"ಟೊಯೋಟಾ ಫ್ರಾಂಕ್ಸ್", 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ!
ಟೊಯೋಟಾ-ಬ್ಯಾಡ್ಜ್‌ಡ್ ಫ್ರಾಂಕ್ಸ್ ಟೊಯೋಟಾ ಮತ್ತು ಮಾರುತಿ ನಡುವಿನ ಇತರ ಹಂಚಿಕೆಯ ಮಾಡೆಲ್‌ಗಳಲ್ಲಿ ಕಂಡುಬರುವಂತೆ ಒಳಭಾಗ ಮತ್ತು ಹೊರಭಾಗದಲ್ಲಿ ಕಾಸ್ಮೆಟಿಕ್ ಮತ್ತು ಬ್ಯಾಡ್ಜಿಂಗ್ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.
-
ಇದು ಟೊಯೋಟಾ ಮತ್ತು ಮಾರುತಿಯ ನಡುವಿನ ಐದನೇ ಹಂಚಿಕೆಯ ಮಾಡೆಲ್ ಆಗಿದೆ.
-
ಟೊಯೋಟಾ ತನ್ನದೇ ಆದ ಫ್ರಾಂಕ್ಸ್ ಅನ್ನು ತನ್ನ ಹೊಸ ಸಬ್-4m 'ಎಸ್‌ಯುವಿ' ಆಫರಿಂಗ್ ಆಗಿ ಹೊಂದುವುದರಿಂದ ಪ್ರಯೋಜನ ಪಡೆಯಬಹುದು.
-
ಸಿಎನ್‌ಜಿ ಪವರ್‌ಟ್ರೇನ್ ಸೇರಿದಂತೆ ಮಾರುತಿ ಫ್ರಾಂಕ್ಸ್‌ನೊಂದಿಗೆ ಅದರ ಎಂಜಿನ್ ಆಯ್ಕೆಗಳನ್ನು ಹಂಚಿಕೊಳ್ಳಬಹುದು.
-
ಇದು 9-ಇಂಚಿನ ಟಚ್‌ಸ್ಕ್ರೀನ್ ಮತ್ತು ಆಟೋ AC ಸೇರಿದಂತೆ ಫ್ರಾಂಕ್ಸ್ ಫೀಚರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
-
2024 ರಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ, ಇದರ ಬೆಲೆಗಳು ರೂ. 8 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ).
ಮಾರುತಿ ಸುಜುಕಿ-ಟೊಯೋಟಾ ಮೈತ್ರಿಯ ಭಾಗವಾಗಿ ಪರಿಚಯಿಸಲಾದ ಕೆಲವು ಮಾಡೆಲ್‌ಗಳು ಕ್ರಾಸ್-ಬ್ಯಾಡ್ಜ್ ಉತ್ಪನ್ನಗಳಾಗಿವೆ ಎನ್ನುವುದನ್ನು ನೀವು ಗಮನಿಸಿರಬಹುದು. ಮಾರುತಿ ಗ್ರ್ಯಾಂಡ್ ವಿಟಾರಾ-ಟೊಯೊಟಾ ಹೈರೈಡರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಮಾರುತಿ ಇನ್ವಿಕ್ಟೊ ಪ್ರೀಮಿಯಂ MPV ಸೇರಿದಂತೆ ಕೆಲವು ಕಾರುಗಳು ಸಾಕಷ್ಟು ಜನಪ್ರಿಯವಾಗಿವೆ. ಟೊಯೊಟಾ ಮಾರುತಿ ಫ್ರಾಂಕ್ಸ್‌ನ ಮರುಬ್ಯಾಡ್ಜ್ ಆವೃತ್ತಿಯನ್ನು 2024 ರಲ್ಲಿ ಬಿಡುಗಡೆ ಮಾಡಲಿದೆ ಎಂದು ಇತ್ತೀಚೆಗೆ ತಿಳಿದುಬಂದಿದೆ.
ಟೊಯೋಟಾಗೆ ಫ್ರಾಂಕ್ಸ್ ಏಕೆ ಬೇಕು?
ಫ್ರಾಂಕ್ಸ್‌ನ ಮರುಬ್ಯಾಡ್ಜ್ ಮಾಡಿದ ಆವೃತ್ತಿಯನ್ನು ಬಿಡುಗಡೆಯ ಪ್ರಮುಖ ಕಾರಣಗಳಲ್ಲಿ ಟೊಯೊಟಾದ ಭಾರತೀಯ ಪೋರ್ಟ್‌ಫೋಲಿಯೊದಲ್ಲಿ ಸಬ್-4m ಎಸ್‍ಯುವಿ ಇಲ್ಲದಿರುವುದು ಒಂದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅದರ ಮೈತ್ರಿ ಪಾಲುದಾರ - ಮಾರುತಿ ಸುಜುಕಿ - ಈ ವರ್ಗದಲ್ಲಿ ಎರಡು ಮಾಡೆಲ್‌ಗಳನ್ನು ಹೊಂದಿದೆ. ಈ ವಿಭಾಗದ ಕಾರುಗಳ ಆರಂಭಿಕ ಬೆಲೆ ರೂ. 10 ಲಕ್ಷಕ್ಕಿಂತ ಕಡಿಮೆಯಿದ್ದು, ಈ ಕಾರಣದಿಂದಾಗಿ ಕಂಪನಿಯು ಹೆಚ್ಚಿನ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.
ಟೊಯೊಟಾ ಈ ಹಿಂದೆ ತನ್ನದೇ ಆದ ಮಾರುತಿ ವಿಟಾರಾ ಬ್ರೆಜ್ಜಾದ ಅರ್ಬನ್ ಕ್ರೂಸರ್ ಅನ್ನು ಬಿಡುಗಡೆ ಮಾಡಿತ್ತು, ಇದು 2022 ರ ಅಂತ್ಯದ ವೇಳೆಗೆ ಸ್ಥಗಿತಗೊಳ್ಳಲಿದೆ. ಪ್ರಸ್ತುತ, ಟೊಯೊಟಾದ ಎಸ್‌ಯುವಿ ಶ್ರೇಣಿಯು ಅರ್ಬನ್ ಕ್ರೂಸರ್ ಹೈರೈಡರ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ನೇರವಾಗಿ 10 ಲಕ್ಷ ರೂ.ಗಿಂತ ಹೆಚ್ಚಿನ ಆರಂಭಿಕ ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ (ಎಕ್ಸ್-ಶೋರೂಂ).
ವಿನ್ಯಾಸ
ಬಲೆನೊ-ಗ್ಲಾನ್ಝಾ ಮತ್ತು ಇನ್ನೋವಾ ಹೈಕ್ರಾಸ್-ಇನ್ವಿಕ್ಟೊ ಜೋಡಿಯಂತಹ ಕಾರು ತಯಾರಕರ ನಡುವಿನ ಕೆಲವು ಹಂಚಿಕೆಯ ಉತ್ಪನ್ನಗಳಲ್ಲಿ ಕಂಡುಬರುವಂತೆ ಟೊಯೊಟಾ-ಬ್ಯಾಡ್ಜ್‌ಡ್ ಫ್ರಾಂಕ್ಸ್ ಮಾರುತಿಯ ಕ್ರಾಸ್‌ಒವರ್ ಎಸ್‌ಯುವಿಯು ಒಳಭಾಗ ಮತ್ತು ಹೊರಭಾಗದಲ್ಲಿ ಕೆಲವು ಕಾಸ್ಮೆಟಿಕ್ ಮತ್ತು ಬ್ಯಾಡ್ಜ್ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಗ್ರಿಲ್, ಹೆಡ್‌ಲೈಟ್‌ಗಳು ಮತ್ತು ಇಂತೀರಿಯರ್ ಕಲರ್ ಸ್ಕೀಂಗಳಲ್ಲಿ ಪ್ರಮುಖ ವಿಷುಯಲ್ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮಾರುತಿ ಇನ್ವಿಕ್ಟೊ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್ ನಡುವಿನ 5 ಪ್ರಮುಖ ವ್ಯತ್ಯಾಸಗಳು
ಮಾರುತಿ ಫ್ರಾಂಕ್ಸ್‌ನ ಪವರ್‌ಟ್ರೇನ್ ವಿವರಗಳು
ನಿರ್ದಿಷ್ಟ ವಿವರಣೆ |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.2- ಲೀಟರ್ ಪೆಟ್ರೋಲ್ +ಸಿಎನ್‌ಜಿ |
ಪವರ್ |
90PS |
100PS |
77.5PS |
ಟಾರ್ಕ್ |
113Nm |
148Nm |
98.5Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 5- ಸ್ಪೀಡ್ AMT |
5- ಸ್ಪೀಡ್ MT, 6- ಸ್ಪೀಡ್ AT |
5- ಸ್ಪೀಡ್ MT |
ಕ್ಲೈಮ್ ಮಾಡಲಾದ ಮೈಲೇಜ್ |
21.79kmpl, 22.89kmpl |
21.5kmpl, 20.1kmpl |
28.51km/kg |
ಮಾರುತಿ ಫ್ರಾಂಕ್ಸ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಅದರ ಟೊಯೋಟಾ ಬ್ಯಾಡ್ಜಿಂಗ್ ಆವೃತ್ತಿಯಲ್ಲಿ ಅದೇ ಪವರ್‌ಟ್ರೇನ್ ಅನ್ನು ನೀಡಬಹುದು ಎಂದು ಊಹಿಸಲಾಗಿದೆ, ಆದರೂ ಸಿಎನ್‌ಜಿ ಆಯ್ಕೆಯನ್ನು ನಂತರ ಅದರಲ್ಲಿ ಸೇರಿಸಬಹುದು.
ಫೀಚರ್‌ಗಳ ಪಟ್ಟಿ
ಮಾರುತಿ ಕ್ರಾಸ್‌ಒವರ್ ಎಸ್‌ಯುವಿಯಲ್ಲಿರುವ ಇಕ್ವಿಪ್‌ಮೆಂಟ್‌ಗಳನ್ನೇ ಟೊಯೊಟಾ-ಬ್ಯಾಡ್ಜ್‌ಡ್ ಫ್ರಾಂಕ್ಸ್ ಪಡೆದುಕೊಳ್ಳಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಇದು 9-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್‌ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದು ಪ್ರಯಾಣಿಕರ ಸುರಕ್ಷತೆಗಾಗಿ, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಹೆಚ್ಚಿನ ಫೀಚರ್‌ಗಳು ಬಲೆನೊ-ಗ್ಲಾನ್ಝಾ ಹ್ಯಾಚ್‌ಬ್ಯಾಕ್‌ನಲ್ಲಿಯೂ ಲಭ್ಯವಿವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ತನ್ನ ಫ್ರಾಂಕ್ಸ್ ಆವೃತ್ತಿಯ ಬೆಲೆಯನ್ನು ರೂ. 8 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭಿಸುವ ನಿರೀಕ್ಷೆಯಿದೆ. ಇದರ ಪ್ರತಿಸ್ಪರ್ಧಿಗಳಲ್ಲಿ ಮಾರುತಿ ಫ್ರಾಂಕ್ಸ್, ಸಿಟ್ರಾನ್ C3 ಮತ್ತು ಕಿಯಾ ಸಾನೆಟ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಹಾಗೂ ಹ್ಯುಂಡೈ ವೆನ್ಯೂನಂತಹ ಇತರ ಸಬ್-4m ಎಸ್‌ಯುವಿಗಳು ಸೇರಿವೆ.
ಇನ್ನಷ್ಟು ಓದಿ: ಮಾರುತಿ ಫ್ರಾಂಕ್ಸ್ AMT