Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್‌ನ ಮಾಹಿತಿಗಳು ಬಹಿರಂಗ
ಟಾಟಾ ಹ್ಯಾರಿಯರ್ ಇವಿ ಗಾಗಿ shreyash ಮೂಲಕ ಜೂನ್ 19, 2024 08:24 pm ರಂದು ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಹ್ಯಾರಿಯರ್ EV ಹೊಸ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು 500 ಕಿಮೀಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ
-
ಇತ್ತೀಚಿನ ಲೀಕ್ ಆಗಿರುವ ಚಿತ್ರವು ಹ್ಯಾರಿಯರ್ EV ಯ ರಿಯರ್-ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ತೋರಿಸುತ್ತದೆ.
-
ಹ್ಯಾರಿಯರ್ EV ಆಲ್-ವೀಲ್ ಡ್ರೈವ್ (AWD) ಆಯ್ಕೆಯನ್ನು ನೀಡಲಿದೆ ಎಂದು ಇದು ಸೂಚಿಸುತ್ತದೆ.
-
ಇದು ಹೊಸ ಅಲೊಯ್ ವೀಲ್ಸ್ ಮತ್ತು ಕ್ಲೋಸ್ಡ್ ಆಫ್ ಗ್ರಿಲ್‌ನಂತಹ EV-ನಿರ್ದಿಷ್ಟ ಡಿಸೈನ್ ಫೀಚರ್ ಗಳನ್ನು ಕೂಡ ಪಡೆಯಲಿದೆ.
-
12.3-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್-ಝೋನ್ AC ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.
-
ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿರುತ್ತದೆ.
-
2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಬೆಲೆಯು ರೂ 30 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಟಾಟಾ ಹ್ಯಾರಿಯರ್ EV ಅನ್ನು ಮೊದಲು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು ಮತ್ತು ನಂತರ ಈ ವರ್ಷದ ಆರಂಭದಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಟಾಟಾದ ಈ ಆಲ್-ಎಲೆಕ್ಟ್ರಿಕ್ ಮಧ್ಯಮ ಗಾತ್ರದ SUV ಇನ್ನೂ ಅಭಿವೃದ್ಧಿಯಲ್ಲಿದೆ ಮತ್ತು ಇತ್ತೀಚೆಗೆ ಭಾರತದ ಲೇಹ್‌ನಲ್ಲಿ ಇದನ್ನು ಟೆಸ್ಟ್ ಮಾಡುತ್ತಿರುವಾಗ ಅದರ ಹೊಸ ಸ್ಪೈ ಫೋಟೋಗಳು ಲೀಕ್ ಆಗಿವೆ.
ಎಲೆಕ್ಟ್ರಿಕ್ ಮೋಟಾರ್ ಕುರಿತು
ಇತ್ತೀಚಿನ ಲೀಕ್ ಆಗಿರುವ ಫೋಟೋಗಳು ಹ್ಯಾರಿಯರ್ EV ಯಲ್ಲಿ ಹಿಂಬದಿ-ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರರ್ಥ ಟಾಟಾ ಹ್ಯಾರಿಯರ್ EV ಬಹುಶಃ ಆಲ್-ವೀಲ್-ಡ್ರೈವ್ (AWD) ಆಯ್ಕೆಯನ್ನು ಪಡೆಯಬಹುದು, ಅಂದರೆ ಎರಡು ಎಲೆಕ್ಟ್ರಿಕ್ ಮೋಟರ್‌ಗಳು-ಒಂದು ಮುಂಭಾಗದ ಆಕ್ಸಲ್‌ನಲ್ಲಿ ಮತ್ತು ಒಂದು ಹಿಂಭಾಗದ ಆಕ್ಸಲ್‌ನಲ್ಲಿ.
ಹ್ಯಾರಿಯರ್ EV ಅದರ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ನಲ್ಲಿರುವ ಅದೇ ಸಿಲೂಯೆಟ್ ಮತ್ತು ಡಿಸೈನ್ ಫೀಚರ್ ಗಳನ್ನು ಪಡೆಯುತ್ತದೆ. ಆದರೆ, ಅಲೊಯ್ ವೀಲ್ ಗಳು ವಿಭಿನ್ನವಾಗಿದ್ದು, EV ಮಾದರಿಗೆ ನಿರ್ದಿಷ್ಟವಾಗಿರುವ ಡಿಸೈನ್ ಅನ್ನು ಹೊಂದಿದೆ. ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ವರ್ಷನ್ ಅನ್ನು ನೋಡಿದರೆ, ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್ LED ಲೈಟಿಂಗ್ ಎಲಿಮೆಂಟ್ ಗಳನ್ನು ಮತ್ತು ಕ್ಲೋಸ್ಡ್ ಆಫ್ ಗ್ರಿಲ್ ಅನ್ನು ಪಡೆಯಲಿದೆ. ಆದರೆ, ಬಂಪರ್‌ಗಳನ್ನು EV ಗಾಗಿ ವಿನ್ಯಾಸಗೊಳಿಸಲಾದ ವಿಭಿನ್ನ ನೋಟವನ್ನು ನೀಡಲು ರೀಡಿಸೈನ್ ಗೊಳಿಸಲಾಗಿದೆ.
ನಿರೀಕ್ಷಿಸಬಹುದಾದ ರೇಂಜ್
ಟಾಟಾ ತನ್ನ ಹ್ಯಾರಿಯರ್ EV ಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸ್ಪೆಸಿಫಿಕೇಷನ್ ಗಳನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಇದು 500 ಕಿಮೀಗಿಂತ ಹೆಚ್ಚಿನ ಕ್ಲೈಮ್ ಮಾಡಬಹುದಾದ ರೇಂಜ್ ನೀಡಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಮೇಲೆ ತಿಳಿಸಿದಂತೆ, ಇದು ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಕೂಡ ಪಡೆಯುತ್ತದೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು
ಹ್ಯಾರಿಯರ್ EVಯು ಡೀಸೆಲ್-ಚಾಲಿತ ಹ್ಯಾರಿಯರ್‌ನಲ್ಲಿರುವ ಅದೇ ಫೀಚರ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನರೋಮಿಕ್ ಸನ್‌ರೂಫ್ (ಮೂಡ್ ಲೈಟಿಂಗ್‌ನೊಂದಿಗೆ) ಮತ್ತು ಗೆಸ್ಚರ್ ಎನೇಬಲ್ಡ್ ಪವರ್ಡ್ ಟೈಲ್‌ಗೇಟ್ ಅನ್ನು ಒಳಗೊಂಡಿರುತ್ತದೆ.
ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, ಬ್ಲೈಂಡ್ ವ್ಯೂ ಮಾನಿಟರ್ ಹೊಂದಿರುವ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೆಕಿಂಗ್ ಸೇರಿದಂತೆ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟನ್ಸ್ ಸಿಸ್ಟಮ್ (ADAS) ನ ಫೀಚರ್ ಗಳನ್ನು ಒಳಗೊಂಡಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಹ್ಯಾರಿಯರ್ EV ಬೆಲೆಯು 30 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು 2025 ರ ವೇಳೆಗೆ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಮತ್ತು ಇದು ಮಹೀಂದ್ರ XUV.e8 ಗೆ ನೇರ ಪ್ರತಿಸ್ಪರ್ಧಿಯಾಗಿದೆ ಹಾಗೆಯೇ ಹುಂಡೈ ಕೋನಾ ಎಲೆಕ್ಟ್ರಿಕ್ ಮತ್ತು MG ZS EV ಗೆ ಪ್ರೀಮಿಯಂ ಪರ್ಯಾಯ ಆಯ್ಕೆಯಾಗಿದೆ.
ಟಾಟಾ ಹ್ಯಾರಿಯರ್ EV ಯ ಹೆಚ್ಚಿನ ಅಪ್ಡೇಟ್ ಗಳಿಗಾಗಿ, ಕಾರ್ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ:ಟಾಟಾ ಹ್ಯಾರಿಯರ್ ಡೀಸೆಲ್