Tesla India: ಎಲೆಕ್ಟ್ರಿಕ್ ವಾಹನಗಳಿಗೆ ಆಮದು ಸುಂಕವನ್ನು ಕಡಿಮೆ ಮಾಡುವ ಹೊಸ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶವು ವೇಗವನ್ನು ಪಡೆದುಕೊಂಡಿದೆ.
ಮಾರ್ಚ್ 19, 2024 03:33 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
ಆದರೆ, ಈ ನೀತಿಯ ಲಾಭವನ್ನು ಪಡೆಯಲು ಟೆಸ್ಲಾದಂತಹ ಜಾಗತಿಕ ಎಲೆಕ್ಟ್ರಿಕ್ ವಾಹನ ತಯಾರಕರು ಒಂದು ದೊಡ್ಡ ಷರತ್ತನ್ನು ದಾಟಬೇಕಿದೆ.
ಭಾರತವನ್ನು ವಿಶ್ವದ ಅತಿದೊಡ್ಡ EV ಉತ್ಪಾದನಾ ಕೇಂದ್ರಗಳಲ್ಲಿ ಒಂದನ್ನಾಗಿ ಮಾಡುವ ಗುರಿಯೊಂದಿಗೆ ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ (EV) ಹೊಸ ನೀತಿಗೆ ಹಸಿರು ನಿಶಾನೆ ತೋರಿಸಿದೆ. ಸದ್ಯದ ಸಂದರ್ಭದಲ್ಲಿ, ಜಾಗತಿಕ ಎಲೆಕ್ಟ್ರಿಕ್ ವಾಹನ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಹಿಂಜರಿಯುತ್ತಿವೆ. ಇಲ್ಲಿ ಆಮದು ತೆರಿಗೆ ಹೆಚ್ಚಾಗಿರುವ ಕಾರಣ ಕಾರುಗಳ ಬೆಲೆ ದುಬಾರಿಯಾಗುತ್ತದೆ ಮತ್ತು ಗ್ರಾಹಕರು ಜಾಸ್ತಿ ಬೆಲೆಯಿಂದಾಗಿ ಖರೀದಿಸಲು ಹಿಂದೇಟು ಹಾಕುತ್ತಾರೆ. ಈ ನೀತಿಯ ಅಡಿಯಲ್ಲಿ, ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (ಕಂಪ್ಲೀಟ್ಲಿ ಬಿಲ್ಟ್ ಅಪ್ ಯೂನಿಟ್) ಗಮನಾರ್ಹವಾಗಿ ಕಡಿಮೆ ಆಮದು ತೆರಿಗೆಗಳಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಬಹುದು. ಆದರೆ ಅವರು ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರೈಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಹಾಗಾದರೆ ಈ ಪ್ಯಾರಾಮೀಟರ್ ಗಳು ಯಾವುವು?
ಈ ಪ್ಯಾರಾಮೀಟರ್ ಗಳು ಮೂಲಭೂತವಾಗಿ ಈ ಜಾಗತಿಕ ಬ್ರ್ಯಾಂಡ್‌ಗಳಿಗೆ ಭಾರತ ಸರ್ಕಾರವು ನಿಗದಿಪಡಿಸಿದ ಷರತ್ತುಗಳಾಗಿವೆ. ಅವುಗಳನ್ನು ಕೆಳಗೆ ನೀಡಲಾಗಿದೆ:
- ಜಾಗತಿಕ EV ತಯಾರಕರು 3 ವರ್ಷಗಳ ಒಳಗೆ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು ಮತ್ತು ಕನಿಷ್ಠ ರೂ 4150 ಕೋಟಿ (ಅಂದಾಜು USD 500 ಮಿಲಿಯನ್) ಹೂಡಿಕೆ ಮಾಡಬೇಕು.
- ಅವರು ತಮ್ಮ ಉತ್ಪಾದನೆಯ ಮೂರನೇ ವರ್ಷದಲ್ಲಿ 25 ಪ್ರತಿಶತವನ್ನು ಮತ್ತು ಐದನೇ ವರ್ಷದಲ್ಲಿ 50 ಪ್ರತಿಶತವನ್ನು ಸ್ಥಳೀಯವಾಗಿ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಇದರ ಜೊತೆಗೆ, ಅವರು ಮೊದಲ 3 ವರ್ಷಗಳ ಒಳಗೆ ತಮ್ಮ ಎಲೆಕ್ಟ್ರಿಕ್ ವಾಹನಗಳ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಬೇಕು.
- ಆಮದು ಮಾಡಿಕೊಳ್ಳುವ EV ಯ ಕನಿಷ್ಠ CIF (ವೆಚ್ಚ (ಕಾಸ್ಟ್) + ವಿಮೆ (ಇನ್ಶೂರೆನ್ಸ್) + ಸರಕು ಸಾಗಣೆ (ಫ್ರೈಟ್)) ಮೌಲ್ಯವು ಸುಮಾರು 28.99 ಲಕ್ಷ (USD 35,000) ಆಗಿರಬೇಕು.
