Login or Register ಅತ್ಯುತ್ತಮ CarDekho experience ಗೆ
Login

ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್‌ಶಿಪ್‌ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG

ಎಂಜಿ cyberster ಗಾಗಿ kartik ಮೂಲಕ ಫೆಬ್ರವಾರಿ 15, 2025 06:31 am ರಂದು ಪ್ರಕಟಿಸಲಾಗಿದೆ

'ಸೆಲೆಕ್ಟ್' ಬ್ರಾಂಡ್‌ನ ಅಡಿಯಲ್ಲಿ ಭಾರತದಲ್ಲಿ ಬರಲಿರುವ ಮೊದಲ ಎರಡು ಮಾಡೆಲ್‌ಗಳಲ್ಲಿ MG ಯ ಮೊದಲ ರೋಡ್‌ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ

ಬ್ರ್ಯಾಂಡ್‌ನ ಪ್ರೀಮಿಯಂ ಶೋರೂಮ್ ಆಗಿರುವ MG ಸೆಲೆಕ್ಟ್ ಶೀಘ್ರದಲ್ಲೇ ಭಾರತದಾದ್ಯಂತ ಶಾಖೆಗಳನ್ನು ತೆರೆಯಲಿದೆ. ಮೊದಲ ಹಂತದಲ್ಲಿ, 12 ಪಾಲುದಾರರ ಸಹಾಯದಿಂದ MG 13 ನಗರಗಳಿಗೆ ವಿಸ್ತರಿಸಲು ಯೋಜಿಸಿದೆ. ಭಾರತದಲ್ಲಿ ಪ್ರೀಮಿಯಂ ಮಾಡೆಲ್‌ಗಳನ್ನು ಲಾಂಚ್ ಮಾಡಲು MG ಸೆಲೆಕ್ಟ್ ಅನ್ನು ಬಳಸಲಿದ್ದು, ಇದು ಸಂಪೂರ್ಣವಾಗಿ ಎಲೆಕ್ಟ್ರಿಕ್ ರೋಡ್‌ಸ್ಟರ್ ಆಗಿರುವ MG ಸೈಬರ್‌ಸ್ಟರ್ ಮತ್ತು ಪ್ರೀಮಿಯಂ ಎಲೆಕ್ಟ್ರಿಕ್ MPV M9 ನೊಂದಿಗೆ ಪ್ರಾರಂಭವಾಗುತ್ತದೆ. MG ಯ ಮೊದಲ ವಿಸ್ತರಣಾ ಹಂತದಲ್ಲಿ ಸೇರಿಸಲಾದ ನಗರಗಳು ಮತ್ತು ಸೆಲೆಕ್ಟ್ ಬ್ರ್ಯಾಂಡ್‌ನ ಅಡಿಯಲ್ಲಿರುವ ಮೊದಲ ಎರಡು ಮಾಡೆಲ್‌ಗಳ ಸಂಕ್ಷಿಪ್ತ ನೋಟ ಇಲ್ಲಿದೆ:

ನಗರಗಳು ಮತ್ತು ಡೀಲರ್‌ಶಿಪ್‌ಗಳು

ನಗರ

ಡೀಲರ್ ಹೆಸರು

ಮುಂಬೈ

ಕ್ರಿಶಿವ್ ಆಟೋ

ದೆಹಲಿ

ಶಿವ ಮೋಟೋಕಾರ್ಪ್

ಬೆಂಗಳೂರು ಪ್ರದೇಶ 1

ಜುಬಿಲೆಂಟ್ ಮೋಟಾರ್ ವರ್ಕ್ಸ್

ಬೆಂಗಳೂರು ಪ್ರದೇಶ 2

ಐಕೋನಿಕ್ ಆಟೋಮೋಟಿವ್ಸ್

ಹೈದರಾಬಾದ್

ಜಯಲಕ್ಷ್ಮಿ ಮೋಟಾರ್ಸ್

ಪುಣೆ

ನೋವಾ ಸೆಲೆಕ್ಟ್

ಚೆನ್ನೈ

FPL ವೆಹಿಕಲ್ಸ್

ಅಹಮದಾಬಾದ್

ಏರೋಮಾರ್ಕ್ ಕಾರ್ಸ್

ಕೋಲ್ಕತ್ತಾ

ಏರೋಮಾರ್ಕ್ ಕಾರ್ಸ್

ಕೊಚ್ಚಿ

ಕೋಸ್ಟಲ್ ಸೆಲೆಕ್ಟ್

ಚಂಡೀಗಢ

ಕೃಷ್ಣ ಮೋಟಾರ್

ಥಾಣೆ

ತೇಜ್‌ಪಾಲ್ ಮೋಟಾರ್ಸ್

ಗುರಗಾಂವ್

ಜುಬಿಲೆಂಟ್ ಮೋಟಾರ್ ವರ್ಕ್ಸ್

ಸೂರತ್

ಓಪುಲೆಂಟ್ ಆಟೋ

ಮೊದಲ ಹಂತದಲ್ಲಿ, MG ಯ ಪ್ರೀಮಿಯಂ 'ಸೆಲೆಕ್ಟ್' ಡೀಲರ್‌ಶಿಪ್‌ಗಳು ದೇಶಾದ್ಯಂತ ಒಟ್ಟು 14 ಸ್ಥಳಗಳಲ್ಲಿ 13 ನಗರಗಳಲ್ಲಿ ತೆರೆಯಲಿವೆ. ಇವುಗಳಲ್ಲಿ ಉತ್ತರದಲ್ಲಿ ದೆಹಲಿ, ಚಂಡೀಗಢ ಮತ್ತು ಗುರುಗ್ರಾಮ್, ಪಶ್ಚಿಮದಲ್ಲಿ ಪುಣೆ, ಮುಂಬೈ ಮತ್ತು ಥಾಣೆ, ಪೂರ್ವದಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ 2 ಡೀಲರ್‌ಶಿಪ್‌ಗಳು, ಚೆನ್ನೈ ಮತ್ತು ಕೊಚ್ಚಿಯಲ್ಲಿ ತಲಾ ಒಂದು ಡೀಲರ್‌ಶಿಪ್‌ಗಳು ಸೇರಿವೆ. ಇದು ದೇಶದಾದ್ಯಂತದ ಇರುವ ವಿವಿಧ ಪ್ರದೇಶಗಳ ಎಲ್ಲಾ ಪ್ರಮುಖ ನಗರಗಳನ್ನು ಒಳಗೊಂಡಿದೆ.

'ಸೆಲೆಕ್ಟ್' ಬ್ರಾಂಡ್ ಅಡಿಯಲ್ಲಿರು ಬರುವ ಕಾರುಗಳು

ಇದೀಗ, 'ಸೆಲೆಕ್ಟ್' ಬ್ರಾಂಡ್ ಅಡಿಯಲ್ಲಿ ಎರಡು ಕಾರುಗಳನ್ನು ದೃಢೀಕರಿಸಲಾಗಿದೆ, ಅವುಗಳೆಂದರೆ MG ಸೈಬರ್‌ಸ್ಟರ್ ಮತ್ತು MG M9 ಮತ್ತು 2026 ರ ಅಂತ್ಯದ ವೇಳೆಗೆ ಇನ್ನೆರಡು ಕಾರುಗಳು ಬಿಡುಗಡೆಯಾಗಲಿವೆ. 'ಸೆಲೆಕ್ಟ್' ಲೈನ್‌ಅಪ್ ಕೇವಲ EV ಗಳನ್ನು ಮಾತ್ರವಲ್ಲದೆ ಪ್ಲಗ್-ಇನ್ ಮತ್ತು ಸ್ಟ್ರಾಂಗ್ ಹೈಬ್ರಿಡ್‌ಗಳನ್ನು ಸಹ ಒಳಗೊಂಡಿರುತ್ತದೆ ಎಂದು MG ಕಳೆದ ವರ್ಷ ದೃಢಪಡಿಸಿತ್ತು. ಇಲ್ಲಿಯವರೆಗೆ ದೃಢಪಡಿಸಿದ ಎರಡು ಮಾಡೆಲ್‌ಗಳ ತ್ವರಿತ ನೋಟ ಇಲ್ಲಿದೆ:

