Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಸುಜುಕಿ ಇಗ್ನಿಸ್ : ಮೊದಲ ಡ್ರೈವ್ ವಿಮರ್ಶೆ

Published On ಮೇ 11, 2019 By jagdev for ಮಾರುತಿ ಇಗ್‌ನಿಸ್‌
  • 1 View

ಇಗ್ನಿಸ್ ಕಾರ್ ಘೋಷಿಸಿದಂತೆ ಯುವಕರಿಗಾಗಿ ಮಾಡಲ್ಪಟ್ಟಿದೆಯೇ?

ಇಗ್ನಿಸ್ ಮಾರುತಿ ಸುಝುಕಿಯ ಮೂರನೆಯ ಪ್ರೀಮಿಯಂ ಕಾರ್ ಮಾರುಕಟ್ಟೆಯಲ್ಲಿ, ನೆಕ್ಸಾ ದಲ್ಲಿ ಬಿಡುಗಡೆಯಾಗಿರುವ ಕಾರ್ ಆಗಿದೆ. ಇದು ಒಂದು ಕೊಳ್ಳಬಹುದಾದ ಒಂದು ನೆಕ್ಸಾ ಶೋ ರೂಮ್ ಗಳಲ್ಲಿ ಸಿಗುವ ಪ್ರಾಡಕ್ಟ್ ಆಗಿದೆ. ಇದನ್ನು ಮುಖ್ಯವಾಗಿ ಯುವಕರಿಗಾಗಿ ಮಾಡಲಾಗಿದೆ, ಇದು ಒಂದು ವೇಗವಾಗಿ ಬೆಳೆಯುತ್ತಿರುವ ಸೆಗ್ಮೆಂಟ್ ಆಗಿದೆ, ಹಾಗಾಗಿ ಮಾರುತಿ ಸುಜುಕಿ ಯಾವುದೇ ಅವಕಾಶ ಕಳೆದುಕೊಳ್ಳಲು ತಯಾರಿಲ್ಲ ಎನ್ನುವಂತಿದೆ. ಬೆಲೆ ಪಟ್ಟ್ಟಿಗಳು ಈಗಾಗಲೇ ಹೊರತರಲಾಗಿದೆ ಇಗ್ನಿಸ್ ವ್ಯಾಪ್ತಿ Rs 4.59 lakh ಇಂದ ಹಿಡಿದು Rs 7.80 lakh ವರೆಗೂ ಇದೆ ಎಕ್ಸ್-ಶವ್ರ್ ರೂಮ್ ದೆಹಲಿ. ನಾವು ಚೆನ್ನೈ ನಲ್ಲಿದ್ದು ಇಗ್ನಿಸ್ ಅನ್ನು ಡ್ರೈವ್ ಮಾಡಲಿದ್ದೇವೆ, ಹಾಗು ಇಗ್ನಿಸ್ ಯಾಕೆ ಯುವಕರಿಗಾಗಿ ಮಾಡಿರುವ ಕಾರ್ ಎನ್ನಲಾಗುತ್ತಿದೆ ಎಂದು ನೋಡುತ್ತೇವೆ.

ಬಾಹ್ಯ

ಡಿಸೈನ್ ಗೆ ಸಂಬಂಧ ಪಟ್ಟಂತೆ ಇಗ್ನಿಸ್ ಹಿನ್ನಡೆಯುತ್ತಿಲ್ಲ. ಮೊದಲಿಗೆ ಯುವಕರನ್ನು ಆಕರ್ಷಿಸಬಹುದಾದ ವಿಷಯವೆಂದರೆ ಇದರ ಮುಂಬದಿಯ ಡಿಸೈನ್ . ಅಗಲವಾಗಿರುವ ಸಿಂಗಲ್ ಫ್ರೇಮ್ ಗ್ರಿಲ್ ಹೆಡ್ ಲ್ಯಾಂಪ್ ಯೂನಿಟ್ ಅನ್ನು ಹೊಂದಿದ್ದು ಅದು ಒಮ್ಮೆಗೆ ಆಕರ್ಷಿಸುತ್ತದೆ. ಇದರ U -ಶೈಲಿಯ DRL ಗಳು ಹೆಡ್ ಲ್ಯಾಂಪ್ ಸುತ್ತ ಇದ್ದು ಒಂದು ನವ್ಯವಾದ ಭಾವ ಕೊಡುತ್ತದೆ ಹಾಗು ಸರಳವಾಗಿ ಕಾಣುವ ಮುಂಬದಿಯ ಗ್ರಿಲ್ ಗೆ ಮೆರುಗು ಕೊಡುತ್ತದೆ. ಮತ್ತು ಸುತ್ತಲಿರುವ ಕ್ರೋಮ್ ಹೌಸಿಂಗ್ ಮತ್ತು ಫಾಗ್ ಲ್ಯಾಂಪ್ ಹಳೆಯ ಮಾದರಿ ಬಂಪರ್ ಅನ್ನು ಹೊಸ ಶೈಲಿಯದ್ದಾಗಿ ಕಾಣುವಂತೆ ಮಾಡುತ್ತದೆ.

ಇಗ್ನಿಸ್ ನೋಡಲು SUV ಹಾಗು ಹ್ಯಾಚ್ ಬ್ಯಾಕ್ ಗಳ ಮಿಶ್ರಣದಂತೆ ಕಾಣುತ್ತದೆ. ಬಾನೆಟ್ ವರೆಗೂ ವ್ಯಾಪಿಸಿರುವ ಲೈನ್ ಗಳು ಅಸ್ಟೇನು ಜಾರುವಿಕೆಯಿಂದ ಇಲ್ಲ, ವಿವಿಧ ರೇಖೆಗಳಿಂದ ಕೂಡಿದೆ. ಎತ್ತರದ ಬಾನೆಟ್ ರೇಖೆಗಳು ಇಗ್ನಿಸ್ ಗೆ SUV ತರಹದ ಆಕರ್ಷಣೆ ಕೊಡುತ್ತದೆ. ಬಾನೆಟ್ ಮೇಲೆ ಇವುರುವ ಚಿಕ್ಕ ರಬ್ಬರ್ ಪಟ್ಟಿ ನಮಗೆ ಸುಝುಕಿಯ SUV ತರಹದ ಪರಂಪರೆಯನ್ನು ತೋರಿಸುತ್ತದೆ ಮತ್ತು ಇವು ಮೂಲ ವಾದ ವಿಟಾರಾ ವನ್ನು ಜ್ಞಾಪಿಸುತ್ತದೆ.

ಸುತ್ತಲೂ ನೋಡಿದಾಗ ಇಗ್ನಿಸ್ ತನ್ನ 3700mm ಉದ್ದವನ್ನು ಹೊರಗೆಡುವುದಿಲ್ಲ. ಇದು ಕಾಂಪ್ಯಾಕ್ಟ್ ಆಗಿದೆ ಹಾಗಾಗಿ ಕಿರು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲು ಅನುಕೂಲವಾಗುತ್ತದೆ. ಬದಿಗಳಲ್ಲಿ ನೋಡಿದಾಗ ಇಗ್ನಿಸ್ ನ್ ಡಿಸೈನ್ ಬ್ಯಾಲೆನ್ಸ್ ಆಗಿರುವಂತೆ ಕಾಣುತ್ತದೆ ಮತ್ತು ಇದ್ದಕ್ಕಿದ್ದಂತೆ ಕತ್ತರಿಸಿದ ಹಿಂಬದಿಯಂತೆ ಕಾಣುವುದಿಲ್ಲ. ದೊಡ್ಡ ೧೫-ಇಂಚು ವೀಲ್ ಗಳು ಚೆನ್ನಾಗಿ ಕಾಣುತ್ತದೆ.

ಧನ್ಯವಾದಗಳೊಂದಿಗೆ ಮಾರುತಿ ಸುಝುಕಿಯು ಅತಿಯಾಗಿ ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಅನ್ನು ಉಪಯೋಗಿಸದೆ ಇಗ್ನಿಸ್ ಅನ್ನು ಚೆನ್ನಾಗಿ ಕಾಣುವಂತೆ ಮಾಡಿದೆ. ಆದರೆ ವಿಭಿನ್ನವಾಗಿ ಮಾಡಲ್ಪಟ್ಟಿರುವ ಹಿಂಬದಿಯ ಕ್ವಾರ್ಟರ್ ಬಾಗವು ಇದನ್ನು ಹ್ಯಾಚ್ ಬ್ಯಾಕ್ ನಂತೆ ಕಾಣಿಸುವುದಿಲ್ಲ.

ಇಗ್ನಿಸ್ ಆಕರ್ಷಕವಾಗಿದ್ದು ಇದು ಮುಂಬದಿಯಿಂದ ಹಾಗು ಬದಿಗಳಲ್ಲಿ ಚೆನ್ನಾಗಿದೆ, ಆದರೆ ಹಿಂಬದಿಯು ವಿಭಿನ್ನವಾಗಿದ್ದರೂ ಆಕರ್ಷಕವಾಗಿಲ್ಲ. ಹಿಂಬದಿಯ ಮೇಲಿನ ಅರ್ಧ ಬಾಗ ಅಳತೆಗೆ ಮೀರಿದಂತೆ ಕಾಣುತ್ತದೆ . ಎದ್ದುಕಾಣುವಂತೆ ಇರುವ ವೀಲ್ ಆರ್ಚ್ ಗಳು ಬಂಪರ್ ನೊಂದಿಗೆ ಸರಿಹೊಂದುತ್ತದೆ. ಇದರ ಬೂಟ್ ಚಪ್ಪಟೆಯಾಗಿದೆ. ಮತ್ತು ಬೂಟ್ ಲೀಡ್ ಅಸ್ಟೇನು ಚೆನ್ನಾಗಿಲ್ಲ ನಮ್ಮ್ಮ ಮಟ್ಟಿಗೆ. ಹಿಂಬದಿಯ ಪ್ಲಾಸ್ಟಿಕ್ ಗುಣಮಟ್ಟ ವಾಸ್ತವಿಕವಾಗಿದೆ ಮತ್ತು ರಿಟ್ಜ್ ಅನ್ನು ಜ್ಞಾಪಿಸುತ್ತದೆ.

ಅಂತರಿಕಗಳು

ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಹಾಗು ಎತ್ತರದ ನಿಲುವು ನೀವು ಪ್ರಾಯಶಃ ನಡೆದುಕೊಂಡೇ ಇಗ್ನಿಸ್ ಕ್ಯಾಬಿನ್ ಒಳಕ್ಕೆ ಹೋಗಬಹುದೆಂದೆನಿಸುತ್ತದೆ. ಇದು ಹ್ಯಾಚ್ ಬ್ಯಾಕ್ ಗಳಲ್ಲಿ ಕೊಡಬಹುದಾದ ವಿಶಾಲವಾದ ಅಂತರಿಕಗಳನ್ನು ಹೊಂದಿದೆ ಎಂದೆನಿಸಬಹುದು. ಮೆಟೀರಿಯಲ್ ಗಳು ಸಹ ಮಾರುತಿಯ ಹಳೆ ಕಾರುಗಳಿಗೆ ಹೋಲಿಸಿದರೆ ಚೆನ್ನಾಗಿದೆ ಆದರೂ ಫಿಟ್ ಮತ್ತು ಫಿನಿಷ್ ಇನ್ನು ಸ್ವಲ್ಪ ಚೆನ್ನಾಗಿರಬಹುದಿತ್ತು .

ಇಗ್ನಿಸ್ ನ ಐವರಿ ಹಾಗು ಕಪ್ಪು ಡುಯಲ್ ಟೋನ್ ಅಂತರಿಕಗಳು ಮೆಚ್ಚುವಂತೆ ಮಾಡುತ್ತವೆ ಮತ್ತು ಕ್ಯಾಬಿನ್ ಗೆ ಬೆಲೆಬಾಳುವ ವಸ್ತು ಎಂಬ ಅನಿಸಿಕೆ ಕೊಡುತ್ತದೆ. ಆದರೂ, ಇದರ ನಿರ್ವಹಣೆಗೆ ಸಾಕಷ್ಟು ಗಮನ ಕೊಡಬೇಕಾಗುತ್ತದೆ. ಮಾರುತಿ ಸುಜುಕಿ ಕೆಲವು ಐಷಾರಾಮಿ ಕಾರ್ ಮೇಕರ್ ಗಳನು ಅನುಕರಿಸಿ ಡ್ಯಾಶ್ ಬೋರ್ಡ್ ಲೇ ಔಟ್ ಅನ್ನು ಸರಳವಾಗಿರಿಸಾಲು ಪ್ರಯತ್ನಿಸಿದೆ. ಇದಕ್ಕಾಗಿ ೭-ಇಂಚು ಎಂಟರ್ಟೈನ್ಮೆಂಟ್ ಸ್ಕ್ರೀನ್ ಅಳವಡಿಸಿದೆ. ಇದು ಮಾಡ್ರನ್ ಆಗಿ ಕಾಣುತ್ತದೆ. ಆದರೂ ಇದರಲ್ಲಿ ಡ್ರೈವರ್ ಕೇಂದ್ರಿತವಾಗಿ ಮಾಡಿದ್ದರೇ ಚೆನ್ನಾಗಿರುತ್ತಿತ್ತು.

ಕೆಳಹಂತದ ವೇರಿಯೆಂಟ್ ಗಳಲ್ಲಿ ೨-DIN ಮ್ಯೂಸಿಕ್ ಸಿಸ್ಟಮ್ ನಿಂದ ಟಚ್ ಸ್ಕ್ರೀನ್ ಅನ್ನು ಬದಲಿಸಲಾಗಿದೆ. ಕ್ಲಾಸಿಕ್ ವೈಟ್ ಬ್ಯಾಕ್ ಲೈಟ್ ಎಷ್ಟೇನು ಚೆನ್ನಾಗಿಲ್ಲ ಎಂದೆನಿಸುವುದಿಲ್ಲ. ಇದರಲ್ಲಿ ಏರ್ಕ್ರಾಫ್ಟ್ ಶೈಲಿಯ ಏರ್ ಕಾನ್ ಕ್ನೋಬ್ ಗಳು ಇಹಾಗೂ ಸ್ಟಿಯರಿಂಗ್ ಕಾಂಟ್ರ್ಲ್ ಗಳುಇತರ ಮಾರುತಿ ಸುಜುಕಿ ಮಾಡೆಲ್ ಗಳಿಗೆ ಹೋಲಿಸಿದರೆ ಗುಣಮಟ್ಟ ಚೆನ್ನಾಗಿದೆ.

ಇಗ್ನಿಸ್ ಕ್ಯಾಬಿನ್ ನಲ್ಲಿರುವ ಸ್ವಾಗತಾರ್ಹ ಬದಲಾವಣೆ ಎಂದರೆ ಹೊಸ ಸ್ಟಿಯರಿಂಗ್ ವೀಲ್ . ಇದು ಹಿಡಿಯಲು ಚೆನ್ನಾಗಿದೆ ಇದಕ್ಕೆ ಪ್ಲಾಸ್ಟಿಕ್ ಅಲ್ಲದಿರುವ ರಬ್ಬರ್ ಫಿನಿಷ್ ಕಾರಣವಾಗಿದೆ. ಸ್ಟಿಯರಿಂಗ್ ವೀಲ್ ಮೇಲಿರುವ ಆಡಿಯೋ ಕಂಟ್ರೋಲ್ ಕೂಡ ಚೆನ್ನಾಗಿದ್ದು ಉಪಯೋಗಿಸಲು ಅನುಕೂಲವಾಗಿದೆ.

ಇಗ್ನಿಸ್ ಸ್ಟೈಲ್ ನ ಗುಣಮಟ್ಟ ಚೆನ್ನಾಗಿದೆ ಮತ್ತು ಡೋರ್ ಗಳ ಮೇಲೆ ಮೆಟಲ್ ಫಿನಿಷ್ ಇರುವ ಹ್ಯಾಂಡಲ್ ಗಳು ಇದ್ದು ಅವು ವಿಶಿಷ್ಟವಾಗಿದೆ. ಡೋರ್ ಗಳು ಇತರ ಮಾರುತಿ ಇಗ್ನಿಸ್ ಅಳತೆಯಿರುವ ಕಾರುಗಳಿಗಿಂತ ಬಾರವಾಗಿದೆ. ಆದರೆ ನೀವು ಜರ್ಮನ್ ಕಾರುಗಳಂತೆ ಡೋರ್ ಗಳನ್ನೂ ತಡ್ದ್ ಎಂದು ಶಬ್ದ ಬರುವಂತೆ ಮುಚ್ಚಲು ಬರುವುದಿಲ್ಲ.

ಮುಂಬದಿಯ ಸೀಟ್ ಗಳಲ್ಲಿ ಕಾಂಟೂರ್ ಗಳು ಇವೆ ಮತ್ತು ಯೋಗ್ಯವಾಗಿರುವ ಅಂಡರ್ ಥೈ ಸಪೋರ್ಟ್ ಕೊಡುತ್ತದೆ ಮತ್ತು ಕುಳಿತುಕೊಳ್ಳಲು ಆರಾಮದಾಯಕವಾಗಿದೆ.

ಹೊರಗಿನ ನೋಟ ಚೆನ್ನಾಗಿ ಕಾಣಿಸುತ್ತದೆ, ಹಾಗು ಡ್ಯಾಶ್ ಬೋರ್ಡ್ ಅಷ್ಟೇನು ಜಾರುವಿಕೆಯಿಂದ ಕೂಡಿಲ್ಲ, ಇತರ ಮಾಡ್ರನ್ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ. ಹಾಗಾಗಿ ಸಾದಾರಣ ಮೈಕಟ್ಟು ಇರುವವರಿಗೆ ಮುಂಬದಿಯಲ್ಲಿ ಚೆನ್ನಾಗಿರುವ ನೋಟ ಸಿಗುತ್ತದೆ. ಇದು ಡ್ರೈವರ್ ಸೀಟ್ ಎತ್ತರ ಅಳವಡಿಕೆ ಇಲ್ಲದಿರುವ ವೇರಿಯೆಂಟ್ ಗಳಲ್ಲೂ ಸಹ ಹೀಗೆ ಇರುತ್ತದೆ.

ಇಗ್ನಿಸ್ ಕ್ಯಾಬಿನ್ ನಾಲ್ಕು ಜನಕ್ಕೆ ತಕ್ಕುದಾಗಿದೆ. ನೀವು ಐದನೇ ಪ್ಯಾಸೆಂಜರ್ ಅನ್ನು ಕೂಡಿಸಬಹುದಾದರೂ ಸಹ. ಕ್ಯಾಬಿಸ್ ವಾಸ್ತವದಲ್ಲಿ ಚೆನ್ನಾಗಿದೆ ಎಂದೆನಿಸುತ್ತದೆ., ಚೆನ್ನಾಗಿರುವ ಲೆಗ್ ರೂಮ್ ಮತ್ತು ಎಲ್ಲ ಪ್ಯಾಸೆಂಜರ್ ಗಳಿಗಾಗಿರುವ ಕಬ್ಬಿ ಹೋಲ್ ಗಳು ವಾಟರ್ ಬಾಟಲ್ ಇಡಲು, ಎಲ್ಲ ಡೋರ್ ಗಳಲ್ಲಿ ಇದೆ. ಹಿಂಬದಿಯ ಸೀಟ್ ಗೆ ರೆಡಿ ತೆಗೆದು ಮತ್ತೆ ಅಳವಡಿಸಬಹುದಾದ ಹೆಡ್ ರೆಸ್ಟ್ ಗಳಿವೆ, ಹಾಗು 60:40 ಸ್ಪ್ಲಿಟ್ ಸಹ ಇದೆ, ಮತ್ತು ಇದು ಹೆಚ್ಚು ಲಗೇಜ್ ಗಳನ್ನೂ ಇಡಲು ಸಹಕಾರಿಯಾಗೋದೇ. ಇರುವ 260-litre ಬೂಟ್ ನಿಂದ ನಾಲ್ಕು ಮಂದಿಗೆ ವೀಕ್ ಎಂಡ್ ನಲ್ಲಿ ಪ್ರಯಾಣಮಾಡುವಾಗ ಲಗೇಜ್ ಇರಿಸಲು ಇಗ್ನಿಸ್ ಸಹಕರಿಸುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್

ಇಗ್ನಿಸ್ ಪೆಟ್ರೋ ಹಾಗು ಡೀಸೆಲ್ ಎಂಜಿನ್ ಅವತಾರಿಣಿಕೆಯಲ್ಲಿ ಲಭ್ಯವಿದೆ ಮತ್ತು ಎಲ್ಲ ವೇರಿಯೆಂಟ್ ಗಳಲ್ಲೂ ೫-ಸ್ಪೀಡ್ ಮಾನ್ಯುಯಲ್ ಅಥವಾ AMT ಗೇರ್ ಬಾಕ್ಸ್ ಅನ್ನು ಕೊಡಲಾಗಿದೆ. ವಾಸ್ತವದಲ್ಲಿ ಇಗ್ನಿಸ್ ಆಟೋಮ್ಯಾಟಿಕ್ ಗೇರ್ ಬೋತ್ಸ್ ಅನ್ನು ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಲ್ಲಿಯೂ ಸಹ ಕೊಡುತ್ತಿರುವುದೇ ಒಂದು ವಿಶೇಷವಾಗಿದೆ.

ಪೆಟ್ರೋಲ್ ಎಂಜಿನ್ ಅದೇ 1.2-litre ಯೂನಿಟ್ ಆಗಿದ್ದು ಅದನ್ನು ಬಲೆನೊ ದ್ಲಲೂ ಸಹ ಅಳವಡಿಸಲಾಗಿದೆ. ಇದು ಗರಿಷ್ಟ 83PS ಪವರ್ ಹಾಗು ಗರಿಷ್ಟ ಟಾರ್ಕ್ 113Nm ಅನ್ನು ಕೊಡುತ್ತದೆ. ಇಗ್ನಿಸ್ ಪ್ರಾರಂಭದಿಂದಲೂ ಚೆನ್ನಾಗಿ ವೇಗ ಪಡೆಯುತ್ತದೆ ಇದಕ್ಕೆ ಹೆಚ್ಚು ಬಾರವಿಲ್ಲದಿರುವುದು ಸಹ ಸಹಕಾರಿಯಾಗಿದೆ. ಇದರ ಬಾರ 860kg ಪೆಟ್ರೋಲ್ ಗೆ, 960kg ಡೀಸೆಲ್ ಗೆ . ಪೆಟ್ರೋಲ್ ಅವತರಣಿಕೆಯಲ್ಲಿ ಹೆಚ್ಚು ಟಾರ್ಕ್ ಅನ್ನು ಕಡಿಮೆ rpm ನಲ್ಲಿ ಕೊಡುತ್ತದೆ ಮತ್ತು ಇದು 3,500 rpm ನಲ್ಲಿ ಗರಿಷ್ಟ ವೇಗದಲ್ಲಿ ಹೋಗುತ್ತದೆ. ಇದರ ಮಾನ್ಯುಯಲ್ ಟ್ರ್ರಾನ್ಸ್ಮಿಷನ್ ಅಷ್ಟೇನು ವೇಗವಾಗಿಲ್ಲ ಆದರೂ ಗೇರ್ ಶಿಫ್ಟ್ ನಲ್ಲಿ ಅಡತಡೆಯಿರುವುದಿಲ್ಲ.

ಇದರಲ್ಲಿ ಮೊದಲ ಬಾರಿಗೆ ೫-ಸ್ಪೀಡ್ AMT ಯೂನಿಟ್ ಅನ್ನು 1.2-litre ಪೆಟ್ರೋಲ್ ಎಂಜಿನ್ ಗೆ ಅಳವಡಿಸಲಾಗಿದೆ, ಮತ್ತು ಇದನ್ನು ವಿಶೇಷವಾಗಿ ಸುಲಭ ಗೇರ್ ಶಿಫ್ಟ್ ಗಾಗಿ ಟ್ಯೂನ್ ಮಾಡಲಾಗಿದೆ. ಮಾರುತಿ ಸುಝುಕಿಯು ಹೀಗೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಸಹ. ಆಟೋ ಮೋಡ್ ನಲ್ಲಿ, ಟ್ರಾನ್ಸ್ಮಿಷನ್ ನಲ್ಲಿ ಮುಂಚಿತವಾಗಿ ಸಿದ್ದಪಡಿಸಿದ ಶಿಫ್ಟ್ ಪಾಯಿಂಟ್ ಗಳು ಇದ್ದು 2,000rpm ಮಾರ್ಕ್ ನಲ್ಲಿ ಇರುತ್ತದೆ. ಆದರೂ ಟ್ರಾನ್ಸ್ಮಿಷನ್ ಡ್ರೈವಿಂಗ್ ಬಗೆಯನ್ನು ಗಮನಿಸುತ್ತದೆ ಹಾಗು ಅವಶ್ಯಕತೆ ಇದ್ದಾಗ ಗೇರ್ ಅನ್ನು ಹೋಲ್ಡ್ ಮಾಡುತ್ತದೆ. ಇದು ಡೌನ್ ಶಿಫ್ಟಿಂಗ್ ನಲ್ಲೂ ಮತ್ತು ಹೈ ವೆ ಗಳಲ್ಲಿ ಓವರ್ ಟೇಕ್ ಮಾಡುವಾಗಲೂ ಸಹ ಅಸ್ಟೇನು ಸಮಸ್ಯೆ ಕೊಡುವುದಿಲ್ಲ.

ಡೀಸೆಲ್ ಹಾಗು AMT ಯ ಸಂಯೋಜನೆ ಇದರ ಹೈ ಲೈಟ್ ಪ್ಯಾಕೇಜ್ ಆಗಿದೆ. ನಮಗೆ ತಿಳಿದಿರುವಂತೆ AMT ಯನ್ನು 1.3-litre, 75PS ಡೀಸೆಲ್ ಎಂಜಿನ್ ಯಾವುದು 190Nm ಕೊಡುತ್ತದೆ 2,000rpm ನಲ್ಲಿ. ಇದರ ಒಟ್ಟಾರೆ ಪ್ರಭಾವ ಅಡತಡೆಯಿಲ್ಲದ ಗೇರ್ ಶಿಫ್ಟ್ ಗಳು ಡಿಸೈರ್ ಡೀಸೆಲ್ AMT ಗೆ ಹೋಲಿಸಿದಾಗ. ಆದರೆ ಡೀಸೆಲ್ ಇಗ್ನಿಸ್ AMT ಸರಿಹೊಂದಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಎಂಜಿನ್ ಬ್ರೇಕ್ ಉಪಯೋಗಿಸಿದಾಗ ವೀಲ್ ಗಳಿಗೆ ಪವರ್ ಕೊಡಲು ಟರ್ಬೊ ಸ್ವಲ್ಪ ನಿಧಾನಿಸುತ್ತದೆ. ಟ್ರಾನ್ಸ್ಮಿಷನ್ ಸಹ ನಿರಂತರವಾಗಿ ಮತ್ತು ಸಮಬದ್ದವಾಗಿ ಕೆಲಸ ಮಾಡುವಾಗ ಟ್ರಾನ್ಸ್ಮಿಷನ್ ಮೇಲಿನ ಗೇರ್ ಗಳಿಗೆ ಹೋಗುತ್ತದೆ. ಮತ್ತು ಓವರ್ ಟೇಕ್ ಮಾಡಿದ ನಂತರ ನಿಧಾನಗತಿಗೆ ಬರುವಾಗ ಸೂಕ್ಷ್ಮವಾಗಿ ಬಳಸಬೇಕಾಗುತ್ತದೆ.

ಇದಲ್ಲದೆ ನಿಮಗೆ ಸೆಮಿ ಆಟೋ ಮೋಡ್ ಇದ್ದು ನಿಮಗೆ ಪೂರ್ಣ ಕಂಟ್ರೋಲ್ ಮಾಡಲು ಸಹಕಾರಿಯಾಗುತ್ತದೆ. ಕಾರ್ ಮುಂದಿನ ಗೇರ್ ಗಳಿಗೆ ಹೋಗಲು ನಿಧಾನಿಸಿದರೂ ಆಟೋಮ್ಯಾಟಿಕ್ ಆಗಿ ಕೆಳಗಿನ ಗೇರ್ ಗಳಿಗೆ ಬರುತ್ತದೆ ಮತ್ತು ಕಾರ್ ಯಾವಾಗಲೂ ಚಲಿಸುತ್ತಿರುವಂತೆ ನೋಡಿಕೊಳ್ಳುತ್ತದೆ. ಸೆಮಿ ಆಟೋ ಮೋಡ್ ನಲ್ಲಿ ನಿಮಗೆ ಜೆರ್ಕ್ ಗಳನ್ನೂ ಕಡಿಮೆ ಗೊಳಿಸಲು ಸಹಾಯವಾಗುತ್ತದೆ, ಕೆಲವೊಮ್ಮೆ ಇದು ಟ್ರಾನ್ಸ್ಮಿಷನ್ ಮೇಲಿನ ಗೇರ್ ಗಳಿಗೆ ಹೋದಾಗ ಅನುಭವವಾಗುತ್ತದೆ.

ಸಮಯದ ಅಭಾವ ಇದ್ದುದರಿಂದ ನಾವು ಇಗ್ನಿಸ್ ಅನ್ನು ಫ್ಯುಯೆಲ್ ಎಫಿಸೈನ್ಸಿ ಟೆಸ್ಟ್ ಪರೀಕ್ಷಿಸಲು ತೆಗೆದುಕೊಂಡು ಹೋಗಲು ಆಗಲಿಲ್ಲ. ಆದರೂ ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್ ಗಳಲ್ಲಿ ಭರವಸೆ ನೀಡುವಂತಹ ಡ್ರೈವರ್ ಇನ್ಫಾರ್ಮಶನ್ ಡಿಸ್ಪ್ಲೇ ಯೂನಿಟ್ ನಲ್ಲಿ ಇತ್ತು. ಡೀಸೆಲ್ ನ ಅವತರಣಿಕೆ 18 ರಲ್ಲಿ ಇರಬೇಕಾದರೆ, ಪೆಟ್ರೋಲ್ ಇಗ್ನಿಸ್ 20kmpl ವರೆಗೂ ತಲುಪಿತ್ತು, 50km ಹೈ ವೆ ರಸ್ತೆಯಲ್ಲಿ.

ರೈಡ್ ಮತ್ತು ಹ್ಯಾಂಡಲಿಂಗ್

ಎತ್ತರದ ನಿಲುವು ಹೊಂದಿರುವ ಇಗ್ನಿಸ್ ನಲ್ಲಿ ಆರಾಮದಾಯಕವಾದ ರೈಡ್ ಪಡೆಯಬಹುದು. ಇದು 15-inch ವೀಲ್ ಮೇಲೆ ಓಡುತ್ತದೆ, ಹಾಗಾಗಿ ಇದು ಇತರ ಹ್ಯಾಚ್ ಬ್ಯಾಕ್ ಕಾರುಗಳಿಗೆ ಹೋಲಿಸಿದಾಗ ರಸ್ತೆಯ ಅಡತಡೆಗಳನ್ನು ಚೆನ್ನಾಗಿ ನಿಭಾಯಿಸುತ್ತದೆ. ಒಟ್ಟಾರೆ ಭೂಮ್ಪ್ ಗಾಲ ತೆಗೆದುಕೊಳ್ಳುವಿಕೆ ಚೆನ್ನಾಗಿದೆ, ಕೇವಲ ದೊಡ್ಡ ಭೂಮ್ಪ್ ಗಳು ಮಾತ್ರ ಒಳಗೆ ನುಸುಳುತ್ತದೆ. ಆಶ್ಚರ್ಯವಾಗುವಂತೆ ಮಾರುತಿ ಸುಜುಕಿ ಕಾರ್ ನ ಸಸ್ಪೆನ್ಷನ್ ದೊಡ್ಡ ಪಾಟ್ ಹೋಳು ಗಳನ್ನೂ ಚೆನ್ನಾಗಿ ನಿಭಾಯಿಸುತ್ತದೆ, ಹೆಚ್ಚು ಕರ್ಕಶ ಶಬ್ದಗಳು ಕ್ಯಾಬಿನ್ ಒಳಗೆ ಬಾದಂತೆ ನೋಡಿಕೊಳ್ಳುತ್ತದೆ.

ಒಟ್ಟಾರೆ ಡ್ರೈವ್ ನ ಅನುಭವ ಭಾರವಾಗಿರುವ ಸ್ಟಿಯರಿಂಗ್ ವೀಲ್ ಪಾರ್ಕಿಂಗ್ ಮಾಡುವಾಗ ಸರಳವಾಗಿದ್ದು ಹೆಚ್ಚು ವೇಗಗಳಲ್ಲಿ ತೂಕ ವುಳ್ಳದ್ದಾಗಿರುತ್ತದೆ. ಇದು ಅಸ್ಟೇನು ಫೀಡ್ಬ್ಯಾಕ್ ಕೊಡುವುದಿಲ್ಲ. ಆದರೆ ಇಗ್ನಿಸ್ ಡ್ರೈವರ್ ಗಳಿಗೆ ಮೆಚ್ಚುವ ಕಾರ್ ಎಂದು ಹೇಳಲಾಗುವುದಿಲ್ಲ ಹಾಗಾಗಿ ಇದನ್ನು ಇರುವಹಾಗೆ ಪರಿಗಣಿಸಬಹುದು. ಇದು ಹೇಳಿದ ನಂತರ ತೂಕವುಳ್ಳ ವೀಲ್ ಗಳಿಂದ ಇಗ್ನಿಸ್ ಹೈ ವೆ ಗಳಲ್ಲಿ ನೇರವಾದ ಡ್ರೈವಿಂಗ್ ಗೆ ಅನುಕೂಲ ಮಾಡಿಕೊಡುತ್ತದೆ, ಮತ್ತು ಸ್ಟಿಯರಿಂಗ್ ಅಳವಡಿಕೆ ಅಸ್ಟೇನು ಅವಶ್ಯ ವೆನಿಸುವುದಿಲ್ಲ.

ಮಾರುತಿ ಸುಜುಕಿ ಇಗ್ನಿಸ್ ಅನ್ನು ಐದನೇ ಜೆನ್ ವೇದಿಕೆ ಮೇಲೆ ತಯಾರಿಸಿದೆ, ಇದು ಹಿಂದಿಗಿಂತ ಕಠಿಣವಾಗಿದ್ದು ಆನ್ -ರೋಡ್ ಸ್ಟೆಬಿಲಿಟಿ ಯನ್ನು ಸುಧಾರಿಸಿದೆ. ಇದು ಮುಂಬದಿ, ಹಿಂಬದಿ, ಹಾಡು ಬದಿಗಳ ಪರಿಣಾಮಕಾರಿ ಪೆಟ್ಟುಗಳನ್ನು ತಡೆದುಕೊಳ್ಳುವ ಪರೀಕ್ಷೆಯನ್ನು ಪಾಸು ಮಾಡುತ್ತದೆ. ಇದರಲ್ಲಿ ABS ಮತ್ತು EBD ಹಾಗು ಡುಯಲ್ ಏರ್ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಇಗ್ನಿಸ್ ಗರಿಷ್ಟ ವೇಗಗಳಲ್ಲಿ ಬ್ರೇಕ್ ಹಾಕಲು ವಿಶ್ವಾಸ ಮೂಡಿಸುತ್ತದೆ. ಹಾಗಾಗಿ ಇದು ಒಂದು ಉತ್ತಮ ಹೈ ವೆ ಸಂಗಾತಿ ಮತ್ತು ವೀಕ್ ಎಂಡ್ ನ ಹೊರ ಪ್ರದೇಶಗಳ ಭೇಟಿಗೆ ಸರಿಯಾದ ಆಯ್ಕೆ ಎಂದು ಹೇಳಬಹುದು.

ಅಂತಿಮ ಅನಿಸಿಕೆ

ಮಾರುತಿ ಸುಝುಕಿಯು ಯುವಕರನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಈ ಕಾರ್ ಹೆಚ್ಚು ವಿಷಯಗಳಲ್ಲಿ ಗೆಲ್ಲಬೇಕಾಗುತ್ತದೆ. ನೋಟದಿಂದ ಹಿಡಿದು. ಇಗ್ನಿಸ್ ನೋಡಲು ವಿಶೇಷವಾಗಿದ್ದು ಇತರ ಕಾರುಗಳಂತಿಲ್ಲ- ಇದು ನಿಮ್ಮನ್ನು ಆಕರ್ಷಿಸುವುದಲ್ಲದೆ, ನಿಮ್ಮ ನೋಟವನ್ನು ಕಾರು ಮೋಡ್ ಚಲಿಸಿ ಹಿಂಬದಿ ಕಾಣುವ ವರೆಗೂ ತಡೆದಿಟ್ಟುಕೊಳ್ಳುತ್ತದೆ. ನೀವು ಇದರ ಜೊತೆ ಇರಬಹುದಾದರೆ ಹಿಂಬದಿಯ ಡಿಸೈನ್ ಬಗ್ಗೆ ನೀವು ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಕವರ್ ಮಾಡಲು ನಿಮಗೆ ಬಹಳಷ್ಟು ವೈಯಕ್ತೀಕರಣ ಆಯ್ಕೆ ಸಿಗುತ್ತದೆ. ತಯಾರಕರಿಂದ ಕೊಡಲಾಗುವ ಅಸ್ಸೇಸ್ಸೋರಿ ಗಳು, ಮತ್ತು ಕಿಟ್ ಗಳು ಇಗ್ನಿಸ್ ಅನ್ನು ವಿಶೇಷವಾಗಿ ಪರಿಗಣಿಸುವಂತೆ ಮಾಡುತ್ತದೆ.

ಒಳಬಾಗದಲ್ಲಿ ಕೆಲವು ವಿಷಯಗಳು ಮನೋರಂಜಕವಾಗಿದೆ ಮತ್ತು ನವೀನ ಹೊರಮೈ ಬಣ್ಣಗಳಿಗೆ ಹೋಲುವತೆ ಇದ್ದು ಕ್ಯಾಬಿನ್ ಅನ್ನು ವೈಭವೀಕರಿಸುತ್ತದೆ. ಪ್ಲಾಸ್ಟಿಕ್ ಗಾಲ ಫಿನಿಶಿಂಗ್ ಚೆನ್ನಾಗಿ ಮಾಡಲಾಗಿದೆ ಮತ್ತು ಅವುಗಳನ್ನು ಸ್ಪರ್ಶಿಸಿದಾಗ ಇತರ ಮಾರುತಿ ಕಾರ್ ಗಳಂತೆ ಒರಟಾಗಿದೆ ಎಂದು ಎನಿಸದಂತೆ ಮೃದುವಾಗಿ ಮಾಡಲಾಗಿದೆ. ಇಗ್ನಿಸ್ ಟಾಪ್ ವೇರಿಯೆಂಟ್ ಅಲ್ಫಾ ದಲ್ಲಿ ಬಹಳಷ್ಟು ಫೀಚರ್ ಗಳನ್ನೂ ಕೊಡಲಾಗಿದೆ., ಆದರೆ ಕೆಳಹಂತದ ಝೀಟಾ ಮತ್ತು ಡೆಲ್ಟಾ ವೇರಿಯೆಂಟ್ ಗಳಲ್ಲೂ ಸಹ ಬಹಳಷ್ಟು ಫೀಚರ್ ಗಳನ್ನೂ ಕೊಡಲಾಗಿದೆ. ಕ್ಯಾಬಿನ್ ವಿಸ್ತಾರವಾಗಿದ್ದು ಆರಾಮದಾಯಕವಾಗಿದೆ ಸಹ. ಇದನ್ನು ಧೀರ್ಘ ಕಾಲದಲ್ಲಿ ನಿರ್ವಹಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ ಇದಕ್ಕೆ ಬಿಜ್ ಮತ್ತು ಬ್ಲಾಕ್ ಇಂಟೀರಿಯರ್ ಥೀಮ್ ಕಾರಣವಾಗಿದೆ.

ಮಾರುತಿ ಸುಜುಕಿ ಪವರ್ ಟ್ರೈನ್ ಆಯ್ಕೆ ಗಳೊಂದಿಗೆ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಅವತರಣಿಕೆಗಲ್ಲಿ AMT ಗೇರ್ ಬಾಕ್ಸ್ ಅನ್ನು ಕೊಟ್ಟಿರುವುದು ಮಾರುತಿ ಸುಜುಕಿ ಯುವಕರ ಇಷ್ಟಗಳಿಗೆ ತಕ್ಕಂತೆ ಇದ್ದು ಹೆಚ್ಚು ದೂರ ಹೋಗುವುದಕ್ಕೆ ಹಾಗು ಆರಾಮದಾಯಕವಾಗಿರುವುದಕ್ಕೆ ಸಹಕಾರಿಯಾಗಿದೆ. ಸುರಕ್ಷತೆ ಫೀಚರ್ ಗಳು ಸ್ಟ್ಯಾಂಡರ್ಡ್ ಆಗಿರುವುದು ನೋಡಿದರೆ ಇಗ್ನಿಸ್ ಒಂದು ಸಂಪೂರ್ಣ ಪ್ಯಾಕೇಜ್ ಗಳೊಂದಿಗಿರುವ ಕಾರ್ ಎಂದೆನಿಸುತ್ತದೆ, ಯುವಕರಿಗಷ್ಟೇ ಅಲ್ಲದೆ ಎಲ್ಲ ಬಗೆಯ ಗ್ರಾಹಕರಿಗೂ ಮೆಚ್ಚುವಂತದ್ದಾಗಿದೆ.

ಬೆಲೆಯೂ ಸದ್ಯಕ್ಕೆ ಹೆಚ್ಚು ಎಂದೆನಿಸಬುದಾಗಿದ್ದರೂ, ಇಗ್ನಿಸ್ ಕಾರು ಅವಶ್ಯಕ ಸುರಕ್ಷತಾ ಸಲಕರಣೆಗಳನ್ನು ಹೊಂದಿರಬೇಕಾದ ಅವಶ್ಯಕತೆಯನ್ನು ಪೂರೈಸುತ್ತದೆ. ಇತರ ಪ್ರತಿಸ್ಪರ್ದಿಗಳೂ ಸಹ ಸುರಕ್ಷತೆ ಬಗ್ಗೆ ಹೆಚ್ಚು ಕ್ರಮ ತೆಗೆದುಕೊಳ್ಳುತ್ತಿರುವುದು ಗಮನಿಸಿದಾಗ, ಇಗ್ನಿಸ್ ಒಂದು ಎಚ್ಚರ ನಡೆ ಮುಂದಿಟ್ಟಿದೆ ಎಂದೆನಿಸಬಹುದು, ಆದರೆ ಇದು ಬಹಳ ಕಾಲದ ವರಿಗೂ ಇರುವತಹುದು ಎಂದು ಹೇಳಬಹುದು.

j
Published by

jagdev

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಎಲೆಕ್ಟ್ರಿಕ್
Rs.6.99 - 9.24 ಲಕ್ಷ*
Rs.5.65 - 8.90 ಲಕ್ಷ*
Rs.7.04 - 11.21 ಲಕ್ಷ*

ಮುಂಬರುವ ಕಾರುಗಳು

Rs.45 ಲಕ್ಷಅಂದಾಜು ದಾರ
Expected Launch: ಜೂನ, 2024
ಎಲೆಕ್ಟ್ರಿಕ್
ಎಲೆಕ್ಟ್ರಿಕ್
Rs.10 ಲಕ್ಷಅಂದಾಜು ದಾರ
Expected Launch: ಜುಲ, 2024

Write your Comment on ಮಾರುತಿ ಇಗ್‌ನಿಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