Login or Register ಅತ್ಯುತ್ತಮ CarDekho experience ಗೆ
Login

ಸಮ-ಬೆಸ ಯೋಜನೆ ನವೆಂಬರ್ 2019 ನಲ್ಲಿ ಮತ್ತೆ ಬರಲಿದೆ: ಅದು ದೆಹಲಿಯ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಸಹಾಯವಾಗುವುದೇ?

published on ಸೆಪ್ಟೆಂಬರ್ 19, 2019 11:37 am by sonny

ಬಹಳಷ್ಟು ಜನರಿಗೆ ರಸ್ತೆಯ ಪಡಿತರಗೊಳಿಸುವುದು ವಾಯು ಮಾಲಿನ್ಯ ತಡೆಯಲು ಒಂದು ಸೂಕ್ತ ನಿರ್ಧಾರ ಸಮಂಜಸವಾಗಿದೆ ಎಂದು ಎನಿಸುವುದಿಲ್ಲ.

ದೆಹಲಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ವಿರುದ್ದದ ಹೋರಾಟ ಮುಂದುವರೆದಿದೆ ಮತ್ತು ಬಹಳಷ್ಟು ಸಾರ್ವಜನಿಕರು ದೂಷಿಸುವಂತೆ ರಾಜಧಾನಿಯಲ್ಲಿ ಪ್ರತಿದಿನ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು. ಈ ಸಮಸ್ಯೆಯ ಪರಿಹಾರವಾಗಿ , ದೆಹಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ವಾಹನಗಳ ಸಮ -ಬೆಸ ಯೋಜನೆಯನ್ನು ನವೆಂಬರ್ ನಲ್ಲಿ ಎರೆಡು ವಾರಗಳಿಗೆ ಅನ್ವ್ಯವಯಗುವಂತೆ ಮತ್ತೆ ಅಳವಡಿಸಲಾಗುವುದು (4-15 ನವೆಂಬರ್ '19).

ಸಮ-ಬೆಸ ಯೋಜನೆ ಯಂತೆ ಯಾವ ವಾಹನದ ನೋಂದಣಿ ಸಂಖ್ಯೆ ಬೆಸ ಸಂಖ್ಯೆ ಒಂದಿಗೆ ಕೊನೆ ಹೊಂದಿರುತ್ತದೆಯೋ ಅಂತಹವು ಬೆಸ ದಿನಾಂಕಗಳಾದ 1,3,5,7 ಗಳಲ್ಲಿ ಉಪಯೋಗಿಸಬಹುದು. ಅದೇ ರೀತಿ ಸಮ ಸಂಖ್ಯೆಗಳಾದ 2,4,6,8 ದಿನಾಂಕಗಳಲ್ಲಿ ಸಮ ಸಂಖ್ಯೆ ಹೊಂದಿರುವ ವಾಹನಗಳನ್ನು ಉಪಯೋಗಿಸಬಹುದು ಸಾರ್ವಜನಿಕ ರಸ್ತೆಗಳಲ್ಲಿ.

ಇದನ್ನು ಮೊದಲಬಾರಿಗೆ ಜನವರಿ 2016 ನಲ್ಲಿ ಅಳವಡಿಸಲಾಗಿತ್ತು ಮತ್ತು ಅದರ ನಂತರ ಏಪ್ರಿಲ್ 2016 ನಲ್ಲಿ.

ಹಿಂದಿನಂತೆ, ಯಾವ ವಾಹನಗಳಿಗೆ ಇವು ಅನ್ವ್ಯಯವಾಗುವುದಿಲ್ಲ ಎಂಬ ಪಟ್ಟಿ ಕೊಡಲಾಗಿದೆ:

  • ದ್ವಿಚಕ್ರ ವಾಹನ
  • CNG ವಾಹನಗಳು, ಹೈಬ್ರಿಡ್ ಮತ್ತು ವಿದ್ಯುತ್ ವಾಹನಗಳು\
  • ಮಹಿಳೆಯರಿಗೆ ಮಾತ್ರ ವಾಹನಗಳು
  • ತುರ್ತು ವಾಹನಗಳು
  • VIP ಗಳು, ರಾಜಕೀಯ ವ್ಯಕ್ರಿಗಳ ವಾಹನಗಳು, ಸುಪ್ರೀಂ ಕೋರ್ಟ್ ಜಡ್ಜ್ ಗಳು, ಮತ್ತು ರಕ್ಷಣಾ ವಾಹನಗಳು
  • ಅಕಾ ಮಹಿಳೆ ಡ್ರೈವರ್ ಗಳು ,ಮತ್ತು ವಯಸ್ಸು 13 ಒಳಗೆ ಇರುವ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಮಹಿಳಾ ಡ್ರೈವರ್ ಗಳು ಇರುವ ವಾಹನ

ಈ ನಿಯಮ ಪಾಲಿಸದಿರುವ ಜನಗಳಿಗೆ ರೂ 2,000 ದಂಡ ವಿಧಿಸಲಾಗುವುದು. ಆದರೆ, ವಿನಾಯಿತಿ ದೊರೆವ ವಾಹನಗಳು ಮುಂದೆ ಅನ್ವ್ಯಯವಾಗುವಂತೆ ಇನ್ನು ಖಚಿತ ಪಡಿಸಲಾಗಿಲ್ಲ, ಬದಲಾವಣೆ ಇಲ್ಲದಿದ್ದರೆ ಅವು ಮೇಲೆ ಹೇಳಿದ ರೀತಿ ಇರುತ್ತದೆ.

ಬೆಸ-ಸಮ ಯೋಜನೆಗೆ ಬಹಳಷ್ಟು ವಿಧವಾದ ಅನಿಸಿಕೆಗಳು ಲಭ್ಯವಿದೆ ಅದು ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಒಂದು ಉತ್ತಮ ನಿರ್ಧಾರವಾಗಿದೆ. ಕೇವಲ ರಾಜಕೀಯ ನಡೆ ಆದಂತೆ ಕಾಣುವುದಿಲ್ಲ.

ತಜ್ಞರು ಹೇಳುವಂತೆ ಇದು ನಿಜವಾಗಿಯೂ ಉತ್ತಮ ಪ್ರಭಾವ ಬೀರಲು ಕಡಿಮೆ ವಿನಾಯಿತಿಗಳು ಇರಬೇಕು ಎಂದು. IIT ದೆಹಲಿ ಸಂಶೋಧಕರು ತಮ್ಮದೇ ಆದ ಸಮೀಕ್ಷೆ ನಡೆಸಿ ನಂತರ ಹೇಳಿದಂತೆ ಈ ಸಮಯದಲ್ಲಿ ದೆಹಲಿಯಲ್ಲಿನ ಮಾಲಿನ್ಯ ಕೇವಲ ಶೇಕಡಾ 2-3 ಕಡಿಮೆ ಆಯಿತು ಎಂದು.

ಹಾಗು ಹೆಚ್ಚುವರಿ ಸಾರ್ವಜನಿಕ ವಾಹನಗಳನ್ನು ಈ ಸಮಯದಲ್ಲಿ ಹೊರತರಲಾಯಿತು ಸಾರ್ವಜನಿಕರಿಗೆ ಹೆಚ್ಚು ಕಾರ್ ಗಳು ಇಲ್ಲದಿರುವಾಗ ಪ್ರಯಾಣಕ್ಕೆ ತೊಂದರೆ ಆಗದಂತೆ ಮಾಡಲು. ಖಂಡಿತವಾಗಿಯೂ ಈ ಯೋಜನೆಯಂತೆ ಬಹಳಷ್ಟು ನಡೆಯಿಲ್ಲ , ಹಾಗು ಬಹಳಷ್ಟು ಸಮೀಕ್ಷೆ ಮಾಡಲಾಯಿತು ಎಲ್ಲಿ ಸರಿಹೋಗಲಿಲ್ಲ ಎಂದು ತಿಳಿಯಲು ಮತ್ತು ಚಳಿಗಾಲದಲ್ಲಿ ಮೂಲ ಅಪಾಯಕಾರಿ ಮಟ್ಟ ಮಾಲಿನ್ಯ ಹೊಂದಿದ ದೆಹಲಿಯ ಸಮಸ್ಯೆಯನ್ನು ಪರಿಹರಿಸಲು .

2016 ದಿಂದ, ಯಾವಾಗ ದೆಹಲಿಯ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತ ತಲುಪುತ್ತದೆಯೋ , ಆಗ ಅಧಿಕಾರಿಗಳು ವಿವಿಧ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದ್ದಾರೆ , ತಾತ್ಕಾಲಿಕ ಉದ್ಯಮಗಳ ನಿಲುಗಡೆ ಮತ್ತು ಹತ್ತಿರದ ಪವರ್ ಪ್ಲಾಂಟ್ ಗಳ ನಿಲುಗಡೆ, ಕಟ್ಟಡ ನಿರ್ಮಾಣದ ತಡೆ, ಟ್ರಕ್ ಗಳು ದೆಹಲಿ ಒಳಗೆ ಬರಲು ನಿಷೇಧ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಪರಿಣಾಮಗಳ ಧೀರ್ಘ ಸಮೀಕ್ಷೆಯನ್ನು ಇನ್ನೂ ಹಂಚಿಕೊಳ್ಳಲಾಗಿಲ್ಲ.

ಹೊರನೋಟದಲ್ಲಿ , ಮೂರನೇ ಬಾರಿ ಬೆಸ -ಸಮ ಯೋಜನೆ ಅನ್ವಯ ಹಿಂದಿನ ನಪಾಸಾದ ವಿಷಯಗಳ ಸರಿಪಡಿಯುವಿಕೆ ಹೊಂದಿರುತ್ತದೆ ಎಂದು ಭಾವಿಸಲಾಗಿದೆ. ಇದರ ಅಳವಡಿಕೆಯ ಸಮಯ 4 ರಿಂದ 15ನೇ ನವಂಬರ್ ಇತರ ವಿಷಯಗಳನ್ನು ಪರಿಗಣಿಸಿ ನಿರ್ಧರಿಸಲಾಗಿದೆ ಪರಿಣಾಮಕಾರಿಯಾಗಿರುವಂತೆ ಮಾಡುವುದಲ್ಲದೆ ಕಡಿಮೆ ವೆತ್ಯಾಸಗಳೊಂದಿಗೆ ಪರಿಣಾಮ ಅಳೆಯಲು ಅನುಕೂಲವಾಗುತ್ತದೆ.

ವರದಿಗಳ ಅನ್ವಯ , ವರ್ಷದ ಈ ಸಮಯದಲ್ಲಿ ಬೆಳೆಗಳ ಸುಡುವಿಕೆ ನಡೆಯುತ್ತದೆ ದೆಹಲಿಯ ಸುತ್ತಲಿನ ರಾಜ್ಯಗಳಲ್ಲಿ. ದೀಪಾವಳಿ ನಂತರ ಗಲಿ ಗುಣಮಟ್ಟ ಹೆಚ್ಚು ಅಪಾಯಕಾರಿ ಮಟ್ಟ ತಲುಪುತ್ತದೆ, ಪಟಾಕಿಗಳ ನಿಷೇಧದ ನಂತರವೂ. ದೂರದ ಸಮಯಾವಧಿಯ ನಿರ್ಣಾಯಕಗಳು ಹೆಚ್ಚು ಸಂಖ್ಯೆಯ ವಾಹನಗಳೊಂದಿಗಿನ ಸೆಣೆಸಾಟ ಜೊತೆಗೆ ಸಾವಿರಾರು ಬಸ್ ಗಳ , ಅವುಗಳಲ್ಲಿ 1000 ವಿದ್ಯುತ್ ನಿಂದ ಚಲಿಸುತ್ತವೆ, ಅವುಗಳನ್ನು ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಬಳಸಲಾಗುವುದು. ಕಾಡು ನೋಡಬೇಕಾದ ವಿಷಯವೆಂದರೆ ದೆಹಲಿಯ ಸಾರ್ವಜನಿಕ ಪ್ರಯಾಣಿಕರು ಬೆಸ -ಸಮ ಯೋಜನೆಯಲ್ಲಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆಯೇ ಎಂದು.

ದೆಹಲಿಯ CM ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಇನ್ನು ಹೆಚ್ಚು ನಿಯಮಗಳನ್ನು ಘೋಷಿಸಿದ್ದಾರೆ. ಗರಿಷ್ಟ ನಿಯಮಾವಳಿಗಳ ಅಳವಡಿಕೆಗಳನ್ನು ನಗರದ 12 ಪ್ರದೇಶಗಳಲ್ಲಿ , ಎಲ್ಲಿ ವಾಯು ಮಾಲಿನ್ಯ ಗರಿಷ್ಠ ಇದೆಯೋ ಅಲ್ಲಿ ಅನ್ವಯವಾಗುವಂತೆ.

ಆದರೆ, ಬೆಸ -ಸಮ ನಿಯಮ ಸರ್ಕಾರದ ಇತರ ಸಂಸ್ಥೆಗಳಿಂದ ಅನುಮೋದನೆ ಪಡೆಯಬೇಕಾಗುತ್ತದೆ, ಉದಾಹರಣೆಗೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್. ಬೆಸ-ಸಮ ನಿಯವ ಮತ್ತೆ ಬರುವ ಸಾಧ್ಯತೆ ಖಂಡಿತವಾಗಿಲ್ಲದಿದ್ದರು, ಸ್ವಲ್ಪ ಮಟ್ಟಿಗೆ ಸಾಧ್ಯತೆಗಳು ಇದೆ.

ಈ ಬೆಸ-ಸಮ ಯೋಜನೆ ಆಟೋಮೊಬೈಲ್ ಉದ್ಯಮದ ಮೇಲೆ ಯಾವ ತರಹದ ಪರಿಣಾಮ ಬೀರಬಲ್ಲದು ಎಂದು ನೋಡಬೇಕಾಗಿದೆ, ಉದ್ಯಮ ಈಗಾಗಲೇ ಹಿನ್ನಡೆ ಹೊಂದಿದೆ ಎಂಬುದು ಗಮನಿಸಬೇಕಾದ ವಿಷಯ. ಗ್ರಾಹಕರು ಉಪಯೋಗಿಸಿದ ಕಾರ್ ಗಳು ಕೊಳ್ಳಬೇಕಾದರೆ ಬೆಸ/ಸಮ ಸಂಖ್ಯೆಯ ಪ್ಲೇಟ್ ಇರುವತಹವನ್ನು ಕೊಳ್ಳುವರೇ? ಅಥವಾ ತಮ್ಮ ಕಾರ್ ಗಳ ಕೊಳ್ಳುವಿಕೆಯನ್ನು ಮತ್ತೆ ತಡೆಹಿಡಿಯುವರೇ ?

s
ಅವರಿಂದ ಪ್ರಕಟಿಸಲಾಗಿದೆ

sonny

  • 16 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