• English
    • Login / Register
    Discontinued
    • Kia EV6 2022-2025 Front Right Side
    • ಕಿಯಾ ಇವಿ6 2022-2025 side view (left)  image
    1/2
    • Kia EV6 2022-2025
      + 6ಬಣ್ಣಗಳು
    • Kia EV6 2022-2025
      + 22ಚಿತ್ರಗಳು
    • Kia EV6 2022-2025
    • Kia EV6 2022-2025
      ವೀಡಿಯೋಸ್

    ಕಿಯಾ ಇವಿ6 2022-2025

    4.4123 ವಿರ್ಮಶೆಗಳುrate & win ₹1000
    Rs.60.97 - 65.97 ಲಕ್ಷ*
    last recorded ಬೆಲೆ/ದಾರ
    Th IS model has been discontinued
    ಹೊಂದಾಣೆಕೆ with ನ್ಯೂ ಕಿಯಾ ಇವಿ6
    buy ಬಳಸಿದ ಕಿಯಾ ಕಾರುಗಳು

    ಕಿಯಾ ಇವಿ6 2022-2025 ನ ಪ್ರಮುಖ ಸ್ಪೆಕ್ಸ್

    ರೇಂಜ್708 km
    ಪವರ್225.86 - 320.55 ಬಿಹೆಚ್ ಪಿ
    ಬ್ಯಾಟರಿ ಸಾಮರ್ಥ್ಯ77.4 - 84 kwh
    ಚಾರ್ಜಿಂಗ್‌ time ಡಿಸಿ73min 50 kw-(10%-80%)
    top ಸ್ಪೀಡ್192 ಪ್ರತಿ ಗಂಟೆಗೆ ಕಿ.ಮೀ )
    • 360 degree camera
    • memory functions for ಸೀಟುಗಳು
    • ಹೊಂದಾಣಿಕೆ ಹೆಡ್‌ರೆಸ್ಟ್
    • voice commands
    • android auto/apple carplay
    • advanced internet ಫೆಅತುರ್ಸ್
    • ವಾಲೆಟ್ ಮೋಡ್
    • adas
    • panoramic ಸನ್ರೂಫ್
    • heads ಅಪ್‌ display
    • key ವಿಶೇಷಣಗಳು
    • top ವೈಶಿಷ್ಟ್ಯಗಳು

    ಕಿಯಾ ಇವಿ6 2022-2025 ಬೆಲೆ ಪಟ್ಟಿ (ರೂಪಾಂತರಗಳು)

    following details are the last recorded, ಮತ್ತು the prices ಮೇ vary depending on the car's condition.

    ಇವಿ6 2022-2025 ಜಿಟಿ ಲೈನ್(Base Model)77.4 kwh, 708 km, 225.86 ಬಿಹೆಚ್ ಪಿ60.97 ಲಕ್ಷ* 
    ಇವಿ6 2022-2025 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌(Top Model)84 kwh, 663 km, 320.55 ಬಿಹೆಚ್ ಪಿ65.97 ಲಕ್ಷ* 

    ಕಿಯಾ ಇವಿ6 2022-2025 ವಿಮರ್ಶೆ

    Overview

    ಐಷಾರಾಮಿ EV + ನ ಬೆಲೆಯನ್ನು ಗಮನಿಸಿದಾಗ ಬಲು ದುಬಾರಿ ಎನಿಸಬಹುದು, ಆದರೆ EV6 ಸಾಕಷ್ಟು ಉತ್ಸಾಹ ಮತ್ತು ವಿಶೇಷತೆಯನ್ನು ಒಳಗೊಂಡಿದೆ. ನೀವು ಅದನ್ನು ಪರಿಗಣಿಸುತ್ತೀರಾ?

    Overview

    ಇಲೆಕ್ಟ್ರಾನಿಕ್ ವೆಹಿಕಲ್ ಗಳ ಜಗತ್ತಿಗೆ ಕಿಯಾ ಪ್ರವೇಶ ಮಾಡಿದಾಗ ಎಲ್ಲರ ಗಮನವನ್ನು ಸೆಳೆಯಿತು. ಇದು EV6 ಕಾಣುವ ರೀತಿಯಲ್ಲಿ ಮಾತ್ರವಲ್ಲ, ಸೊಗಸಾದ ಬಂಪರ್‌ಗಳ ನಡುವೆ ಮಿಶ್ರಣ ಆಗಿರುವ ತಂತ್ರಜ್ಞಾನದ ಕಾರಣದಿಂದಾಗಿ. ಇದು ಸ್ಪೋರ್ಟ್ಸ್ ಕಾರಿನಂತಹ ಕಾರ್ಯಕ್ಷಮತೆ ಮತ್ತು ಐಷಾರಾಮಿ ಕಾರಿನಂತಹ ವೈಶಿಷ್ಟ್ಯಗಳನ್ನು ಭರವಸೆ ನೀಡಿದೆ ಮತ್ತು ನಾವು ಅದನ್ನು ಅನುಭವಿಸುವ ಸಮಯ ಬಂದಿದೆ. ಆದಾಗ್ಯೂ, ಇದು ಸಂಪೂರ್ಣ ಆಮದು ಆಗಲಿದೆ, ಅಂದರೆ ಇದು ಐಷಾರಾಮಿ ವಿಭಾಗದಲ್ಲಿ ಸ್ಥಾನ ಪಡೆಯಲಿದೆ. ಆಮದು ಆಗಿದ್ದರೂ ಅದನ್ನು ಪರಿಗಣಿಸಲು EV6 ಸಾಕಷ್ಟು ಉತ್ತೇಜಕವಾಗಿರಬಹುದೇ?

    ಎಕ್ಸ್‌ಟೀರಿಯರ್

    Exterior

    ಅದರ ಆಲ್-ಇವಿ ಪ್ಲಾಟ್‌ಫಾರ್ಮ್‌ನೊಂದಿಗೆ, ಕಿಯಾ ವಿನ್ಯಾಸದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯನ್ನಿಟ್ಟಿದೆ. EV6 ಸಾಂಪ್ರದಾಯಿಕ ಹ್ಯಾಚ್‌ಬ್ಯಾಕ್ ಆಗಲಿ ಅಥವಾ ಸೆಡಾನ್ ಅಥವಾ ಎಸ್‌ಯುವಿಯೂ ಅಲ್ಲ.  ಇದು ಈ ಮೂರರ ಸಂಯೋಜನೆಯಾಗಿದೆ ಮತ್ತು ನೀವು EV6 ನ ಗಾತ್ರ ಮತ್ತು ವಿನ್ಯಾಸದ ವಿವರಗಳನ್ನು ಗಣನೆಗೆ ತೆಗೆದುಕೊಂಡಾಗ, ಭಾರತೀಯ ರಸ್ತೆಗಳಲ್ಲಿ ನಾವು ಇಂತಹ ಕಾರುಗಳನ್ನು ನೋಡಿಲ್ಲದಂತೆ ಅನಿಸುತ್ತದೆ.

    Exterior

    ಇಳಿಜಾರಾದ ಬಾನೆಟ್, ನಯವಾದ ಗ್ರಿಲ್ ಮತ್ತು ದೊಡ್ಡ ಹೆಡ್‌ಲ್ಯಾಂಪ್‌ಗಳೊಂದಿಗೆ ಮುಂಭಾಗವು ತುಂಬಾ ಶಾರ್ಪ್‌ ಆಗಿ ಕಾಣುತ್ತದೆ. ಈ ಕಾರಿನ ಸೈಡ್‌ ಪ್ರೊಫೈಲ್‌ನ ಗಮನಿಸುವಾಗ ಇದರ ದೊಡ್ಡ ಪ್ರಮಾಣವು ನಮ್ಮನ್ನು ಮೋಡಿ ಮಾಡಲು ಪ್ರಾರಂಭಿಸುತ್ತದೆ. ಆದರೆ, ವಿವರಗಳಿಗೆ ಗಮನ ನೀಡುವುದು ಎದ್ದು ಕಾಣುತ್ತದೆ. ಹೆಡ್‌ಲ್ಯಾಂಪ್‌ಗಳು ಸಂಕೀರ್ಣವಾದ ಡಿಆರ್‌ಎಲ್‌ಎಸ್‌ ಮತ್ತು ಲೈಟಿಂಗ್‌ಗಾಗಿ ಪೂರ್ಣ ಮ್ಯಾಟ್ರಿಕ್ಸ್ ಎಲ್‌ಇಡಿ ಸೆಟಪ್ ಅನ್ನು ಪಡೆಯುತ್ತವೆ. ಮೇಲಿನ DRL ಸಹ ಅನುಕ್ರಮ ಟರ್ನ್‌ ಇಂಡಿಕೇಟರ್‌ ಆಗಿ ಕಾರ್ಯನಿರ್ವಹಿಸುತ್ತದೆ.

    Exterior

    EV6 4695mm ಉದ್ದ, 1890mm ಅಗಲ, 1550mm ಎತ್ತರ ಮತ್ತು 2900mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಹೀಗಾಗಿ, EV6 ಟಾಟಾ ಸಫಾರಿಯಂತೆ ಉದ್ದವಾಗಿದೆ ಮತ್ತು ಅಗಲವಾಗಿದೆ, ಹಾಗೆಯೇ ಇದು ಟೊಯೊಟಾ ಫಾರ್ಚುನರ್‌ಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ!

    Exterior

    ಇದರಿಂದಾಗಿ EV ಯ ಚಕ್ರಗಳನ್ನು ಕಾರ್ನರ್‌ಗೆ ತಳ್ಳಲಾಗುತ್ತದೆ, ಇದರ ಎಲ್ಲಾ ಪ್ರಶಂಸೆ EV ಪ್ಲಾಟ್‌ಫಾರ್ಮ್‌ಗೆ ಸೇರಬೇಕು. ಮತ್ತು ಅಂತಹ ಗಾತ್ರದೊಂದಿಗೆ, ಫಾಸ್ಟ್‌ಬ್ಯಾಕ್ ವಿನ್ಯಾಸದಿಂದಾಗಿ EV ಇನ್ನಷ್ಟು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ತದನಂತರ 19-ಇಂಚಿನ ಚಕ್ರಗಳು, ಏರೋ-ಸ್ಪೆಸಿಫಿಕ್‌ ORVM ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳಂತಹ ವಿನ್ಯಾಸದಲ್ಲಿ ನೀಡಿರುವ ಅಂಶಗಳು ಈ ಕಾರನ್ನು ಇನ್ನಷ್ಟು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.

    Exterior

    ಹಿಂಭಾಗದಲ್ಲಿ, ವಿನ್ಯಾಸದಲ್ಲಿನ ತೀಕ್ಷ್ಣತೆಯು ಸುಂದರವಾಗಿ ಸೇರಿಸಲಾಗಿರುವ ಕನೆಕ್ಟೆಡ್‌ ಟೈಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳಲ್ಲಿ 3D ಮಾದರಿಯೊಂದಿಗೆ ಮರಳುತ್ತದೆ. ಸ್ಪಾಯ್ಲರ್ ಕೂಡ ನೋಡಲು ಸ್ಪೋರ್ಟಿಯಾಗಿದೆ ಮತ್ತು ನೀವು ಅವುಗಳನ್ನು ಒಮ್ಮೆ ನೋಡಿದ ನಂತರ ನೀವು ಮಿಸ್‌ ಮಾಡಿಕೊಳ್ಳಬಾರದು ಎಂಬ ದೃಷ್ಟಿಕೋನದಲ್ಲಿ ನಿರ್ದಿಷ್ಟ ಹೈಪರ್‌ಕಾರ್‌ನಿಂದ ಸ್ಫೂರ್ತಿ ಪಡೆಯುವ ರಿವರ್ಸ್‌ ಲೈಟ್‌ಗಳಾಗಿವೆ. 

    Exterior

    ಒಟ್ಟಾರೆಯಾಗಿ, Kia EV6 ಎಲ್ಲರ ಗಮನವನ್ನು ತನ್ನತ್ತ ಸೆಳೆಯುವ ಕಾರಾಗಿದೆ. ಇದು ತನ್ನ ದೊಡ್ಡದಾದ ಗಾತ್ರದೊಂದಿಗೆ ಅದರ ಉಪಸ್ಥಿತಿಯನ್ನು ಅನುಭವಿಸುವಂತೆ ಮಾಡುತ್ತದೆ ಮತ್ತು ವಿನ್ಯಾಸದಲ್ಲಿನ ನೂತನ ಅಂಶಗಳೊಂದಿಗೆ ನಿಮ್ಮ ಗಮನವನ್ನು ಸೆಳೆಯುತ್ತದೆ. ಇದು ಕೆಲವು ಸ್ಥಳದಲ್ಲಿ ಅತಿಯಾಗಿ ಕಾಣಿಸಬಹುದು, ಆದರೆ ಖಂಡಿತವಾಗಿಯೂ ರಸ್ತೆಯಲ್ಲಿ ಬೇರೆ ಯಾವುದೂ ಕಾಣಿಸುವುದಿಲ್ಲ.

    ಇಂಟೀರಿಯರ್

    Interior

    EV6 ನ ಡ್ಯಾಶ್‌ಬೋರ್ಡ್ ವಿನ್ಯಾಸವು ಇನ್ನೋವೇಟಿವ್ ಆಗಿದೆ. ಇದು ಮೇಲ್ಭಾಗದಲ್ಲಿ ಆಸಕ್ತಿದಾಯಕ ಶೇಪ್‌ನ್ನು ಹೊಂದಿದೆ, ಇದು ನಾವು ಈ ಹಿಂದೆ ನೋಡಿದ ಯಾವುದೇ ಕಾರಿನಂತಿಲ್ಲ. ಕನಿಷ್ಠ ಲೇಔಟ್, ಕೇವಲ ಎರಡು ಬಾಗಿದ ಸ್ಕ್ರೀನ್‌ಗಳೊಂದಿಗೆ, ಇದು ನಿಜವಾಗಿಯೂ ಸ್ವಚ್ಛವಾಗಿ ಕಾಣಲು ಸಹಾಯ ಮಾಡುತ್ತದೆ. 2 ಸ್ಪೋಕ್‌ ಸ್ಟೀರಿಂಗ್ ಈ ಕನಿಷ್ಠ ವಿನ್ಯಾಸವನ್ನು ಇನ್ನಷ್ಟು ಬಲಗೊಳಿಸಲು ಸಹಾಯ ಮಾಡುತ್ತದೆ.

