• English
  • Login / Register

2029 ರ ವೇಳೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ

ಜೂನ್ 20, 2024 07:55 pm ರಂದು ansh ಮೂಲಕ ಪ್ರಕಟಿಸಲಾಗಿದೆ

  • 90 Views
  • ಕಾಮೆಂಟ್‌ ಅನ್ನು ಬರೆಯಿರಿ

ಪ್ರಸ್ತುತ ಶೇಕಡಾ 2.2 ರಷ್ಟಿರುವ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಮಾರುಕಟ್ಟೆ ಪಾಲು ಮುಂದಿನ ಐದು ವರ್ಷಗಳಲ್ಲಿ ಸಾಕಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ

Strong Hybrid Cars' Market Share By 2029

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಹೆಚ್ಚಿನ ಜನರು ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತಹ ಸ್ಟ್ರಾಂಗ್ ಹೈಬ್ರಿಡ್ ವಾಹನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಎಲೆಕ್ಟ್ರಿಕ್ ತಂತ್ರಜ್ಞಾನಕ್ಕೆ ಸರ್ಕಾರದ ಬೆಂಬಲದ ಕೊರತೆಯಿದ್ದರೂ ಕೂಡ, ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆಯಾದ CRISIL MI&A (ಕ್ರೆಡಿಟ್ ರೇಟಿಂಗ್ ಇನ್ಫೋರ್ಮೇಷನ್ ಸರ್ವಿಸಸ್ ಆಫ್ ಇಂಡಿಯಾ ಲಿಮಿಟೆಡ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್), ಸ್ಟ್ರಾಂಗ್ ಹೈಬ್ರಿಡ್ ವಾಹನಗಳ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದೆ.

 2024 ರ ಆರ್ಥಿಕ ವರ್ಷದಲ್ಲಿ ಸ್ಟ್ರಾಂಗ್ ಹೈಬ್ರಿಡ್ ನ ಮಾರುಕಟ್ಟೆಯು 2.2% ರಷ್ಟಿದೆ ಎಂದು ಅವುಗಳ ಡೇಟಾ ತೋರಿಸುತ್ತದೆ. ಆದರೆ, 2029 ರ ಆರ್ಥಿಕ ವರ್ಷದ ವೇಳೆಗೆ ಈ ಸಂಖ್ಯೆಯು 13% ಮತ್ತು 16% ರ ನಡುವೆ ಹೆಚ್ಚಾಗಬಹುದು.

 EVಗಳ ಬದಲಿಗೆ ಸ್ಟ್ರಾಂಗ್ ಹೈಬ್ರಿಡ್‌ಗಳು

Strong Hybrid Powertrain

 ಈಗ 2.3% ರಷ್ಟಿರುವ EVಗಳ ಮಾರುಕಟ್ಟೆ ಪಾಲು 2029 ರ ಆರ್ಥಿಕ ವರ್ಷದಲ್ಲಿ 20% ಕ್ಕೆ ಬೆಳೆಯಬಹುದು ಎಂದು CRISIL MI&A ಸೂಚಿಸಿದೆ. ಇದೀಗ, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಖಾಸಗಿ ಖರೀದಿದಾರರು ಕೇಂದ್ರ ಸರ್ಕಾರದಿಂದ ಯಾವುದೇ ಪ್ರೋತ್ಸಾಹವನ್ನು ಪಡೆಯುತ್ತಿಲ್ಲ, ಆದರೆ ಈ ತಂತ್ರಜ್ಞಾನವು ಹೈಬ್ರಿಡ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಜಾಗತಿಕ ಬೆಂಬಲವನ್ನು ಪಡೆಯುತ್ತಿದೆ. ಈ ಎರಡು ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ನೋಡಿದರೆ, ಸ್ಟ್ರಾಂಗ್ ಹೈಬ್ರಿಡ್ ವಾಹನಗಳ ಬೆಳವಣಿಗೆಯು ಹಲವಾರು ಕಾರಣದಿಂದಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

 ಕಡಿಮೆ ಬೆಲೆಯ ಪ್ರೀಮಿಯಂ ವಾಹನಗಳು

Toyota Hyryder

 ಮೊದಲನೆಯದಾಗಿ, ಸಾಂಪ್ರದಾಯಿಕ ಇಂಟರ್ನಲ್ ಕಮ್ಬಾಷನ್ (ICE) ಕಾರುಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ (EVಗಳು) ಬದಲಾಯಿಸುವುದು ಸ್ಟ್ರಾಂಗ್ ಹೈಬ್ರಿಡ್ ಮಾಡೆಲ್ ಗಳಿಗೆ ಬದಲಾಯಿಸುವುದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಇದರರ್ಥ EV ಅನ್ನು ಖರೀದಿಸಲು ಹೆಚ್ಚು ಹಣದ ಅಗತ್ಯವಿರುತ್ತದೆ ಮತ್ತು ನೀವು ಅದನ್ನು ಹೆಚ್ಚು ಓಡಿಸದ ಹೊರತು ಆ ವೆಚ್ಚವನ್ನು ಸರಿದೂಗಿಸಲು ಬಹಳ ಸಮಯ ತೆಗೆದುಕೊಳ್ಳಬಹುದು. ಆದರೆ, ಸ್ಟ್ರಾಂಗ್ ಹೈಬ್ರಿಡ್ ಕಾರುಗಳು ಸಾಮಾನ್ಯ ಕಾರುಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿವೆ, ಆದರೆ ಈ ಏರಿಕೆಯು ನ್ಯಾಯುತವಾಗಿದೆ ಏಕೆಂದರೆ ಅವುಗಳು ಕಡಿಮೆ ನ್ಯೂನತೆಗಳನ್ನು ಹೊಂದಿವೆ

 ಬಳಸಲು ಸುಲಭ

Toyota Hyryder Engine

 ಸಾಂಪ್ರದಾಯಿಕ ಕಾರುಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವುದು ಹೆಚ್ಚು ದುಬಾರಿ ಮಾತ್ರವಲ್ಲದೆ ಇದು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. EV ಆಯ್ಕೆ ಮಾಡುವ ಮೂಲಕ, ನೀವು ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ ಹೊಸ ಚಾರ್ಜಿಂಗ್ ಸ್ಟೇಷನ್ ನೆಟ್‌ವರ್ಕ್ ಅನ್ನು ಅವಲಂಬಿಸಬೇಕು. ಇದು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲ ಮತ್ತು ಪ್ರತಿ ನಗರದಲ್ಲಿ ಸಿಗುವ ಸಾಧ್ಯತೆ ಬಹಳ ಕಡಿಮೆಯಿದೆ. ಯಾವುದೇ ಪ್ರೀಮಿಯಂ ಟಾಪ್ ಎಂಡ್ ಎಲೆಕ್ಟ್ರಿಕ್ ವಾಹನವಾಗಿದ್ದರೂ ಕೂಡ, ಅದರ ಮಾಲೀಕರು ಚಾರ್ಜರ್ ನ ಲಭ್ಯತೆಯ ಆಧಾರದ ಮೇಲೆ ಎಷ್ಟು ದೂರ ಪ್ರಯಾಣ ಮಾಡಬಹುದು ಎಂದು ಯೋಚನೆ ಮಾಡುವುದು ಸಾಮಾನ್ಯವಾಗಿದೆ.

 ಇದನ್ನು ಕೂಡ ಓದಿ: ಟೊಯೋಟಾ ಹೈಬ್ರಿಡ್ ಮಾಡೆಲ್‌ ಪಡೆಯಲು ನೀವು ಈ ಜೂನ್‌ನಲ್ಲಿ ವರ್ಷಪೂರ್ತಿ ಕಾಯಬೇಕು

 ಭಾರತದಲ್ಲಿರುವ ಹೆಚ್ಚಿನ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿಗೆ ವಿಶೇಷ ಚಾರ್ಜಿಂಗ್ ಸ್ಟೇಷನ್‌ಗಳ ಅಗತ್ಯವಿಲ್ಲ ಮತ್ತು ವಿದ್ಯುತ್ ಶಕ್ತಿಯನ್ನು ಪುನರುತ್ಪಾದಿಸಲು ಪೆಟ್ರೋಲ್ ಎಂಜಿನ್ ಅನ್ನು ಬಳಸುವುದರಿಂದ, ಅವು ಸಾಮಾನ್ಯ ICE ಕಾರುಗಳಂತೆಯೇ ಅನುಕೂಲಕರವಾಗಿವೆ. ಪ್ಲಗ್-ಇನ್ ಹೈಬ್ರಿಡ್‌ಗಳ ಸೀಮಿತ ಆಯ್ಕೆಗಳ ಹೊರತಾಗಿಯು, ಸ್ಟ್ರಾಂಗ್ ಹೈಬ್ರಿಡ್‌ಗಳಿಗೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳನ್ನು ಹೊರತುಪಡಿಸಿ ಯಾವುದೇ ವಿಶೇಷ ಮೂಲಸೌಕರ್ಯದ ಅಗತ್ಯವಿಲ್ಲ. ಇದು ದೀರ್ಘ ಪ್ರಯಾಣಗಳಿಗೆ ಅನುಕೂಲಕರ ಮತ್ತು ವಿಶ್ವಾಸಾರ್ಹವಾಗಿವೆ.

