು EV-ನಿರ್ದಿಷ್ಟ ವಿನ್ಯಾಸ ಸೇರ್ಪಡೆಗಳನ್ನು ಪಡೆಯುತ್ತದೆ. ಆಸನಗಳನ್ನು ಸಮರ್ಥನೀಯ ಪಿಇಟಿ ಮೆಟಿರೀಯಲ್‌ನಲ್ಲಿ ಸಜ್ಜುಗೊಳಿಸಲಾಗಿದೆ. ಹಿಂಬದಿಯ ಸೀಟ್‌ಗಳು ಸಹ ಜಿಎಲ್‌ಎಗಿಂತ ಭಿನ್ನವಾಗಿವೆ ಮತ್ತು ಇದು ಈಗ ಮಧ್ಯದ ಸೀಟಿನಲ್ಲಿ ಸಂಯೋಜಿತ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತದೆ. ಹಿಂಭಾಗದ ಸೀಟ್ ಬ್ಯಾಕ್‌ರೆಸ್ಟ್ ಕೂಡ 40:20:40 ಸ್ಪ್ಲಿಟ್-ಫೋಲ್ಡಿಂಗ್ ಆಗಿದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಮರ್ಸಿಡೀಸ್-ಬೆಂಜ್ ಇಕ್ಯೂಎಯು 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳನ್ನು ಒಂದೇ ಗಾಜಿನ ಫ್ಯಾನಲ್‌ಗೆ ಸಂಯೋಜಿಸುತ್ತದೆ (ಒಂದು ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಇನ್ನೊಂದು ವಯರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುವ ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ). ಇದು ಟಚ್-ಆಧಾರಿತ ಕಂಟ್ರೋಲ್‌ಗಳೊಂದಿಗೆ ಡ್ಯುಯಲ್-ಬಾರ್ ಸ್ಟೀರಿಂಗ್ ಚಕ್ರವನ್ನು ಸಹ ಪಡೆಯುತ್ತದೆ. ಇದರ ಫೀಚರ್‌ನ ಸೆಟ್ ಸೂಟ್ ಹೆಡ್ಸ್-ಅಪ್ ಡಿಸ್‌ಪ್ಲೇ, ಪ್ಯಾನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಎಸಿ, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಸೆಟಪ್, ಮೆಮೊರಿ ಕಾರ್ಯದೊಂದಿಗೆ ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಸುರಕ್ಷತಾ ಪ್ಯಾಕೇಜ್ ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ಹಿಲ್-ಹೋಲ್ಡ್ ಅಸಿಸ್ಟ್, ಹಿಲ್-ಡಿಸೆಂಟ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಪಾರ್ಕ್ ಸಹಾಯದೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್
ಇಕ್ಯೂಎ 250+ 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ನಿಂದ ಪವರ್ ಅನ್ನು ಪಡೆಯುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ವಿಶೇಷಣಗಳು |
ಮರ್ಸಿಡೀಸ್-ಬೆಂಜ್ ಇಕ್ಯೂಎ 250+ |
ಬ್ಯಾಟರಿ ಪ್ಯಾಕ್ |
70.5 ಕಿ.ವ್ಯಾಟ್ |
ಇಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
ಪವರ್ |
190 ಪಿಎಸ್ |
ಟಾರ್ಕ್ |
385 ಎನ್‌ಎಮ್ |
ರೇಂಜ್ |
560 ಕಿ.ಮೀ ವರೆಗೆ (WLTP) |
ಡ್ರೈವ್‌ಟ್ರೈನ್ |
ಫ್ರಂಟ್-ವೀಲ್-ಡ್ರೈವ್ (FWD) |
ಈ ಇವಿಯು 8.6 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಸಾಧಿಸುತ್ತದೆ. ಚಾರ್ಜಿಂಗ್ ವಿಷಯದಲ್ಲಿ, ಇದು 11 ಕಿ.ವ್ಯಾಟ್ AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ಬ್ಯಾಟರಿಯನ್ನು 7 ಗಂಟೆ ಮತ್ತು 15 ನಿಮಿಷಗಳಲ್ಲಿ 0-100 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ, ಆದರೆ 100 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಕೇವಲ 35 ನಿಮಿಷದಲ್ಲಿ 10-80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಪ್ರತಿಸ್ಪರ್ಧಿಗಳು
EQA, ಈಗ ಭಾರತದಲ್ಲಿ ಅತ್ಯಂತ ಕೈಗೆಟುಕುವ ಮರ್ಸಿಡಿಸ್ ಇವಿಯಾಗಿದ್ದು, ಇದರ ಬೆಲೆಯು 66 ಲಕ್ಷ ರೂ.ನಿಂದ (ಪರಿಚಯಾತ್ಮಕ, ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಇದು ಮಾರುಕಟ್ಟೆಯಲ್ಲಿ ವೋಲ್ವೋ ಎಕ್ಸ್‌ಸಿ40 ರೀಚಾರ್ಜ್, ವೋಲ್ವೋ ಸಿ40 ರೀಚಾರ್ಜ್, ಬಿಎಮ್‌ಡಬ್ಲ್ಯೂ ಐಎಕ್ಸ್1 ಮತ್ತು ಕಿಯಾ ಇವಿ6 ನಂತಹವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಪ್ರಪಂಚದಿಂದ ತ್ವರಿತ ಆಪ್‌ಡೇಟ್‌ಗಳನ್ನು ಬಯಸುವಿರಾ? ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.