    Interior

    EV6 ಪ್ಯೂರ್‌ EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಹಾಗಾಗಿ ಇದು ಸಮತಟ್ಟಾದ ಫ್ಲೋರ್‌ನ್ನು ಪಡೆಯುತ್ತದೆ. ಇದು ವಿನ್ಯಾಸಕಾರರಿಗೆ ಸಾಕಷ್ಟು ಜಾಗವನ್ನು ತೆರೆಯಲು ಮತ್ತು ಸೆಂಟರ್ ಕನ್ಸೋಲ್‌ಗೆ ತೇಲುವ ಅನುಭವವನ್ನು ನೀಡಲು ಸಹಾಯ ಮಾಡಿದೆ. ಇದು ಕಾರನ್ನು ವಿಭಿನ್ನವಾಗಿ ಅನುಭವಿಸಲು ಸಹಾಯ ಮಾಡುವುದು ಮಾತ್ರವಲ್ಲದೆ, ಕ್ಯಾಬಿನ್‌ನಲ್ಲಿ ಸ್ಟೋರೇಜ್‌ ಸ್ಥಳಗಳಿಗೆ ಬೇಕಾಗುವಷ್ಟು ಸ್ಥಳಾವಕಾಶವನ್ನು ತೆರೆಯುತ್ತದೆ. ಅದನ್ನು ನಾವು ಸ್ವಲ್ಪ ಸಮಯದ ನಂತರ ಪಡೆಯುತ್ತೇವೆ.

    Interior

    ಇದರ ಆಸನಗಳು ತುಂಬಾ ಆರಾಮದಾಯಕ ಮತ್ತು ಸಪೋರ್ಟಿವ್‌ ಮತ್ತು 10-ವೇ ಪವರ್ ಹೊಂದಾಣಿಕೆಯನ್ನು ಹೊಂದಿವೆ. ಯವುದೇ ಗಾತ್ರದ ಹೊರತಾಗಿಯೂ ನ್ಯಾಚುರಲ್‌ ಆಗಿರುವ ಡ್ರೈವಿಂಗ್‌ ಸ್ಥಾನವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ಚಾರ್ಜ್ ಮಾಡುವಾಗ - ಈ ಆಸನಗಳು ಬಹುತೇಕ ಸಮತಲ ಮಟ್ಟಕ್ಕೆ (ಶೂನ್ಯ-ಗುರುತ್ವಾಕರ್ಷಣೆ) ಒರಗಿಕೊಳ್ಳಬಹುದು, ಇದು ನಿಮಗೆ ವಿಶ್ರಾಂತಿ ಮತ್ತು ನಿದ್ರೆಗೆ ಸಹಾಯ ಮಾಡುತ್ತದೆ. ಅಂತರಾಷ್ಟ್ರೀಯವಾಗಿ, ಸೀಟ್ ಕವರ್‌ಗಳನ್ನು ಮರುಬಳಕೆಯ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ ಆದರೆ ಭಾರತದಲ್ಲಿ ಈ ಆಯ್ಕೆಗಳು ಹೊಲಿದ ಮತ್ತು ಸಿಂತೆಟಿಕ್‌ ಲೆದರ್‌ನ್ನು ಒಳಗೊಂಡಿರುತ್ತವೆ. ಇದರೊಂದಿಗೆ, ಮರುಬಳಕೆಯ PET ಬಾಟಲಿಗಳಿಂದ ನಿರ್ಮಿಸಲಾದ ಡೋರ್ ಪ್ಯಾಡ್‌ಗಳನ್ನು ನೀವು ಇನ್ನೂ ಪಡೆಯುತ್ತೀರಿ.

    ವೈಶಿಷ್ಟ್ಯಗಳು

    Interior

    EV6 ನ್ನು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಎರಡು ಬಾಗಿದ 12.3-ಇಂಚಿನ ಡಿಸ್‌ಪ್ಲೇಗಳು ಚಾಲಕ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಜೋಡಿಸಲಾಗಿದೆ. ಡಿಸ್‌ಪ್ಲೇಯ ಸ್ಪಷ್ಟತೆ ಮತ್ತು ಸಾಫ್ಟ್‌ವೇರ್‌ನ ಮೃದುತ್ವವು ಅದ್ಭುತವಾಗಿದೆ ಮತ್ತು ನುಣುಪಾಗಿದೆ. ಹಾಗೆಯೇ ಮರ್ಸಿಡೀಸ್‌-ಬೆಂಜ್‌ನಲ್ಲಿ ಬಳಸುವ ವ್ಯವಸ್ಥೆಗಳೊಂದಿಗೆ ಇದು ಸುಲಭವಾಗಿ ಸ್ಪರ್ಧೆಯನ್ನು ಒಡ್ಡುವಂತಹ ಸೌಕರ್ಯವನ್ನು ಹೊಂದಿದೆ. ಡ್ರೈವರ್‌ನ ಡಿಸ್‌ಪ್ಲೇಯು ವಿವಿಧ ಲೇಔಟ್‌ಗಳನ್ನು ಪಡೆಯುತ್ತದೆ, ಅದು ಉತ್ತಮವಾದ ಅನಿಮೇಷನ್‌ಗಳೊಂದಿಗೆ ಬದಲಾಗುತ್ತದೆ ಮತ್ತು ಇಂಫೊಎಂಟಟೈನ್‌ಮೆಂಟ್‌ ಡಿಸ್‌ಪ್ಲೇಯು ಸರಳವಾದ ಮತ್ತು ಉಪಯುಕ್ತವಾದ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ.  ನಾನು ವಿಶೇಷವಾಗಿ ಬ್ಯಾಟರಿ ಮತ್ತು ರೇಂಜ್‌ನ್ನು ಡಿಸ್‌ಪ್ಲೇ ಮಾಡುವುದನ್ನು ನಾವು  ಇಷ್ಟಪಡುತ್ತೇವೆ, ಆದರೆ ಸ್ಕ್ರೀನ್‌ನ ಮೇಲೆ ಪ್ರದರ್ಶಿಸಲಾದ ಕಾರು EV6 ಆಗಿರಬೇಕು ಎಂದು ನಾವು ಬಯಸುತ್ತೇವೆ.

    Interior

    ಐಷಾರಾಮಿ ಕಾರುಗಳಂತೆಯೇ ಉತ್ತಮ ಸೌಂಡ್‌ಗಾಗಿ 3D ಅಕೌಸ್ಟಿಕ್ ಸೌಂಡ್‌ನ್ನು ಹೊಂದಿರುವ 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಇನ್ಫೋಟೈನ್‌ಮೆಂಟ್ ಅನ್ನು ಜೋಡಿಸಲಾಗಿದೆ. ಇದರ ಹೊರತಾಗಿ, ನೀವು ವೆಂಟಿಲೇಟೆಡ್‌ ಮತ್ತು ಬಿಸಿಯಾದ ಸೀಟ್‌ಗಳು, ಹೀಟೆಡ್ ಸ್ಟೀರಿಂಗ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟ್‌ಗಳು, ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ, ಈ ಮೂಲಕ ನೀವು ನಿಮ್ಮ ಕಾರನ್ನು ಚಾರ್ಜ್ ಮಾಡುವಾಗ ದೂರದಿಂದಲೇ ನೀವು ಮೇಲ್ವಿಚಾರಣೆ ಮಾಡಬಹುದು.

    Interior

    ಭಾರತದಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಎಮರ್ಜೆನ್ಸಿ ಬ್ರೇಕ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ ಪೂರ್ಣ ADAS ಸೂಟ್ ಅನ್ನು ಪಡೆಯುವ ಕಿಯಾದ ಮೊದಲ EV ಆಗಲಿದೆ. ವೈಶಿಷ್ಟ್ಯ ವಿಭಾಗದಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ ವಿಶೇಷ ಉಲ್ಲೇಖ ಆಗಿದೆ, ಇದು ನ್ಯಾವಿಗೇಷನ್ ಮತ್ತು ವಾರ್ನಿಂಗ್‌ಗಾಗಿ ವರ್ಧಿತ ರಿಯಾಲಿಟಿ ಡಿಸ್ಪ್ಲೇಗಳನ್ನು ಪಡೆಯುತ್ತದೆ. ಇದು ನಿಮಗೆ ಉತ್ತಮ ಮಾರ್ಗದರ್ಶನ ನೀಡಲು ಮುಂದಿನ ರಸ್ತೆಯ ಮೇಲೆ ಚಿತ್ರವನ್ನು ಅತಿಕ್ರಮಿಸಬಹುದು.

    ಪ್ರಾಯೋಗಿಕತೆ

    Interior

    ನಾವು ಹೇಳಿದಂತೆ, ಕಿಯಾ EV6 EV-ಸ್ಪೇಸಿಫಿಕ್‌ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಸಾಕಷ್ಟು ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡಲು ಸಹಾಯ ಮಾಡುತ್ತದೆ. ಸೆಂಟರ್ ಕನ್ಸೋಲ್‌ನ ಕೆಳಗಿರುವ ಸ್ಟೋರೇಜ್‌ನಲ್ಲಿ ಸಣ್ಣ ಬ್ಯಾಗ್‌ಗಳನ್ನು ಸುಲಭವಾಗಿ ಇಡಬಹುದು ಮತ್ತು ಆರ್ಮ್‌ರೆಸ್ಟ್‌ನ ಅಡಿಯಲ್ಲಿ ಸ್ಥಳಾವಕಾಶವು ತುಂಬಾ ಆಳವಾಗಿದೆ ಮತ್ತು ಸಣ್ಣ ಬ್ಯಾಗ್‌ಗೆ ಬೇಕಾಗುವ ಜಾಗವನ್ನು ಹೊಂದಿದೆ. ಗ್ಯಾಜೆಟ್ ಚಾರ್ಜಿಂಗ್ ಆಯ್ಕೆಯು ಎರಡು ಟೈಪ್-ಸಿ, ಒಂದು ಯುಎಸ್‌ಬಿ, ಒಂದು 12-ವೋಲ್ಟ್ ಮತ್ತು ಮುಂಭಾಗದಲ್ಲಿ ವೈರ್‌ಲೆಸ್ ಚಾರ್ಜರ್‌ನೊಂದಿಗೆ ಬರುತ್ತದೆ. ಹಿಂದಿನ ಪ್ರಯಾಣಿಕರು ಎರಡು ಸೀಟ್-ಮೌಂಟೆಡ್ ಟೈಪ್ ಸಿ ಪೋರ್ಟ್‌ಗಳು ಮತ್ತು ಲ್ಯಾಪ್‌ಟಾಪ್ ಚಾರ್ಜರ್ ಅನ್ನು ಪಡೆಯುತ್ತಾರೆ.

    ಹಿಂದಿನ ಆಸನ

    Interiorಹಿಂದಿನ ಸೀಟುಗಳು 6 ಅಡಿ ಎತ್ತರದವರಿಗೆ ಆರಾಮವಾಗಿ ಕೂತು ಪ್ರಯಾಣಿಸಲು ಉತ್ತಮ ಸ್ಥಳಾವಕಾಶವನ್ನು ನೀಡುತ್ತವೆ. ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ನಲ್ಲಿ ಸಹ ಸಾಕಷ್ಟು ಜಾಗವಿದೆ ಇದೆ, ಆದರೆ,  ಮುಂಭಾಗದ ಸೀಟಿನ ಕೆಳಗೆ ಸಾಕಷ್ಟು ಜಾಗ ಇಲ್ಲದಿರುವುದರಿಂದ ನೀವು ನಿಮ್ಮ ಪಾದಗಳನ್ನು ಚಾಚಿ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸೀಟ್‌ಗೆ ಮತ್ತು ಕಾರಿನ ಫ್ಲೋರ್‌ನ ಮಧ್ಯೆ ಸಾಕಷ್ಟು ಜಾಗವಿಲ್ಲದ ಕಾರಣ, ತೊಡೆಯ ಕೆಳಭಾಗದ ಸಪೋರ್ಟ್‌ನ ಕೊರತೆಗೆ ಕಾರಣವಾಗುತ್ತದೆ. ಹಿಂಬದಿಯ ಸೀಟ್‌ನ್ನು ನೇರವಾಗಿ ಜೋಡಿಸಿರುವುದರಿಂದ ಲಾಂಗ್‌ ಟ್ರಿಪ್‌ ನಂತಹ ಪ್ರಯಾಣದಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ EV6 ಆರಾಮದಾಯಕವಿಲ್ಲ. ಆದಾಗಿಯೂ, ನಗರದೊಳಗಿನ ಪ್ರಯಾಣದಲ್ಲಿ ಐದು ವಿಮಾನಗಳಿದ್ದರೂ ಪ್ರಯಾಣಿಕರಿದ್ದರೂ ಸಹ ಪ್ರಯಾಣವು ಉತ್ತಮವಾಗಿರುತ್ತದೆ.

    ಬೂಟ್‌ನ ಸಾಮರ್ಥ್ಯ

    Boot Space

    EV6 520 ಲೀಟರ್ ನಷ್ಟು ಬೂಟ್ ನಲ್ಲಿ ಜಾಗವನ್ನು ಹೊಂದಿದ್ದು ಮತ್ತು ಹಿಂಬದಿಯ ಆಸನಗಳನ್ನು ಮಡಿಸುವ  ಮೂಲಕ ಇದನ್ನು ಇನ್ನಷ್ಟು ವಿಸ್ತರಿಸಬಹುದು.ಆದರೆ, EV ಯಲ್ಲಿನ ಈ ದೊಡ್ಡ ಬೂಟ್ ನಲ್ಲಿ ಒಂದು ಸ್ಪೇರ್‌ ವೀಲ್‌ಗೂ ಜಾಗ ನೀಡಬೇಕಾಗುತ್ತದೆ. ಅಲ್ಲದೆ, ಬೂಟ್ ನ ಫ್ಲೋರ್‌ ಮೇಲಿನ ಜಾಗವು ಚಾರ್ಜರ್ ಮತ್ತು ಮೊಬಿಲಿಟಿ ಕಿಟ್ ಗಾಗಿ (ಪಂಕ್ಚರ್ ಸಂದರ್ಭದಲ್ಲಿ ಬಳಸಲು) ಮೀಸಲಿಡಬೇಕಾಗುತ್ತದೆ.

    Boot Space

    ಇದರೊಂದಿಗೆ, ಮುಂಭಾಗದ ಬಾನೆಟ್ ನ ಅಡಿಯಲ್ಲಿ ಸಣ್ಣ ಸ್ಟೋರೇಜ್‌ಗಾಗಿ ಸ್ಥಳವನ್ನು ಪಡೆಯುತ್ತೀರಿ. ಆಲ್‌ ವೀಲ್‌ ಡ್ರೈವ್‌ ಆವೃತ್ತಿಯಲ್ಲಿ 20 ಲೀಟರ್ ಮತ್ತು  ಹಿಂಬದಿ ವೀಲ್‌ ಡ್ರೈವ್‌ ಮೊಡೆಲ್‌ನಲ್ಲಿ  52 ಲೀಟರ್ ನಷ್ಟು ಜಾಗವಿದೆ. ಸಣ್ಣ ಗ್ರೋಸರಿ ಚೀಲಗಳನ್ನು ಇಡಲು ಇದನ್ನು ಬಳಸಬಹುದು, ಆದರೆ ನೀವು ಪ್ರತಿ ಬಾರಿ ಒಳಗಿನಿಂದ ಬಾನೆಟ್ ಅನ್ನು ತೆರೆಯಬೇಕಾಗಿರುವುದರಿಂದ, 'ಫ್ರೂಟ್' ಅನ್ನು ಬಳಸಲು ನಾವು ಸಲಹೆ ನೀಡುವುದಿಲ್ಲ.

    ಕಾರ್ಯಕ್ಷಮತೆ

    Performance

    EV6 ಅನ್ನು ಚಾಲನೆ ಮಾಡಲು ಪ್ರಾರಂಭಿಸಿದಾಗ ಇದು ಯಾವುದೇ ಇತರ EV ಅನ್ನು ಚಾಲನೆ ಮಾಡುವಂತೆ ಭಾಸವಾಗುತ್ತದೆ. ಇದು ಶಾಂತ, ನಯವಾದ ಮತ್ತು ಶ್ರಮರಹಿತ ಡ್ರೈವ್ ಅನ್ನು ನೀಡುತ್ತದೆ. ಇದರಲ್ಲಿನ ಕ್ಯಾಬಿನ್ ನಿರೋಧನವು ಇತ್ತೀಚಿನ ದಿನಗಳಲ್ಲಿ ನಾವು ಅನುಭವಿಸಿದ ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ. ಇದು EV ಡ್ರೈವ್‌ನಲ್ಲಿ ವಾಹನದ ಒಳಗೆ ಶಾಂತತೆಯ ಅನುಭವ ನೀಡಲು ಮತ್ತಷ್ಟು ಸಹಾಯ ಮಾಡುತ್ತದೆ.

    Performance

    ಆದಾಗಿಯೂ, EV6 ಮತ್ತು ಇತರ ಸಾಮಾನ್ಯ EVಗಳ ನಡುವಿನ ವ್ಯತ್ಯಾಸವು ನೀವು ಥ್ರೊಟಲ್‌ಗೆ ಹೆಚ್ಚಿನ ಕೆಲಸ ನೀಡಲು ಪ್ರಾರಂಭಿಸಿದಾಗ ಕಾರ್ಯರೂಪಕ್ಕೆ ಬರುತ್ತದೆ. 'ಸ್ಪೋರ್ಟ್' ಮೋಡ್‌ನಲ್ಲಿ, ನೀವು ನೀಡುವ ಪ್ರತಿಯೊಂದು ತೀಕ್ಷ್ಣವಾದ ಕಮಾಂಡ್‌, ಎಷ್ಟೇ ಚಿಕ್ಕದಾಗಿದ್ದರೂ ಸಹ EV6 ಸುಗಮವಾಗಿ ಮುನ್ನಡೆಯುತ್ತದೆ. 40kmph ಅಥವಾ 140kmph ಆಗಿರಲಿ, ಹೆಚ್ಚುವರಿ ಥ್ರೊಟಲ್ ಯಾವಾಗಲೂ ಬಲವಾದ ಎಕ್ಸಿಲೆರೆಷನ್‌ಗೆ ಕಾರಣವಾಗುತ್ತದೆ.

    Performance

    EV6 ಯ ಟಾಪ್‌ ಸ್ಪೀಡ್‌ನ್ನು ವಿದ್ಯುನ್ಮಾನವಾಗಿ ಸೂಚಿಸಲಾದ 192kmphಗೆ ಸೀಮಿತಗೊಳಿಸಲಾಗಿದೆ ಮತ್ತು ನೊಯ್ಡಾದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ (BIC) ನಲ್ಲಿ  ನಾವು ಮಾಡಿದ ರೈಡ್‌ನಲ್ಲಿ ಪ್ರತಿ ಬಾರಿಯೂ ಟಾಪ್‌ ಸ್ಪೀಡ್‌ನ್ನು ತಲುಪಲು ಪ್ರಯತ್ನಿಸಿದ್ದೆವೆ. ಸೂಚಿಸಲಾದ ಟಾಪ್‌ ಸ್ಪೀಡ್‌ನ್ನು ನಮಗೆ ತಲುಪಲು ಕೇವಲ 20 ಸೆಕೆಂಡುಗಳನ್ನು ತೆಗೆದುಕೊಂಡಿತು, ಇದು ಅತ್ಯಂತ ತ್ವರಿತ ಮತ್ತು ಇದರ ವೇಗವರ್ಧನೆಯು ಜೀವನದ ನೀರಸ ದಿನಗಳಲ್ಲಿ ಪ್ರತಿ ಬಾರಿಯೂ ನಿಮ್ಮನ್ನು ಪ್ರಚೋದಿಸುವಷ್ಟು ಪ್ರಬಲವಾಗಿದೆ.

    Performance

    ವಿಭಿನ್ನವಾದ 'ಸ್ಪೋರ್ಟ್ ಬ್ರೇಕ್' ಮೋಡ್ ಕೂಡ ಇದೆ, ಇದು ಬ್ರೇಕ್‌ಗಳನ್ನು ಇನ್ನಷ್ಟು ಶಾರ್ಪ್‌ ಆಗಿ ಮಾಡುತ್ತದೆ ಮತ್ತು ಇದನ್ನು ರೇಸ್‌ಟ್ರಾಕ್‌ಗೆ ಬಿಡುವುದು ಉತ್ತಮವಾಗಿದೆ. ಇತರ ಡ್ರೈವ್ ಮೋಡ್‌ಗಳಿಗೆ (ಇಕೋ ಮತ್ತು ಡ್ರೈವ್) ಬದಲಿಸಿದಾಗ ಥ್ರೊಟಲ್ ಕಡಿಮೆ ಆಕ್ರಮಣಕಾರಿಯಾಗಿದೆ. ಇದು ಎಕ್ಸಿಲರೇಷನ್ ಪ್ರಕ್ರಿಯೆಯನ್ನು ಹೆಚ್ಚು ಪ್ರಗತಿಶೀಲವಾಗಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಅಲ್ಲದೆ BIC ಶಾರ್ಟ್ ಲೂಪ್‌ನಲ್ಲಿ ನಿರಂತರವಾಗಿ ಟಾಪ್‌ ಸ್ಪೀಡ್‌ನಲ್ಲಿ ಡ್ರೈವ್‌ ಮಾಡುತ್ತಾ 8 ರಿಂದ 10 ರೌಂಡ್‌ಗಳನ್ನು ಮಾಡಿದರೂ, ಬ್ಯಾಟರಿ ಅಷ್ಟೇನು ಹೆಚ್ಚಾಗಿ ವ್ಯಯಿಸದ ಕಾರಣ ಬ್ಯಾಟರಿಯ ಮೇಲೆ ಗೌರವ ಹೆಚ್ಚಾಯಿತು. ಈ ಸಮಯದಲ್ಲಿ ಬ್ಯಾಟರಿ ಸೂಚಕವು 90 ಪ್ರತಿಶತದಿಂದ ಕೇವಲ 60 ಪ್ರತಿಶತಕ್ಕೆ ಕಡಿಮೆಯಾಯಿತು.

