Mitsubishi ಮತ್ತೆ ಭಾರತದಲ್ಲಿ ಬರಲು ಸಿದ್ಧವಾಗಿದೆ, ಆದರೆ ನೀವು ಯೋಚಿಸುವ ರೀತಿಯಲ್ಲಿ ಅಲ್ಲ..!

published on ಫೆಬ್ರವಾರಿ 21, 2024 05:07 pm by rohit

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಜಪಾನೀಸ್ ಬ್ರ್ಯಾಂಡ್, ಭಾರತದ ಅತಿದೊಡ್ಡ ಬಹು-ಬ್ರಾಂಡ್ ಡೀಲರ್‌ಗಳಲ್ಲಿ ಒಂದಾಗಿರುವ TVS VMS ಜೊತೆ ಪಾಲುದಾರಿಕೆಯನ್ನು ಮಾಡಿದೆ.

Mitsubishi returning to India

2020 ರ ಮೊದಲಾರ್ಧದಲ್ಲಿ BS6 ಎಮಿಷನ್ ನಿಯಮಗಳು ಜಾರಿಗೆ ಬಂದ ಮೇಲೆ ಭಾರತೀಯ ಪ್ಯಾಸೆಂಜರ್ ಕಾರು ಮಾರುಕಟ್ಟೆಯಿಂದ ನಿರ್ಗಮಿಸಿದ ನಂತರ, ಮಿತ್ಸುಬಿಷಿ ಇದೀಗ 2024 ರಲ್ಲಿ ಭಾರತೀಯ ಕಾರು ಮಾರುಕಟ್ಟೆಗೆ ಮರುಪ್ರವೇಶ ಮಾಡುವುದಾಗಿ ಘೋಷಿಸಿದೆ. ಇದು ಭಾರತದಲ್ಲಿನ ಅತಿ ದೊಡ್ಡ ಬಹು-ಬ್ರಾಂಡ್ ಡೀಲರ್‌ಗಳಲ್ಲಿ ಒಂದಾಗಿರುವ TVS ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ (TVS VMS) ನಲ್ಲಿ 30 ಪ್ರತಿಶತಕ್ಕಿಂತ ಹೆಚ್ಚಿನ ಷೇರುಗಳಿಗೆ ಸಬ್‌ಸ್ಕ್ರಿಪ್‌ಶನ್ ಪಡೆದಿದೆ. TVS VMS ರೆನಾಲ್ಟ್, ಮಹೀಂದ್ರಾ ಮತ್ತು ಹೋಂಡಾದಂತಹ ಅನೇಕ ಕಾರು ತಯಾರಕರು ಉತ್ಪಾದಿಸುವ ವಾಹನಗಳ ಡಿಸ್ಟ್ರಿಬ್ಯುಶನ್ ಕೂಡ ನೋಡಿಕೊಳ್ಳುತ್ತದೆ.

 ಡೀಲ್ ನ ವಿವರಗಳು

Mitsubishi Corporation

 ಹಲವಾರು ಆನ್‌ಲೈನ್ ವರದಿಗಳ ಪ್ರಕಾರ, ಮಿತ್ಸುಬಿಷಿಯು ಹತ್ತಾರು ಮಿಲಿಯನ್ US ಡಾಲರ್‌ಗಳ ಮೌಲ್ಯದ ಹೂಡಿಕೆಯನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಟ್ರಾನ್ಸಾಕ್ಷನ್ ನ ಪೂರ್ಣಗೊಳ್ಳುವಿಕೆಯು ಸಂಬಂಧಿತ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಗೆ ಒಳಪಟ್ಟಿರುತ್ತದೆ, ಅದರ ನಂತರ ಮಿತ್ಸುಬಿಷಿ ತನ್ನ ಉದ್ಯೋಗಿಗಳನ್ನು ಡೀಲರ್ ಗಳ ಹತ್ತಿರ ಕಳುಹಿಸಲಿದೆ ಎಂದು ಹೇಳಲಾಗಿದೆ. ಈ ಹೂಡಿಕೆಯು ಭಾರತದಲ್ಲಿ ಮಿತ್ಸುಬಿಷಿಯ ಕಂಪ್ರೆಹೆನ್ಸಿವ್ ಮೊಬಿಲಿಟಿ ಸೊಲ್ಯೂಷನ್ಸ್ ಕಾರ್ಯತಂತ್ರವನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ, ಇದು ಮಾರಾಟದ ನಂತರದ ಸರ್ವಿಸ್ ಮತ್ತು ಮಲ್ಟಿ-ಬ್ರಾಂಡ್ ಸೇಲ್ ಗಳನ್ನು ಮಾತ್ರವಲ್ಲದೆ ಲೀಸಿಂಗ್ ಮತ್ತು ಇತರ ವಾಹನ ಆಧಾರಿತ ಉದ್ಯಮಗಳನ್ನು ಒಳಗೊಂಡಿದೆ. ಇದನ್ನು TVS VMS ನ ಅತಿ ದೊಡ್ಡ ಗ್ರಾಹಕ ಬೇಸ್ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮಾಡಲಾಗುತ್ತದೆ.

 ಮಿತ್ಸುಬಿಷಿ ಕಾರುಗಳು ಮತ್ತೆ ಭಾರತಕ್ಕೆ ವಾಪಾಸ್ ಬರಲಿವೆಯೇ?

Mitsubishi Pajero Sport

 ಮಿತ್ಸುಬಿಷಿಯು ಭಾರತೀಯ ಆಟೋಮೋಟಿವ್ ವಿಭಾಗಕ್ಕೆ ಮರಳುತ್ತಿದೆ, ಆದರೆ ಭಾರತದಲ್ಲಿ ತನ್ನ ಕಾರುಗಳನ್ನು ವಾಪಾಸ್ ತರಲು ಯಾವುದೇ ಪ್ಲಾನ್ ಗಳಿಲ್ಲ. ಈ ಹೊಸ ಮಲ್ಟಿ-ಬ್ರಾಂಡ್ ಡೀಲರ್‌ಶಿಪ್‌ಗಳೊಂದಿಗೆ ಮಿತ್ಸುಬಿಷಿ ತನ್ನದೇ ಆದ ಕಾರುಗಳ ಶ್ರೇಣಿಯನ್ನು ಭಾರತಕ್ಕೆ ತರಲು ನೋಡುತ್ತಿದ್ದರೆ, EV ಗಳನ್ನು ಕೂಡ ತರಲು ಗಮನ ಹರಿಸಲಾಗುತ್ತದೆ. ಹಾಗಾಗಿ, ಸದ್ಯಕ್ಕೆ ಪಜೆರೊ ಸ್ಪೋರ್ಟ್‌ನ ವಾಪಸಾತಿ ಬಗ್ಗೆ ನಾವು ಯಾವುದೇ ಭರವಸೆಯನ್ನು ಹೊಂದಿಲ್ಲ.

 ಹೊಸ ಪಾಲುದಾರಿಕೆಯು ಜಪಾನಿನ ಕಾರು ತಯಾರಕರ ಸಬ್-ಬ್ರಾಂಡ್‌ಗಳ ಶಾಪ್ ಅನ್ನು ಭಾರತದಲ್ಲಿ ಸ್ಥಾಪಿಸುವ ಸಾಧ್ಯತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ, ಇದರಲ್ಲಿ ಮಿತ್ಸುಬಿಷಿಯು ಜಪಾನಿನ ಕಾರು ಬ್ರಾಂಡ್‌ಗಳು ಮತ್ತು ಮಾಡೆಲ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಮಾತುಕತೆಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಇದರರ್ಥ, ನಾವು ಭಾರತದಲ್ಲಿ ಮಜ್ದಾ ಮತ್ತು ಇನ್ಫಿನಿಟಿ (ನಿಸ್ಸಾನ್‌ನ ಪ್ರೀಮಿಯಂ ಸಬ್-ಬ್ರಾಂಡ್) ನಂತಹ ಕಾರುಗಳನ್ನು ನೋಡುವ ಸಾಧ್ಯತೆಗಳಿವೆ.

 ಈ ಮಿತ್ಸುಬಿಷಿ ಪಾಲುದಾರಿಕೆಯಿಂದಾಗಿ ನೀವು ಭಾರತದಲ್ಲಿ ಯಾವ ಜಪಾನೀ ಕಾರುಗಳನ್ನು ನೋಡಲು ಬಯಸುತ್ತೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

 ಇದನ್ನು ಕೂಡ ಓದಿ: ಭಾರತದಲ್ಲಿ Mustang Mach-e ಎಲೆಕ್ಟ್ರಿಕ್‌ ಎಸ್‌ಯುವಿಯ ಟ್ರೇಡ್‌ಮಾರ್ಕ್‌ ಮಾಡಿದ Ford. ಇದು ಅಂತಿಮವಾಗಿ ಬರುತ್ತಿದೆಯೇ? 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

1 ಕಾಮೆಂಟ್
1
R
rohit r jagiasi
Mar 9, 2024, 3:01:42 PM

Would love to see Mitsubishi Pajero, Outlander & Lancer

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience