ಭಾರತದಲ್ಲಿ 1,100 ಕ್ಕೂ ಹೆಚ್ಚು ಕಿಯಾ EV6 ಯೂನಿಟ್ ವಾಪಾಸ್: ಏನಾಯಿತು? ಇಲ್ಲಿದೆ ವಿವರ!
ಕಿಯಾ ಇವಿ6 ಗಾಗಿ samarth ಮೂಲಕ ಜುಲೈ 16, 2024 06:29 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿನ ಸಂಭಾವ್ಯ ಸಮಸ್ಯೆಯಿಂದಾಗಿ ಯೂನಿಟ್ ಗಳನ್ನು ವಾಪಾಸ್ ಪಡೆಯಲಾಗಿದೆ
-
ಮಾರ್ಚ್ 3, 2022 ರಿಂದ ಏಪ್ರಿಲ್ 14, 2023 ನಡುವೆ ತಯಾರಿಸಲಾದ ಯೂನಿಟ್ ಗಳನ್ನು ವಾಪಾಸ್ ಪಡೆಯಲಾಗಿದೆ
-
ICCUನಲ್ಲಿನ ಸಮಸ್ಯೆಯಿಂದಾಗಿ ಸೆಕೆಂಡರಿ ಬ್ಯಾಟರಿಯು ಡಿಸ್ಚಾರ್ಜ್ ಆಗಬಹುದಾದ ಕಾರಣ ಯೂನಿಟ್ ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ
-
EV6 ಮಾಲೀಕರು ತಮ್ಮ ಕಾರನ್ನು ಹತ್ತಿರದ ಅಧಿಕೃತ ಕಿಯಾ ವರ್ಕ್ ಶಾಪ್ ಗೆ ತೆಗೆದುಕೊಂಡು ಹೋಗಿ ಪರಿಶೀಲಿಸಬಹುದು ಮತ್ತು ದೋಷಯುಕ್ತ ಭಾಗವನ್ನು ಬದಲಾಯಿಸಬಹುದು.
-
ಇದು 77.4 kWh ಬ್ಯಾಟರಿಯನ್ನು ಹೊಂದಿದೆ ಮತ್ತು RWD ಮತ್ತು AWD ಎರಡೂ ಆಯ್ಕೆಗಳಲ್ಲಿ ಬರುತ್ತದೆ.
-
EV6 ಬೆಲೆಯು ರೂ 60.97 ಲಕ್ಷದಿಂದ ರೂ 65.97 ಲಕ್ಷದವರೆಗೆ (ಎಕ್ಸ್ ಶೋರೂಂ, ದೆಹಲಿ) ಇದೆ.
EV ಯ ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯುನಿಟ್ (ICCU) ನಲ್ಲಿ ಸಂಭಾವ್ಯ ಸಮಸ್ಯೆಯಿಂದಾಗಿ ಕಿಯಾ EV6 ಅನ್ನು ಭಾರತದಲ್ಲಿ ವಾಪಾಸ್ ಪಡೆಯಲಾಗಿದೆ. ಮಾರ್ಚ್ 3, 2022 ಮತ್ತು ಏಪ್ರಿಲ್ 14, 2023 ರ ನಡುವೆ ತಯಾರಾದ 1,138 ಕಾರುಗಳನ್ನು ರೀಕಾಲ್ ಮಾಡಲಾಗಿದೆ. ಹ್ಯುಂಡೈ ಐಯೋನಿಕ್ 5 ಅದೇ ಸಮಸ್ಯೆಯನ್ನು ಎದುರಿಸಿದ ಸ್ವಲ್ಪ ಸಮಯದಲ್ಲೇ EV6 ಅನ್ನು ಕೂಡ ವಾಪಾಸ್ ಪಡೆಯಲಾಗುತ್ತಿದೆ.
ICCU ಎಂದರೇನು?
ಎಲೆಕ್ಟ್ರಿಕ್ ವಾಹನಗಳಲ್ಲಿ ICCU ತುಂಬಾ ಮುಖ್ಯವಾಗಿದೆ ಏಕೆಂದರೆ ಇದು ದೊಡ್ಡ ಬ್ಯಾಟರಿಯಿಂದ ಹೆಚ್ಚಿನ ವೋಲ್ಟೇಜ್ ಅನ್ನು 12V ಬ್ಯಾಟರಿಯನ್ನು ಚಾರ್ಜ್ ಮಾಡುವ ಕಡಿಮೆ ವೋಲ್ಟೇಜ್‌ಗೆ ಬದಲಾಯಿಸುತ್ತದೆ. ಈ 12V ಬ್ಯಾಟರಿಯು ಕ್ಲೈಮೇಟ್ ಕಂಟ್ರೋಲ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಪೀಕರ್‌ಗಳು ಮತ್ತು ಲೈಟ್ ಗಳಂತಹ ಅಗತ್ಯ ಘಟಕಗಳಿಗೆ ವಿದ್ಯುತ್ ಅನ್ನು ನೀಡುತ್ತದೆ. V2L (ವೆಹಿಕಲ್ ಟು ಲೋಡ್) ಫಂಕ್ಷನಾಲಿಟಿಯ ಮೂಲಕ ಕಾರ್‌ಗೆ ಕನೆಕ್ಟ್ ಆಗಿರುವ ಹೆಚ್ಚುವರಿ ಸಾಧನಗಳನ್ನು ಪವರ್ ಮಾಡಲು ICCU ಸಹಾಯ ಮಾಡುತ್ತದೆ. ICCU 12V ಬ್ಯಾಟರಿಯನ್ನು ಅನಿರೀಕ್ಷಿತವಾಗಿ ಡಿಸ್ಚಾರ್ಜ್ ಆಗುವಂತೆ ಮಾಡಬಹುದು.
ಮಾಲೀಕರು ಈಗ ಏನು ಮಾಡಬೇಕು?
ಕಿಯಾ EV6 ಮಾಲೀಕರು ತಮ್ಮ ಕಾರನ್ನು ಪರಿಶೀಲಿಸಲು ಹತ್ತಿರದ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು ಮತ್ತು ಕಂಪನಿ ಕೂಡ ದೋಷಯುಕ್ತ ವಾಹನಗಳ ಮಾಲೀಕರನ್ನು ಸಂಪರ್ಕಿಸಬಹುದು. ಭಾಗವು ದೋಷಯುಕ್ತವಾಗಿದೆ ಎಂದು ಕಂಡುಬಂದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅದನ್ನು ಬದಲಾಯಿಸಲಾಗುತ್ತದೆ.
EV6 ಬಗ್ಗೆ ಇನ್ನಷ್ಟು ವಿವರಗಳು
ಕಿಯಾ ಎಲೆಕ್ಟ್ರಿಕ್ SUV 77.4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಸಿಂಗಲ್ ರಿಯರ್-ವೀಲ್-ಡ್ರೈವ್ (RWD) ಮತ್ತು ಡ್ಯುಯಲ್ ಮೋಟಾರ್ ಆಲ್-ವೀಲ್-ಡ್ರೈವ್ (AWD) ಸೆಟಪ್‌ಗಳೊಂದಿಗೆ ಬರುತ್ತದೆ.
ಬ್ಯಾಟರಿ ಪ್ಯಾಕ್ |
77.4 kWh |
|
ಡ್ರೈವ್ ಪ್ರಕಾರ |
RWD |
AWD |
ಪವರ್ |
229 PS |
325 PS |
ಟಾರ್ಕ್ |
350 Nm |
605 Nm |
ARAI-ಕ್ಲೇಮ್ ಮಾಡಿರುವ ರೇಂಜ್ |
708 ಕಿಮೀ ವರೆಗೆ |
ಫೀಚರ್ ಗಳ ವಿಷಯದಲ್ಲಿ ಇದು ಡ್ಯುಯಲ್ 12.3-ಇಂಚಿನ ಬಾಗಿದ ಡಿಸ್ಪ್ಲೇ (ಒಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ಗಾಗಿ), 64 ಕಲರ್ಸ್ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಮತ್ತು ಪವರ್ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಸನ್ರೂಫ್ ಅನ್ನು ಹೊಂದಿದೆ. ಕಿಯಾ ಇದನ್ನು ಎಂಟು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೆಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಕೊಲಿಷನ್ ಅವೈಡೆನ್ಸ್ ಸೇರಿದಂತೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ತಂತ್ರಜ್ಞಾನದಂತಹ ಸುರಕ್ಷತಾ ಫೀಚರ್ ಗಳೊಂದಿಗೆ ಸಜ್ಜುಗೊಳಿಸಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ EV6 ಬೆಲೆಯು ರೂ 60.97 ಲಕ್ಷದಿಂದ ಪ್ರಾರಂಭವಾಗಿ ರೂ 65.97 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಹ್ಯುಂಡೈ ಐಯೋನಿಕ್ 5, ವೋಲ್ವೋ XC40 ರೀಚಾರ್ಜ್ ಮತ್ತು ಮುಂಬರುವ ಸ್ಕೊಡಾ ಇನ್ಯಾಕ್ iV ಗೆ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ BMW i4 ಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ. ವೋಲ್ವೋ C40 ರೀಚಾರ್ಜ್ ಅನ್ನು ಕೂಡ ಕಿಯಾ EV6 ಗೆ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.
ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಕಿಯಾ EV6 ಆಟೋಮ್ಯಾಟಿಕ್
0 out of 0 found this helpful