    Performance

    ರೇಂಜ್‌ನ ಕುರಿತು ಹೇಳುವುದಾದರೆ, EV6 ಫುಲ್‌ ಚಾರ್ಜ್‌ ಮಾಡಿದಾಗ 500km ಗಿಂತ ಹೆಚ್ಚು ದೂರವನ್ನು ತಲುಪಬಲ್ಲದು ಎಂದು ಹೇಳಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಫುಲ್‌ ಚಾರ್ಜ್‌ ಮಾಡಿದಾಗ ಕನಿಷ್ಠ 400km ದೂರವನ್ನು ತಲುಪುತ್ತದೆ.  ಇದು ಖಂಡಿತವಾಗಿಯೂ ನಿಮ್ಮ ಎಲ್ಲಾ ರೇಂಜ್‌ ನ ಆತಂಕದ ಕುರಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, 350kW ಚಾರ್ಜರ್‌ನಲ್ಲಿ 10-80 ಶೇಕಡಾ ಚಾರ್ಜ್ ಅನ್ನು ಕೇವಲ 18 ನಿಮಿಷಗಳಲ್ಲಿ ಮಾಡಬಹುದು.

    Performance

    ಆದರೆ ಇಲ್ಲಿರುವ ಒಂದೇ ಸಮಸ್ಯೆಯೆಂದರೆ ಭಾರತದಲ್ಲಿ ಈ ಸೂಪರ್‌ಫಾಸ್ಟ್ ಚಾರ್ಜರ್‌ಗಳಿಲ್ಲ. ನೀವು 50kW ಚಾರ್ಜರ್ ಅನ್ನು ಹುಡುಕುವಷ್ಟು ಅದೃಷ್ಟವಂತರಾಗಿದ್ದರೆ, ಇದರಲ್ಲಿ 10-80 ಪ್ರತಿಶತ ಚಾರ್ಜ್ ಮಾಡಲು 1 ಗಂಟೆ 13 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯ 25kW ಮತ್ತು 15kW ಚಾರ್ಜರ್‌ಗಳು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು 0 ರಿಂದ 100 ಪ್ರತಿಶತದವರೆಗೆ ಹೋಮ್ ಸಾಕೆಟ್ ಮೂಲಕ ಚಾರ್ಜ್ ಮಾಡಲು 36 ಗಂಟೆಗಳು ಬೇಕಾಗುತ್ತದೆ.

    ರೈಡ್ ಅಂಡ್ ಹ್ಯಾಂಡಲಿಂಗ್

    Ride and Handling

     ಇದರಲ್ಲಿರುವ ಆಲ್‌-ವೀಲ್‌-ಡ್ರೈವ್‌ ಸೆಟಪ್, ಕಾರು ಹೆಚ್ಚು ಎಳೆತ ಅಥವಾ ವೇಗವರ್ಧನೆಯ ಅಗತ್ಯವಿದೆ ಎಂದು ನಿರ್ಧರಿಸುವವರೆಗೆ ಇದರ ಹಿಂದಿನ ಚಕ್ರ ಚಾಲನೆಯಲ್ಲಿ ಇರುತ್ತದೆ. ಮೃದುವಾದ ಟ್ರಾಕ್ಷನ್‌ ಕಂಟ್ರೋಲ್‌ಗೆ ಇದನ್ನು ಸೇರಿಸಿ, ಮತ್ತು ನೀವು ತಿರುವುಗಳಲ್ಲಿ ಸ್ವಲ್ಪ ಮೋಜು ಮಾಡಬಹುದು. ತೀವ್ರವಾಗಿ ತಿರುಗಿ ಮತ್ತು ಎಳೆತದ ವೇಗಕ್ಕೆ ಅಡ್ಡಿಪಡಿಸದೆಯೇ ಹಿಂಬದಿಯನ್ನು ಸ್ವಲ್ಪ ಜಾರುವ ಮೂಲಕ EV6 ನಿಮ್ಮನ್ನು ಸ್ವಾಗತಿಸುತ್ತದೆ.

    Ride and Handling

    ಸ್ಟೀರಿಂಗ್ ಉತ್ತಮ ತೂಕವನ್ನು ಹೊಂದಿದೆ ಮತ್ತು ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಕಾರಿನ ದೊಡ್ಡದಾದ ಗಾತ್ರವು ಅನಪೇಕ್ಷಿತ ತೂಕ ವರ್ಗಾವಣೆಗೆ ಕಾರಣವಾಗುತ್ತದೆ, ಇದು ನಿಮ್ಮನ್ನು ಸ್ವಲ್ಪ ನಿಧಾನವಾಗಿ ಕಾರ್ನರ್‌ನಲ್ಲಿ ಎಳೆಯುವಂತೆ ಮಾಡುತ್ತದೆ. ಆದರೆ ಇದು ಖಂಡಿತವಾಗಿಯೂ ಎತ್ತರದ ಪ್ರದೇಶಗಳಿಗೆ ಅಥವಾ ಹಿಲ್‌ ಸ್ಟೇಷನ್‌ಗಳಿಗೆ ಡ್ರೈವ್‌ ಮಾಡಲು ಮೋಜಿನ ಕಾರ್ ಆಗಿರುತ್ತದೆ.

    Ride and Handling

    ನಾವು ಇದನ್ನು F1 ರೇಸ್ ಟ್ರ್ಯಾಕ್‌ನಲ್ಲಿ ಡ್ರೈವ್‌ ಮಾಡಿರುವುದರಿಂದ ಇದರ ರೈಡಿಂಗ್‌ ಗುಣಮಟ್ಟವನ್ನು ನಿರ್ಧರಿಸಲಾಗುವುದಿಲ್ಲ. ಆದ್ದರಿಂದ ನಮ್ಮ ಸಾರ್ವಜನಿಕ ರಸ್ತೆಗಳಲ್ಲಿ EV6 ಅನ್ನು ಓಡಿಸುವವರೆಗೆ ನಾವು ನಮ್ಮ ಕಾಮೆಂಟ್‌ಗಳನ್ನು ಕಾಯ್ದಿರಿಸುತ್ತೇವೆ. ನಾವು ನಿಮಗೆ ಹೇಳುವುದೇನೆಂದರೆ, ಕಾರು ಹೆಚ್ಚಿನ ವೇಗದಲ್ಲಿ ಸರಿಯಾಗಿ ಸ್ಥಿರವಾಗಿರುತ್ತದೆ ಮತ್ತು ಟ್ರ್ಯಾಕ್‌ನಲ್ಲಿನ ಕರ್ಬ್‌ಗಳ ಮೇಲೆ ಹೋಗುತ್ತಿದೆ, ಸವಾರಿ ಎಂದಿಗೂ ಅಸ್ಥಿರ ಅಥವಾ ಒಳನುಗ್ಗುವಂತೆ ನಿಮಗೆ ಅನಿಸುವುದಿಲ್ಲ.

