ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್
ಮಹೀಂದ್ರ xuv ಈ9 ಗಾಗಿ ansh ಮೂಲಕ ನವೆಂಬರ್ 25, 2023 10:19 am ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಇಲೆಕ್ಟ್ರಿಕ್ XUV700 ನ ಕೂಪ್ ವಿನ್ಯಾಸದ ಆವೃತ್ತಿಯನ್ನು ಇತ್ತೀಚೆಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,, ಇದರ ಕ್ಯಾಬಿನ್‌ನ ನೋಟವು ನಮಗೆ ದೊರೆತಿದೆ
- ಕ್ಯಾಬಿನ್, ಇಂಟಗ್ರೇಟಡ್ ಟ್ರಿಪಲ್-ಸ್ಕ್ರೀನ್ ಸೆಟಪ್ ಮತ್ತು ಹೊಸ ಎರಡು ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.
- ತೀರಾ ಮಾರೆಮಾಡಿದ ಎಕ್ಸ್‌ಟೀರಿಯರ್ ಜೊತೆಗೆ ತಾತ್ಕಾಲಿಕ ಲೈಟಿಂಗ್ ಸೆಟಪ್ ಮಾತ್ರವೇ ಕೂಪ್ ಬಾಡಿ ಶೇಪ್ ಅನ್ನು ಹೊರಗೆಡಹುತ್ತದೆ.
- ಈ SUVಯು 450 km ತನಕದ ರೇಂಜ್‌ನೊಂದಿಗೆ ರಿಯರ್-ವ್ಹೀಲ್ ಡ್ರೈವ್ ಮತ್ತು ಆಲ್-ವ್ಲೀಲ್ ಡ್ರೈವ್ ಆಯ್ಕೆಗಳನ್ನು ಪಡೆದಿದೆ.
- ರೂ 38 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಏಪ್ರಿಲ್ 2025ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ .
ಮಹೀಂದ್ರಾ XUV.e9 ಹೊಸ-ಪೀಳಿಗೆ ಇಲೆಕ್ಟ್ರಿಕ್ SUVಗಳ ಮುಂದಿನ ಬ್ಯಾಚ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕಾರುತಯಾರಕರು ಇದನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಿದೆ. ತನ್ನ ಉತ್ಪಾದನೆಗೆ ಸಿದ್ಧವಿರುವ ಅವತಾರವು ಹತ್ತಿರವಾಗುತ್ತಿದ್ದಂತೆ ಈ ಕೂಪ್-ವಿನ್ಯಾಸದ ಇವಿ ಅನ್ನು ಆಗಾಗ್ಗೆ ಪರೀಕ್ಷಿಸುತ್ತಿರುವುದು ಕಂಡುಬಂದಿದೆ. XUV.e9 ಪರೀಕ್ಷಾರ್ಥ ಕಾರಿನ ಇತ್ತೀಚಿನ ಸ್ಪೈ ಶಾಟ್‌ಗಳು ನಮಗೆ ಇದರ ಇಂಟೀರಿಯರ್‌ನ ಮೊದಲ ನೋಟವನ್ನು ನೀಡುತ್ತಿದ್ದು, ಇದರ ಕ್ಯಾಬಿನ್ ಮಹೀಂದ್ರಾ XUV.e8 (ಮಹೀಂದ್ರಾ XUV700ನ ಇಲೆಕ್ಟ್ರಿಕ್ ಆವೃತ್ತಿ) ಕ್ಯಾಬಿನ್ ಅನ್ನೇ ಹೋಲುತ್ತದೆ ಎಂಬುದನ್ನು ಕೂಡಾ ಇತ್ತೀಚೆಗೆ ಗುರುತಿಸಲಾಗಿದೆ. ಇದರ ವಿವರಗಳನ್ನು ನಾವೀಗ ನೋಡೋಣ.
