- + 6ಬಣ್ಣಗಳು
- + 23ಚಿತ್ರಗಳು
- ವೀಡಿಯೋಸ್
ಟಾಟಾ ಟಿಯಾಗೋ
ಟಾಟಾ ಟಿಯಾಗೋ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1199 ಸಿಸಿ |
ಪವರ್ | 72.41 - 84.82 ಬಿಹೆಚ್ ಪಿ |
torque | 95 Nm - 113 Nm |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ / ಮ್ಯಾನುಯಲ್ |
mileage | 19 ಗೆ 20.09 ಕೆಎಂಪಿಎಲ್ |
ಫ್ಯುಯೆಲ್ | ಸಿಎನ್‌ಜಿ / ಪೆಟ್ರೋಲ್ |
- android auto/apple carplay
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- central locking
- ಏರ್ ಕಂಡೀಷನರ್
- ಬ್ಲೂಟೂತ್ ಸಂಪರ್ಕ
- ಪವರ್ ವಿಂಡೋಸ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- key ವಿಶೇಷಣಗಳು
- top ವೈಶಿಷ್ಟ್ಯಗಳು
ಟಿಯಾಗೋ ಇತ್ತೀಚಿನ ಅಪ್ಡೇಟ್
ಟಾಟಾ ಟಿಯಾಗೊದ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ಮೋಟಾರ್ಸ್ ಇತ್ತೀಚೆಗೆ ಸಿಎನ್‌ಜಿ ಎಎಮ್‌ಟಿ (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಟಿಯಾಗೋದ ಆವೃತ್ತಿಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಯಾಗಿದೆ ಮತ್ತು ವಾಸ್ತವವಾಗಿ, ಕ್ಲಚ್ ಪೆಡಲ್ ರಹಿತವಾದ ಚಾಲನಾ ಅನುಭವದ ಅನುಕೂಲದೊಂದಿಗೆ ಸಿಎನ್‌ಜಿ ಪವರ್‌ಟ್ರೇನ್‌ನ ಆರ್ಥಿಕತೆಯನ್ನು ಒದಗಿಸುವ ಮಾರುಕಟ್ಟೆಯಲ್ಲಿರುವ ಏಕೈಕ ಕಾರು ಇದಾಗಿದೆ.
ಟಿಯಾಗೋದ ಬೆಲೆ ಎಷ್ಟು?
ದೆಹಲಿಯಲ್ಲಿ ಟಾಟಾ ಟಿಯಾಗೊದ ಎಕ್ಸ್ ಶೋರೂಂ ಬೆಲೆಗಳು 5.65 ಲಕ್ಷ ರೂ.ಗಳಿಂದ 8.90 ಲಕ್ಷ ರೂ.ಗಳ ವರೆಗೆ ಇದೆ.
ಟಾಟಾ ಟಿಯಾಗೊದಲ್ಲಿ ಎಷ್ಟು ಆವೃತ್ತಿಗಳಿವೆ ?
ಟಾಟಾ ಟಿಯಾಗೊವನ್ನು XE, XM, XT(O), XT, XZ, ಮತ್ತು XZ+ ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಆವೃತ್ತಿಗಳು ಬೇಸಿಕ್ ಮೊಡೆಲ್‌ಗಳಿಗಿಂತ ಹೆಚ್ಚು ಸುಧಾರಿತ ಫೀಚರ್‌ಗಳೊಂದಿಗೆ ಆಯ್ಕೆಗಳ ರೇಂಜ್ ಅನ್ನು ಒದಗಿಸುತ್ತವೆ, ಖರೀದಿದಾರರು ತಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಸೂಕ್ತವಾದ ಟಿಯಾಗೋವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.
ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಟಾಟಾ ಟಿಯಾಗೊ ಎಕ್ಸ್‌ಟಿ ರಿದಮ್ ಆವೃತ್ತಿಯು 6.60 ಲಕ್ಷ ರೂ. (ಎಕ್ಸ್-ಶೋರೂಮ್) ಬೆಲೆಗೆ ಹಣಕ್ಕೆ ಹೆಚ್ಚು ಮೌಲ್ಯದ ಆಯ್ಕೆಯಾಗಿದ್ದು, ಫೀಚರ್‌ಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ಹೊಂದಿದೆ. ಈ ಆವೃತ್ತಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹರ್ಮನ್-ಕಾರ್ಡನ್ ಟ್ಯೂನ್ ಮಾಡಿದ 8-ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೀಚರ್‌ಗಳು ಒಟ್ಟಾರೆ ಚಾಲನೆ ಮತ್ತು ಮಾಲೀಕತ್ವದ ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಟಿಯಾಗೊ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಟಾಟಾ ಟಿಯಾಗೊವು ಆಧುನಿಕ ಫೀಚರ್‌ಗಳೊಂದಿಗೆ ಸುಸಜ್ಜಿತವಾಗಿದ್ದು, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಿದೆ. ಪ್ರಮುಖ ಫೀಚರ್‌ಗಳಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಸೇರಿವೆ. ಈ ಸೌಕರ್ಯಗಳು ಟಿಯಾಗೋ ಅನ್ನು ಅದರ ಸೆಗ್ಮೆಂಟ್‌ನಲ್ಲಿ ಸ್ಪರ್ಧಾತ್ಮಕ ಆಯ್ಕೆಯನ್ನಾಗಿ ಮಾಡುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಟಾಟಾ ಟಿಯಾಗೊ ವಿಶಾಲವಾದ ಮತ್ತು ಆರಾಮದಾಯಕವಾದ ಒಳಭಾಗವನ್ನು ಹೊಂದಿದ್ದು, ಲಾಂಗ್ ಡ್ರೈವ್‌ಗಳಲ್ಲಿ ಸಾಕಷ್ಟು ಬೆಂಬಲವನ್ನು ನೀಡುವ ಉತ್ತಮ-ಪ್ಯಾಡ್ಡ್ ಸೀಟ್‌ಗಳನ್ನು ಹೊಂದಿದೆ. ಚಾಲಕನ ಸೀಟ್‌ನ ಎತ್ತರವನ್ನು ಎಡ್ಜಸ್ಟ್ ಮಾಡಬಹುದು. ಹಿಂಬದಿಯ ಬೆಂಚ್ ಸರಿಯಾದ ಕುಶನ್ ಅನ್ನು ಹೊಂದಿದೆ, ಆದರೆ ಲಾಂಗ್ ಡ್ರೈವ್‌ನಲ್ಲಿ ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಆರಾಮದಾಯಕವಾಗಬಹುದು. ಬೂಟ್ ಸ್ಪೇಸ್ ವಿಶಾಲವಾಗಿದೆ, ಪೆಟ್ರೋಲ್ ಮೊಡೆಲ್‌ಗಳಲ್ಲಿ 242 ಲೀಟರ್ ವರೆಗೆ ಪಡೆಯುತ್ತದೆ. ಸಿಎನ್‌ಜಿ ಮಾಡೆಲ್‌ಗಳು ಕಡಿಮೆ ಬೂಟ್ ಸ್ಪೇಸ್ ನೀಡುತ್ತವೆಯಾದರೂ, ನೀವು ಇದರಲ್ಲಿ 2 ಸಣ್ಣ ಟ್ರಾಲಿ ಬ್ಯಾಗ್‌ಗಳು ಅಥವಾ 2-3 ಸಾಫ್ಟ್ ಬ್ಯಾಗ್‌ಗಳನ್ನು ಇಡಬಹುದು, ಕಡಿಮೆ ಬೂಟ್ ಸ್ಪೇಸ್ ಬಳಸುವ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನಕ್ಕೆ ಧನ್ಯವಾದಗಳು.
ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಟಾಟಾ ಟಿಯಾಗೊವು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಅದು 86 ಪಿಎಸ್ ಪವರ್ ಮತ್ತು 113 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ. ಸಿಎನ್‌ಜಿ ಆವೃತ್ತಿಗಳ ಎಂಜಿನ್ 73.5 ಪಿಎಸ್ ಮತ್ತು 95 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ ಮತ್ತು ಎರಡೂ ಗೇರ್‌ಬಾಕ್ಸ್‌ಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಆಯ್ಕೆಗಳು ಖರೀದಿದಾರರು ತಮ್ಮ ಆದ್ಯತೆಗಳು ಮತ್ತು ಚಾಲನಾ ಅಗತ್ಯಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಪೆಟ್ರೋಲ್, ಆಟೋಮೆಟೆಡ್ ಮ್ಯಾನುಯಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಪರಿಗಣಿಸಲು ಅನುಮತಿಸುತ್ತದೆ.
ಟಿಯಾಗೊದಲ್ಲಿ ಮೈಲೇಜ್ ಏಷ್ಟಿದೆ ?
ಟಾಟಾ ಟಿಯಾಗೊದ ಇಂಧನ ದಕ್ಷತೆಯು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಯನ್ನು ಅವಲಂಬಿಸಿ ಬದಲಾಗುತ್ತದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಪೆಟ್ರೋಲ್ ಆವೃತ್ತಿಗಾಗಿ, ಇದು ಪ್ರತಿ ಲೀ.ಗೆ 20.01 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ಎಎಮ್‌ಟಿ ಆವೃತ್ತಿಯು ಪ್ರತಿ ಲೀ.ಗೆ 19.43 ಕಿ.ಮೀ ಯಷ್ಟು ದೂರವನ್ನು ಕ್ರಮಿಸುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ, ಟಿಯಾಗೋ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರಭಾವಶಾಲಿಯಾಗಿ ಪ್ರತಿ ಕೆ.ಜಿ.ಗೆ 26.49 ಕಿ.ಮೀ.ಯಷ್ಟು ಮತ್ತು ಎಎಮ್‌ಟಿಯಲ್ಲಿ ಪ್ರತಿ ಕೆ.ಜಿ.ಗೆ 28.06 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇವು ARAI ನಿಂದ ರೇಟ್ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳಾಗಿವೆ ಮತ್ತು ಭಾರತೀಯ ರಸ್ತೆಗಳ ಪರಿಸ್ಥಿತಿಯ ಅವಲಂಬಿಸಿ ಸಂಖ್ಯೆಗಳು ಭಿನ್ನವಾಗಿರಬಹುದು.
ಟಾಟಾ ಟಿಯಾಗೊ ಎಷ್ಟು ಸುರಕ್ಷಿತ?
ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಕಾರ್ನರಿಂಗ್ ಸ್ಟೇಬಿಲಿಟಿ ಕಂಟ್ರೋಲ್ ಅನ್ನು ಒಳಗೊಂಡಿರುವ ಟಾಟಾ ಟಿಯಾಗೊಗೆ ಸುರಕ್ಷತೆಯು ಆದ್ಯತೆಯಾಗಿದೆ. ಟಿಯಾಗೊ 4/5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಸಹ ಗಳಿಸಿದೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಟಾಟಾ ಟಿಯಾಗೊವು ಮಿಡ್‌ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ, ಟೊರ್ನಾಡೋ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ನಾವು ವಿಶೇಷವಾಗಿ ಫ್ಲೇಮ್ ರೆಡ್ ಅನ್ನು ಇಷ್ಟಪಡುತ್ತೇವೆ, ಇದು ಬಣ್ಣದ ಆಯ್ಕೆಗಳ ಪಟ್ಟಿಯಲ್ಲಿ ಎದ್ದು ಕಾಣುತ್ತದೆ, ಏಕೆಂದರೆ ಅದು ಬೋಲ್ಡ್ ಮತ್ತು ಎನೆರ್ಜಿಟಿಕ್ ಆಗಿ ಕಾಣುತ್ತದೆ. ತಮ್ಮ ಕಾರಿನ ಮೇಲೆ ಎಲ್ಲರ ಗಮನವನ್ನು ಸೆಳೆಯಲು ಬಯಸುವವರಿಗೆ ಇದು ಸೂಕ್ತವಾಗಿದೆ.
ಟಾಟಾ ಟಿಯಾಗೋವನ್ನು ಖರೀದಿಸಬಹುದಾ ?
ಟಾಟಾ ಟಿಯಾಗೊ ಬಜೆಟ್ ಸ್ನೇಹಿ ಹ್ಯಾಚ್‌ಬ್ಯಾಕ್ ಆಗಿ ಕಾರು ಖರೀದಿಸಲು ಇಚ್ಚಿಸುವವರಿಗೆ ಬಲವಾದ ಆಯ್ಕೆಯಾಗಿದೆ. ಅದರ ಹೊಸ ಸಿಎನ್‌ಜಿ ಎಎಮ್‌ಟಿ ಆವೃತ್ತಿಗಳು, ವಿವಿಧ ಫೀಚರ್‌ಗಳು ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ, ಇದು ಎಲ್ಲಾ ರೇಂಜ್‌ನ ಖರೀದಿದಾರರನ್ನು ಕವರ್ ಮಾಡುತ್ತದೆ. ಟಿಯಾಗೋದ ಪ್ರಾಯೋಗಿಕ ವಿನ್ಯಾಸ, ಆಧುನಿಕ ಸೌಕರ್ಯಗಳು, ಸಾಲಿಡ್ ಆಗಿರುವ ನಿರ್ಮಾಣದ ಗುಣಮಟ್ಟ ಮತ್ತು ಸುರಕ್ಷತಾ ಪ್ಯಾಕೇಜ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಎಂಟ್ರಿ-ಲೆವೆಲ್‌ನ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದೆ.
ನನ್ನ ಪರ್ಯಾಯಗಳು ಯಾವುವು?
ಸ್ಪರ್ಧಾತ್ಮಕ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ, ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ನಂತಹ ಮೊಡೆಲ್‌ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಎಲೆಕ್ಟ್ರಿಕ್ ಆಯ್ಕೆಗಳನ್ನು ಪರಿಗಣಿಸುವವರಿಗೆ, ಟಾಟಾ ಟಿಯಾಗೊ ಇವಿಯು ಇದೇ ಸೆಗ್ಮೆಂಟ್‌ನಲ್ಲಿ ಪರಿಸರ ಸ್ನೇಹಿ ಪರ್ಯಾಯವನ್ನು ನೀಡುತ್ತದೆ.
ಟಿಯಾಗೋ XE(ಬೇಸ್ ಮಾಡೆಲ್)1199 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹5 ಲಕ್ಷ* | ||
ಟಿಯಾಗೋ ಎಕ್ಸೆಎಮ್1199 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹5.70 ಲಕ್ಷ* | ||
ಟಿಯಾಗೋ XE ಸಿಎನ್‌ಜಿ1199 ಸಿಸಿ, ಮ್ಯಾನುಯಲ್, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹6 ಲಕ್ಷ* | ||
ಅಗ್ರ ಮಾರಾಟ ಟಿಯಾಗೋ ಎಕ್ಸ್ಟಟಿ1199 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹6.30 ಲಕ್ಷ* | ||
ಅಗ್ರ ಮಾರಾಟ ಟಿಯಾಗೋ ಎಕ್ಸೆಎಮ್ ಸಿಎನ್‌ಜಿ1199 ಸಿಸಿ, ಮ್ಯಾನುಯಲ್, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹6.70 ಲಕ್ಷ* | ||
ಟಿಯಾಗೋ ಎಕ್ಸಟಿಅ ಎಎಂಟಿ1199 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 19 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹6.85 ಲಕ್ಷ* | ||
ಟಿಯಾಗೋ ಎಕ್ಸಝಡ್1199 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹6.90 ಲಕ್ಷ* | ||
ಟಿಯಾಗೋ ಎಕ್ಸ್ಟಟಿ ಸಿಎನ್‌ಜಿ1199 ಸಿಸಿ, ಮ್ಯಾನುಯಲ್, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹7.30 ಲಕ್ಷ* | ||
ಟಿಯಾಗೋ ಟಿಯಾಗೊ ಎಕ್ಸ್ ಝಡ್ ಪ್ಲಸ್1199 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹7.30 ಲಕ್ಷ* | ||
ಟಿಯಾಗೋ ಎಕ್ಸಟಿಅ ಎಎಂಟಿ ಸಿಎನ್‌ಜಿ1199 ಸಿಸಿ, ಆಟೋಮ್ಯಾಟಿಕ್, ಸಿಎನ್‌ಜಿ, 28.06 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹7.85 ಲಕ್ಷ* | ||
ಟಿಯಾಗೋ ಎಕ್ಸಝಡ್ ಸಿಎನ್‌ಜಿ1199 ಸಿಸಿ, ಮ್ಯಾನುಯಲ್, ಸಿಎನ್‌ಜಿ, 20.09 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹7.90 ಲಕ್ಷ* | ||
ಟಿಯಾಗೋ ಟಿಯಾಗೊ ಎಕ್ಸ್ ಝಡ್ಎ ಎಎಂಟಿ ಸಿಎನ್‌ಜಿ(ಟಾಪ್ ಮೊಡೆಲ್)1199 ಸಿಸಿ, ಆಟೋಮ್ಯಾಟಿಕ್, ಸಿಎನ್‌ಜಿ, 20.09 ಕಿಮೀ / ಕೆಜಿ1 ತಿಂಗಳು ವೈಟಿಂಗ್ | ₹8.45 ಲಕ್ಷ* |
ಟಾಟಾ ಟಿಯಾಗೋ ವಿಮರ್ಶೆ
Overview
ಟಾಟಾವು ಟಿಯಾಗೊಗೆ ಈ ವರ್ಷದ ಹೊಸದಾದ ಆಪ್‌ಡೇಟ್ ಅನ್ನು ನೀಡಿದೆ ಮತ್ತು ಅದರೊಂದಿಗೆ ಬಹು ನಿರೀಕ್ಷಿತ ಸಿಎನ್‌ಜಿ ಆಯ್ಕೆಯನ್ನು ನೀಡಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಇದು ಎಷ್ಟು ಅಗ್ಗವಾಗಿದೆ ಮತ್ತು ಅದರ ಮಿತಿಗಳೇನು ಎಂಬುದನ್ನು ನಾವು ಕಂಡುಕೊಂಡಿದ್ದೇವೆ.
2020ರ ಜನವರಿಯಲ್ಲಿ, ಟಾಟಾ ಫೇಸ್‌ಲಿಫ್ಟೆಡ್ ಟಿಯಾಗೊವನ್ನು ಬಿಡುಗಡೆ ಮಾಡಿತು. ಎರಡು ವರ್ಷಗಳ ನಂತರ ಮತ್ತು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಇದೀಗ ಮೊಡೆಲ್ ಇಯರ್‌ನ ಆಪ್‌ಡೇಟ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ, ಟಿಯಾಗೊ ಬಹು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ ಮತ್ತು ಬಹುಶಃ ಕಂಪೆನಿಯಿಂದಲೇ ಬರುವ ಸಿಎನ್‌ಜಿ ಕಿಟ್ ಆಯ್ಕೆಯು ಅತಿದೊಡ್ಡ ಆಪ್‌ಡೇಟ್ ಆಗಿದೆ. ಈ ಸೆಗ್ಮೆಂಟ್‌ನಲ್ಲಿ ಸಿಎನ್‌ಜಿಯನ್ನು ಟಾಟಾವನ್ನು ತಡವಾಗಿ ನೀಡಿದರೂ, ನೀವು ಅದನ್ನು ಪರಿಗಣಿಸಲು ಕೆಲವು ಬಲವಾದ ಕಾರಣಗಳಿವೆ. ಮತ್ತು ಈ ವಿಮರ್ಶೆಯು ಟಿಯಾಗೊದ CNG ಆವೃತ್ತಿಯ ಮೇಲೆ ಕೇಂದ್ರೀಕೃತವಾಗಿದ್ದು, ಬನ್ನಿ ನಾವು ಅಲ್ಲಿಂದ ಪ್ರಾರಂಭಿಸೋಣ.
ಎಕ್ಸ್‌ಟೀರಿಯರ್
2020 ರಲ್ಲಿ ಫೇಸ್‌ಲಿಫ್ಟೆಡ್ ಟಿಯಾಗೊವನ್ನು ಬಿಡುಗಡೆ ಮಾಡಿದಾಗ, ಇದು ಆಲ್ಟ್ರೊಜ್ ತರಹದ ತೀಕ್ಷ್ಣವಾದ ಮುಂಭಾಗದ ಪ್ರೊಫೈಲ್ ಮತ್ತು ಟಾಟಾದ ಟ್ರೈ-ಆರೋವನ್ನು ಒಳಗೆ ಮತ್ತು ಹೊರಗೆ ವಿವರಿಸುವ ಹಲವಾರು ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಪಡೆದುಕೊಂಡಿತ್ತು. ಈ ಸಮಯದಲ್ಲಿ ಟಾಟಾ ಅದರ ಮೇಲೆ ಇನ್ನೂ ಕೆಲವು ಕ್ರೋಮ್ ಅನ್ನು ಸೇರಿಸಲು ನಿರ್ಧರಿಸಿದೆ, ಅದನ್ನು ಸೂಕ್ಷ್ಮವಾಗಿ ಮಾಡಲಾಗುತ್ತದೆ ಮತ್ತು ಹ್ಯಾಚ್‌ಬ್ಯಾಕ್‌ಗೆ ಸ್ವಲ್ಪ ಕ್ಲಾಸ್ ಲುಕ್ ಅನ್ನು ಸೇರಿಸುತ್ತದೆ. 2022 ರ ಟಿಯಾಗೊ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಬರುತ್ತದೆ, ಎರಡನೆಯದನ್ನು ಫಾಗ್ ಲ್ಯಾಂಪ್‌ಗಳ ಬಳಿ ಇರಿಸಲಾಗಿದೆ. ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ ಹೊಸ ಮಿಡ್‌ನೈಟ್ ಪ್ಲಮ್ ಶೇಡ್ ಕೂಡ ಇದೆ, ಇದು ಡಾರ್ಕ್ ಎಡಿಷನ್ ಟಿಯಾಗೊದ ಜಾಗವನ್ನು ತುಂಬಲು ಸಹಾಯ ಮಾಡುತ್ತದೆ.


ಬದಿಯಿಂದ ಗಮನಿಸುವಾಗ, ನೀವು ಗುರುತಿಸುವ ಎರಡು ಹೊಸ ಬದಲಾವಣೆಗಳೆಂದರೆ ಡೋರ್ ಹ್ಯಾಂಡಲ್‌ಗಳಲ್ಲಿನ ಕ್ರೋಮ್ ಗಾರ್ನಿಶ್ ಮತ್ತು ಹೊಸ 14-ಇಂಚಿನ ಸ್ಟೈಲಿಶ್ ವೀಲ್ ಕವರ್‌ಗಳು, ಇದು ಸ್ಟೀಲ್‌ನ ವೀಲ್‌ಗಳನ್ನು ಡ್ಯುಯಲ್-ಟೋನ್ ಅಲಾಯ್‌ಗಳಂತೆ ಕಾಣುವಂತೆ ಮಾಡುತ್ತದೆ. ಟಿಯಾಗೋ ಈ ವೇರಿಯೆಂಟ್‌ನಲ್ಲಿ ಅಲಾಯ್ ವೀಲ್‌ಗಳನ್ನು ಪಡೆದರೂ, ಸಿಎನ್‌ಜಿ ವೇರಿಯೆಂಟ್‌ಗಳು ಇದನ್ನು ಹೊಂದಿಲ್ಲ. ಟಯಾಗೊದ ಹಿಂಭಾಗದ ಪ್ರೊಫೈಲ್ ಈಗ ಕ್ರೋಮ್ ಸ್ಟ್ರಿಪ್ ಮತ್ತು ಬೂಟ್ ಲಿಡ್‌ನಲ್ಲಿರುವ 'iCNG' ಬ್ಯಾಡ್ಜ್ ಸೇರಿದಂತೆ ಕೆಲವು ವ್ಯತ್ಯಾಸಗಳನ್ನು ಪಡೆಯುತ್ತದೆ. ಒಟ್ಟಾರೆಯಾಗಿ, ಇದು ಈ ಸೆಗ್ಮೆಂಟ್‌ನ ಉತ್ತಮ ಹ್ಯಾಚ್‌ಬ್ಯಾಕ್ ಆಗಿದೆ.
ಇಂಟೀರಿಯರ್
ಪ್ರಾರಂಭದಿಂದಲೂ, ಟಿಯಾಗೊ ಭಾರತದಲ್ಲಿ ಉತ್ತಮವಾಗಿ ಲೋಡ್ ಮಾಡಲಾದ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ. ಇಲ್ಲಿಯವರೆಗೆ, ಟಿಯಾಗೊವನ್ನು ಕಪ್ಪು ಮತ್ತು ಬೂದು ಬಣ್ಣದ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ಆಪ್‌ಡೇಟ್‌ನೊಂದಿಗೆ, ಟಾಪ್-ಸ್ಪೆಕ್ XZ+ ಟ್ರಿಮ್ ಈಗ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಕ್ಯಾಬಿನ್ ಸೆಟಪ್ ಅನ್ನು ಪಡೆಯುವುದರಿಂದ ಟಾಟಾ ವಿಷಯಗಳನ್ನು ಸ್ವಲ್ಪಮಟ್ಟಿಗೆ ಆಪ್‌ಡೇಟ್ ಮಾಡಲು ಪ್ರಯತ್ನಿಸಿದೆ. ಹೊಸ ಸೀಟ್ ಕವರ್ ಒಳಭಾಗದಲ್ಲಿನ ಬದಲಾವಣೆಗಳನ್ನು ಹೆಚ್ಚಿಸುತ್ತದೆ.
ಇಂಟಿರಿಯರ್‌ನ ನಿರ್ಮಾಣ ಗುಣಮಟ್ಟ ಮತ್ತು ಫಿಟ್-ಫಿನಿಶ್ ಸಹ ಆಕರ್ಷಕವಾಗಿದೆ. ಸೀಟ್‌ಗಳನ್ನು ಸಹ ಚೆನ್ನಾಗಿ ಪ್ಯಾಡ್ ಮಾಡಲಾಗಿದೆ ಮತ್ತು ಲಾಂಗ್ ಡ್ರೈವ್‌ನ ಸಮಯದಲ್ಲಿ ನಿಮ್ಮನ್ನು ಆರಾಮವಾಗಿ ಹಿಡಿದಿಡಲು ಸರಿಯಾದ ಬಾಹ್ಯರೇಖೆಯನ್ನು ಹೊಂದಿವೆ. ಅಲ್ಲದೆ, ಚಾಲಕನು ಎತ್ತರ ಹೊಂದಾಣಿಕೆಯ ಸೀಟನ್ನು ಪಡೆದರೆ, ಪ್ರಯಾಣಿಕರ ಆಸನವು ಸ್ವಲ್ಪ ಎತ್ತರವಿದ್ದಂತೆ ಭಾಸವಾಗುತ್ತದೆ ಮತ್ತು ಎತ್ತರವನ್ನು ಆಡ್ಜಸ್ಟ್ ಮಾಡಲಾಗುವುದಿಲ್ಲ. ಎತ್ತರದ ಪ್ರಯಾಣಿಕರಿಗೆ ಕಾರಿನ ಮೇಲೆ ಕುಳಿತುಕೊಂಡ ಅನುಭವವಾಗುತ್ತದೆ.
ಹಿಂಭಾಗದಲ್ಲಿ, ಬೆಂಚ್ ಕೂಡ ಚೆನ್ನಾಗಿರುವ ಕುಶನ್ ಮತ್ತು ಬಾಹ್ಯರೇಖೆಯನ್ನು ಆನ್ನು ಹೊಂದಿದೆ. ಇದು ಇಬ್ಬರಿಗೆ ಸೂಕ್ತವಾಗಿದ್ದರೂ, ನಗರದೊಳಗಿನ ಪ್ರಯಾಣದಲ್ಲಿ ಮೂವರಿಗೆ ಕುಳಿತುಕೊಳ್ಳಲು ಸಮಸ್ಯೆಯಾಗುವುದಿಲ್ಲ. ಆದರೆ, ಹಿಂಭಾಗದ ಹೆಡ್‌ರೆಸ್ಟ್‌ಗಳನ್ನು ಆಡ್ಜಸ್ಟ್ ಮಾಡಲಾಗುವುದಿಲ್ಲ, ಇದು ಕುತ್ತಿಗೆಗೆ ಹೆಚ್ಚಿನ ಸಪೋರ್ಟ್ ಅನ್ನು ನೀಡದಂತೆ ಮಾಡುತ್ತದೆ. ಟಾಟಾ ಇಲ್ಲಿ ಆರ್ಮ್‌ರೆಸ್ಟ್ ಅಥವಾ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಸೇರಿಸಿದ್ದರೆ, ಅನುಭವವು ಇನ್ನೂ ಉತ್ತಮವಾಗಿರುತ್ತದೆ.
ಕ್ಯಾಬಿನ್ ಪ್ರಾಯೋಗಿಕತೆಯನ್ನು ಪರಿಗಣಿಸಿದರೆ, ಟಿಯಾಗೊ ಹ್ಯಾಂಡ್‌ಬ್ರೇಕ್ ಬಳಿ ಎರಡು ಕಪ್ ಹೋಲ್ಡರ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ನಿಮ್ಮ ಫೋನ್ ಅನ್ನು ಸಂಗ್ರಹಿಸಲು ಸ್ಥಳ ಮತ್ತು ಡ್ಯಾಶ್‌ಬೋರ್ಡ್‌ನ ಚಾಲಕನ ಬದಿಯಲ್ಲಿ ಕ್ಯೂಬಿ ಹೋಲ್ ಅನ್ನು ಪಡೆಯುತ್ತದೆ. ಇದು ಎಲ್ಲಾ ನಾಲ್ಕು ಬಾಗಿಲುಗಳಲ್ಲಿ ಮ್ಯಾಪ್ ಪಾಕೆಟ್‌ಗಳು ಮತ್ತು ಬಾಟಲಿ ಹೋಲ್ಡರ್‌ಗಳನ್ನು ಸಹ ಹೊಂದಿದೆ. ಆದರೆ, ಮ್ಯಾಪ್ ಪಾಕೆಟ್‌ಗಳು ತೆಳ್ಳಗಿದ್ದು, ಕಾಗದ ಮತ್ತು ಬಟ್ಟೆಯನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಸೂಕ್ತವಲ್ಲ.
ಸುರಕ್ಷತೆ
ಟಿಯಾಗೋದ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್‌ಗಳಲ್ಲಿ ಟೈರ್ ಪಂಕ್ಚರ್ ರಿಪೇರಿ ಕಿಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿವೆ. ಮತ್ತು ಇದು ಸಿಎನ್‌ಜಿ ವೇರಿಯೆಂಟ್ ಆಗಿರುವುದರಿಂದ, ನೀವು ಪ್ರಯಾಣಿಕರ ಸೀಟಿನ ಬಳಿ ಅಗ್ನಿಶಾಮಕವನ್ನು ಸಹ ಪಡೆಯುತ್ತೀರಿ. ಟಿಯಾಗೋದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ 4-ಸ್ಟಾರ್ ರೇಟಿಂಗ್ ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ.
ಬೂಟ್‌ನ ಸಾಮರ್ಥ್ಯ


ನೀವು ಬಹುಶಃ ಊಹಿಸುವಂತೆ, ಸಿಎನ್‌ಜಿ ಕಿಟ್‌ನ ಪರಿಚಯದೊಂದಿಗೆ ದೊಡ್ಡ ಹೊಡೆತವನ್ನು ಎದುರಿಸುತ್ತಿರುವ ಒಂದು ವಿಷಯವೆಂದರೆ ಹ್ಯಾಚ್‌ಬ್ಯಾಕ್‌ನ ಬೂಟ್ ಸ್ಪೇಸ್. ಸಿಎನ್‌ಜಿ ಇಲ್ಲದ ವೇರಿಯೆಂಟ್‌ಗಳು 242 ಲೀಟರ್‌ಗಳ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ, ಆದರೆ ಸಿಎನ್‌ಜಿ ಇಂಧನ ಆಯ್ಕೆಯನ್ನು ಹೊಂದಿರುವವರು ಅತಿ ಕಡಿಮೆ ಎಂಬಂತೆ ಲ್ಯಾಪ್‌ಟಾಪ್ ಬ್ಯಾಗ್‌ಗಳನ್ನು ಇರಿಸಿಕೊಳ್ಳಲು ಮಾತ್ರ ಜಾಗವನ್ನು ಹೊಂದಿರುತ್ತಾರೆ. ಅಲ್ಲದೆ, ಬ್ಯಾಗ್‌ಗಳನ್ನು ಇಟ್ಟುಕೊಳ್ಳುವುದು ಬೂಟ್‌ನಿಂದ ಸಾಧ್ಯವಾಗುವುದಿಲ್ಲ, ಆದರೆ ಹಿಂಭಾಗದ ಸೀಟುಗಳನ್ನು ಮಡಚಿ ಸಿಎನ್‌ಜಿ ಟ್ಯಾಂಕ್ ಅಡಿಯಲ್ಲಿರುವ ಸ್ಟೋರೇಜ್ ಪ್ರದೇಶದಲ್ಲಿ ಬ್ಯಾಗ್‌ಅನ್ನು ಇಡಬೇಕಾಗುತ್ತದೆ. ನೀವು ಸ್ಪೇರ್ ವೀಲ್ ಅನ್ನು ಪಡೆಯಲು ಸಹ ಇದೇ ರೀತಿ ಸರ್ಕಸ್ ಮಾಡಬೇಕಾಗುತ್ತದೆ. ಟಾಟಾವು ಈ ಕಾರಿನೊಂದಿಗೆ ಪಂಕ್ಚರ್ ರಿಪೇರಿ ಕಿಟ್ ಅನ್ನು ನೀಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ.
ನೀವು ಮಾರುತಿಯ ಸಿಎನ್‌ಜಿ ಮೊಡೆಲ್‌ಗಳನ್ನು ಪರಿಗಣಿಸಿದರೆ, ಅವುಗಳ ಬೂಟುಗಳು ಹೆಚ್ಚಿನ ಶೇಖರಣಾ ಸಾಮರ್ಥ್ಯವನ್ನು ನೀಡುತ್ತವೆ. ಏಕೆಂದರೆ ಕಾರು ತಯಾರಕರು ಚುರುಕಾಗಿ ಸ್ಪೇರ್ ವೀಲ್ ಅನ್ನು ಲಂಬವಾಗಿ ಇರಿಸಿದ್ದಾರೆ ಮತ್ತು ಸಿಎನ್‌ಜಿ ಟ್ಯಾಂಕ್ ಬೂಟ್‌ನ ಒಳಗೆ ಮತ್ತು ಕೆಳಗೆ ಇದೆ. ಇದು ಮಾಲೀಕರು ತಮ್ಮ ಸಾಫ್ಟ್ ಅಥವಾ ಡಫಲ್ ಚೀಲಗಳನ್ನು ಲಭ್ಯವಿರುವ ಪ್ರದೇಶದಲ್ಲಿ ಇರಿಸಲು ಅನುಮತಿಸುತ್ತದೆ. ಟಾಟಾ ಕೂಡ ಇದೇ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕು.
ಕಾರ್ಯಕ್ಷಮತೆ
ಟಿಯಾಗೋ ಇನ್ನೂ ಅದೇ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಒಪ್ಶನಲ್ 5-ಸ್ಪೀಡ್ ಎಎಮ್‌ಟಿಯೊಂದಿಗೆ ಬರುತ್ತದೆ. ಆದರೆ, ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ, ನೀವು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಮಾತ್ರ ಪಡೆಯುತ್ತೀರಿ. ಒಳ್ಳೆಯ ವಿಷಯವೆಂದರೆ ಪೆಟ್ರೋಲ್‌ನ 86 ಪಿಎಸ್/113 ಎನ್‌ಎಮ್ ಟ್ಯೂನ್ ಅನ್ನು ಸಿಎನ್‌ಜಿ ಯ ಪೆಟ್ರೋಲ್ ಮೋಡ್‌ಗೂ ನೀಡಲಾಗುತ್ತದೆ. ಆದರೆ ಸಿಎನ್‌ಜಿಗೆ ಬಂದಾಗ ಇದರ ಔಟ್‌ಪುಟ್ 73 ಪಿಎಸ್/95 ಎನ್‌ಎಮ್‌ನಷ್ಟು ಮಾತ್ರ ಇರುತ್ತದೆ. ಅಲ್ಲದೆ, ಟಾಟಾ ಕಾರ್ ಅನ್ನು ಪೆಟ್ರೋಲ್‌ಗಿಂತ ಹೆಚ್ಚಾಗಿ ಸಿಎನ್‌ಜಿ ಮೋಡ್‌ನಲ್ಲಿ ಸ್ಟಾರ್ಟ್ ಆಗುವ ಕಾರ್ಯವನ್ನು ಸೇರಿಸಿದೆ, ಇದು ಈ ಸೆಗ್ಮೆಂಟ್‌ನಲ್ಲಿ ಇದನ್ನು ಪ್ರಥಮ ಬಾರಿಗೆ ನೀಡಲಾಗುತ್ತಿದೆ.
ಕಡಿಮೆ ಟ್ಯೂನ್ ಹೊರತಾಗಿಯೂ, ಟಾಟಾ ಉತ್ತಮವಾಗಿ ನಿರ್ವಹಿಸಿದ್ದು ಎರಡು ಇಂಧನ ವಿಧಾನಗಳ ನಡುವಿನ ಎಂಜಿನ್ ಅನುಭವವಾಗಿದೆ. ಚಲನೆಯಲ್ಲಿ, ಸಿಎನ್‌ಜಿ ಪವರ್‌ಟ್ರೇನ್ ಪೆಟ್ರೋಲ್‌ನಂತೆ ಪರಿಷ್ಕರಿಸಲ್ಪಟ್ಟಂತೆ ಭಾಸವಾಗುತ್ತದೆ, ಹೆಚ್ಚಿನ ವೇಗಗಳಲ್ಲಿ ಸಾಗುವಾಗ ಮಾತ್ರ ಸಣ್ಣ-ಸಣ್ಣ ವ್ಯತ್ಯಾಸಗಳು ಗೋಚರವಾಗುತ್ತದೆ. ನೀವು ಸೂಕ್ಷ್ಮ ವೀಕ್ಷಕರಾಗಿದ್ದರೆ ಮಾತ್ರ, ಇಲ್ಲದಿದ್ದರೆ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ನಲ್ಲಿ ಚಾಲನೆ ಮಾಡುವುದು ಬಹುತೇಕ ಒಂದೇ ಆಗಿರುತ್ತದೆ. ಏಕೆಂದರೆ, ಟಿಯಾಗೋದ ಎಂಜಿನ್ ಇ ಸೆಗ್ಮೆಂಟ್‌ನಲ್ಲಿ ಎಂದಿಗೂ ಹೆಚ್ಚು ಪರಿಷ್ಕೃತವಾಗಿಲ್ಲ ಮತ್ತು ಅದನ್ನು ಸುಗಮವಾಗಿ ಓಡಿಸಲು ಮತ್ತು ಕ್ಯಾಬಿನ್‌ಗೆ ಹರಿದಾಡುವ ಎಂಜಿನ್ ಶಬ್ದವನ್ನು ಕಡಿಮೆ ಮಾಡುವಲ್ಲಿ ಟಾಟಾ ಇನ್ನೂ ಸ್ವಲ್ಪ ಹೆಚ್ಚು ಶ್ರಮವಹಿಸಿದ್ದರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು.
ನಿಮ್ಮ ಬಳಕೆಯ ಬಹುಪಾಲು ನಗರ ಮಿತಿಯೊಳಗೆ ಮತ್ತು ಸಿಎನ್‌ಜಿ ಮೋಡ್‌ನಲ್ಲಿದ್ದರೆ, ಟಿಯಾಗೋ ಸಿಎನ್‌ಜಿ ಸಿಎನ್‌ಜಿ ನಿಮಗೆ ಹೆಚ್ಚಿನ ಶ್ರಮವನ್ನು ನೀಡದೆ, ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತದೆ. ಸಾಕಷ್ಟು ಕಡಿಮೆ ಇರುವ ಟಾರ್ಕ್‌ನಿಂದಾಗಿ ಟ್ರಾಫಿಕ್ ಲೈನ್‌ನಿಂದ ಹೊರಬರುವುದು ಮತ್ತು ಮುಂದೆ ಸಾಗುವುದು ಪ್ರಯತ್ನರಹಿತವಾಗಿದೆ. ಗ್ಯಾಪ್‌ಗಳಿಗೆ ಹೋಗುವುದು ಮತ್ತು ಓವರ್‌ಟೇಕ್‌ಗಳನ್ನು ಮಾಡುವ ವಿಷಯಕ್ಕೆ ಬಂದಾಗಲೂ, ನೀವು ಸರಿಯಾದ ಗೇರ್‌ನಲ್ಲಿದ್ದರೆ ಟಿಯಾಗೊವು ಉತ್ತಮವಾಗಿ ಚಲಿಸುತ್ತದೆ. ಎಂಜಿನ್‌ನ ಸ್ಟ್ರಾಂಗ್ ಮಿಡ್-ರೇಂಜ್ ಎಂಜಿನ್ ನಗರದಲ್ಲಿ ಹೆಚ್ಚಾಗಿ ನಿಮ್ಮನ್ನು 2 ನೇ ಮತ್ತು 3 ನೇ ಗೇರ್‌ನಲ್ಲಿ ಪ್ರಯಾಣಿಸಲು ಅನುಮತಿಸುತ್ತದೆ. ತ್ವರಿತ ಓವರ್‌ಟೇಕ್‌ಗೆ ಡೌನ್‌ಶಿಫ್ಟ್ ಅಗತ್ಯವಿರುತ್ತದೆ ಮತ್ತು ಅದೂ ಸಹ ಅದರ ಸುಲಭ ಗೇರ್‌ಶಿಫ್ಟ್‌ನ ಕ್ರಿಯೆ ಮತ್ತು ಲೈಟ್ ಕ್ಲಚ್‌ನೊಂದಿಗೆ ಸಲೀಸಾಗಿ ಸಂಭವಿಸುತ್ತದೆ.
ಸಿಎನ್‌ಜಿಯಲ್ಲಿನ ಪವರ್ ಡೆಲಿವೆರಿಯು ಅತ್ಯಂತ ರೇಖೀಯ ಶೈಲಿಯಲ್ಲಿ ನಡೆಯುತ್ತದೆ, ಇದು ದೈನಂದಿನ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಆದರೆ, ಕೆಲವೊಮ್ಮೆ ಇದು ನಿಮಗೆ ಸ್ವಲ್ಪ ಹೆಚ್ಚು ಪವರ್‌ನ ಬಯಸುವಂತೆ ಮಾಡುತ್ತದೆ. ಪೆಟ್ರೋಲ್ ಮೋಡ್‌ನಲ್ಲಿಯೂ ಸಹ, ರೇಖೀಯ ಆಕ್ಸಿಲರೇಶನ್‌ನೊಂದಿಗೆ ಅನುಭವವು ಒಂದೇ ಆಗಿರುತ್ತದೆ. ನಮ್ಮ ಪರ್ಫಾರ್ಮೆನ್ಸ್ ಪರೀಕ್ಷೆಯಲ್ಲಿ, 3ನೇ ಗೇರ್‌ನಲ್ಲಿ 30-80kmph ವೇಗವರ್ಧನೆಯಲ್ಲಿ ಕೇವಲ 1 ಸೆಕೆಂಡ್‌ನ ವ್ಯತ್ಯಾಸವಿತ್ತು. ಇದು ಸಿಎನ್‌ಜಿಯಲ್ಲಿ ಪ್ರಭಾವಶಾಲಿ ಸಾಧನೆ.
ಆಕ್ಸಿಲರೇಶನ್ | ಪೆಟ್ರೋಲ್‌ನಲ್ಲಿ | ಸಿಎನ್‌ಜಿಯಲ್ಲಿ | ವ್ಯತ್ಯಾಸ |
0-100kmph | 15.51 ಸೆಕೆಂಡ್‌ಗಳು | 17.28 ಸೆಕೆಂಡ್‌ಗಳು | 1.77 ಸೆಕೆಂಡ್‌ಗಳು |
30-40kmph (3ನೇ ಗೇರ್) | 12.76 ಸೆಕೆಂಡ್‌ಗಳು | 13.69 ಸೆಕೆಂಡ್‌ಗಳು | 0.93 ಸೆಕೆಂಡ್‌ಗಳು |
40-100kmph (4ನೇ ಗೇರ್) | 22.33 ಸೆಕೆಂಡ್‌ಗಳು (BS IV) | 24.50 ಸೆಕೆಂಡ್‌ಗಳು | 2.17 ಸೆಕೆಂಡ್‌ಗಳು |
ಸಿಎನ್‌ಜಿ ಮೋಡ್‌ನ ಆಕ್ಸಿಲರೇಶನ್ ಹೆಚ್ಚಿನ rpms ನಲ್ಲಿದ್ದಾಗಲೂ, ಇದು ಸ್ವಲ್ಪ ಹಿನ್ನಡೆ ಅನುಭವಿಸುತ್ತದೆ. ಆದರೆ ಇಲ್ಲಿ ಪೆಟ್ರೋಲ್ ಮೋಡ್ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ, ವಿಶೇಷವಾಗಿ ಹೆದ್ದಾರಿಯಲ್ಲಿ ಓವರ್‌ಟೇಕ್ ಮಾಡುವ ಸಮಯದಲ್ಲಿ. ಆಕ್ಸಿಲರೇಶನ್‌ನಲ್ಲಿ ಸ್ಪಷ್ಟ ಬದಲಾವಣೆ ಇರುವುದರಿಂದ ನೀವು ಹೆಚ್ಚಿನ ಆರ್‌ಪಿಎಮ್‌ಗಳಲ್ಲಿ ಡ್ರೈವ್ ಮಾಡಲು ಪ್ರಯತ್ನಿಸುತ್ತಿರುವಾಗ ಪೆಟ್ರೋಲ್‌ಗೆ ಬದಲಾಯಿಸುವುದು ಉತ್ತಮ. ಅದಕ್ಕಾಗಿಯೇ 100kmph ಗೆ ಸಂಪೂರ್ಣ ವೇಗವರ್ಧನೆಯಲ್ಲಿ, ಎರಡು ಇಂಧನ ವಿಧಾನಗಳ ನಡುವಿನ ವ್ಯತ್ಯಾಸವು ಸುಮಾರು 2 ಸೆಕೆಂಡುಗಳಷ್ಟಿದೆ. ಈ ವಿಷಯದಲ್ಲಿ ಮಾತ್ರ ನೀವು ಪೆಟ್ರೋಲ್‌ಗೆ ಬದಲಾಯಿಸುವ ಚಿಂತನೆಯನ್ನು ಮಾಡಬೇಕಾಗುತ್ತದೆ. ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಮೋಡ್ ಅನ್ನು ಬದಲಾಯಿಸಲು ಸೂಕ್ತವಾದ ಸ್ವಿಚ್ ಬಟನ್ ಬಂದಾಗ. ಪ್ರತಿ ಬಾರಿಯೂ, ಸಿಎನ್‌ಜಿ ಮೋಡ್ ಪೆಟ್ರೋಲ್‌ನಂತೆಯೇ ಉತ್ತಮವಾಗಿರುತ್ತದೆ ಮತ್ತು ಕಾರು ಸಿಎನ್‌ಜಿಯಲ್ಲಿ ಚಲಿಸುತ್ತಿರುವುದು ನಿಮ್ಮ ಗಮನಕ್ಕೂ ಬರುವುದಿಲ್ಲ.
ಚಾಲನೆಯ ವೆಚ್ಚ, ಮೈಲೇಜ್ ಮತ್ತು ರೇಂಜ್
ನಮ್ಮ ಆಂತರಿಕ ಪರೀಕ್ಷೆಯ ಪ್ರಕಾರ, ಟಿಯಾಗೋ ಸಿಎನ್‌ಜಿಯು ನಗರದಲ್ಲಿ ಪ್ರತಿ ಕೆ.ಜಿ.ಗೆ 15.56 ಕಿ.ಮೀ. ಮೈಲೇಜ್ ಅನ್ನು ಹಿಂದಿರುಗಿಸಿದೆ. ನಾವು ಸಿಎನ್‌ಜಿ-ಚಾಲಿತ ಹ್ಯಾಚ್‌ಬ್ಯಾಕ್ ಅನ್ನು ಪುಣೆಯಲ್ಲಿ ಓಡಿಸಿದ್ದೇವೆ, ಅಲ್ಲಿ ಸಿಎನ್‌ಜಿ ಇಂಧನದ ದರವು ಕೆಜಿಗೆ 66 ರೂ. ನಷ್ಟಿದೆ. ಈ ಅಂಕಿಅಂಶಗಳ ಆಧಾರದ ಮೇಲೆ, ಚಾಲನೆಯ ವೆಚ್ಚವು ಪ್ರತಿ ಕಿ.ಮೀ.ಗೆ 4.2 ರೂ. ಆಗಿದೆ. ಪೆಟ್ರೋಲ್ ಚಾಲಿತ ಟಿಯಾಗೊದ ಅದೇ ಪರೀಕ್ಷೆಯು ಪ್ರತಿ ಲೀ.ಗೆ 15.12 ಕಿ.ಮೀ. ಇಂಧನ ದಕ್ಷತೆಯನ್ನು ಹಿಂದಿರುಗಿಸಿತು. ಪುಣೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 109 ರೂ. ಆಗಿದ್ದು, ಚಾಲನೆಯ ವೆಚ್ಚ ಪ್ರತಿ ಕಿ.ಮೀ.ಗೆ 7.2 ರೂ.ನಷ್ಟು ತಗುಲುತ್ತದೆ. ಇದರರ್ಥ ನೀವು ಟಿಯಾಗೋ ಸಿಎನ್‌ಜಿಯನ್ನು ಬಳಸಿದಾಗ, ಪ್ರತಿ ಕಿ.ಮೀ.ಗೆ 3 ರೂ.ನಷ್ಟು ಉಳಿಸುತ್ತೀರಿ.
ಟಾಟಾ ಸಿಎನ್‌ಜಿ ವೇರಿಯೆಂಟ್‌ಳಿಗೆ ತಮ್ಮ ಪೆಟ್ರೋಲ್ ಕೌಂಟರ್‌ಪಾರ್ಟ್‌ಗಳಿಗಿಂತ 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿದೆ. ಆದ್ದರಿಂದ, ಟಿಯಾಗೋ ಸಿಎನ್‌ಜಿಯಲ್ಲಿ ಮೊದಲ 30,000 ಕಿ.ಮೀ.ಅನ್ನು ಕ್ರಮಿಸುವುದರೊಂದಿಗೆ ನೀವು ನೀಡುವ ಹೆಚ್ಚುವರಿ ಬೆಲೆಯನ್ನು ಮರುಪಡೆಯಬಹುದು, ನಂತರ ನೀವು ಪ್ರತಿ ಕಿ.ಮೀ.ಗೆ 3 ರೂ.ಕಡಿತದ ಲಾಭವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತೀರಿ. ಆದರೂ ಇಲ್ಲಿ ಒಂದು ಸಮಸ್ಯೆ ಇದೆ.
ಟಿಯಾಗೊ ಸಿಎನ್‌ಜಿಯ ನೀರಿನ ಸಮಾನ ಸಾಮರ್ಥ್ಯವು 60 ಲೀಟರ್ ಆಗಿದೆ ಮತ್ತು ಇದು 10.8 ಕೆಜಿ ತುಂಬುವ ಸಾಮರ್ಥ್ಯವನ್ನು ಹೊಂದಿದೆ. ನಗರದಲ್ಲಿ ಪ್ರತಿ ಕೆ.ಜಿ.ಗೆ 15.56 ಕಿ.ಮೀ ಮೈಲೇಜ್‌ನೊಂದಿಗೆ, ಇದು ಸುಮಾರು 160 ಕಿ.ಮೀ. ರೇಂಜ್ ಅನ್ನು ನೀಡುತ್ತದೆ. ಆದ್ದರಿಂದ ನೀವು ಪ್ರತಿದಿನ 50 ಕಿಮೀ ಓಡಿಸಿದರೆ, ನೀವು ಪ್ರತಿ ಮೂರನೇ ದಿನಕ್ಕೆ ಸಿಎನ್‌ಜಿ ಟ್ಯಾಂಕ್‌ಗೆ ಇಂಧನ ತುಂಬಬೇಕಾಗುತ್ತದೆ! ಮತ್ತು ಒಂದು ಬಾರಿ ಸಿಎನ್‌ಜಿ ಟ್ಯಾಂಕ್ ರೀಫಿಲ್ ಮಾಡಲು 700 ರೂ. ವೆಚ್ಚವಾಗುತ್ತದೆ.ಸಿಎನ್‌ಜಿಗೆ ಹೋಲಿಸಿದರೆ, ಪೆಟ್ರೋಲ್ ಚಾಲಿತ ಟಿಯಾಗೋವು 35 ಲೀಟರ್ ಟ್ಯಾಂಕ್ಅನ್ನು ಹೊಂದಿದೆ, ಇದು 530 ಕಿ.ಮೀ. ರೇಂಜ್‌ಅನ್ನು ಹೊಂದಿದೆ. ಹ್ಯಾಚ್‌ಬ್ಯಾಕ್‌ನ ಒಂದು ದೊಡ್ಡ ಅನುಕೂಲವೆಂದರೆ ಅದು ಸಿಎನ್‌ಜಿ ಖಾಲಿಯಾಗಿದ್ದರೂ, ಅದು ಕೇವಲ ಪೆಟ್ರೋಲ್ ಶಕ್ತಿಯೊಂದಿಗೆ ಮುಂದುವರಿಯುತ್ತದೆ. ಆದರೆ ಭಾರತದಲ್ಲಿ ಸಿಎನ್‌ಜಿ ಇಂಧನ ಕೇಂದ್ರಗಳ ಕೊರತೆಯನ್ನು ಗಮನಿಸಿದರೆ, ನಿಮ್ಮ ಊರನ್ನು ಅವಲಂಬಿಸಿ, ಸಿಎನ್‌ಜಿ ತುಂಬಲು ನೀವು ಸರದಿಯಲ್ಲಿ ಕಾಯಬೇಕಾಗಬಹುದು.
ರೈಡ್ ಅಂಡ್ ಹ್ಯಾಂಡಲಿಂಗ್
ಟಿಯಾಗೊ ಎಲ್ಲಾ ಟಾಟಾಗಳಂತೆ ಆರಾಮದಾಯಕವಾದ ಸವಾರಿ ಗುಣಮಟ್ಟವನ್ನು ಹೊಂದಿದೆ. ಇದು ಗುಂಡಿಗಳು ಮತ್ತು ಒರಟಾದ ಮೇಲ್ಮೈಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ ಮತ್ತು ಕ್ಯಾಬಿನ್ ಅನ್ನು ರಸ್ತೆಯಲ್ಲಿನ ಕಠೋರತೆಯಿಂದ ದೂರವಿರಿಸುತ್ತದೆ. ನಗರದ ಒಳಗೆ, ಕಳಪೆ ರಸ್ತೆಗಳು ಮತ್ತು ಸ್ಪೀಡ್ ಬ್ರೇಕರ್‌ಗಳನ್ನು ಸುಲಭವಾಗಿ ನಿಭಾಯಿಸಲಾಗುತ್ತದೆ. ಬೂಟ್‌ನಲ್ಲಿ 100 ಹೆಚ್ಚುವರಿ ಕಿಲೋಗಳನ್ನು ಸರಿಹೊಂದಿಸಲು, ಹಿಂಭಾಗವನ್ನು ಸ್ವಲ್ಪ ಗಟ್ಟಿಗೊಳಿಸಲಾಗಿದೆ ಮತ್ತು ಅದನ್ನು ತೀಕ್ಷ್ಣವಾದ ಗುಂಡಿಗಳ ಮೇಲೆ ಅನುಭವವಾಗಬಹುದು, ಆದರೆ ಸವಾರಿ ಹೆಚ್ಚಾಗಿ ಸ್ಥಿರ ಮತ್ತು ಆರಾಮದಾಯಕವಾಗಿರುತ್ತದೆ.
ನಿರ್ವಹಣೆಗೆ ಸಂಬಂಧಿಸಿದಂತೆ, ಟಿಯಾಗೊ ಮೊದಲಿನಂತೆಯೇ ತಟಸ್ಥವಾಗಿದೆ. ತಿರುವುಗಳಲ್ಲಿ ಡ್ರೈವ್ ಮಾಡುವಾಗ ಅದು ಸುರಕ್ಷಿತವೆಂದು ಭಾಸವಾಗುತ್ತದೆ ಮತ್ತು ಬಾಡಿಯ ರೋಲ್ ಅನ್ನು ನಿಯಂತ್ರಣದಲ್ಲಿ ಇರಿಸಲಾಗುತ್ತದೆ. ಆದರೆ, ಬೂಟ್‌ನಲ್ಲಿ ಹೆಚ್ಚುವರಿ ತೂಕದೊಂದಿಗೆ, ತಿರುವು ರಸ್ತೆಯಲ್ಲಿ ಸಾಗುವುದಕ್ಕಿಂತ ಹೆಚ್ಚಾಗಿ ನಗರದಲ್ಲಿ ಪ್ರಯಾಣಿಸುವುದು ಉತ್ತಮವಾಗಿದೆ.
ವರ್ಡಿಕ್ಟ್
ಟಿಯಾಗೊ ಸಿಎನ್‌ಜಿ ನಿಮಗೆ ಸರಿಯಾದ ಕಾರೇ? ಸರಿ, ಅದು ಕೆಲವು ಅಂಶಗಳ ಮೇಲೆ ಅವಲಂಬಿಸಿರುತ್ತದೆ. ನೀವು ಹೆಚ್ಚಾಗಿ ಬೂಟ್‌ಅನ್ನು ಅವಲಂಬಿಸಿ ಈ ಹ್ಯಾಚ್‌ಬ್ಯಾಕ್ ನ ಡ್ರೈವ್ ಮಾಡುತ್ತಿದ್ದರೆ, ಟಿಯಾಗೊ ಸಿಎನ್‌ಜಿ ಖಂಡಿತವಾಗಿಯೂ ಹೆಚ್ಚಿನ ಕೊಡುಗೆಯನ್ನು ಹೊಂದಿಲ್ಲ. ಅದಲ್ಲದೇ ಇದರಲ್ಲಿ ಇನ್ನೂ ಎರಡು ಸಮಸ್ಯೆಗಳಿವೆ. ಮೊದಲನೆಯದಾಗಿ, ಸಿಎನ್‌ಜಿ ಇಂಧನ ಕೇಂದ್ರಗಳಲ್ಲಿ ದೀರ್ಘ ಕಾಯುವ ಸಾಲುಗಳು ಮತ್ತು ಎರಡನೆಯದಾಗಿ, ಈ ಟಿಯಾಗೊವನ್ನು ದೊಡ್ಡ ಹ್ಯಾಚ್‌ಬ್ಯಾಕ್‌ಗಳ ಸೆಗ್ಮೆಂಟ್‌ನಲ್ಲಿ ತೊಡಗಿಸಿಕೊಳ್ಳುವ ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರುವುದು. ಹೊರಗಡೆ ಮಾರ್ಕೆಟ್‌ನಲ್ಲಿ ಫಿಟ್ ಮಾಡುವ ಸಿಎನ್‌ಜಿ ಕಿಟ್‌ಗಳಿಗೆ ಸಾಮಾನ್ಯವಾಗಿ 50,000 ರೂ.ವರೆಗೆ ವೆಚ್ಚವಾಗುತ್ತವೆ. ಆದರೆ ಇಲ್ಲಿ ನೀವು ಹೆಚ್ಚುವರಿ ಐಟಂಗಳ ಅಚ್ಚುಕಟ್ಟಾದ ಜೋಡಣೆಗೆ ಹೆಚ್ಚಿನ ಬೆಲೆಯನ್ನು ಪಾವತಿಸುತ್ತಿದ್ದೀರಿ.
ಸಿಎನ್‌ಜಿಯ ಚಲನೆಯ ವಿಷಯಕ್ಕೆ ಬಂದಾಗ, ಪೆಟ್ರೋಲ್‌ಗೆ ಹೋಲಿಸಿದರೆ ಸಿಎನ್‌ಜಿಯಲ್ಲಿ ನೀವು ಪ್ರತಿ ಕಿ.ಮೀ.ಗೆ 3 ರೂ.ವರೆಗೆ ಕಡಿಮೆ ಖರ್ಚು ಮಾಡಿದಂತಾಗುತ್ತದೆ. ಮತ್ತು ಈ ವೆಚ್ಚವು ನಿಮ್ಮ ಬಳಕೆಯ ಆಧಾರದ ಮೇಲೆ ಮರು ಪಡೆಯಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳಬಹುದು. ಇದಕ್ಕಿಂತ ಮುಖ್ಯವಾಗಿ, ಟಿಯಾಗೊ ಸಿಎನ್‌ಜಿ ನೀವು ಸಿಎನ್‌ಜಿ ಚಾಲಿತ ಹ್ಯಾಚ್‌ಬ್ಯಾಕ್‌ನಲ್ಲಿದ್ದೀರಿ ಎಂದು ಭಾವಿಸಲು ಬಿಡುವುದಿಲ್ಲ. ಡ್ರೈವಿಂಗ್ ಡೈನಾಮಿಕ್ಸ್, ರೈಡ್ ಸೌಕರ್ಯ ಮತ್ತು ಫೀಚರ್‌ಗಳ ಪಟ್ಟಿಯು ಅದರ ಪೆಟ್ರೋಲ್ ಕೌಂಟರ್‌ಪಾರ್ಟ್‌ನಂತೆಯೇ ಇದೆ ಮತ್ತು ಸಾಕಷ್ಟು ಶ್ಲಾಘನೀಯವಾಗಿದೆ. ಒಂದು ವೇಳೆ ನೀವು ಡ್ರೈವಿಂಗ್‌ನ ಅನುಭವದಲ್ಲಿ ರಾಜಿ ಮಾಡಿಕೊಂಡು ಸಿಎನ್‌ಜಿ ಪವರ್‌ಟ್ರೇನ್‌ಅನ್ನು ಹುಡುಕುತ್ತಿದ್ದರೆ, ಟಿಯಾಗೊ ಸಿಎನ್‌ಜಿ ಖಂಡಿತವಾಗಿಯೂ ಪ್ರಬಲ ಸ್ಪರ್ಧಿಯಾಗಬಹುದು.
ಟಾಟಾ ಟಿಯಾಗೋ
ನಾವು ಇಷ್ಟಪಡುವ ವಿಷಯಗಳು
- 2022 ರ ಆಪ್‌ಡೇಟ್ ಟಿಯಾಗೊವನ್ನು ಮೊದಲಿಗಿಂತ ಉತ್ತಮವಾಗಿ ಕಾಣುವಂತೆ ಮಾಡಿದೆ.
- ಇದು 4-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.
- CNG ಕಿಟ್ ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಮತ್ತು ಎಎಮ್‌ಟಿ ಆಯ್ಕೆಯನ್ನು ಪಡೆಯುತ್ತದೆ.
ನಾವು ಇಷ್ಟಪಡದ ವಿಷಯಗಳು
- 3-ಪಾಟ್ ಎಂಜಿನ್ ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಸಂಸ್ಕರಿಸಲಾಗಿಲ್ಲ.
- AMT ಟ್ರಾನ್ಸ್‌ಮಿಷನ್ ಶಿಫ್ಟ್ ಮಾಡಲು ನಿಧಾನವಾಗಿದೆ.
ಟಾಟಾ ಟಿಯಾಗೋ comparison with similar cars
![]() Rs.5 - 8.45 ಲಕ್ಷ* | ![]() ![]() Rs.4.70 - 6.45 ಲಕ್ಷ* | ![]() Rs.6 - 10.32 ಲಕ್ಷ* | ![]() Rs.6 - 9.50 ಲಕ್ಷ* | ![]() Rs.6.49 - 9.64 ಲಕ್ಷ* |