ನಿಮ್ಮ ಹೊಸ ಕಾರಿನ ಮೇಲೆ ಈಗ ಪಡೆಯಿರಿ ರೂ 20,000 ವರೆಗೆ ರಿಯಾಯಿತಿ, ಏನಿದು? ಇಲ್ಲಿದೆ ವಿವರ..
ಆಗಸ್ಟ್ 30, 2024 08:54 pm ರಂದು yashika ಮೂಲಕ ಪ್ರಕಟಿಸಲಾಗಿದೆ
- 54 Views
- ಕಾಮೆಂಟ್ ಅನ್ನು ಬರೆಯಿರಿ
ನಿಮ್ಮ ಹಳೆಯ, ಮಾಲಿನ್ಯ ಉಂಟುಮಾಡುವ ಕಾರನ್ನು ನೀವು ಸ್ಕ್ರ್ಯಾಪ್ ಮಾಡಿದರೆ ಕಾರು ತಯಾರಕರು ನಿಮಗೆ ರಿಯಾಯಿತಿಗಳನ್ನು ನೀಡುತ್ತಾರೆ, ಆದರೆ ಇದರಲ್ಲಿ ಕೆಲವು ಷರತ್ತುಗಳಿವೆ. ಇನ್ನಷ್ಟು ತಿಳಿಯಲು ಮುಂದೆ ಓದಿ...
SIAM ಜೊತೆಗಿನ ಇತ್ತೀಚಿನ ಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀವು ನಿಮ್ಮ ಹಳೆಯ ಕಾರನ್ನು ಸ್ಕ್ರಾಪ್ ಮಾಡಿದರೆ ಹೊಸ ಕಾರುಗಳ ಮೇಲೆ ರಿಯಾಯಿತಿ ನೀಡಲು ಕಾರು ತಯಾರಕರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆದರೆ ನೀವು ಇದರ ಬಗ್ಗೆ ಉತ್ಸಾಹ ವ್ಯಕ್ತಪಡಿಸುವ ಮೊದಲು, ಈ ಕೆಳಗಿನವುಗಳನ್ನು ತಿಳಿದುಕೊಳ್ಳುವುದು ಅವಶ್ಯಕ:
-
ಸುದ್ದಿ ವರದಿಗಳ ಪ್ರಕಾರ, ನಿಮ್ಮ ಹಳೆಯ ವಾಹನವನ್ನು ನೀವು ಸ್ಕ್ರಾಪ್ ಮಾಡುವಾಗ ರಿಯಾಯಿತಿಯು ಕಾರಿನ ಎಕ್ಸ್ ಶೋರೂಂ ಬೆಲೆಯ ಮೇಲೆ 1.5% ಅಥವಾ ರೂ 20,000, ಇದರಲ್ಲಿ ಯಾವುದು ಕಡಿಮೆ, ಅದನ್ನು ನೀಡಲಾಗುತ್ತದೆ.
-
ರಿಯಾಯಿತಿಗೆ ಅರ್ಹತೆ ಪಡೆಯಲು ವಾಹನವನ್ನು ಕಳೆದ 6 ತಿಂಗಳುಗಳಲ್ಲಿ ಸ್ಕ್ರ್ಯಾಪ್ ಮಾಡಿರಬೇಕು. ಇದಕ್ಕಿಂತ ಮೊದಲು ಸ್ಕ್ರ್ಯಾಪ್ ಮಾಡಿದ್ದರೆ, ನೀವು ಅರ್ಹರಾಗಿರುವುದಿಲ್ಲ.
-
ಈ ಕೊಡುಗೆ 1 ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ, ಆದರೆ ಕಾರು ತಯಾರಕರು ಅವರ ಆಯ್ಕೆಗೆ ತಕ್ಕಂತೆ ಅದನ್ನು ವಿಸ್ತರಿಸಬಹುದು ಅಥವಾ ಬದಲಾಯಿಸಬಹುದು.
-
ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಹೋಂಡಾ, ಟೊಯೋಟಾ, VW, ಸ್ಕೋಡಾ ಮತ್ತು MGಯಂತಹ ಕಾರು ತಯಾರಕರು ಈ ರಿಯಾಯಿತಿಗಳನ್ನು ನೀಡಲು ಒಪ್ಪಿದ್ದಾರೆ ಎಂದು ವರದಿಗಳು ಹೇಳುತ್ತವೆ. ಆದರೆ, ಈ ಬ್ರ್ಯಾಂಡ್‌ಗಳಿಂದ ಅಧಿಕೃತ ದೃಢೀಕರಣಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ.
-
ಮರ್ಸಿಡಿಸ್ ಬೆಂಝ್ 25,000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್ ನೀಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ, ಇದು ಈ ಹಿಂದೆ ತಿಳಿಸಲಾದ ಗರಿಷ್ಠ ರೂ. 20,000 ಗಿಂತ ಹೆಚ್ಚಾಗಿದೆ.
ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವುದರಿಂದ ನಿಮಗೆ ಇತರ ಪ್ರಯೋಜನಗಳು ಕೂಡ ದೊರಕಲಿವೆ:
-
ಸ್ಕ್ರ್ಯಾಪ್ ಸೆಂಟರ್ ಗಳು ನೀಡುವ ಸ್ಕ್ರ್ಯಾಪ್ ಮೌಲ್ಯ: ನೀವು ಹೊಸ ವಾಹನದ ಎಕ್ಸ್ ಶೋ ರೂಂ ಬೆಲೆಯ ಮೇಲೆ 4 ರಿಂದ 6% ವರೆಗೆ ಪಡೆಯಬಹುದು.
-
ಹೊಸ ಕಾರುಗಳ ವಾಹನ ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗುವುದು.
-
ರಾಜ್ಯ ಸರ್ಕಾರಗಳು ಮೋಟಾರು ವಾಹನ ತೆರಿಗೆಯ ಮೇಲೆ 25% ವರೆಗೆ ರಿಯಾಯಿತಿಗಳನ್ನು ನೀಡುವ ನಿರೀಕ್ಷೆಯಿದೆ.
ಆದರೆ, ಈ ಸ್ಕ್ರ್ಯಾಪೇಜ್ ಪ್ರಯೋಜನಗಳು 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳಿಗೆ ಮಾತ್ರ ಲಭ್ಯವಿವೆ. 15 ವರ್ಷಗಳ ನಂತರ ಕೂಡ ನಿಮ್ಮ ಕಾರನ್ನು ಓಡಿಸಲು ನೀವು ಬಯಸಿದರೆ, ಅದಕ್ಕೆ ಅಗತ್ಯವಿರುವ ಫಿಟ್‌ನೆಸ್ ಟೆಸ್ಟ್ ಅನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ವಾಹನವು ಟೆಸ್ಟ್ ನಲ್ಲಿ ಪಾಸ್ ಆಗಲು ವಿಫಲವಾದರೆ, ರಿಪೇರಿ ಮಾಡಿದ ನಂತರ ನೀವು ಒಂದು ಮರು-ಪರೀಕ್ಷೆಯನ್ನು ಮಾಡುವ ಅವಕಾಶ ಪಡೆಯುತ್ತೀರಿ. ಎರಡನೇ ಬಾರಿ ಕೂಡ ವಿಫಲವಾದರೆ, ವಾಹನವನ್ನು ಸ್ಕ್ರ್ಯಾಪ್ ಮಾಡಬೇಕು.
ಇದನ್ನು ಕೂಡ ಓದಿ: ಹೊಸ ಕಾರು ಖರೀದಿಸಲು ನೋಡುತ್ತಿದ್ದೀರಾ? ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಿದರೆ ಸಿಗುವ ಎಲ್ಲಾ ಪ್ರಯೋಜನಗಳು ಇಲ್ಲಿವೆ
ವಾಹನ ಸ್ಕ್ರ್ಯಾಪೇಜ್ ನೀತಿ ಎಂದರೇನು?
ಆಗಸ್ಟ್ 2021 ರಲ್ಲಿ, ಭಾರತ ಸರ್ಕಾರವು ಹಳೆಯ ಮತ್ತು ರಸ್ತೆಯಲ್ಲಿ ಓಡಿಸಲು ಫಿಟ್ ಇಲ್ಲದಿರುವ ವಾಹನಗಳನ್ನು ಸ್ಕ್ರಾಪ್ ಮಾಡುವ ಯೋಜನೆಯನ್ನು ಪ್ರಾರಂಭಿಸಿತು. ರಸ್ತೆಯಲ್ಲಿ ಸ್ವಚ್ಛ ಮತ್ತು ಸುರಕ್ಷಿತ ವಾಹನಗಳನ್ನು ಮಾತ್ರ ಓಡಿಸುವುದು ಈ ನೀತಿಯ ಗುರಿಯಾಗಿತ್ತು. ವಾಲಂಟರಿ ವೆಹಿಕಲ್-ಫ್ಲೀಟ್ ಮೊಡರ್ನೈಸೇಷನ್ ಪ್ರೋಗ್ರಾಮ್ ಹ್ಯಾಂಡ್ ಬುಕ್ ಪ್ರಕಾರ, ನೀತಿಯು ಈ ಕೆಳಗಿನ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ:
-
ರಸ್ತೆಯಲ್ಲಿ ಓಡಾಡಲು ಯೋಗ್ಯವಲ್ಲದ ಕಾರುಗಳನ್ನು ತೆಗೆದುಹಾಕುವುದು ವಾಯುಮಾಲಿನ್ಯವನ್ನು 15-20% ರಷ್ಟು ಕಡಿಮೆ ಮಾಡುತ್ತದೆ, ಇದು 'ಕಾರ್ಬನ್ ಮುಕ್ತ ರಾಷ್ಟ್ರ' ವಾಗುವ ನಮ್ಮ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ.
-
ಸ್ಕ್ರ್ಯಾಪಿಂಗ್ ಸೆಂಟರ್ ಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಇದು ನಿರುದ್ಯೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
-
ಸುರಕ್ಷತಾ ಮಾನದಂಡಗಳು ಕಠಿಣವಾಗುತ್ತಿರುವ ಈ ಸಮಯದಲ್ಲಿ, ಹೊಸ ವಾಹನಗಳು ಅಧಿಕ ಸುರಕ್ಷತೆಯನ್ನು ಒದಗಿಸುತ್ತವೆ.
-
ಇದು ಹೊಸ ವಾಹನಗಳ ಬೇಡಿಕೆಯನ್ನು ಸೃಷ್ಟಿಸುತ್ತದೆ, ಇದು ಆರ್ಥಿಕತೆಗೆ ಒಳ್ಳೆಯದು.
-
ಹೊಸ ವಾಹನಗಳು ಆಧುನಿಕ ಎಮಿಷನ್ ಮಾನದಂಡಗಳನ್ನು ಅನುಸರಿಸುವುದರಿಂದ, ಅವು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತವೆ.
ಸುದ್ದಿ ವರದಿಯ ಪ್ರಕಾರ ವಾಹನ ತಯಾರಕರು ನೀಡುತ್ತಿರುವ ಪ್ರಯೋಜನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಇದನ್ನು ಕೂಡ ಓದಿ: ಹೊಸ MG ಆಸ್ಟರ್ (ZS) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಿರಂಗ, ಇಂಡಿಯಾ-ಸ್ಪೆಕ್ ಮಾಡೆಲ್ ನಲ್ಲಿ ಬರಬಹುದಾದ ಅಪ್ಡೇಟ್ ನೋಡಲು ಸಿಗುವ ಸಾಧ್ಯತೆ
ಇತ್ತೀಚಿನ ಎಲ್ಲ ರೀತಿಯ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.