• English
  • Login / Register

ಫಾಸ್ಟ್‌ ಚಾರ್ಜರ್‌ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಎಷ್ಟು ಸಮಯ ಬೇಕು ?

ಕಿಯಾ ಇವಿ6 ಗಾಗಿ rohit ಮೂಲಕ ನವೆಂಬರ್ 23, 2023 05:40 pm ರಂದು ಮಾರ್ಪಡಿಸಲಾಗಿದೆ

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

DC ಫಾಸ್ಟ್‌ ಚಾರ್ಜರ್‌ ಬಳಸಿ ಕಿಯಾ EV6 ಬ್ಯಾಟರಿ ಪ್ಯಾಕ್‌ ಅನ್ನು 0ಯಿಂದ 50 ಶೇಕಡಾದ ತನಕ ಚಾರ್ಜ್‌ ಮಾಡಲು ಕೇವಲ 20 ನಿಮಿಷಗಳು ಸಾಕು

Kia EV6 charging

ಕಿಯಾ EV6 ಕಾರು ಭಾರತದಲ್ಲಿ ಈ ವಾಹನ ತಯಾರಿಕಾ ಸಂಸ್ಥೆಯ ಮೊದಲ ಎಲೆಕ್ಟ್ರಿಕ್‌ ಕಾರು ಎನಿಸಿದ್ದು, ಇದನ್ನು 2022ರ ಜೂನ್‌ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇಲ್ಲಿ ಇದು 77.4 kWh ಬ್ಯಾಟರಿ ಪ್ಯಾಕ್‌ ಹಾಗೂ ಈ ಕೆಳಗಿನ ಪವರ್‌ ಟ್ರೇನ್‌ ಆಯ್ಕೆಗಳನ್ನು ಹೊಂದಿದೆ: ಸಿಂಗಲ್‌ ಮೋಟರ್‌ ರಿಯರ್‌ ವೀಲ್‌ ಡ್ರೈವ್ (229 PS/350 Nm), ಮತ್ತು ಡ್ಯುವಲ್‌ ಮೋಟರ್‌ ಆಲ್‌ ವೀಲ್‌ ಡ್ರೈವ್ (325 PS/605 Nm) ಸೆಟಪ್. EV6‌ ಕಾರು ARAI ಹೇಳಿರುವಂತೆ 708 km ಶ್ರೇಣಿಯನ್ನು ಹೊಂದಿದೆ. ಇತ್ತೀಚೆಗೆ, ನಮ್ಮ ಬಳಿ ಟಾಪ್‌ ಸ್ಪೆಕ್‌ ಆಲ್‌ ವೀಲ್‌ ಡ್ರೈವ್‌ EV6 ನಮ್ಮಲ್ಲಿ ಇತ್ತು. DC ಫಾಸ್ಟ್‌ ಚಾರ್ಜರ್‌ ಬಳಸಿ ಇದು 0 ಯಿಂದ 100 ಶೇಕಡಾಕ್ಕೆ ತಲುಪಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ನಾವು ದಾಖಲಿಸಿದ್ದೇವೆ.

ಚಾರ್ಜಿಂಗ್‌ ಸಮಯ

ನಮ್ಮ ಪರೀಕ್ಷೆಗಾಗಿ, ಬ್ಯಾಟರಿಯು ಸರಿಸುಮಾರು 0 ಶೇಕಡಾ ಇರುವಾಗ ನಾವು EV6 ಅನ್ನು 120kW DC ಫಾಸ್ಟ್‌ ಚಾರ್ಜರ್‌ ನೊಂದಿಗೆ ಸಂಪರ್ಕಿಸಿದ್ದೆವು. ಈ ಪ್ರೀಮಿಯಂ EV ವಾಹನವನ್ನು ಸಂಪೂರ್ಣವಾಗಿ ರೀಚಾರ್ಜ್‌ ಮಾಡಲು ಬೇಕಾಗುವ ಸಮಯದ ವಿವರ ಇಲ್ಲಿದೆ:

 

ಚಾರ್ಜಿಂಗ್‌ ಶೇಕಡಾ

ಚಾರ್ಜಿಂಗ್‌ ದರ

ಸಮಯ

50 ಶೇಕಡಾದ ತನಕ

118 kW - 119 kW

20 ನಿಮಿಷಗಳು

51 - 55 ಶೇಕಡಾ

118 kW - 119 kW

2 ನಿಮಿಷಗಳು

56 - 60 ಶೇಕಡಾ

118 kW - 119 kW

3 ನಿಮಿಷಗಳು

61 - 65 ಶೇಕಡಾ

118 kW - 119 kW

3 ನಿಮಿಷಗಳು

66 - 70 ಶೇಕಡಾ

118 kW - 119 kW

2 ನಿಮಿಷಗಳು

71 - 75 ಶೇಕಡಾ

118 kW - 119 kW

2 ನಿಮಿಷಗಳು

76 - 80 ಶೇಕಡಾ

118 kW - 119 kW

2 ನಿಮಿಷಗಳು

81 - 85 ಶೇಕಡಾ

118 kW

5 ನಿಮಿಷಗಳು

86 - 90 ಶೇಕಡಾ

60 kW

4 ನಿಮಿಷಗಳು

91 - 95 ಶೇಕಡಾ

35 kW - 40 kW

7 ನಿಮಿಷಗಳು

96 - 98 ಶೇಕಡಾ

29 kW - 30 kW

5 ನಿಮಿಷಗಳು

99 - 100 ಶೇಕಡಾ

22 kW

5 ನಿಮಿಷಗಳು

ಮುಖ್ಯಾಂಶಗಳು

  • ಶೂನ್ಯದಿಂದ ಸಂಪೂರ್ಣವಾಗಿ ಚಾರ್ಜ್‌ ಆಗಲು ಕಿಯಾ EV6 ವಾಹನಕ್ಕೆ ನಿಖರವಾಗಿ ಒಂದು ಗಂಟೆ ಬೇಕು.
  • ಬ್ಯಾಟರಿಯ ಮೊದಲಾರ್ಧವು ವೇಗವಾಗಿ ಚಾರ್ಜ್‌ ಆಯಿತು. ಆದರೆ ದ್ವಿತೀಯಾರ್ಧವು ಚಾರ್ಜ್‌ ಆಗಲು ಸರಿಸುಮಾರು ದುಪ್ಪಟ್ಟು ಸಮಯವನ್ನು ತೆಗೆದುಕೊಂಡಿತು. ಒಟ್ಟಾರೆಯಾಗಿ 0-90 ಶೇಕಡಾದಷ್ಟು ಚಾರ್ಜ್‌ ಆಗಲು 45 ನಿಮಿಷಗಳನ್ನು ತೆಗೆದುಕೊಂಡಿದ್ದು 1 ಶೇಕಡಾ ಚಾರ್ಜ್‌ ಆಗಲು ಸರಾಸರಿ ಅರ್ಧ ನಿಮಿಷ ತೆಗೆದುಕೊಂಡಿತು.
  • ಒಂದು ಹಂತದಲ್ಲಿ ಚಾರ್ಜಿಂಗ್‌ ದರವು 118 kW ನಿಂದ 7 kW ಗೆ ಇಳಿಯಿತು. ಕೆಲವೇ ನಿಮಿಷಗಳಲ್ಲಿ ಇದು ಚಾರ್ಜಿಂಗ್ ವೇಗವನ್ನು ಮರಳಿ ಪಡೆಯಿತು.

  • ಬ್ಯಾಟರಿಯು 85 ಶೇಕಡಾಕ್ಕೆ ತಲುಪಿದಾಗ ಚಾರ್ಜಿಂಗ್‌ ದರವು  60 kW ಗೆ ಕುಗ್ಗಿತು. ನಂತರ ಪ್ರತಿ 5 ಸೆಕೆಂಡುಗಳಲ್ಲಿ ಇಳಿಯುತ್ತಲೇ ಹೋಯಿತು ಹಾಗೂ ದಾಖಲಿತ ಕನಿಷ್ಠ ದರವು 41 kW ಆಗಿತ್ತು.
  • ಇದು 90 ಶೇಕಡಾಕ್ಕೆ ತಲುಪಿದಾಗ ಚಾರ್ಜಿಂಗ್‌ ದರವು  35 kW ನಿಂದ 40 kW ಕ್ಕೆ ಇಳಿಯಿತು ಹಾಗೂ 93 ಶೇಕಡಾದಲ್ಲಿ 29 kW ಗೆ ತಲುಪಿತು.
  • ಕೊನೆಯ 5 ಶೇಕಡಾದಷ್ಟು ಚಾರ್ಜ್‌ 10 ನಿಮಿಷಗಳಲ್ಲಿ ಪೂರ್ಣಗೊಂಡಿತು. ಏಕೆಂದರೆ 95ರಿಂದ 98 ಶೇಕಡಾದಷ್ಟು ಮಟ್ಟದಲ್ಲಿ ಇದು 22 kW ಆಗಿದ್ದರೆ 99ರಿಂದ 100 ಶೇಕಡಾವು 29 kW/30 kW ದರದಲ್ಲಿತ್ತು.

ಚಾರ್ಜಿಂಗ್‌ ದರವು ಕುಸಿಯಲು ಕಾರಣ

ನಿಮ್ಮ EV ಬ್ಯಾಟರಿ ಚಾರ್ಜ್‌ ದರವು 80 ಶೇಕಡಾಕ್ಕೆ ತಲುಪಿದಾಗ ಚಾರ್ಜಿಂಗ್‌ ದರವು ಕುಗ್ಗುತ್ತದೆ.  ನಾವು ಗಮನಿಸಿದ ಅತ್ಯಂತ ಸಾಮಾನ್ಯ ಅಂಶವೆಂದರೆ, ನಾವು DC ಫಾಸ್ಟ್‌ ಚಾರ್ಜರ್‌ ಬಳಸಿದಾಗ ಬ್ಯಾಟರಿಯು ಬಿಸಿಯಾಗುತ್ತದೆ ಹಾಗೂ ಬ್ಯಾಟರಿಯ ದೀರ್ಘ ಬಾಳಿಕೆಯ ಮೇಲೆ ಇದರ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಬ್ಯಾಟರಿಯ ಚಾರ್ಜಿಂಗ್‌ ವೇಗವನ್ನು ತಗ್ಗಿಸಿದರೆ ಬಿಸಿಯಾಗುವುನ್ನು ತಪ್ಪಿಸಿ ಬ್ಯಾಟರಿಯ ಆಯುಷ್ಯವನ್ನು ವೃದ್ಧಿಸಬಹುದು. ಬ್ಯಾಟರಿ ಪ್ಯಾಕ್‌ ಎಂದರೆ ಒಟ್ಟಿಗೆ ಇರಿಸಿದ ಕೋಶಗಳ ರಾಶಿಯಂತೆ.  ಕಡಿಮೆ ದರದಲ್ಲಿ ಚಾರ್ಜ್‌ ಮಾಡಿದರೆ ಈ ಕೋಶಗಳು ಏಕಪ್ರಕಾರದಲ್ಲಿ ಚಾರ್ಜ್‌ ಆಗುತ್ತವೆ.

ಇದನ್ನು ಸಹ ಓದಿರಿ: ಎಲೆಕ್ಟ್ರಿಕ್‌ ಕಾರ್‌ ತಯಾರಕರು 0-80% ಚಾರ್ಜಿಂಗ್‌ ಸಮಯವನ್ನು ಮಾತ್ರವೇ ನೀಡುತ್ತಾರೆ ಏಕೆ? ವಿವರಣೆ ಇಲ್ಲಿದೆ.

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ EV ವಾಹನವು ರೂ. 60.95 ರಿಂದ ರೂ. 65.95 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ). ಇದು ಅತ್ಯಂತ ಅಗ್ಗದ ಹ್ಯುಂಡೈ ಅಯೋನಿಕ್ 5 ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿದ್ದರೂ, ತನ್ನ ಬೆಲೆಯ ಕಾರಣ BMW i4ವೋಲ್ವೊ XC40 ರೀಚಾರ್ಜ್ ಮತ್ತು ಮುಂಬರುವ  ಸ್ಕೋಡಾ ಎನ್ಯಾಕ್‌ iV ಕಾರುಗಳೊಂದಿಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ EV6 ಅಟೋಮ್ಯಾಟಿಕ್

was this article helpful ?

Write your Comment on Kia ಇವಿ6

explore ಇನ್ನಷ್ಟು on ಕಿಯಾ ಇವಿ6

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience