• English
  • Login / Register

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಬಿಡುಗಡೆಯಾಗಲಿರುವ ಎಲ್ಲಾ Kia, Mahindra ಮತ್ತು MG ಕಾರುಗಳು ಇಲ್ಲಿವೆ

ಮಹೀಂದ್ರ xev 9e ಗಾಗಿ anonymous ಮೂಲಕ ಜನವರಿ 15, 2025 01:18 pm ರಂದು ಪ್ರಕಟಿಸಲಾಗಿದೆ

  • 4 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಮೂರು ಕಾರು ತಯಾರಕರು ಪ್ರದರ್ಶಿಸಲಿರುವ ಹೊಸ ಕಾರುಗಳ ಸಂಪೂರ್ಣ ರೇಂಜ್‌ನಲ್ಲಿ, ಕೇವಲ ಎರಡು ಮಾತ್ರ ICE-ಚಾಲಿತ ಮೊಡೆಲ್‌ಗಳಾಗಿದ್ದರೆ, ಉಳಿದವು XEV 9e ಮತ್ತು ಸೈಬರ್‌ಸ್ಟರ್ ಸೇರಿದಂತೆ ಇವಿಗಳಾಗಿವೆ

New Kia, MG, and Mahindra Cars At Auto Expo 2025

ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಜಾಗತಿಕ ಮತ್ತು ಭಾರತೀಯ ಕಾರು ತಯಾರಕರಿಂದ ಅತ್ಯಾಕರ್ಷಕ ಹೊಸ ಮೊಡೆಲ್‌ಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಹಲವಾರು ಬ್ರಾಂಡ್‌ಗಳು ತಮ್ಮ ಬಿಡುಗಡೆಗಳನ್ನು ದೃಢಪಡಿಸಿವೆ. ಹಾಗೆಯೇ, ಕಿಯಾ, ಮಹೀಂದ್ರಾ ಮತ್ತು ಎಂಜಿ ತಮ್ಮ ಕೆಲವು ಕಾರುಗಳನ್ನು ಮೊದಲ ಬಾರಿಗೆ 2025 ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲು ತಯಾರಿ ನಡೆಸುತ್ತಿವೆ.

ಈ ಬ್ರ್ಯಾಂಡ್‌ಗಳು ತಮ್ಮ ಪ್ರಸ್ತುತ ರೇಂಜ್‌ನ ಮೊಡೆಲ್‌ಗಳನ್ನು ಸಹ ಪ್ರಸ್ತುತಪಡಿಸುವ ಸಾಧ್ಯತೆಯಿದ್ದರೂ, ಈ ಸುದ್ದಿಯು ಕಿಯಾ, ಮಹೀಂದ್ರಾ ಮತ್ತು ಎಂಜಿಯಿಂದ 2025 ರ ಆಟೋ ಎಕ್ಸ್‌ಪೋದಲ್ಲಿ ಪಾದಾರ್ಪಣೆ ಮಾಡುವ ಕಾರುಗಳ ಮೇಲೆ ಕೇಂದ್ರೀಕರಿಸುತ್ತದೆ.

ಕಿಯಾ ಸಿರೋಸ್‌

Kia Syros

ಕಿಯಾವು ಇತ್ತೀಚೆಗೆ ಸಿರೋಸ್ ಅನ್ನು ವಿಶಿಷ್ಟ ವಿನ್ಯಾಸ ಮತ್ತು ಫೀಚರ್‌ ಭರಿತ ಪೂರ್ಣ ಕ್ಯಾಬಿನ್‌ನೊಂದಿಗೆ ಅನಾವರಣಗೊಳಿಸಿತು, ಇದನ್ನು 2025 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಸಿದ್ಧವಾಗಿದೆ. ಪ್ರೀಮಿಯಂ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಬುಕಿಂಗ್‌ಗಳು ನಡೆಯುತ್ತಿದ್ದು, ಬೆಲೆಗಳನ್ನು 2025ರ ಫೆಬ್ರವರಿ 1ರಂದು ಘೋಷಿಸಲು ನಿರ್ಧರಿಸಲಾಗಿದೆ. ಸಿರೋಸ್‌ನ ಪ್ರಮುಖ ಫೀಚರ್‌ಗಳೆಂದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು, 12.3-ಇಂಚಿನ  ಡ್ಯುಯಲ್ ಸ್ಕ್ರೀನ್ ಸೆಟಪ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳಾಗಿವೆ(ADAS). ಇದನ್ನು 120 ಪಿಎಸ್‌ 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 116 ಪಿಎಸ್‌ 1.5-ಲೀಟರ್ ಡೀಸೆಲ್ ಸೇರಿದಂತೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು.

ಮಹೀಂದ್ರಾ ಎಕ್ಸ್‌ಇವಿ 9ಇ

Mahindra XEV 9e

ಮಹೀಂದ್ರಾ ತನ್ನ ಹೊಸದಾಗಿ ಬಿಡುಗಡೆಯಾದ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್‌ಆದ ಎಕ್ಸ್‌ಇವಿ 9ಇ ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಅನಾವರಣಗೊಳಿಸಲಿದೆ. ಕಾರು ತಯಾರಕರು ಇತ್ತೀಚೆಗೆ ಅದರ ಟಾಪ್-ಸ್ಪೆಕ್ ವೇರಿಯೆಂಟ್‌ನ ಬೆಲೆಗಳನ್ನು ಮತ್ತು ಅದರ ಬುಕಿಂಗ್ ಮತ್ತು ವಿತರಣಾ ಸಮಯವನ್ನು ಘೋಷಿಸಿದ್ದರು. ಬೆಲೆಗಳು 21.90 ಲಕ್ಷ ರೂ.ನಿಂದ 30.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇದ್ದು, ದೆಹಲಿ, ಮುಂಬೈ ಮತ್ತು ಪುಣೆಯಂತಹ ಮೆಟ್ರೋ ನಗರಗಳಲ್ಲಿ ಟೆಸ್ಟ್ ಡ್ರೈವ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಇದು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇದು 600 ಕಿ.ಮೀ.ಗಿಂತ ಹೆಚ್ಚಿನ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

ಮಹೀಂದ್ರಾ ಬಿಇ 6

Mahindra BE 6

2025ರ ಆಟೋ ಎಕ್ಸ್‌ಪೋದಲ್ಲಿ ಎಕ್ಸ್‌ಇವಿ 9ಇ ಜೊತೆಗೆ ಮಹೀಂದ್ರಾ ಬಿಇ 6 ಅನ್ನು ಸಹ ಪ್ರದರ್ಶಿಸಲಾಗುವುದು. ಇದು ಎಕ್ಸ್‌ಇವಿ 9ಇಗೆ ಹೋಲಿಸಿದರೆ ಚಿಕ್ಕದಾದ ಎಲೆಕ್ಟ್ರಿಕ್ ಎಸ್‌ಯುವಿ ಕೂಪ್ ಆಗಿದ್ದು, 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ. ಬಿಇ6 ಕಾರಿನ ಬೆಲೆ 18.90 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಆರಂಭವಾಗಿ 26.90 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. ಫೀಚರ್‌ಗಳನ್ನು ಗಮನಿಸುವಾಗ, ಇದು 10.25-ಇಂಚಿನ  ಡ್ಯುಯಲ್ ಡಿಸ್‌ಪ್ಲೇಗಳು, ಪನೋರಮಿಕ್ ಗ್ಲಾಸ್ ರೂಫ್, ಬಹು ವೈರ್‌ಲೆಸ್ ಫೋನ್ ಚಾರ್ಜರ್‌ಗಳು ಮತ್ತು ಲೆವೆಲ್-2 ADAS ಅನ್ನು ಪಡೆಯುತ್ತದೆ.

ಎಂಜಿ ಸೈಬರ್‌ಸ್ಟರ್

MG Cyberster front

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಎಂಜಿ ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಆದ ಸೈಬರ್‌ಸ್ಟರ್ ಅನ್ನು ಪರಿಚಯಿಸಲಿದೆ. ಕಾರು ತಯಾರಕರು ಇತ್ತೀಚೆಗೆ ಭಾರತ-ಸ್ಪೆಕ್ ಮೊಡೆಲ್‌ನ ಪವರ್‌ಟ್ರೇನ್ ವಿಶೇಷಣಗಳನ್ನು ಬಹಿರಂಗಪಡಿಸಿದ್ದರು, ಇದು 510 ಪಿಎಸ್‌ ಡ್ಯುಯಲ್ ಮೋಟಾರ್ ಸೆಟಪ್‌ನೊಂದಿಗೆ ಜೋಡಿಸಲಾದ 77 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಇದು WLTP-ಕ್ಲೇಮ್ ಮಾಡಿದ 444 ಕಿಮೀ ರೇಂಜ್‌ ಅನ್ನು ನೀಡುತ್ತದೆ ಮತ್ತು 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಹೆಚ್ಚಿಸಬಹುದು. ಸೈಬರ್‌ಸ್ಟರ್‌ನ ಬೆಲೆಗಳು 75 ಲಕ್ಷದಿಂದ 80 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. 

ಎಮ್‌ಜಿ ಎಮ್‌9

MG M9

ಚೀನಾದ ವಾಹನ ತಯಾರಕ ಕಂಪನಿಯು M9 ಪ್ರೀಮಿಯಂ ಎಲೆಕ್ಟ್ರಿಕ್ ಎಮ್‌ಪಿವಿಯನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ, ಆರಂಭದಲ್ಲಿ ಇದನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಮಿಫಾ 9 ಎಂದು ಪ್ರದರ್ಶಿಸಲಾಗಿತ್ತು. ಇದನ್ನು ಎಮ್‌ಜಿಯ ಹೊಸ 'ಸೆಲೆಕ್ಟ್' ಡೀಲರ್‌ಶಿಪ್‌ಗಳ ಮೂಲಕ ಎಕ್ಸ್‌ಕ್ಲೂಸಿವ್‌ ಆಗಿ ಮಾರಾಟ ಮಾಡಲಾಗುವುದು ಮತ್ತು ಇದರ ಬೆಲೆ ಸುಮಾರು 1 ಕೋಟಿ ರೂ. (ಎಕ್ಸ್-ಶೋರೂಂ) ಇರುವ ನಿರೀಕ್ಷೆಯಿದೆ. ಎಮ್‌9 ಕಾರಿನ ಒಳಾಂಗಣವು ಪ್ರೀಮಿಯಂ ಆಗಿದ್ದು, ಮುಂಭಾಗ ಮತ್ತು ಎರಡನೇ ಸಾಲಿನ ಸೀಟ್‌ಗಳು ಚಾಲಿತದೊಂದಿಗೆ ವೆಂಟಿಲೇಶನ್‌ ಮತ್ತು ಮಸಾಜ್ ಫಂಕ್ಷನ್‌ ಅನ್ನು ಹೊಂದಿದ್ದು, ಹಿಂಭಾಗದ ಮನರಂಜನಾ ಸ್ಕ್ರೀನ್‌ಗಳು ಮತ್ತು 12-ಸ್ಪೀಕರ್‌ಗಳ ಸೌಂಡ್‌ ಸಿಸ್ಟಮ್‌ ಇದೆ. ಇದನ್ನು 90 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುವ ನಿರೀಕ್ಷೆಯಿದ್ದು, 565 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್

MG Gloster Facelift

2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. 2020ರಲ್ಲಿ ಬಿಡುಗಡೆಯಾದಾಗಿನಿಂದ ಪೂರ್ಣ ಗಾತ್ರದ ಎಸ್‌ಯುವಿಯನ್ನು ಪ್ರಮುಖ ಆಪ್‌ಡೇಟ್‌ಗಾಗಿ ಕಾಯಲಾಗುತ್ತಿದೆ, ಕಳೆದ ವರ್ಷ ಹಲವಾರು ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಆಪ್‌ಡೇಟ್‌ ಮಾಡಲಾದ ಗ್ಲೋಸ್ಟರ್ ಪರಿಷ್ಕೃತ ಪ್ರೊಫೈಲ್ ಸೇರಿದಂತೆ ಹೊರಭಾಗಕ್ಕೆ ಸಣ್ಣ ಬದಲಾವಣೆಗಳನ್ನು ಹೊಂದಿರುತ್ತದೆ, ಆದರೆ ಒಳಾಂಗಣವು ಹೊರಹೋಗುವ ಮೊಡೆಲ್‌ನಂತೆಯೇ ಇರುವ ಸಾಧ್ಯತೆಯಿದೆ. ಪವರ್‌ಟ್ರೇನ್‌ನ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ, ಇದರಲ್ಲಿ 161 ಪಿಎಸ್‌ 2-ಲೀಟರ್ ಡೀಸೆಲ್ ಎಂಜಿನ್ ಮತ್ತು 216 ಪಿಎಸ್‌ 2-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸೇರಿವೆ.

ಎಮ್‌ಜಿ iML 6

ಎಮ್‌ಜಿಯ ಪ್ರೀಮಿಯಂ ಆಲ್-ಎಲೆಕ್ಟ್ರಿಕ್ ಸೆಡಾನ್ ಆದ iML6, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಕಾರು ತಯಾರಕರ ಬಿಡುಗಡೆಯ ಭಾಗವಾಗಿರಲಿದೆ. ಇದನ್ನು ಕಳೆದ ವರ್ಷದ ಜಿನೀವಾ ಮೋಟಾರ್ ಶೋನಲ್ಲಿ ಮೊದಲು ಜಾಗತಿಕವಾಗಿ ಅನಾವರಣಗೊಳಿಸಲಾಯಿತು ಮತ್ತು ಚೀನಾದಲ್ಲಿ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ, CLTC (ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್) ಕ್ಲೈಮ್‌ ಮಾಡಿದ 750 ಕಿ.ಮೀ. ರೇಂಜ್‌ ಅನ್ನು ನೀಡುತ್ತದೆ. iML6 ಕಾರು ಪನೋರಮಿಕ್ ಸನ್‌ರೂಫ್, 256-ಬಣ್ಣದ ಆಂಬಿಯೆಂಟ್ ಲೈಟಿಂಗ್, 20-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು 12-ವೇ ಚಾಲಿತ ಡ್ರೈವರ್ ಸೀಟ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಎಮ್‌ಜಿ 7ಟ್ರೋಫಿ

ಇನ್ನು ICE-ಚಾಲಿತ ಮೊಡೆಲ್‌ಗಳನ್ನು ಗಮನಿಸುವಾಗ,  MG 7 ಸೆಡಾನ್ 2025 ರ ಆಟೋ ಎಕ್ಸ್‌ಪೋದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ. ಇದು 2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 261 ಪಿಎಸ್‌ ಮತ್ತು 405 ಎನ್‌ಎಮ್‌ ಅನ್ನು ಹೊರಹಾಕುತ್ತದೆ, 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.12-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ADAS ಇವುಗಳ ಪ್ರಮುಖ ಫೀಚರ್‌ಗಳಾಗಿವೆ. 

ಮೇಲೆ ತಿಳಿಸಿದ ಯಾವ ಮೊಡೆಲ್‌ಗಳ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Mahindra xev 9e

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience