ಒಂದು ವಾರದ ಕಾಲ ರಾಷ್ಟ್ರವ್ಯಾಪಿ ಸರ್ವಿಸ್ ಕ್ಯಾಂಪ್ ನಡೆಸುತ್ತಿರುವ ರೆನಾಲ್ಟ್ ಸಂಸ್ಥೆ
ನವೆಂಬರ್ 22, 2023 05:43 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸರ್ವಿಸ್ ಕ್ಯಾಂಪ್ ನವೆಂಬರ್ 20ರಿಂದ 26ರ ತನಕ ನಡೆಯಲಿದ್ದು ಗ್ರಾಹಕರು ಬಿಡಿಭಾಗಗಳು, ಆಕ್ಸೆಸರಿಗಳು ಮತ್ತು ಇತರ ಸಾಮಗ್ರಿಗಳ ಮೇಲೂ ರಿಯಾಯಿತಿಯನ್ನು ಪಡೆಯಬಹುದು
ಚಳಿಗಾಲವು ಸಮೀಪಿಸುತ್ತಿರುವುದರಿಂದ ರೆನೋ ಇಂಡಿಯಾ ಸಂಸ್ಥೆಯು ತನ್ನ ಎಲ್ಲಾ ಗ್ರಾಹಕರಿಗಾಗಿ ಚಳಿಗಾಲದ ರಾಷ್ಟ್ರವ್ಯಾಪಿ ಸರ್ವಿಸ್ ಕ್ಯಾಂಪ್ ಅನ್ನು ಘೋಷಿಸಿದ್ದು, ಈ ಶಿಬಿರದ ಮೂಲಕ ಚಳಿಗಾಲಕ್ಕೆ ಮೊದಲೇ ತಮ್ಮ ವಾಹನಗಳ ತಪಾಸಣೆ ನಡೆಸಬಹುದಾಗಿದೆ. ಈ ಸರ್ವಿಸ್ ಕ್ಯಾಂಪ್, ನವೆಂಬರ್ 20ರಿಂದ 26ರ ತನಕ ಒಂದು ವಾರದ ಕಾಲ ನಡೆಯಲಿದ್ದು, ಈ ಕುರಿತ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಇದನ್ನು ಸಹ ಓದಿರಿ: ಈ ನವೆಂಬರ್ ತಿಂಗಳಿನಲ್ಲಿ ರೆನೋ ಕಾರುಗಳ ಮೇಲೆ ರೂ. 77,000 ತನಕದ ದೀಪಾವಳಿ ನಂತರದ ಪ್ರಯೋಜನವನ್ನು ಗಳಿಸಿರಿ
ಈ ಚಳಿಗಾಲದ ಸರ್ವಿಸ್ ಕ್ಯಾಂಪ್ ದೇಶದಾದ್ಯಂತ ರೆನೋ ಸಂಸ್ಥೆಯ ಅಧಿಕೃತ ಡೀಲರುಗಳ ಮೂಲಕ ನಡೆಯಲಿದ್ದು, ತರಬೇತಾದ ವೃತ್ತಿಪರರು ಇಲ್ಲಿ ಕಾರುಗಳ ತಪಾಸಣೆ ನಡೆಸಲಿದ್ದಾರೆ. ಇದು ಉಚಿತ ತಪಾಸಣೆಯಾಗಿದ್ದು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ, ಏನಾದರೂ ದುರಸ್ತಿಯನ್ನು ಮಾಡುವುದಾದರೆ, ರೆನೋ ಸಂಸ್ಥೆಯು ಕಾರ್ಮಿಕ ವೆಚ್ಚದ ಮೇಲೆ 15 ಶೇಕಡಾದಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಅಲ್ಲದೆ, ಗ್ರಾಹಕರು ಆಯ್ದ ಬಿಡಿಭಾಗದ ಮೇಲೆ 10 ಶೇಕಡಾ, ಕೆಲವೊಂದು ಆಕ್ಸೆಸರಿಗಳ ಮೇಲೆ 50 ಶೇಕಡಾ, ರೆನೋ ಸೆಕ್ಯೂರ್ (ವಿಸ್ತರಿತ ವಾರಂಟಿ) ಮೇಲೆ 10 ಶೇಕಡಾ ಮತ್ತು ರೆನೋ ಅಸಿಸ್ಟ್ (ರಸ್ತೆಬದಿಯ ನೆರವು) ಪ್ಯಾಕೇಜ್ ಗಳ ಮೇಲೆ 10 ಶೇಕಡಾ ರಿಯಾಯಿತಿಯನ್ನು ಪಡೆಯಲಿದ್ದಾರೆ. ಅಲ್ಲದೆ ಮೈ ರೆನೋ ಗ್ರಾಹಕರಿಗೆ ಆಯ್ದ ಬಿಡಿಭಾಗಗಳು ಮತ್ತು ಆಕ್ಸೆಸರಿಗಳ ಮೇಲೆ 5 ಶೇಕಡಾದಷ್ಟು ಹೆಚ್ಚುವರಿ ರಿಯಾಯಿತಿ ಮತ್ತು ಉಚಿತ ಕಾರ್ ವಾಶ್ ದೊರೆಯಲಿದೆ.
ಈ ಸರ್ವಿಸ್ ಕ್ಯಾಂಪ್ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯುವುದಕ್ಕಾಗಿ ಈ ಕೆಳಗೆ ಲಗತ್ತಿನ ಪತ್ರಿಕಾ ಪ್ರಕಟಣೆಯನ್ನು ಓದಿರಿ:
ಭಾರತದಾದ್ಯಂತ ತನ್ನ ಗ್ರಾಹಕರಿಗಾಗಿ ಚಳಿಗಾಲದ ರಾಷ್ಟ್ರವ್ಯಾಪಿ ಕ್ಯಾಂಪ್ ಘೋಷಿಸಿದ ರೆನೋ ಸಂಸ್ಥೆ
- ರೆನೋ ಚಳಿಗಾಲದ ಕ್ಯಾಂಪ್ 2023 ರೆನೋ ಇಂಡಿಯಾ ಸಂಸ್ಥೆಯ ಎಲ್ಲಾ ಡೀಲರುಗಳ ಮೂಲಕ 2023ರ ನವೆಂಬರ್ 20ರಿಂದ 26ರ ತನಕ ನಡೆಯುತ್ತದೆ
- ಆಯ್ದ ಬಿಡಿಭಾಗಗಳು, ಆಕ್ಸೆಸರಿಗಳು ಮತ್ತು ಕಾರ್ಮಿಕ ವೆಚ್ಚಗಳ ಮೇಲೆ ಪ್ರಯೋಜನಗಳನ್ನು ಗಳಿಸಿರಿ
ಸಮೃದ್ಧ ಬ್ರಾಂಡ್ ಮಾಲೀಕತ್ವವನ್ನು ಒದಗಿಸುವುದರ ಜೊತೆಗೆ ಗ್ರಾಹಕ ತೃಪ್ತಿಯನ್ನು ವೃದ್ಧಿಸುವ ತನ್ನ ಬದ್ಧತೆಯ ಅಂಗವಾಗಿ ರೆನೋ ಇಂಡಿಯಾ ಸಂಸ್ಥೆಯು ಇಂದು ಭಾರತದಾದ್ಯಂತ ಮಾರಾಟ ನಂತರದ ಸರ್ವಿಸ್ ಉಪಕ್ರಮವೆನಿಸಿರುವ ʻರೆನೋ ಚಳಿಗಾಲದ ಕ್ಯಾಂಪ್ʼನ ಪ್ರಾರಂಭವನ್ನು ಘೋಷಿಸಿದೆ. ಈ ಚಳಿಗಾಲದ ಶಿಬಿರವು ಭಾರತಾದ್ಯಂತ ರೆನೋ ಡೀಲರ್ ಶಿಪ್ ತಾಣಗಳಲ್ಲಿ 2023ರ ನವೆಂಬರ್ 20ರಿಂದ 26ರ ತನಕ ನಡೆಯಲಿದೆ. ವಾಹನಗಳ ಗರಿಷ್ಠ ಕಾರ್ಯಕ್ಷಮತೆಯು ಚಳಿಗಾಲದಲ್ಲಿ ಅಗತ್ಯವೆನಿಸಿದ್ದು, ಇದನ್ನು ಒದಗಿಸುವುದೇ ಚಳಿಗಾಲದ ಶಿಬಿರದ ಆಯೋಜನೆಯ ಹಿಂದಿನ ಉದ್ದೇಶವಾಗಿದೆ. ಈ ಶಿಬಿರವು, ರೆನೋ ಇಂಡಿಯಾ ಸಂಸ್ಥೆಯು ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಉಚಿತ ಕಾರು ತಪಾಸಣೆಯನ್ನು ರೆನೋ ಮಾಲೀಕರಿಗೆ ಒದಗಿಸಲಿದ್ದು, ಕಾರಿನ ಎಲ್ಲಾ ಪ್ರಮುಖ ಕಾರ್ಯಗಳ ವಿಸ್ತೃತ ತಪಾಸಣೆಗೆ ಅನುವು ಮಾಡಿ ಕೊಡಲಿದೆ. ಚಳಿಗಾಲದಲ್ಲಿ ಸುರಕ್ಷಿತ ಮತ್ತು ಸಮಸ್ಯೆರಹಿತ ವಾಹನ ಚಾಲನೆಯನ್ನು ಖಾತರಿಪಡಿಸುವುದಕ್ಕಾಗಿ ನುರಿತ ಮತ್ತು ಅರ್ಹ ಸೇವಾ ತಂತ್ರಜ್ಞರು ವಾಹನಗಳ ತಪಾಸಣೆ ನಡೆಸಲಿದ್ದಾರೆ. ಕಾಲ ಕಾಲಕ್ಕೆ ನಡೆಸುವ ಇಂತಹ ತಪಾಸಣೆಗಳು ಕಾರಿನ ವರ್ಧಿತ ಕಾರ್ಯಕ್ಷಮತೆಗಾಗಿ ಅಗತ್ಯ ಕ್ರಮಗಳನ್ನು ಖಚಿತಪಡಿಸುವುದರ ಜೊತೆಗೆ ಗ್ರಾಹಕರಿಗೆ ತೃಪ್ತಿಕರ ಮಾಲೀಕತ್ವದ ಅನುಭವನ್ನು ಒದಗಿಸುತ್ತವೆ.
ಈ ಉಪಕ್ರಮದ ಕುರಿತು ಮಾತನಾಡಿದ ಶ್ರೀ ಸುಧೀರ್ ಮಲ್ಹೋತ್ರಾ, ಉಪಾಧ್ಯಕ್ಷರು, ಸೇಲ್ಸ್ ಮತ್ತು ಮಾರ್ಕೆಟಿಂಗ್, ರೆನೋ ಇಂಡಿಯಾ, ʻʻನಮ್ಮ ಮೌಲ್ಯಯುತ ಗ್ರಾಹಕರಿಗಾಗಿ ಭಾರತದಾದ್ಯಂತ ʻರೆನೋ ಚಳಿಗಾಲದ ಶಿಬಿರʼದ ಚಾಲನೆಯನ್ನು ಘೋಷಿಸಲು ನಾವು ಸಂತುಷ್ಟರಾಗಿದ್ದೇನೆ. ರೆನೋ ಸಂಸ್ಥೆಯಲ್ಲಿ ಗ್ರಾಹಕ ತೃಪ್ತಿಯನ್ನು ಖಚಿತಪಡಿಸುವುದು ಮತ್ತು ಅಸಾಧಾರಣ ಬ್ರಾಂಡ್ ಮಾಲೀಕತ್ವ ಅನುಭವವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಚಳಿಗಾಲದ ಶಿಬಿರದ ಮೂಲಕ ನಾವು ಸವಾಲಿನಿಂದ ಕೂಡಿದ ಚಳಿಗಾಲದಲ್ಲಿ ರೆನೋ ವಾಹನಗಳ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ವರ್ಧಿಸುವ ಉದ್ದೇಶವನ್ನು ಹೊಂದಿದ್ದೇವೆ. ನಮ್ಮ ನುರಿತ ತಂತ್ರಜ್ಞರು ನಡೆಸು ಉಚಿತ ಕಾರು ತಪಾಸಣೆ, ಆಕರ್ಷಕ ಕೊಡುಗೆಗಳು ಮತ್ತು ತೊಡಗಿಸಿಕೊಳ್ಳುವ ಚಟುವಟಿಕೆಗಳ ಮೂಲಕ ನಮ್ಮ ಗ್ರಾಹಕರಿಗಾಗಿ ಮರೆಯಲಾಗದ ಅನುಭವವನ್ನು ಸೃಷ್ಟಿಸಲು ನಾವು ಪ್ರಯತ್ನಿಸಲಿದ್ದೇವೆ.”
