ರೆನಾಲ್ಟ್ ನ ಸಬ್ -4m ಸೆಡಾನ್ ಬರುತ್ತಿದೆ ಮಾರುತಿ ಡಿಸೈರ್ , ಹೋಂಡಾ ಅಮೇಜ್, ಟಾಟಾ ಟಿಗೋರ್, ಹಾಗು ಹುಂಡೈ ಔರ ಗಳೊಂದಿಗೆ ಸ್ಪರ್ದಿಸಲು.
ಫೆಬ್ರವಾರಿ 26, 2020 02:38 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಅದು ಫೀಚರ್ ಗಳನ್ನು ರೆನಾಲ್ಟ್ ನ ಮುಂಬರುವ ಸಬ್ -4m SUV ಹಾಗು ಟ್ರೈಬರ್ ಒಂದಿಗೆ ಹಂಚಿಕೊಳ್ಳುತ್ತದೆ
- ಅದು ಟ್ರೈಬರ್ ಮೇಲೆ ಆಧಾರಿತವಾಗಿದೆ , ರೆನಾಲ್ಟ್ ನ ಮುಂಬರುವ ಸಬ್ -4m SUV ಗಳಂತೆ
- ಅದು ನಿರೀಕ್ಷೆಯಂತೆ ಟ್ರೈಬರ್ ನಲ್ಲಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಲಿದೆ
- ಅದು 1.0-ಲೀಟರ್ ಟರ್ಬೊ -ಪೆಟ್ರೋಲ್ ವೇರಿಯೆಂಟ್ ಅನ್ನು ಹೆಚ್ಚಿನ ಪವರ್ ಒಂದಿಗೆ ಪಡೆಯಲಿದೆ
- ಬಿಡುಗಡೆಯನ್ನು 2021 ಯಲ್ಲಿ ನಿರೀಕ್ಷಿಸಲಾಗಿದೆ.
ಸಬ್ -4m ವಿಭಾಗ ಭಾರತದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ವಿಭಾಗ ಆಗಿದೆ ಹಾಗು ರೆನಾಲ್ಟ್ ಅದರಲ್ಲಿ ಪಾಲು ಪಡೆಯಲು ಬಯಸಿದೆ. ಸಬ್ 4m MPV ಬಿಡಿಗಡೆ ಆದ ನಂತರ ಹಾಗು ಹೊಸ ಸಬ್ -4m SUV ಅನ್ನು ಘೋಷಿಸಲಾದ ನಂತರ , ಕೋಡ್ ನೇಮ್ HBC, ಉತ್ಪಾದಕರು ಈಗ ಮಾರುತಿ ಡಿಸೈರ್ ಗೆ ಪ್ರತಿಸ್ಪರ್ಧೆ ಕೊಡಲು ಯೋಚಿಸುತ್ತಿದ್ದಾರೆ. ರೆನಾಲ್ಟ್ ನವರು ಈ ಬೆಳವಣಿಗೆಯನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪ್ರಕಟಿಸಿದ್ದಾರೆ.
ಸಬ್ -4m ಸೆಡಾನ್ ನ ವಿವರಗಳು ಕಡಿಮೆ ಲಭ್ಯವಿದೆ, ಆದರೆ ನಮಗೆ ತಿಳಿದಿರುವಂತೆ ಅದು CMF-A ಆಧಾರಿತವಾಗಿರಲಿದೆ ಹಾಗು ಅದು ರೆನಾಲ್ಟ್ ಟ್ರೈಬರ್ ಅನ್ನು ಹೋಲುತ್ತದೆ, ಮತ್ತು ಅದು ಮುಂಬರುವ ಸಬ್ -4m SUV ಹೋಲಿಕೆ ಹೊಂದಿದೆ ಅದು ಪರೀಕ್ಷಿಸಲ್ಪಡುತ್ತಿರುವುದನ್ನು ನಾವು ಹಿಂದಿನ ತಿಂಗಳು ಬೇಹುಗಾರಿಕೆಯಲ್ಲಿ ನೋಡಿದೆವು.
ರೆನಾಲ್ಟ್ ನವರು ಡೀಸೆಲ್ ಎಂಜಿನ್ ಗಳನ್ನು ಸ್ಥಗಿತಗೊಳಿಸಿರುವುದರಿಂದ , ಮುಂಬರುವ ಸೆಡಾನ್ ಕೇವಲ ಪೆಟ್ರೋಲ್ ಕೊಡುಗೆ ಆಗಿರಲಿದೆ ಮಾರುತಿ ಡಿಸೈರ್ , ಟಾಟಾ ಟಿಗೋರ್, ಹಾಗು VW ಅಮೆಯೋ ತರಹ . ಅದು ಪವರ್ ಅನ್ನು 1.0-ಲೀಟರ್ , 3- ಸಿಲಿಂಡರ್ ಪೆಟ್ರೋಲ್ ಎಂಜಿನ್ (72PS/96Nm) ನಿಂದ ಪಡೆಯಲಿದೆ ಅದನ್ನು ಟ್ರೈಬರ್ ನಲ್ಲೂ ಸಹ ಬಳಸಲಾಗಿದೆ.
ರೆನಾಲ್ಟ್ ನವರು ಪರಿಚಯಿಸಲಿದ್ದಾರೆ ಟರ್ಬೊ ಚಾರ್ಜ್ ಆವೃತ್ತಿಯ 1.0-ಲೀಟರ್ ಎಂಜಿನ್ ಅನ್ನು ಈ ಸೆಡಾನ್ ನಲ್ಲಿ ಅದು ಪ್ರತಿಸ್ಪರ್ಧೆ ಯನ್ನು ಹುಂಡೈ ಔರ ಒಂದಿಗೆ ಮಾಡುತ್ತದೆಂ ಅದನ್ನು ಆಟೋ ಎಕ್ಸ್ಪೋ 2020 ಯಲ್ಲಿ ಬಹಿರಂಗಪಡಿಸಲಾಯಿತು. ಈ ಪೌರ್ ಹೌಸ್ ಜಾಗತಿಕವಾಗಿ ಎರೆಡು ಆವೃತ್ತಿಯಲ್ಲಿ ಕೊಡಲಾಗಿದೆ : 100PS/160Nm ಹಾಗು 117PS/180Nm.
ಈ ವಿಭಾಗದ ಸ್ಟ್ಯಾಂಡರ್ಡ್ ಗೆ ಅನುಗುಣವಾಗಿ , ಟ್ರಾನ್ಸ್ಮಿಷನ್ ಆಯ್ಕೆ ಗಳು 5-ಸ್ಪೀಡ್ ಮಾನ್ಯುಯಲ್ ಹಾಗು AMT ಯಲ್ಲಿ ಲಭ್ಯವಿರುತ್ತದೆ. ರೆನಾಲ್ಟ್ 1.0-ಲೀಟರ್ ಟರ್ಬೊ ಯೂನಿಟ್ ಪಡೆದರೆ CVT ಆಯ್ಕೆ ಸಹ ಕೊಡುವ ಸಾಧ್ಯತೆ ಇದೆ.
ವಿಶಾಲವಾದ ಆಂತರಿಕಗಳನ್ನು ರೆನಾಲ್ಟ್ ಟ್ರೈಬರ್ ನಿಂದ ಪಡೆಯಲಾಗಿದೆ . ಫೀಚರ್ ಗಳಾದ 8-ಇಂಚು ಟಚ್ ಸ್ಕ್ರೀನ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ , ಆಟೋ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು, ಹಾಗು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳು ಸೆಡಾನ್ ನಲ್ಲಿ ಲಭ್ಯವಿರುವ ಸಾಧ್ಯತೆ ಇದೆ.
ಸಬ್ 4m ಸೆಡಾನ್ ಉತ್ಪಾದನೆಗೆ 2021 ವೇಳೆಗೆ ಲಭ್ಯವಿರಬಹುದು ಹಾಗು ಅದನ್ನು ವಿದೇಶಗಳಿಗೆ ರಫ್ತ್ತು ಮಾಡಲಾಗುವುದು ಸಹ. ರೆನಾಲ್ಟ್ ಬಜೆಟ್ ಕಾರ್ಡ್ ಅನ್ನು ಮುಂದಿಡಬಹುದು ಮುಂಬರುವ ಸೆಡಾನ್ ಗಾಗಿ ಹಾಗು ಬೆಲೆ ಪಟ್ಟಿ ಟಾಟಾ ಟಿಗೋರ್ ಅಸು ಪಾಸಿನಲ್ಲಿರಬಹುದು, ಅದು ಕಡಿಮೆ ಬೆಲೆ ಹೊಂದಿರುವ ಸಬ್ ಕಾಂಪ್ಯಾಕ್ಟ್ ಸೆಡಾನ್ ಗಳಲ್ಲಿ ಒಂದು ಆಗಿದೆ. ಟಿಗೋರ್ ಬೆಲೆ ಪಟ್ಟು ಸುಮಾರು ರೂ 5.75 ಲಕ್ಷ ದಿಂದ ರೂ 7.49 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ಭಾರತ ) , ಡಿಸೈರ್ (ರೂ 5.82 ಲಕ್ಷ ದಿಂದ ರೂ 8.69 ಲಕ್ಷ ವರೆಗೆ ) ಹಾಗು ಅಮೇಜ್ (ರೂ 6.10 ಲಕ್ಷ ದಿಂದ ರೂ 9.96 ಲಕ್ಷ ) ಗಳು ಸ್ವಲ್ಪ ಹೆಚ್ಚು ಬೆಲೆ ಪಟ್ಟಿ ಹೊಂದಿದೆ.
ರೆನಾಲ್ಟ್ ನ 1.0- ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಪ್ರದರ್ಶಿಸಲಾಗಿದೆ ಆಟೋ ಎಕ್ಸ್ಪೋ 2020 ದಲ್ಲಿ
ಹೆಚ್ಚು ಓದಿ: ಟಾಟಾ ಟಿಗೋರ್ AMT
0 out of 0 found this helpful