2025ರ ಆಟೋ ಎಕ್ಸ್‌ಪೋದಲ್ಲಿ VinFastನಿಂದ 6 ಎಲೆಕ್ಟ್ರಿಕ್ ಎಸ್‌ಯುವಿಗಳು ಮತ್ತು 1 ಎಲೆಕ್ಟ್ರಿಕ್ ಪಿಕಪ್ ಟ್ರಕ್ ಕಾನ್ಸೆಪ್ಟ್‌ನ ಪ್ರದರ್ಶನ
vinfast vf6 ಗಾಗಿ dipan ಮೂಲಕ ಜನವರಿ 24, 2025 08:12 pm ರಂದು ಪ್ರಕಟಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
ಕಾರು ತಯಾರಕರು ಈಗಾಗಲೇ ತನ್ನ ಎರಡು ಮೊಡೆಲ್‌ಗಳಾದ ವಿಎಫ್ 6 ಮತ್ತು ವಿಎಫ್ 7 ಅನ್ನು 2025 ರ ದೀಪಾವಳಿ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದ್ದಾರೆ
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಭಾರತದಲ್ಲಿ ಬಹಳಷ್ಟು ಹೊಸ ಕಾರುಗಳನ್ನು ಪರಿಚಯಿಸಿತು ಮತ್ತು ಇದು ವಿಯೆಟ್ನಾಂ ಮೂಲದ ಬ್ರ್ಯಾಂಡ್ ಆಗಿರುವ ವಿನ್‌ಫಾಸ್ಟ್ಅನ್ನು ಸಹ ಪರಿಚಯಿಸಿತು. 2025 ರ ಆಟೋ ಎಕ್ಸ್‌ಪೋದಲ್ಲಿ ಕಾರು ತಯಾರಕರು 7 ಮೊಡೆಲ್‌ಗಳನ್ನು ಬಹಿರಂಗಪಡಿಸಿದ್ದಾರೆ, ಅವುಗಳಲ್ಲಿ ಎರಡು ಮೊಡೆಲ್‌ಗಳು 2025 ರ ದೀಪಾವಳಿಯ ವೇಳೆಗೆ ಬಿಡುಗಡೆಯಾಗಲಿವೆ. ಇದರ ಸಂಪೂರ್ಣ ಪಟ್ಟಿ ಇಲ್ಲಿದೆ:
ವಿನ್‌ಫಾಸ್ಟ್ ವಿಎಫ್ 3
ವಿಯೆಟ್ನಾಂ ಮೂಲದ ಕಾರು ತಯಾರಕರ ಜಾಗತಿಕ ರೇಂಜ್‌ನಲ್ಲಿ ವಿನ್‌ಫಾಸ್ಟ್ ವಿಎಫ್ 3 ಅತ್ಯಂತ ಚಿಕ್ಕ ಕಾರು ಆಗಿದ್ದು ಮತ್ತು ಭಾರತದಲ್ಲಿ ಇದು ಎಂಜಿ ಕಾಮೆಟ್ ಇವಿ ಗೆ ಪ್ರತಿಸ್ಪರ್ಧಿಯಾಗಲಿದೆ. ಚಿಕ್ಕದಾದ 2-ಡೋರ್‌ನ ಈ ಇವಿಯು, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 10-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಮತ್ತು ಪವರ್ ವಿಂಡೋಗಳಂತಹ ಸೌಕರ್ಯಗಳೊಂದಿಗೆ ಬಾಕ್ಸಿ ವಿನ್ಯಾಸದೊಂದಿಗೆ ಬರುತ್ತದೆ. ಜಾಗತಿಕವಾಗಿ, ಇದು 43.5 ಪಿಎಸ್ ಮತ್ತು 110 ಎನ್‌ಎಮ್ ಉತ್ಪಾದಿಸುವ ಒಂದೇ ವಿದ್ಯುತ್ ಮೋಟರ್‌ನೊಂದಿಗೆ ಬರುತ್ತದೆ. ಬಿಡುಗಡೆಯಾದ ನಂತರ ವಿಎಫ್ 3 ಭಾರತದಲ್ಲಿ ಅತ್ಯಂತ ಕೈಗೆಟುಕುವ ಆರಂಭಿಕ ಮಟ್ಟದ ಇವಿಗಳಲ್ಲಿ ಒಂದಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.
ವಿನ್‌ಫಾಸ್ಟ್ ವಿಎಫ್ 6
ಭಾರತದಲ್ಲಿ ವಿನ್‌ಫಾಸ್ಟ್‌ನ ಲೈನ್‌ಅಪ್‌ನಿಂದ ಹೊರಬರುವ ಮೊದಲ ಕಾರುಗಳಲ್ಲಿ ವಿಎಫ್ 6 ಒಂದಾಗಿದ್ದು, ಇದನ್ನು 2025ರ ದೀಪಾವಳಿಯ ವೇಳೆಗೆ ಬಿಡುಗಡೆ ಮಾಡಲಾಗುವುದು. VF 6 ಒಂದು ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದು ನಯವಾದ ಬಾಡಿ ಶೈಲಿ ಮತ್ತು 5 ಆಸನಗಳ ವಿನ್ಯಾಸವನ್ನು ಪಡೆಯುತ್ತದೆ. ಇದು 12.9-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್‌ಪ್ಲೇ (HUD), ಮತ್ತು ಬಿಸಿಯಾದ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳಂತಹ ಪ್ರೀಮಿಯಂ ಫೀಚರ್‌ಗಳೊಂದಿಗೆ ಬರುತ್ತದೆ. ಇದು ಒಂದೇ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು 410 ಕಿ.ಮೀ ವರೆಗೆ ಕ್ಲೈಮ್ ಮಾಡಿದ ರೇಂಜ್‌ಅನ್ನು ಹೊಂದಿದೆ.
ವಿನ್‌ಫಾಸ್ಟ್ ವಿಎಫ್ 7
ವಿನ್‌ಫಾಸ್ಟ್ ವಿಎಫ್ 7, ಈ ಕಾರು ತಯಾರಕರು 2025 ರ ದೀಪಾವಳಿಯ ವೇಳೆಗೆ ಬಿಡುಗಡೆ ಮಾಡುವುದಾಗಿ ದೃಢಪಡಿಸಿದ ಮತ್ತೊಂದು ಕಾರು ಆಗಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ಒಪ್ಶನಲ್ ಆಲ್-ವೀಲ್-ಡ್ರೈವ್ (AWD) ಸೆಟಪ್ ಮತ್ತು 450 ಕಿ.ಮೀ ವರೆಗಿನ ಕ್ಲೈಮ್ ಮಾಡಿದ ರೇಂಜ್‌ನೊಂದಿಗೆ ಬರುತ್ತದೆ. ಇದರ ಫೀಚರ್‌ನ ಸೂಟ್ 15-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಗ್ಲಾಸ್ ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಹ್ಯುಂಡೈ ಅಯೋನಿಕ್ 5 ಮತ್ತು ಕಿಯಾ ಇವಿ6 ಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ: ಆಟೋ ಎಕ್ಸ್‌ಪೋದಲ್ಲಿ Skodaದಿಂದ ಹೊಸ ಎಸ್‌ಯುವಿಗಳು, ಎರಡು ಜನಪ್ರಿಯ ಸೆಡಾನ್‌ಗಳು ಮತ್ತು ಒಂದು ಇವಿ ಕಾನ್ಸೆಪ್ಟ್‌ನ ಅನಾವರಣ
ವಿನ್‌ಫಾಸ್ಟ್ ವಿಎಫ್ 8
ವಿನ್‌ಫಾಸ್ಟ್ ವಿಎಫ್ 8 ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಪ್ರದರ್ಶಿಸಲಾಯಿತು, ಹಾಗೆಯೇ, ಅದರ ಭಾರತದ ಬಿಡುಗಡೆಯನ್ನು ಕಾರು ತಯಾರಕರು ಇನ್ನೂ ದೃಢೀಕರಿಸಿಲ್ಲ. ಜಾಗತಿಕ-ಸ್ಪೆಕ್ ಮೊಡೆಲ್ 87.7 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಗರಿಷ್ಠ 457 ಕಿಮೀ ದೂರವನ್ನು ಕ್ರಮಿಸಬಲ್ಲದು. ಇದರ ಫೀಚರ್ ಸೂಟ್‌ನಲ್ಲಿ ಪನೋರಮಿಕ್ ಸನ್‌ರೂಫ್, 15.6-ಇಂಚಿನ ಟಚ್‌ಸ್ಕ್ರೀನ್, 11 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ. ವಿನ್‌ಫಾಸ್ಟ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆಯನ್ನು 60 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ವಿನ್‌ಫಾಸ್ಟ್ ವಿಎಫ್ 9