ಬಹುಅಗತ್ಯ ಪೂರೈಸುವ ಸ್ಕ್ರೀನ್‌ಗಳು
ಇಲ್ಲಿ ನೀವು ಮೊಟ್ಟಮೊದಲಿಗೆ, ಡ್ಯಾಶ್‌ಬೋರ್ಡ್‌ನ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವ್ಯಾಪಿಸಿದ ಬೃಹತ್ ಸ್ಕ್ರೀನ್ ಸೆಟಪ್ ಅನ್ನು ಗಮನಿಸಬಹುದು. ಈ ಸ್ಕ್ರೀನ್ ಸೆಟಪ್ ಮೂರು ಇಂಟಗ್ರೇಟಡ್ ಡಿಸ್‌ಪ್ಲೇಗಳನ್ನು ಹೊಂದಿರಲಿದೆ. ಅವುಗಳೆಂದರೆ, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಮ್ ಮತ್ತು ಪ್ಯಾಸೆಂಜರ್ ಡಿಸ್‌ಪ್ಲೇ. ಇದರ ಎರಡು-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮೊದಲನೇ ಪರಿಕಲ್ಪನೆಗಿಂತ ಹೊಸ ಡಿಸೈನ್ ಆಗಿದೆ.
ಇದನ್ನೂ ನೋಡಿ: ಮಹೀಂದ್ರಾ ಸ್ಕಾರ್ಪಿಯೋ N-ಆಧಾರಿತ ಪಿಕಪ್‌ನ ಜಾಗತಿಕ ಅನಾವರಣದ ನಂತರ ಪಾದಾರ್ಪಣೆ
ಉಳಿದಂತೆ ಡ್ಯಾಶ್ ಬೋರ್ಡ್‌ನ ಸೆಂಟರ್ ಕನ್ಸೋಲ್ ಸ್ಲಿಮ್ ಎಸಿ ವೆಂಟ್‌ಗಳನ್ನು ಹೊಂದಿದ್ದು XUV.e9 ಪ್ರೋಟೋಟೈಪ್‌ನಲ್ಲಿ ಇರುವಂತೆ ಅದೇ ಗೇರ್ ಶಿಫ್ಟ್ ಲಿವರ್ ಮತ್ತು ಡ್ರೈವ್ ಮೋಡ್‌ಗಳಿಗೆ ಸ್ವಿಚ್ ಮಾಡಲು ಬಳಸಬಹುದಾದ ಡಯಲ್‌ನೊಂದಿದೆ ಸಾಂಪ್ರದಾಯಿಕವಾಗಿದೆ. ಅಲ್ಲದೇ, ಸೀಟುಗಳು ಸಂಪೂರ್ಣವಾಗಿ ಕಾಣದಿದ್ದರೂ, ಅದರ ಅಪ್‌ಹೋಲ್ಸ್‌ಟ್ರಿ ಫ್ಯಾಬ್ರಿಕ್ ಮತ್ತು ಲೆದರ್ ಸಂಯೋಜನೆಯನ್ನು ಹೊಂದಿದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಉಲ್ಲೇಖಕ್ಕಾಗಿ ಮಹೀಂದ್ರಾ XUV.e8'ಯ ಇಂಟೀರಿಯರ್‌ನ ಚಿತ್ರವನ್ನು ಬಳಸಲಾಗಿದೆ.
ಪ್ರೀಮಿಯಂ ಆಫರಿಂಗ್ ಆಗಿರುವ ಮಹೀಂದ್ರಾ XUV.e9 ಮಲ್ಟಿ-ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, (ಅಡಾಪ್ಟಿವ್) ಕ್ರೂಸ್ ಕಂಟ್ರೋಲ್, ವೆಂಟಿಲೇಟಡ್ ಮತ್ತು ಪವರ್‌ಯುಕ್ತ ಮುಂಭಾಗದ ಸೀಟುಗಳು, ವಯರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಹೊಂದಿರುವ ನಿರೀಕ್ಷೆ ಇದೆ. ಇಲೆಕ್ಟ್ರಿಕ್ ಮಾಡೆಲ್ ಆಗಿರುವ ಇದು ಮಲ್ಟಿ-ಲೆವೆಲ್ ರೆಗೆನ್ ಮತ್ತು ವೆಹಿಕಲ್-ಟು-ಲೋಡ್ (V2L) ತಂತ್ರಜ್ಞಾನಗಳನ್ನೂ ಪಡೆದಿರಬಹುದು.
ಇದನ್ನೂ ಓದಿ: ಮಹೀಂದ್ರಾ ಗ್ಲೋಬಲ್ ಪಿಕಪ್ ಭಾರತದಲ್ಲಿ ಬಿಡುಗಡೆಗೆ ಇನ್ನಷ್ಟು ಹತ್ತಿರ, ಡಿಸೈನ್ ಪೇಟೆಂಟ್ ಸಲ್ಲಿಸಲಾಗಿದೆ
ಸುರಕ್ಷತಾ ಫೀಚರ್‌ಗಳ ವಿಷಯಕ್ಕೆ ಬಂದರೆ, ಮಹೀಂದ್ರಾ ಇದನ್ನು 6 ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ADASನೊಂದಿಗೆ ಸಜ್ಜುಗೊಳಿಸಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ XUV700 ಕಾರ್ಯಕ್ಷಮತೆಯನ್ನು ಆಧರಿಸಿ, ಭಾರತ್ NCAPಯಿಂದ ಕ್ರ್ಯಾಶ್ ಟೆಸ್ಟ್ ನಡೆಸಿದಾಗ ಮಹೀಂದ್ರಾ XUV.e9 ಉತ್ತಮ ಸ್ಕೋರ್ ಗಳಿಸಬಹುದು ಎಂದು ನಿರೀಕ್ಷಿಸಬಹುದು
ಪವರ್‌ಟ್ರೇನ್ ವಿವರಗಳು
ಮಹೀಂದ್ರಾ XUV.e9ಯು ಕಾರುತಯಾರಕರ INGLO ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು 60 kWh ಮತ್ತು 80 kWh ಪ್ಯಾಕ್‌ನ ಸಾಮರ್ಥ್ಯ ಹೊಂದಿದೆ. ಈ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಈ ಪ್ಲಾಟ್‌ಫಾರ್ಮ್ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್-ವ್ಹೀಲ್ ಡ್ರೈವ್ ಸೆಟಪ್‌ಗಳೆರಡನ್ನೂ ನೀಡುತ್ತದೆ ಮತ್ತು SUVಗೆ 500 km ತನಕದ ಕ್ಲೈಮ್ ಮಾಡಲಾದ ರೇಂಜ್ ನೀಡುತ್ತದೆ.
ಮಹೀಂದ್ರಾ ಹೇಳುವ ಪ್ರಕಾರ, ಕೇವಲ 30 ನಿಮಿಷಗಳಲ್ಲಿ 0-80 ಪ್ರತಿಶತ ಚಾರ್ಜಿಂಗ್ ಸಮಯದೊಂದಿಗೆ ಇದು 175 kW ತನಕದ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಬೆಂಬಲಿಸುತ್ತದೆ.
ಬಿಡುಗಡೆ ಮತ್ತು ಬೆಲೆ
ಮಹೀಂದ್ರಾ XUV.e9, XUV.e8 (ಇಲೆಕ್ಟ್ರಿಕ್ XUV700) ನಂತರ ಬಿಡುಗಡೆಯಾಗುವ ನಿರೀಕ್ಷೆ ಇದ್ದು 2024ರ ಅಂತ್ಯದ ವೇಳೆಗೆ ಆಗಮಿಸಲಿದೆ. ಆರಂಭಿಕ ಬೆಲೆ ಅಂದಾಜು ರೂ 38 ಲಕ್ಷ (ಎಕ್ಸ್-ಶೋರೂಂ) ಹೊಂದಿರುವ ನಿರೀಕ್ಷೆ ಇದ್ದು ಮುಂಬರುವ ಟಾಟಾ ಹ್ಯಾರಿಯರ್ ಇವಿ ಮತ್ತು ಸಫಾರಿ ಇವಿಗೆ ಪ್ರತಿಸ್ಪರ್ಧಿಯಾಗಬಹುದು.
0 out of 0 found this helpful