 ಹೆಚ್ಚಿನ ಸಂಖ್ಯೆಯಲ್ಲಿ ಸ್ಟ್ರಾಂಗ್ ಹೈಬ್ರಿಡ್‌ಗಳು ಬರಲಿವೆ

 ಸಾಂಪ್ರದಾಯಿಕ ICE ಕಾರುಗಳು ಹಂತಹಂತವಾಗಿ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ, ಸ್ಟ್ರಾಂಗ್ ಹೈಬ್ರಿಡ್ ವಾಹನಗಳು ICE ನಿಂದ EV ಪರಿವರ್ತನೆಯತ್ತ ಪ್ರಾಯೋಗಿಕ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತವೆ. ಆಲ್-ಎಲೆಕ್ಟ್ರಿಕ್ ನಿಂದ ನಾವು ಇನ್ನೂ ಸಾಕಷ್ಟು ದೂರವಿರುವ ಕಾರಣ, ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದರಿಂದಾಗಿ ಇನ್ನೂ ಹೆಚ್ಚಿನ ಮಾಡೆಲ್ ಗಳು ಭಾರತೀಯ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

Toyota Innova Hycross

 ಇದೀಗ, ಭಾರತದಲ್ಲಿನ ಎಲ್ಲಾ ಜನಪ್ರಿಯ ಸ್ಟ್ರಾಂಗ್ ಹೈಬ್ರಿಡ್ ಕಾರುಗಳು ಮಾರುತಿ ಸುಜುಕಿ, ಟೊಯೋಟಾ ಮತ್ತು ಹೋಂಡಾದಂತಹ ಜಪಾನೀಸ್ ಬ್ರ್ಯಾಂಡ್‌ಗಳಿಂದ ಬರುತ್ತಿವೆ. ಈ ಕಂಪನಿಗಳು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮಾಡೆಲ್ ಗಳನ್ನು ತರಲಿದ್ದಾರೆ.

ಇತರ ಜಾಗತಿಕ ಬ್ರ್ಯಾಂಡ್‌ಗಳಾದ ಹ್ಯುಂಡೈ, ಕಿಯಾ, ಫೋಕ್ಸ್‌ವ್ಯಾಗನ್ ಮತ್ತು MG ಕೂಡ ಮುಂದಿನ ಕೆಲವು ವರ್ಷಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬಹುದು. ಈ ಕಾರುಗಳು ವಿವಿಧ ಸೆಗ್ಮೆಂಟ್ ಗಳು ಮತ್ತು ಬೆಲೆ ಶ್ರೇಣಿಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ. BMW XM ನಂತಹ ಕೆಲವು ಪ್ಲಗ್-ಇನ್ ಹೈಬ್ರಿಡ್‌ಗಳು ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಮಾರುಕಟ್ಟೆಗೆ ಬರುವುದನ್ನು ನಾವು ನಿರೀಕ್ಷಿಸಬಹುದು.

 ಇದನ್ನು ಕೂಡ ಓದಿ: ಟಾಟಾ ಹ್ಯಾರಿಯರ್ EV ಯನ್ನು ಟೆಸ್ಟ್ ಮಾಡುವಾಗ ನಾವು ಕ್ಲಿಕ್ ಮಾಡಿದ್ದೇವೆ ಕೆಲವು ಎಕ್ಸ್ಕ್ಲ್ಯೂಸಿವ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ಚಿತ್ರಗಳು

 ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರಿ ಹೂಡಿಕೆ ಮಾಡಿರುವ ಟಾಟಾ ಮತ್ತು ಮಹೀಂದ್ರಾಗಳಂತಹ ಭಾರತೀಯ ಕಾರು ತಯಾರಕರು ಸ್ಟ್ರಾಂಗ್ ಹೈಬ್ರಿಡ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಿದೆ. ಬದಲಾಗಿ, ಈ ಬ್ರ್ಯಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳ (EV) ಮಾರುಕಟ್ಟೆ ಪಾಲನ್ನು ಹೆಚ್ಚಿಸುವತ್ತ ಗಮನಹರಿಸಲಿವೆ.

 ಮುಂದಿನ ಕೆಲವು ವರ್ಷಗಳು ಸ್ಟ್ರಾಂಗ್ ಹೈಬ್ರಿಡ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಮಾರುಕಟ್ಟೆಯನ್ನು ನೀಡಲಿದೆ ಮತ್ತು ಎರಡೂ ಸೆಗ್ಮೆಂಟ್ ಗಳಲ್ಲಿ ಅನೇಕ ಕಾರುಗಳು ಬರುವುದನ್ನು ನಾವು ನೋಡಬಹುದು. ನೀವು EV ಬದಲಿಗೆ ಸ್ಟ್ರಾಂಗ್ ಹೈಬ್ರಿಡ್ ಅನ್ನು ನಿಮ್ಮ ಮುಂದಿನ ಕಾರಾಗಿ ಖರೀದಿಸಲು ಬಯಸುತ್ತೀರಾ? ಕೆಳಗೆ ಕಾಮೆಂಟ್‌ ಮಾಡುವ ಮೂಲಕ ನಮಗೆ ತಿಳಿಸಿ.

 ವಾಟ್ಸ್ಆಪ್ ನಲ್ಲಿ ಕಾರ್‌ದೇಖೋ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience