Login or Register ಅತ್ಯುತ್ತಮ CarDekho experience ಗೆ
Login

ಐಷಾರಾಮಿ SUVಯಾದ BMW X7ನ್ನು ಖರೀದಿಸಿದ ನಟಿ ಯಾಮಿ ಗೌತಮ್

published on ಜೂನ್ 27, 2023 02:33 pm by rohit for ಬಿಎಂಡವೋ ಎಕ್ಸ7

BMWನ ಅತ್ಯಂತ ಐಷಾರಾಮಿ SUV, BMW X7 ಗೆ ಈ ವರ್ಷಾರಂಭದಲ್ಲಿ ಮಧ್ಯಂತರ ನವೀಕರಣ ಮಾಡಲಾಗಿತ್ತು

ಬಾಲಿವುಡ್ ತಾರೆ ಯಾಮಿ ಗೌತಮ್ ಅವರು, ತಮ್ಮ ಬಳಿ ಈಗಾಗಲೇ ಇರುವ ಐಷಾರಾಮಿ ಮತ್ತು ಆರಾಮದಾಯಕ ಕಾರುಗಳ ಸಂಗ್ರಹಕ್ಕೆ, ನವೀಕೃತ BMW X7 ಅನ್ನು ಹೊಸದಾಗಿ ಸೇರಿಸಿದ್ದಾರೆ. . ಇದಕ್ಕೆ ಟ್ಯಾನ್‌ಝೈಟ್ ಬ್ಲೂ ಮೆಟಾಲಿಕ್ ಪೇಂಟ್‌ ಆಯ್ಕೆಯ ಫಿನಿಷಿಂಗ್ ನೀಡಿದಂತೆ ತೋರುತ್ತಿದ್ದು, ನಿಖರವಾದ ಪವರ್‌ಟ್ರೇನ್ ಕಾನ್ಫಿಗರೇಶನ್ ಅನ್ನು ಕಂಡುಹಿಡಿಯಲಾಗುವುದಿಲ್ಲ. ಯಾಮಿ ಅವರು ಆಡಿ Q7 SUV ಮತ್ತು Audi A4 ಅನ್ನು ಈಗಾಗಲೇ ತಮ್ಮ ಕಾರುಗಳ ಪಟ್ಟಿಯಲ್ಲಿ ಹೊಂದಿದ್ದಾರೆ.

BMW SUV ಬಗ್ಗೆ ಇನಷ್ಟು ವಿವರಗಳು

BMW ಭಾರತದಲ್ಲಿ ತನ್ನ ಮೊದಲನೇ-ಪೀಳಿಗೆ X7 ಅನ್ನು 2019ರಲ್ಲಿ ಬಿಡುಗಡೆ ಮಾಡಿತ್ತು, ನಂತರ ಜನವರಿ 2023ರಲ್ಲಿ ಇದಕ್ಕೆ ನವೀಕರಣ ನೀಡಲಾಯಿತು. ಈ X7 ಅನ್ನು “M ಸ್ಪೋರ್ಟ್” ನಲ್ಲಿ ಮಾತ್ರ ನೀಡಲಾಗಿದೆ (ಉರಿ-ಖ್ಯಾತಿಯ ನಟಿ ಕೂಡಾ ಇದನ್ನು ಹೊಂದಿದ್ದಾರೆ). ಇದರ ಪೆಟ್ರೋಲ್ ವೇರಿಯೆಂಟ್ (xಡ್ರೈವ್40i M ಸ್ಪೋರ್ಟ್) ಬೆಲೆ ರೂ 1.22 ಕೋಟಿ, ಮತ್ತು ಡೀಸೆಲ್ ವೇರಿಯೆಂಟ್‌ನ (xಡ್ರೈವ್40d M ಸ್ಪೋರ್ಟ್) ಬೆಲೆ 1.25 ಕೋಟಿ (ಎರಡೂ ಎಕ್ಸ್-ಶೋರೂಂ, ದೆಹಲಿ) ಆಗಿದೆ.

ಇದನ್ನೂ ಓದಿ: ಶಿಖರ್ ಧವನ್ ಅವರ ಇತ್ತೀಚಿನ ರೈಡ್, ದಿ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಾಫಿ ಬಗ್ಗೆ ತಿಳಿದುಕೊಳ್ಳಬೇಕಾದ 3 ವಿಷಯಗಳು

ಪವರ್‌ಟ್ರೇನ್ ವಿವರಗಳು

ಈ ಭಾರತ-ಸ್ಪೆಕ್ BMW X7ಗೆ 3-ಲೀಟರ್ ಟ್ವಿನ್-ಟರ್ಬೋ ಇನ್‌ಲೈನ್ ಆರು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಅನ್ನು ಜೋಡಿಸಲಾಗಿದೆ. ಮೊದಲನೆಯದು 381PS/520Nm ಉತ್ಪಾದಿಸಿದರೆ ಎರಡನೆಯದು 340PS ಮತ್ತು 700Nm ಉತ್ಪಾದಿಸುತ್ತದೆ. ಎರಡೂ ಇಂಜಿನ್‌ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಜೊತೆಗೆ ಜೋಡಿಸಲಾಗಿದ್ದು, ಎಲ್ಲಾ ನಾಲ್ಕು ವ್ಹೀಲ್‌ಗಳಿಗೆ ಪವರ್ ನೀಡುತ್ತದೆ.

ಎರಡೂ ಇಂಜಿನ್‌ಗಳು 48-ವೋಲ್ಟ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ ಪಡೆದಿದ್ದು, ವೇಗವಾಗಿ ಚಲಿಸುವಾಗ ಔಟ್‌ಪುಟ್ ಅನ್ನು 12PS/200Nm ನಷ್ಟು ಹೆಚ್ಚಿಸುತ್ತದೆ. ಈ X7, 5.9 ಸೆಕೆಂಡುಗಳಲ್ಲಿ 0 ರಿಂದ 100kmph ಗೆ ವೇಗವರ್ಧನೆಯಾಗುತ್ತದೆ ಎಂದು BMW ಹೇಳುತ್ತದೆ. ಈ ಹೊಸ X7 ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳಂದರೆ: ಕಂಫರ್ಟ್, ಎಫಿಷಿಯೆಂಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್.

ತಂತ್ರಜ್ಞಾನಭರಿತ

BMW, ತನ್ನ ಮುಂಚೂಣಿ ಐಶಾರಾಮಿ SUV, X7 ಅನ್ನು ಡ್ಯುಯಲ್ ಸ್ಕ್ರೀನ್‌ಗಳು (12.3-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 14.9-ಇಂಚು ಇನ್ಫೋಟೇನ್‌ಮೆಂಟ್ ಸಿಸ್ಟಮ್ ಯೂನಿಟ್), ಪನೋರಮಿಕ್ ಸನ್‌ರೂಫ್, 14-ಕಲರ್ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಡಿಜಿಟಲ್ ಕೀ ಮುಂತಾದ ಹಲವಾರು ಪ್ರಮುಖ ಫೀಚರ್‌ಗಳೊಂದಿಗೆ ಸಜ್ಜುಗೊಳಿಸಿದೆ.

ಇದರ ಸುರಕ್ಷತಾ ಕಿಟ್ ಅನೇಕ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಮತ್ತು ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC) ಅನ್ನು ಪಡೆದಿದೆ. ಅಲ್ಲದೇ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಡ್ರೈವರ್ ಡ್ರೌಸಿನೆಸ್ ಡಿಟೆಕ್ಷನ್ ಒಳಗೊಂಡ ಅಡ್ವಾನ್ಸ್‌ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್‌ಗಳೊಂದಿಗೆ ಬರುತ್ತದೆ

ಇದನ್ನೂ ಓದಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ, ಟೆಸ್ಲಾ ಇಂಡಿಯಾ ಪಾದಾರ್ಪಣೆಯನ್ನು ದೃಢಪಡಿಸಿದ ಎಲಾನ್ ಮಸ್ಕ್

ಪ್ರತಿಸ್ಪರ್ಧಿಗಳು ಯಾರು?

ಈ ನವೀಕೃತ X7 ಆಡಿ Q7, ವೋಲ್ವೋ XC90, ಮತ್ತು ಮರ್ಸಿಡಿಸ್ ಬೆನ್ಝ್ GLS‌ ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : BMW X7 ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 29 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಬಿಎಂಡವೋ ಎಕ್ಸ7

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