MG ಸೈಬರ್‌ಸ್ಟರ್

MG ಸೈಬರ್‌ಸ್ಟರ್ ಭಾರತದಲ್ಲಿ ಬ್ರ್ಯಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ರೋಡ್‌ಸ್ಟರ್ ಆಗಿರುತ್ತದೆ. ಇದು 77 kWh ಬ್ಯಾಟರಿ ಮತ್ತು 443 ಕಿ.ಮೀ WLTP-ರೇಟೆಡ್ ರೇಂಜ್ ಅನ್ನು ಹೊಂದಿದೆ. ಇದರ ಡ್ಯುಯಲ್ ಮೋಟಾರ್‌ಗಳು 510 PS ಮತ್ತು 725 Nm ಟಾರ್ಕ್ ಅನ್ನು ಉತ್ಪಾದಿಸುವ ಕಾರಣ ಈ EV ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆಗೆ ವೇಗವನ್ನು ತಲುಪಬಹುದು. MG ಸೈಬರ್‌ಸ್ಟರ್ ಬೆಲೆಯು ಸುಮಾರು ರೂ. 80 ಲಕ್ಷಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಆಯ್ಕೆಯೊಂದಿಗೆ, ವೆಚ್ಚವು ಸುಮಾರು ರೂ. 50 ಲಕ್ಷಗಳಿಗೆ ಇಳಿಯಬಹುದು. ಪ್ರೀ-ಬುಕಿಂಗ್‌ಗಳು ಈಗಾಗಲೇ ತೆರೆದಿವೆ ಮತ್ತು ಮಾರ್ಚ್ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನು ಕೂಡ ಓದಿ: BYD ಸೀಲಿಯನ್ 7 ರ ಪ್ರತಿಯೊಂದು ಎಕ್ಸ್ಟಿರಿಯರ್ ಕಲರ್ ಶೋರೂಮ್‌ನಲ್ಲಿ ಹೇಗೆ ಕಾಣುತ್ತದೆ ಎಂಬುದು ಇಲ್ಲಿದೆ

MG M9

ಸೆಲೆಕ್ಟ್ ಬ್ರ್ಯಾಂಡ್‌ನ ಅಡಿಯಲ್ಲಿರುವ ಎರಡನೇ ಮಾಡೆಲ್ M9 ಆಗಿದ್ದು, ಇದನ್ನು ಭಾರತದಲ್ಲಿ 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಜಾಗತಿಕವಾಗಿ ಮಿಫಾ 9 ಎಂದು ಕರೆಯಲ್ಪಡುವ ಇದು, ಮುಂಭಾಗ ಮತ್ತು ಎರಡನೇ ಸಾಲಿನ ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸಲು ವೆಂಟಿಲೇಷನ್, ಹೀಟಿಂಗ್ ಮತ್ತು ಮಸಾಜ್ ಸೀಟುಗಳಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಈ ಆಲ್ ಎಲೆಕ್ಟ್ರಿಕ್ M9 MPV 90 kWh ಬ್ಯಾಟರಿಯನ್ನು ಹೊಂದಿದ್ದು, 430 ಕಿ.ಮೀ. ದೂರ ಕ್ರಮಿಸಬಲ್ಲದು. ಇದು ಒಂದೇ ಮೋಟಾರ್‌ನೊಂದಿಗೆ ಜೋಡಿಸಲ್ಪಟ್ಟಿದ್ದು, ಮುಂಭಾಗದ ಚಕ್ರಗಳಿಗೆ 245 PS ಮತ್ತು 350 Nm ಶಕ್ತಿಯನ್ನು ನೀಡುತ್ತದೆ. ನಿರೀಕ್ಷಿಸಲಾಗಿರುವ ಬೆಲೆ ಸುಮಾರು ರೂ. 70 ಲಕ್ಷಗಳಾಗಿದ್ದು, ಮಾರ್ಚ್ 2025 ರಲ್ಲಿ ಲಾಂಚ್ ಮಾಡಲು ಯೋಜಿಸಲಾಗಿದೆ.

MG ಸೆಲೆಕ್ಟ್ ಡೀಲರ್‌ಶಿಪ್‌ಗಳು ಮತ್ತು ಮುಂಬರುವ ಸೈಬರ್‌ಸ್ಟರ್ ಮತ್ತು M9 MPV ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಾಮೆಂಟ್‌ ಮಾಡುವ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ!

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on M g cyberster

explore similar ಕಾರುಗಳು

ಎಂಜಿ cyberster

Rs.80 ಲಕ್ಷ* Estimated Price
ಮಾರ್ಚ್‌ 17, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಎಂಜಿ m9

Rs.70 ಲಕ್ಷ* Estimated Price
ಮಾರ್ಚ್‌ 17, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