    ರೂಪಾಂತರಗಳು

    Variants

    EV6 ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ GT ಲೈನ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಸಿಂಗಲ್ ರಿಯರ್ ಮೋಟಾರ್, ಹಿಂಬದಿ-ಚಕ್ರ ಚಾಲನೆಯ ಆವೃತ್ತಿಯು 229PS ಮತ್ತು 350Nm ಟಾರ್ಕ್ ಅನ್ನು  ಉತ್ಪಾದಿಸುತ್ತದೆ ಮತ್ತು 100kmph ಅನ್ನು ಪಡೆಯಲು 7.3s ತೆಗೆದುಕೊಳ್ಳುತ್ತದೆ. ನಾವು ಚಾಲನೆ ಮಾಡಿದ 325PS ಡ್ಯುಯಲ್ ಮೋಟಾರ್, 605Nm ಟಾರ್ಕ್ ಹೊಂದಿರುವ ಆಲ್-ವೀಲ್ ಡ್ರೈವ್ ಕಾರ್ ಮತ್ತು ಇದು ಕೇವಲ 5.2 ಸೆಕೆಂಡುಗಳಲ್ಲಿ 100kmph ಗೆ ತಲುಪುತ್ತದೆ.

    ವರ್ಡಿಕ್ಟ್

    Verdict

    ಬೆಲೆಯು ಸುಮಾರು 70 ಲಕ್ಷ ರೂಪಾಯಿ ಗಳಾಗಿರಬಹುದೆಂದು ನಿರೀಕ್ಷಿಸಲಾಗಿದೆ, ಈ ಮೂಲಕ Kia EV6 ದುಬಾರಿ ಖರೀದಿಯಾಗಲಿದೆ. ದುಬಾರಿಯಾಗಿರುವುದರಿಂದ ಇದು ನಿಸ್ಸಂಶಯವಾಗಿ ಅನೇಕ ಭಾರತೀಯರಿಗೆ ತಲುಪುವುದಿಲ್ಲ ಮತ್ತು ಇದಕ್ಕೆ ಈ ವಿಭಾಗದಲ್ಲಿ ವೋಲ್ವೋ XC40 ರೀಚಾರ್ಜ್‌ನಂತಹ ಐಷಾರಾಮಿ ಕಾರು ಸ್ಪರ್ಧೆ ನೀಡುತ್ತದೆ.

    Verdict

    EV6 ನ ಬಗ್ಗೆ ಕಾರು ಪ್ರೀಯರಿಗೆ ಇರುವ ಉತ್ಸಾಹವೇ ಇದರ ಪ್ಲಸ್‌ ಪಾಯಿಂಟ್‌. ಅದರ ನೋಟ, ಲೈಟಿಂಗ್‌ಗಳು, ತಂತ್ರಜ್ಞಾನ, ವೈಶಿಷ್ಟ್ಯಗಳು ಅಥವಾ ಚಾಲನಾ ಅನುಭವವೇ ಆಗಿರಲಿ, ಈ  EV ನಿಸ್ಸಂಶಯವಾಗಿ ಅತ್ಯಾಕರ್ಷಕ ಕಾರು ಆಗಿದೆ. ಜೊತೆಗೆ, ಕೇವಲ 100 ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರೊಂದಿಗೆ, ವಿಶೇಷತೆಯನ್ನು ಪ್ಯಾಕೇಜ್‌ನಲ್ಲಿ ಜೋಡಿಸಲಾಗಿದೆ. ಮತ್ತು ಈ ಎಲ್ಲಾ ಅಂಶವನ್ನು ಗಮನಿಸುವಾಗ ಇದಕ್ಕೆ ಭಾರತದಲ್ಲಿ ಸ್ಪರ್ಧೆಯನ್ನು ನೀಡಲು ಸಾಧ್ಯವಾಗದೇ ಇರಬಹುದು.

    ಕಿಯಾ ಇವಿ6 2022-2025

    ನಾವು ಇಷ್ಟಪಡುವ ವಿಷಯಗಳು

    • ಓಡಿಸಲು ಮೋಜು
    • ಅತ್ಯುತ್ತಮ ಧ್ವನಿ ನಿರೋಧನ
    • ತಂತ್ರಜ್ಞಾನದಿಂದ ತುಂಬಿದೆ
    View More

    ನಾವು ಇಷ್ಟಪಡದ ವಿಷಯಗಳು

    • ಇದು ಸಂಪೂರ್ಣ ಆಮದು ಆಗಿರುವುದರಿಂದ ದುಬಾರಿಯಾಗಿದೆ
    • ಹಿಂದಿನ ಸೀಟಿನ ಸೌಕರ್ಯದಲ್ಲಿ ರಾಜಿ ಮಾಡಿಕೊಂಡಿದ್ದಾರೆ

    ಕಿಯಾ ಇವಿ6 2022-2025 car news

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Kia Syros Review: ಸೂಪರ್‌ ವಿಶೇಷ ಮತ್ತು ಅತ್ಯಂತ ಪ್ರಾಯೋಗಿಕ
      Kia Syros Review: ಸೂಪರ್‌ ವಿಶೇಷ ಮತ್ತು ಅತ್ಯಂತ ಪ್ರಾಯೋಗಿಕ

      ಸಿರೋಸ್‌ ವಿನ್ಯಾಸ ಮತ್ತು ಫಂಕ್ಷನ್‌ನ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ!

      By arunJan 30, 2025
    • Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?
      Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?

      ಕಿಯಾ ಕಾರ್ನಿವಲ್ ಈಗ ಹಿಂದಿನ ಜನರೇಶನ್‌ಗಿಂತ ದುಪ್ಪಟ್ಟು ಬೆಲೆಯನ್ನು ಹೊಂದಿದೆ. ಆದರೂ ಮೌಲ್ಯಯುತವಾಗಿದೆಯೇ?

      By nabeelNov 19, 2024
    • Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌
      Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌

      ನಮ್ಮೊಂದಿಗೆ ದೀರ್ಘಾವಧಿಯಾಗಿ ಕಳೆದ ಕಿಯಾ ಸೆಲ್ಟೋಸ್ ತನ್ನ ಮೊದಲ ರಸ್ತೆ ಪ್ರವಾಸವನ್ನು ಅಲಿಬಾಗ್‌ಗೆ ಭೇಟಿ ನೀಡಿತು 

      By nabeelMay 09, 2024
    • ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ
      ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ

      ಬಹಳ ಕಾಲದ ವರೆಗೆ ಪ್ರೀಮಿಯಂ MPV ಗಳ ಮೈಲಿಗಲ್ಲು ಎಂದರೆ ಅದು ಟೊಯೋಟಾ ಇನ್ನೋವಾ ಎನ್ನುವಂತಿತ್ತು, ಈಗ ಅದು ಬದಲಾಗಲಿದ

      By nabeelFeb 21, 2020

    ಕಿಯಾ ಇವಿ6 2022-2025 ಬಳಕೆದಾರರ ವಿಮರ್ಶೆಗಳು

    4.4/5
    ಆಧಾರಿತ123 ಬಳಕೆದಾರರ ವಿಮರ್ಶೆಗಳು
    ಜನಪ್ರಿಯ Mentions
    • All (123)
    • Looks (42)
    • Comfort (45)
    • Mileage (14)
    • Engine (6)
    • Interior (36)
    • Space (6)
    • Price (19)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • R
      rehman on Feb 02, 2025
      4.8
      Electric Car
      Wonderful car in a electric car I love it 😀 wow. Excellent interior design exterior design is also wow great to drive 🚗. Very nice 👍 kia EV6 is nice
      ಮತ್ತಷ್ಟು ಓದು
    • V
      vasim akram on Jan 27, 2025
      5
      Ev6 Is Best
      One of the best car in performance good interior and exterior and well built quality average maintenance charges good for average family size service centre available easily in cities. good
      ಮತ್ತಷ್ಟು ಓದು
    • P
      pritharth bhattacharjee on Jan 26, 2025
      4.5
      The Kia Ev6 Is An Awsome Car
      The Kia ev6 is an impressive electric vehicle, offering sleek design, excellent performance, and a smooth ride. Its spacious interior, fast charging and cutting edge tech make it a smart choice.
      ಮತ್ತಷ್ಟು ಓದು
    • D
      dhiraj kumar on Jan 02, 2025
      5
      The Car Look Is Very Impressive
      The car look is very impressive and the fast charging in this very impressive it can full charge battery in 73 minutes and it has too much power which is very good
      ಮತ್ತಷ್ಟು ಓದು
      2
    • D
      daksh prajapati on Nov 28, 2024
      5
      Kiya TV6 Is A Advance Car
      Kiya TV6 is a excellent choice of 2024 for looking a premium electric car with impressive rate features and more things however it is essential for Tu consider high price point and limited charge infrastructure before making a decision.
      ಮತ್ತಷ್ಟು ಓದು
    • ಎಲ್ಲಾ ಇವಿ6 2022-2025 ವಿರ್ಮಶೆಗಳು ವೀಕ್ಷಿಸಿ

    ಇವಿ6 2022-2025 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಅಪ್ಡೇಟ್: ಕಿಯಾ EV6 ಬೆಲೆಗಳನ್ನು ಹೆಚ್ಚಿಸಿದೆ. ಇದೀಗ 1 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ.

    ಬೆಲೆ: Kia EV6ನ ಬೆಲೆ ಈಗ ರೂ 60.95 ಲಕ್ಷ ಮತ್ತು ರೂ 65.95 ಲಕ್ಷ (ಎಕ್ಸ್ ಶೋ ರೂಂ) ನಡುವೆ ಇದೆ.

    ವೆರಿಯೆಂಟ್: Kia EV6 ಅನ್ನು ಒಂದೇ ಟಾಪ್-ಆಫ್-ಲೈನ್ GT ಆಯ್ಕೆಯಲ್ಲಿ ಪಡೆಯಬಹುದು. ಇದು ಎರಡು ವೆರಿಯೆಂಟ್ ಗಳನ್ನು ಹೊಂದಿದೆ: GT ಲೈನ್ RWD ಮತ್ತು GT ಲೈನ್ AWD.

    ಆಸನ ಸಾಮರ್ಥ್ಯ: EV6 ಐದು ಪ್ರಯಾಣಿಕರವರೆಗೆ ಕುಳಿತುಕೊಳ್ಳಬಹುದು.

    ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಇಂಡಿಯಾ-ಸ್ಪೆಕ್ EV6 77.4kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ: ಸಿಂಗಲ್ ಮೋಟರ್ ರಿಯರ್-ವೀಲ್ ಡ್ರೈವ್ (229PS ಮತ್ತು 350Nm ತಯಾರಿಸುವುದು), ಮತ್ತು ಡ್ಯುಯಲ್ ಮೋಟಾರ್ ಆಲ್-ವೀಲ್ ಡ್ರೈವ್ ( 325PS ಮತ್ತು 605Nm) ಸೆಟಪ್. EV6 708km ನಷ್ಟು ARAI-ಹಕ್ಕು ವ್ಯಾಪ್ತಿಯನ್ನು ಹೊಂದಿದೆ.

    ಚಾರ್ಜಿಂಗ್: ವೇಗದ ಚಾರ್ಜರ್ ಅನ್ನು ಬಳಸಿಕೊಂಡು EV6 ಬ್ಯಾಟರಿಯನ್ನು 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. 50kW ಚಾರ್ಜರ್ ಅನ್ನು ಬಳಸಿಕೊಂಡು ಶೇಕಡಾ 10 ರಿಂದ 80 ರಷ್ಟು ರೀಫಿಲ್ ಮಾಡಲು 73 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಹೋಮ್ ಚಾರ್ಜರ್ ಚಾರ್ಜ್ ಆಗಲು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

    ವೈಶಿಷ್ಟ್ಯಗಳು: ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ಗಾಗಿ ಡ್ಯುಯಲ್ ಕರ್ವ್ಡ್ 12.3-ಇಂಚಿನ ಡಿಸ್ಪ್ಲೇಗಳೊಂದಿಗೆ ಕಿಯಾ EV6 ಅನ್ನು ಸಜ್ಜುಗೊಳಿಸಲಾಗಿದೆ. 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮತ್ತು ಬಟನ್ ಚಾಲಿತ ಮುಂಭಾಗದ ಸೀಟ್‌ಗಳು ಮತ್ತು ಸನ್‌ರೂಫ್ (ಪನೋರಮಿಕ್ ಯೂನಿಟ್ ಅಲ್ಲ)

    ಸುರಕ್ಷತೆ: ಎಂಟು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ADAS ಕಾರ್ಯಚಟುವಟಿಕೆಗಳಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.

    ಪ್ರತಿಸ್ಪರ್ಧಿಗಳು: Kia ನ ಎಲೆಕ್ಟ್ರಿಕ್ ಕ್ರಾಸ್ಒವರ್ ಹುಂಡೈ Ioniq 5, Skoda Enyaq iV, BMW i4 ಮತ್ತು Volvo XC40 ರೀಚಾರ್ಜ್‌ಗೆ ಪ್ರತಿಸ್ಪರ್ಧಿಯಾಗಿದೆ.

    ಕಿಯಾ ಇವಿ6 2022-2025 ಚಿತ್ರಗಳು

    • Kia EV6 2022-2025 Front Left Side Image
    • Kia EV6 2022-2025 Side View (Left)  Image
    • Kia EV6 2022-2025 Front View Image
    • Kia EV6 2022-2025 Top View Image
    • Kia EV6 2022-2025 Grille Image
    • Kia EV6 2022-2025 Headlight Image
    • Kia EV6 2022-2025 Taillight Image
    • Kia EV6 2022-2025 Side Mirror (Body) Image
    space Image

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌708 km

    ಪ್ರಶ್ನೆಗಳು & ಉತ್ತರಗಳು

    DevyaniSharma asked on 16 Nov 2023
    Q ) What are the offers available in Kia EV6?
    By CarDekho Experts on 16 Nov 2023

    A ) Offers and discounts are provided by the brand or the dealership and may vary de...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Abhijeet asked on 12 Oct 2023
    Q ) What is the wheel base of Kia EV6?
    By CarDekho Experts on 12 Oct 2023

    A ) The wheel base of Kia EV6 is 2900 mm.

    Reply on th IS answerಎಲ್ಲಾ Answer ವೀಕ್ಷಿಸಿ
    Prakash asked on 26 Sep 2023
    Q ) What are the safety features of the Kia EV6?
    By CarDekho Experts on 26 Sep 2023

    A ) On the safety front, it gets eight airbags, electronic stability control (ESC) a...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Abhijeet asked on 15 Sep 2023
    Q ) What is the range of the Kia EV6?
    By CarDekho Experts on 15 Sep 2023

    A ) Kia’s electric crossover locks horns with the Hyundai Ioniq 5, Skoda Enyaq iV, B...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Abhijeet asked on 23 Apr 2023
    Q ) Is there any offer on Kia EV6?
    By CarDekho Experts on 23 Apr 2023

    A ) Offers and discounts are provided by the brand or the dealership and may vary de...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ

    ಟ್ರೆಂಡಿಂಗ್ ಕಿಯಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    view ಮಾರ್ಚ್‌ offer
    space Image
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    ×
    We need your ನಗರ to customize your experience