ಒಂದು ವಾರದ ಕಾಲ ನಡೆಯುವ ಈ ಉಪಕ್ರಮದ ವೇಳೆ, ಡೀಲರುಗಳ ಬಳಿ ಭೇಟಿ ನೀಡುವ ಗ್ರಾಹಕರು ಆಕರ್ಷಕ ಕೊಡುಗೆಗಳನ್ನು ಪಡೆಯಬಹುದಾಗಿದ್ದು ಇದು ಆಯ್ದ ಬಿಡಿಭಾಗಗಳ ಮೇಳೆ 10%, ಆಯ್ದ ಆಕ್ಸೆಸರಿಗಳ ಮೇಲೆ 50%, ಮತ್ತು ಕಾರ್ಮಿಕ ವೆಚ್ಚದ ಮೇಳೆ 15% ರಿಯಾಯಿತಿಗಳನ್ನು ಒಳಗೊಂಡಿದೆ. ಅಲ್ಲೆ, ಮೈ ರೆನೋ (MYR) ಗ್ರಾಹಕರು ಆಯ್ದ ಬಿಡಿಭಾಗಗಳು ಮತ್ತು ಆಕ್ಸೆಸರಿಗಳ ಮೇಲೆ 5 ಶೇಕಡಾದಷ್ಟು ಹೆಚ್ಚುವರಿ ರಿಯಾಯಿತಿ ಹಾಗೂ ಉಚಿತ ಕಾರ್ ಟಾಪ್ ವಾಶ್ ಅನ್ನು ಪಡೆಯಬಹುದಾಗಿದೆ. ರೆನೋ ಸಂಸ್ಥೆಯು ವಿಸ್ತರಿತ ವಾರಂಟಿ ಮತ್ತು ರಸ್ತೆಬದಿಯ ನೆರವನ್ನು ಒದಗಿಸುವ ʻರೆನೋ ಸೆಕ್ಯೂರ್ʼ ಮತ್ತು ʻರೆನೋ ಅಸಿಸ್ಟ್ʼ ಮೇಲೆ 10%ದಷ್ಟು ರಿಯಾಯಿತಿಯನ್ನು ಸಹ ನೀಡಲಿದೆ. ಸಮಗ್ರ ಕಾರು ತಪಾಸಣೆ ಸೌಲಭ್ಯ ಮತ್ತು ವಿಶೇಷ ಕೊಡುಗೆಗಳ ಜೊತೆಗೆ ಗ್ರಾಹಕರಿಗಾಗಿ ಅನೇಕ ಮೋಜುಭರಿತ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಗ್ರಾಹಕರಿಗಾಗಿ ಖಚಿತ ಉಡುಗೊರೆಗಳನ್ನು ನೀಡಲಾಗುತ್ತದೆ ಹಾಗೂ ಇದನ್ನು ಆಕರ್ಷಕ ಮತ್ತು ಸ್ಮರಣಾರ್ಹ ಅನುಭವವಾಗಿ ರೂಪಿಸಲಾಗುತ್ತದೆ.
ರೆನೋ ಸರ್ವಿಸ್ ಕ್ಯಾಂಪುಗಳ ದೇಶದಾದ್ಯಂತ ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದಂತೆಯೇ ಗ್ರಾಹಕರನ್ನು ಸಂಪರ್ಕಿಸುವ ಇಂತಹ ಚಟುವಟಿಕೆಗಳನ್ನು ಆಯೋಜಿಸುವುದನ್ನು ಮುಂದುವರಿಸಲಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಪ್ರಬಲ ನೆಲೆಯನ್ನು ನಿರ್ಮಿಸಲು ರೆನೋ ಸಂಸ್ಥೆಯು ತನ್ನ ಪ್ರಯತ್ನವನ್ನು ನಡೆಸಿದೆ. ಪ್ರಬಲ ಉತ್ಪನ್ನ ಆಂದೋಲನ ಕಾರ್ಯತಂತ್ರದ ಜೊತೆಗೆ, ಉತ್ಪನ್ನ,ಜಾಲದ ವಿಸ್ತರಣೆ, ಆದ್ಯ ಪ್ರವರ್ತಕ ಗ್ರಾಹಕ ಕೇಂದ್ರಿತ ಚಟುವಟಿಕೆಗಳು ಮತ್ತು ಅನೇಕ ನವೀನ ಮಾರ್ಕೆಟಿಂಗ್ ಉಪಕ್ರಮಗಳು ಸೇರಿದಂತೆ ಎಲ್ಲಾ ಪ್ರಮುಖ ವ್ಯಾವಹಾರಿಕ ಆಯಾಮಗಳಲ್ಲಿ ರೆನೋ ಸಂಸ್ಥೆಯು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ಮೂಲಕ ಸಾಟಿಯಿಲ್ಲದ ಗ್ರಾಹಕ ತೃಪ್ತಿಯನ್ನು ಗ್ರಾಹಕರಿಗೆ ಖಚಿತಪಡಿಸುತ್ತಿದೆ.
0 out of 0 found this helpful