ವಿಯೆಟ್ನಾಮ್ ಮೂಲದ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್‌ನ VF 9, 123 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ದುಬಾರಿ ಬೆಲೆಯ ವಿದ್ಯುತ್ ಚಾಲಿತ ಕಾರು ಆಗಿದ್ದು, 531 ಕಿ.ಮೀ. ದೂರ ಓಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಆಲ್-ವೀಲ್-ಡ್ರೈವ್ ಸೆಟಪ್ ಅನ್ನು ಪಡೆಯುತ್ತದೆ, ಡ್ಯುಯಲ್ ಮೋಟಾರ್‌ಗಳು 408 ಪಿಎಸ್ ಮತ್ತು 620 ಎನ್‌ಎಮ್ ಉತ್ಪಾದಿಸುತ್ತವೆ. ಇದು 11 ಏರ್‌ಬ್ಯಾಗ್‌ಗಳು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), 15.6-ಇಂಚಿನ ಟಚ್‌ಸ್ಕ್ರೀನ್ ಮತ್ತು 14-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. VF 9 ಭಾರತದಲ್ಲಿ ಬಿಡುಗಡೆಯಾದಾಗ, ಇದು ಕಿಯಾ ಇವಿ9 ಮತ್ತು ಬಿಎಮ್‌ಡಬ್ಲ್ಯೂ ಐಎಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ವಿನ್‌ಫಾಸ್ಟ್ ವಿಎಫ್ ಇ34
ವಿನ್‌ಫಾಸ್ಟ್ ವಿಎಫ್ ಇ34 ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ, ಆದರೆ ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾರು ತಯಾರಕರು ಇನ್ನೂ ದೃಢೀಕರಿಸಿಲ್ಲ. ಇದು 41.9 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು 319 ಕಿಮೀ ರೇಂಜ್‌ಅನ್ನು ಹೊಂದಿದೆ ಮತ್ತು 150ಪಿಎಸ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಇದು ಕೂಡ 10-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ಸೌಲಭ್ಯಗಳನ್ನು ಒಳಗೊಂಡಂತೆ ಲೋಡ್ ಮಾಡಲಾದ ಫೀಚರ್‌ಗಳ ಸೂಟ್‌ನೊಂದಿಗೆ ಬರುತ್ತದೆ.
ವಿನ್‌ಫಾಸ್ಟ್ ವಿಎಫ್ ವೈಲ್ಡ್ ಕಾನ್ಸೆಪ್ಟ್
ವಿನ್‌ಫಾಸ್ಟ್ 2024ರ ಜನವರಿಯಲ್ಲಿ ಜಾಗತಿಕವಾಗಿ ಅನಾವರಣಗೊಂಡ ಎಲೆಕ್ಟ್ರಿಕ್ ಪಿಕಪ್ ಪರಿಕಲ್ಪನೆಯಾದ ವಿಎಫ್ ವೈಲ್ಡ್ಅನ್ನು ಸಹ ಪ್ರದರ್ಶಿಸಿತು. ವಿಎಫ್ ವೈಲ್ಡ್ ನ ಪ್ರಮುಖ ಫೀಚರ್ ಎಂದರೆ ಹಿಂದಿನ ಸೀಟುಗಳನ್ನು ಮಡಿಸುವ ಮೂಲಕ ಟ್ರಕ್ ಬೆಡ್ ಅನ್ನು ಐದರಿಂದ ಎಂಟು ಅಡಿಗಳವರೆಗೆ ವಿಸ್ತರಿಸಬಹುದು. ಇದನ್ನು ಪನೋರಮಿಕ್ ಸನ್‌ರೂಫ್ ಮತ್ತು ಡಿಜಿಟಲ್ ಓಟ್‌ಸೈಡ್ ರಿಯರ್‌ವ್ಯೂ ಮಿರರ್‌ಗಳು (ORVMಗಳು) ನಂತಹ ಫೀಚರ್‌ಗಳೊಂದಿಗೆ ತೋರಿಸಲಾಗಿದೆ.
ನೀವು ಯಾವ ವಿನ್‌ಫಾಸ್ಟ್ ಮೊಡೆಲ್ ಬಗ್ಗೆ ಹೆಚ್ಚು ಉತ್ಸುಕರಾಗಿದ್ದೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