- ಎಲೆಕ್ಟ್ರಿಕ್ ವಾಹನ ತಯಾರಕರು ಈ ಪ್ರಯೋಜನಗಳೊಂದಿಗೆ ವರ್ಷಕ್ಕೆ ತಮ್ಮ ಎಲೆಕ್ಟ್ರಿಕ್ ವಾಹನಗಳ ಗರಿಷ್ಠ 8,000 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಬಹುದು.
ಇದರ ಜೊತೆಗೆ, ಬ್ರಾಂಡ್‌ನ ಹೂಡಿಕೆಯನ್ನು ಬ್ಯಾಂಕ್ ಗ್ಯಾರಂಟಿ ನೀಡುವ ಮೂಲಕ ಸುರಕ್ಷಿತವಾಗಿರಿಸಬೇಕು. ಕಂಪನಿಯು ನಿರ್ದಿಷ್ಟಪಡಿಸಿದ ಟೈಮ್‌ಲೈನ್‌ಗಳನ್ನು ಪೂರೈಸದಿದ್ದರೆ, ಆ ಗ್ಯಾರಂಟಿ ಮೊತ್ತವನ್ನು ಮರುಪಾವತಿ ಮಾಡಲಾಗುವುದಿಲ್ಲ.
ಇದರಿಂದ ಆಗುವ ಪ್ರಯೋಜನಗಳೇನು?
ಎಲೆಕ್ಟ್ರಿಕ್ ವಾಹನ ತಯಾರಕರು ಭಾರೀ ಕೈಗಾರಿಕೆಗಳ ಸಚಿವಾಲಯದಿಂದ (MHI) ಅನುಮೋದನೆಯನ್ನು ಪಡೆದು, ಬ್ಯಾಂಕ್ ಗ್ಯಾರಂಟಿಯೊಂದಿಗೆ ಹೂಡಿಕೆ ಮಾಡಿ, ಇತರ ಅವಶ್ಯಕತೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಬದ್ಧರಾಗಿದ್ದರೆ, ಅವರು ಕೇವಲ 15 ಪ್ರತಿಶತದಷ್ಟು ಕಡಿಮೆ ಆಮದು ತೆರಿಗೆಯೊಂದಿಗೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಬಹುದು. ಉದಾಹರಣೆಗೆ, ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಿಗೆ (CBUs) ಸಾಮಾನ್ಯ ಆಮದು ತೆರಿಗೆಯು ತುಂಬಾ ಜಾಸ್ತಿ ಅಂದರೆ 100 ಪ್ರತಿಶತದಷ್ಟು ಆಗಿದೆ. ಇದಕ್ಕಾಗಿಯೇ ಕಂಪನಿಗಳು ತಮ್ಮ ಆಮದು ಮಾಡಿದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಒದ್ದಾಡುತ್ತಿವೆ.
ಟೆಸ್ಲಾ ಮತ್ತು ಇತರ ಬ್ರಾಂಡ್‌ಗಳ ಮಾರುಕಟ್ಟೆ ಪ್ರವೇಶ
ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರುಗಳ ಮಾರಾಟವನ್ನು ಪ್ರಾರಂಭಿಸಲು ಕಳೆದ ಕೆಲವು ಸಮಯದಿಂದ ಆಸಕ್ತಿ ವ್ಯಕ್ತಪಡಿಸುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಹೇಳುತ್ತಾ ಬಂದಿದೆ. ಟೆಸ್ಲಾ ಮಾಡೆಲ್ 3 ಮತ್ತು ಟೆಸ್ಲಾ ಮಾಡೆಲ್ Y ನಂತಹ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಪರಿಚಯಿಸಲು ಆಮದು ತೆರಿಗೆ ಪ್ರಮುಖ ಅಡಚಣೆಗಳಲ್ಲಿ ಒಂದೆಂದು ಈ ಅಮೇರಿಕನ್ ಕಾರು ತಯಾರಕರು ಬಹಳಷ್ಟು ಬಾರಿ ಉಲ್ಲೇಖಿಸಿದ್ದಾರೆ. ಈಗಿರುವ ಹೆಚ್ಚಿನ ಪ್ರಮಾಣದ ಆಮದು ದರಗಳನ್ನು ಸೇರಿಸಿದರೆ, ಟೆಸ್ಲಾ ಕಾರುಗಳು ಬಹುತೇಕ ಐಷಾರಾಮಿ ಎಲೆಕ್ಟ್ರಿಕ್ ವಾಹನಗಳ ಬೆಲೆಗೆ ಸಮಾನವಾಗಿ ಸಿಗಲಿದೆ. ಈ ಹೊಸ ಎಲೆಕ್ಟ್ರಿಕ್ ವಾಹನ ನೀತಿಯೊಂದಿಗೆ, ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸಿದರೆ ಟೆಸ್ಲಾ ತನ್ನ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಯೋಜನೆಗಳನ್ನು ಸಂಭಾವ್ಯವಾಗಿ ಶುರುಮಾಡಬಹುದು.
ಇದನ್ನು ಕೂಡ ಓದಿ: ಮಹೀಂದ್ರಾ ಇನ್ನೂ ಹಲವಾರು ಹೆಸರುಗಳಿಗಾಗಿ ಟ್ರೇಡ್‌ಮಾರ್ಕ್‌ಗಳನ್ನು ಫೈಲ್ ಮಾಡಿದೆ
ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಕಾಯುತ್ತಿರುವ ಮತ್ತೊಂದು ಎಲೆಕ್ಟ್ರಿಕ್ ವಾಹನ ತಯಾರಕರಾದ ವಿನ್‌ಫಾಸ್ಟ್ ಕೂಡ ಈ ನೀತಿಯ ಲಾಭವನ್ನು ಪಡೆದುಕೊಳ್ಳಬಹುದು. ಈ ವಿಯೆಟ್ನಾಂ ಕಂಪನಿಯು ಈಗಾಗಲೇ ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದನೆಯನ್ನು ಪ್ರಾರಂಭಿಸಲು ಕೆಲಸ ಶುರುಮಾಡಿರುವ ಕಾರಣ ಇಲ್ಲಿ ಒಂದು ಹೆಜ್ಜೆ ಮುಂದಿದೆ.
ಹೊಸ ನೀತಿಯ ದೀರ್ಘಾವಧಿಯ ಪ್ರಯೋಜನಗಳು
ಈ ನೀತಿಯು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಶೀಘ್ರವಾಗಿ ಪರಿಚಯಿಸಲು ಅವಕಾಶ ಮಾಡಿಕೊಡುತ್ತದೆ ಎಂದು ನಾವು ಈಗಾಗಲೇ ಅರ್ಥಮಾಡಿಕೊಂಡಿದ್ದೇವೆ, ಆದರೆ ಇದು ಸರ್ಕಾರಕ್ಕೆ ಮತ್ತು ಜನರಿಗೆ ಹೇಗೆ ಪ್ರಯೋಜನಕಾರಿಯಾಗಿದೆ? ಈ ನೀತಿಯ ಪ್ರಯೋಜನಗಳನ್ನು ಪಡೆಯಲು ಕಂಪನಿಗಳು ತಮ್ಮ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರ ಜೊತೆಗೆ ದೇಶದಲ್ಲಿ ಕಾರ್ಖಾನೆಗಳನ್ನು ಕೂಡ ನಿರ್ಮಿಸಬೇಕಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗ ಸೃಷ್ಟಿಯಾಗಲಿದೆ.
ಇದಲ್ಲದೆ, ಈ ಕಂಪನಿಗಳು ತಮ್ಮ ಉತ್ಪಾದನೆಯ 50 ಪ್ರತಿಶತವನ್ನು ಸ್ಥಳೀಯವಾಗಿ ತಯಾರಿಸಬೇಕಾಗಿರುವ ಕಾರಣ, ಇದು ಎಲೆಕ್ಟ್ರಿಕ್ ವಾಹನಗಳಿಗೆ ಬಿಡಿಭಾಗಗಳನ್ನು ಪೂರೈಸುವ ಭಾರತೀಯ ಕಂಪನಿಗಳ ಮಾರಾಟವನ್ನು ಹೆಚ್ಚಿಸುತ್ತದೆ. ಇದು ದೇಶದೊಳಗೆ ಇಂತಹ ಹೆಚ್ಚಿನ ಸಂಖ್ಯೆಯ ಕಂಪನಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಗ್ರಾಹಕರಿಗೆ ಪ್ರಪಂಚದಾದ್ಯಂತದ ಸುಧಾರಿತ ವಾಹನ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಖರೀದಿಸುವ ಅವಕಾಶ ದೊರೆಯುತ್ತದೆ. ಕಡಿಮೆ ಆಮದು ತೆರಿಗೆ ಮತ್ತು ಸ್ಥಳೀಯ ಉತ್ಪಾದನೆಯಿಂದಾಗಿ ಈ ನೀತಿಯು ತಂತ್ರಜ್ಞಾನಗಳನ್ನು ಹೆಚ್ಚು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡುತ್ತದೆ. ಅಲ್ಲದೆ, ಪರಿಸರದಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಪ್ರಗತಿ ಸಾಧಿಸಲು ಭಾರತ ಸರ್ಕಾರವು ದೇಶದಲ್ಲಿ ವಿದ್ಯುತ್ ವಾಹನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ ವರ್ಸಸ್ ಟಾಟಾ ನೆಕ್ಸಾನ್ EV (ಹಳೆಯ ವರ್ಷನ್): ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ
ಈ ನೀತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಮತ್ತು ನೀವು ಭಾರತದಲ್ಲಿ ಯಾವ ಜಾಗತಿಕ EV ಬ್ರಾಂಡ್ ಅನ್ನು ನೋಡಲು ಬಯಸುತ್ತೀರಿ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
0 out of 0 found this helpful