• English
  • Login / Register

Mahindra XUV700 ವಿಮರ್ಶೆ: ಬಹುತೇಕ ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ

Published On ಮಾರ್ಚ್‌ 20, 2024 By ujjawall for ಮಹೀಂದ್ರ ಎಕ್ಸ್‌ಯುವಿ 700

  • 1 View
  • Write a comment

2024ರ ಆಪ್‌ಡೇಟ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು, ಬಣ್ಣಗಳು ಮತ್ತು ಹೊಸ ಆಸನ ವಿನ್ಯಾಸವನ್ನು ತರುವುದರೊಂದಿಗೆ, ಎಕ್ಸ್‌ಯುವಿ700 ಹಿಂದೆಂದಿಗಿಂತಲೂ ಹೆಚ್ಚು ಸಂಪೂರ್ಣವಾದ ಫ್ಯಾಮಿಲಿ ಎಸ್‌ಯುವಿಯಾಗಿ ಮಾರ್ಪಟ್ಟಿದೆ

Mahindra XUV700 Review: The Perfect Family SUV, Almostಮಹೀಂದ್ರಾ ಎಕ್ಸ್‌ಯುವಿ700 ತನ್ನ ಪ್ರೀಮಿಯಂ ನೋಟ ಮತ್ತು ಕ್ಯಾಬಿನ್ ಅನುಭವ, ಆಗಾಧವಾದ ವೈಶಿಷ್ಟ್ಯಗಳು ಮತ್ತು ಸಾಕಷ್ಟು ಪವರ್‌ಟ್ರೇನ್ ಆಯ್ಕೆಯೊಂದಿಗೆ ಉತ್ತಮ ಫ್ಯಾಮಿಲಿ ಎಸ್‌ಯುವಿ ಆಗಿದೆ. ಇದರ ಎಕ್ಸ್‌ಶೋರೂಮ್‌ ಬೆಲೆಯು 13.99 ಲಕ್ಷ ರೂ.ನಿಂದ 26.99 ಲಕ್ಷ ರೂ.ಗಳ ನಡುವೆ ಇರಲಿದ್ದು, ಇದು ಫೇಸ್‌ಲಿಫ್ಟೆಡ್ ಟಾಟಾ ಸಫಾರಿ, ಹ್ಯಾರಿಯರ್ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್‌ಗಳಿಗೆ ಪರಿಪೂರ್ಣ ಪ್ರತಿಸ್ಪರ್ಧಿಯಾಗಿದೆ.

ಆದರೆ ಎರಡು ಟಾಟಾ ಪ್ರತಿಸ್ಪರ್ಧಿಗಳು ಇತ್ತೀಚೆಗೆ ಸಂಪೂರ್ಣ ಫೇಸ್‌ಲಿಫ್ಟ್‌ಗಳನ್ನು ಪಡೆದಿದ್ದರೂ, ಎಕ್ಸ್‌ಯುವಿ700 ಸುಮಾರು 2.5 ವರ್ಷಗಳಿಂದ ಯಾವುದೇ ನವೀಕರಣವನ್ನು ಪಡೆದಿಲ್ಲ, ಅಂದರೆ, ಹೊಸ ವೈಶಿಷ್ಟ್ಯಗಳು, ಹೊಸ ಆಸನ ವಿನ್ಯಾಸ ಮತ್ತು ಹೊಸ ಥೀಮ್‌ಗಳನ್ನು XUV700 ನ ಪ್ಯಾಕೇಜ್‌ಗೆ ಸೇರಿಸಲಾಗಿದೆ. ಆದರೆ ನೀವು ಅದನ್ನು ನಿಮ್ಮ ಕುಟುಂಬದ ಮುಂದಿನ ಎಸ್‌ಯುವಿ ಎಂದು ಪರಿಗಣಿಸಲು ಆ ಬದಲಾವಣೆಗಳು ಸಾಕಷ್ಟು ಹೆಚ್ಚುತ್ತಿವೆಯೇ? ಈ ರೋಡ್‌ ಟೆಸ್ಟ್‌ ರಿವ್ಯೂನಲ್ಲಿ ನಾವು ಅದನ್ನು ನಿಖರವಾಗಿ ಕಂಡುಹಿಡಿಯಲಿದ್ದೇವೆ.

ಕೀ

Mahindra XUV700 Review: The Perfect Family SUV, Almost

XUV700 ಮೊದಲಿನಂತೆಯೇ ಸಿಲ್ವರ್‌ನ ಇನ್ಸರ್ಟ್‌ನೊಂದಿಗೆ ಅದೇ ಆಯತಾಕಾರದ (ರೆಕ್ಟೆಂಗುಲರ್) ಕೀಲಿಯನ್ನು ಪಡೆಯುತ್ತದೆ, ಇದು ಉತ್ತಮ ತೂಕವನ್ನು ಹೊಂದಿದೆ.‌ ಕಾರನ್ನು ಅನ್‌ಲಾಕ್ ಮಾಡಿದ ನಂತರ, ಫ್ಲಶ್ ಡೋರ್ ಹ್ಯಾಂಡಲ್‌ಗಳು ಆಟೋಮ್ಯಟಿಕ್‌ ಆಗಿ ಹೊರಬರುತ್ತವೆ, ಇದು ಉತ್ತಮ ಟಚ್‌ ಆಗಿದೆ.  ನಿಮ್ಮ ಜೇಬಿನಿಂದ ಕೀ ತೆಗೆಯಲು ನಿಮಗೆ ಇಷ್ಟವಿಲ್ಲದಿದ್ದರೆ, ಅದನ್ನು ಅನ್‌ಲಾಕ್ ಮಾಡಲು ಡ್ರೈವರ್ ಸೈಡ್ ಫ್ಲಶ್ ಡೋರ್ ಹ್ಯಾಂಡಲ್ ರಿಕ್ವೆಸ್ಟ್ ಸೆನ್ಸಾರ್ ಅನ್ನು ಟ್ಯಾಪ್ ಮಾಡಬಹುದು. ಆದರೆ, ಈ ವೈಶಿಷ್ಟ್ಯವು ಪ್ಯಾಸೆಂಜರ್‌ ಸೈಡ್‌ನ ಡೋರ್‌ನಲ್ಲಿ ಲಭ್ಯವಿರುವುದಿಲ್ಲ. 

ಈ ಮೋಟಾರೈಸ್ಡ್ ಓಪನಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯದ ಆವೃತ್ತಿಗಳಿಗಾಗಿ, ಅವುಗಳನ್ನು ಫ್ಲಿಪ್ ಔಟ್ ಮಾಡಲು ನೀವು ಅವುಗಳನ್ನು ತಳ್ಳಬೇಕಾಗುತ್ತದೆ. ನಿಜ ಹೇಳಬೇಕೆಂದರೆ, ಇವುಗಳು ಉತ್ತಮವಾಗಿದೆ ಮತ್ತು ಬಳಸಲು ಸುಲಭವಾಗಿದೆ. ಕನೆಕ್ಟೆಡ್‌ ಕಾರ್ ಟೆಕ್ ವೈಶಿಷ್ಟ್ಯಗಳ ಮೂಲಕ ನೀವು ದೂರದಿಂದಲೇ ಕಾರನ್ನು ಲಾಕ್/ಅನ್ಲಾಕ್ ಮಾಡಬಹುದು.

ಡಿಸೈನ್‌

Mahindra XUV700 Review: The Perfect Family SUV, Almost

ನೀವು ಚಿತ್ರಗಳಲ್ಲಿ ನೋಡುವ ಹೊಸ ಸಂಪೂರ್ಣ ಕಪ್ಪು ಬಣ್ಣದ ಥೀಮ್‌ನ ಸೇರ್ಪಡೆಯನ್ನು ಹೊರತುಪಡಿಸಿ, ಮಹೀಂದ್ರಾ ಎಕ್ಸ್‌ಯುವಿ700ನ ವಿನ್ಯಾಸವು ಇನ್ನೂ ಒಂದೇ ಆಗಿರುತ್ತದೆ. ಈ ನಪೋಲಿ ಬ್ಲ್ಯಾಕ್ ಬಾಡಿ ಕಲರ್‌ ಮೊದಲು ಲಭ್ಯವಿತ್ತು, ಆದರೆ ಈಗ ಇದನ್ನು ಎಲ್ಲಾ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಬಣ್ಣವು ಅದರ ಗ್ರಿಲ್ ಮತ್ತು ಅಲಾಯ್‌ ವೀಲ್‌ಗಳಲ್ಲಿ ಕಪ್ಪು ಅಂಶಗಳಿಂದ ಪೂರಕವಾಗಿದೆ, ಇದು ಕಾರಿಗೆ ಆಕ್ರಮಣಕಾರಿ ನೋಟವನ್ನು ನೀಡುತ್ತದೆ.

ಬದಿಯ ವಿನ್ಯಾಸವು ಸ್ವಚ್ಛವಾಗಿದೆ ಮತ್ತು ಇದು 18-ಇಂಚಿನ ಅಲಾಯ್‌ ವೀಲ್‌ಗಳನ್ನು ಬಳಸುತ್ತದೆ. ಈ ಕಾರಿನಲ್ಲಿ ಇವುಗಳು ಸೂಕ್ತವಾಗಿ ಕಂಡರೂ, ಇದರ ಪ್ರತಿಸ್ಪರ್ಧಿಗಳು ದೊಡ್ಡ 19-ಇಂಚಿನ ಅಲಾಯ್‌ಗಳನ್ನು ನೀಡುತ್ತದೆ.

Mahindra XUV700 Review: The Perfect Family SUV, Almost

ಹಿಂಭಾಗದ ವಿನ್ಯಾಸವು ಬದಲಾಗದೆ ಉಳಿದಿದೆ, ಆದರೆ ಮಹೀಂದ್ರಾ ತನ್ನ ಕೆಳಭಾಗದ ಬಂಪರ್‌ನಲ್ಲಿ ಗ್ರೇಯಿಶ್-ಸಿಲ್ವರ್‌ ಇನ್ಸರ್ಟ್‌ ಅನ್ನು ಬದಲಾಯಿಸಿಲ್ಲ, ಅದರ ಒಟ್ಟಾರೆ ಸಂಪೂರ್ಣ ಕಪ್ಪು ನೋಟಕ್ಕೆ ಉತ್ತಮವಾದ ವ್ಯತಿರಿಕ್ತತೆಯನ್ನು ಒದಗಿಸುತ್ತದೆ. ಇದರ ಎಲ್‌ಇಡಿ ಡಿಆರ್‌ಎಲ್‌ ಸೆಟಪ್, ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳು ಮತ್ತು ಬಾಣದ ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳು ಸಂಪೂರ್ಣ ಕಪ್ಪು ಕಾಂಬಿನೇಶನ್‌ನೊಂದಿಗೆ ವಿಶೇಷವಾಗಿ ರಾತ್ರಿಯಲ್ಲಿ ಪ್ರೀಮಿಯಂ ಆಗಿ ಕಾಣುತ್ತವೆ. ಮತ್ತು ಎಲ್ಲಾ-ಕಪ್ಪು ಥೀಮ್ ನಿಮಗೆ ಇಷ್ಟವಿಲ್ಲದಿದ್ದರೆ, ನೀವು ಈಗ ಮಿಡ್‌ನೈಟ್ ಬ್ಲ್ಯಾಕ್, ಎವರೆಸ್ಟ್ ವೈಟ್, ಡ್ಯಾಝ್ಲಿಂಗ್‌ ಸಿಲ್ವರ್, ಎಲೆಕ್ಟ್ರಿಕ್ ಬ್ಲೂ ಮತ್ತು ರೆಡ್ ರೇಜ್ ಡ್ಯುಯಲ್-ಟೋನ್ ಶೇಡ್‌ಗಳ ಆಯ್ಕೆಯನ್ನು ನಾಪೋಲಿ ಬ್ಲ್ಯಾಕ್ ರೂಫ್‌ನೊಂದಿಗೆ ಪಡೆಯಬಹುದು. 

ಬೂಟ್ ಸ್ಪೇಸ್

Mahindra XUV700 Review: The Perfect Family SUV, Almost

XUV700 ನ ಬೂಟ್ ಅನ್ನು ತೆರೆಯುವುದು ತುಂಬಾ ಸುಲಭ, ಏಕೆಂದರೆ ಅದರ ಹಿಂಭಾಗದ ಡೋರ್‌ ತುಂಬಾ ಭಾರವಾಗಿಲ್ಲ. ಆದಾಗಿಯೂ, ಇಲ್ಲಿ ಯಾವುದೇ ಚಾಲಿತ ಆಯ್ಕೆಗಳಿಲ್ಲ. 6- ಮತ್ತು 7-ಆಸನಗಳ ಆವೃತ್ತಿಗಳಲ್ಲಿ, ಮೂರನೇ ಸಾಲನ್ನು ಬಳಸುವಾಗ ಸ್ಥಳಾವಕಾಶವು ಸ್ವಲ್ಪ ಸೀಮಿತವಾಗಿರುತ್ತದೆ ಮತ್ತು ಡಫಲ್ ಅಥವಾ ಆಫೀಸ್ ಬ್ಯಾಗ್‌ಗಳಿಗೆ ಮಾತ್ರ ಸಾಕಾಗುತ್ತದೆ.

ಒಳ್ಳೆಯ ಸುದ್ದಿ ಎಂದರೆ ನೀವು ಮೂರನೇ ಸಾಲನ್ನು ಮಡಚಬಹುದು, ಅದು 50-50 ವಿಭಜನೆಯನ್ನು ನೀಡುತ್ತದೆ ಮತ್ತು ಅವು ಫ್ಲಾಟ್ ಆಗಿ ಫೋಲ್ಡ್‌ ಆಗುತ್ತದೆ. ನಿಮ್ಮ ಕುಟುಂಬಕ್ಕೆ ವಾರಂತ್ಯದ ಟೂರ್‌ಗೆ ಬೇಕಾಗುವ ಲಗೇಜ್‌ಗಳನ್ನು ಮತ್ತು ಹೆಚ್ಚಿನದನ್ನು ನೀವು ಇಲ್ಲಿ ಸುಲಭವಾಗಿ ಇಡಬಹುದು. 

ಇಂಟಿರೀಯರ್‌

Mahindra XUV700 Review: The Perfect Family SUV, Almost

ಎಕ್ಸ್‌ಯುವಿ700ನ ಕ್ಯಾಬಿನ್ ಅನುಭವವು ಯಾವಾಗಲೂ ಪ್ರೀಮಿಯಂ ಆಗಿರುತ್ತದೆ ಮತ್ತು ಅದು ಈಗಲೂ ಹಾಗೆ ಇದೆ. ನೀವು ಕ್ಯಾಬಿನ್‌ಗೆ ಪ್ರವೇಶಿಸುವ ಮುಂಚೆಯೇ ಇದನ್ನು ದೃಢೀಕರಿಸಲಾಗುತ್ತದೆ, ಏಕೆಂದರೆ ನೀವು ಬಾಗಿಲು ತೆರೆದ ತಕ್ಷಣ ಸುಲಭವಾಗಿ ಪ್ರವೇಶಿಸಲು ಚಾಲಕನ ಸೀಟ್ ಹಿಂದಕ್ಕೆ ಚಲಿಸುತ್ತದೆ.

2024ರ ಎಕ್ಸ್‌ಯುವಿ700 ಕ್ಯಾಬಿನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಒಟ್ಟಾರೆ ವಿನ್ಯಾಸವು ಒಂದೇ ರೀತಿ ಆಗಿದ್ದು, ಸ್ವಚ್ಛ ಮತ್ತು ಮೃದುವಾಗಿರುತ್ತದೆ. ಇಲ್ಲಿ ಯಾವುದೇ ಕಪ್ಪು-ಕಪ್ಪು ಥೀಮ್ ಇಲ್ಲ ಮತ್ತು ಇದು ಇನ್ನೂ ಇಲ್ಲಿ ಅದೇ ಬಹು-ಬಣ್ಣದ ಥೀಮ್ ಅನ್ನು ಬಳಸುತ್ತದೆ.

ಮೆಟಿರಿಯಲ್‌ಗಳ ಗುಣಮಟ್ಟವು ಉತ್ತಮವಾಗಿದೆ, ಸೆಂಟರ್‌ ಪ್ಯಾನೆಲ್‌ನಲ್ಲಿ ಮೃದು-ಟಚ್ ಲೆಥೆರೆಟ್ ಮೆಟಿರಿಯಲ್‌ಗಳೊಂದಿಗೆ, ನೀವು ಡೋರ್ ಪ್ಯಾಡ್‌ಗಳು ಮತ್ತು ಸೆಂಟ್ರಲ್ ಆರ್ಮ್‌ರೆಸ್ಟ್‌ನಲ್ಲಿಯೂ ಸಹ ಕಾಣುವಿರಿ. ಸ್ಟೀರಿಂಗ್ ವೀಲ್‌ ಅನ್ನು ಲೆಥೆರೆಟ್‌ನಲ್ಲಿ ಸುತ್ತಿಡಲಾಗಿದೆ, ಆದರೆ ಅದರ ಬಟನ್‌ಗಳ ಗುಣಮಟ್ಟ ಇನ್ನೂ ಸ್ವಲ್ಪ ಉತ್ತಮವಾಗಿರಬಹುದಿತ್ತು.

Mahindra XUV700 Review: The Perfect Family SUV, Almost

ಡ್ಯಾಶ್‌ಬೋರ್ಡ್‌ನ ಮೇಲಿನ ಪ್ಯಾನೆಲ್ ಗಟ್ಟಿಯಾದ ಪ್ಲಾಸ್ಟಿಕ್ ಆಗಿದೆ, ಆದರೆ ಅದಕ್ಕೆ ಮೃದುವಾದ ಫಿನಿಶ್ ನೀಡಲಾಗಿದೆ, ಆದ್ದರಿಂದ ಇದು ಕಡಿಮೆ ಅನಿಸುವುದಿಲ್ಲ. ನೀವು ಇನ್ನೂ ನಿಮ್ಮ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆ ಕಂಟ್ರೋಲ್‌ಗಳನ್ನು ಡೋರ್ ಪ್ಯಾನೆಲ್‌ಗಳಲ್ಲಿ ಪಡೆಯುತ್ತೀರಿ, ಅವುಗಳು ಆಸನಗಳ ಬದಿಯಲ್ಲಿ ಕೆಳಕ್ಕೆ ಇಡುವುದಕ್ಕಿಂತ ಹುಡುಕಲು ಮತ್ತು ಕಾರ್ಯನಿರ್ವಹಿಸಲು ತುಂಬಾ ಸುಲಭ.

ಪಿಯಾನೋ ಬ್ಲ್ಯಾಕ್ ಅಂಶಗಳನ್ನು ಸೆಂಟ್ರಲ್ ಕನ್ಸೋಲ್‌ನಲ್ಲಿ ಬಳಸಲಾಗಿದೆ ಮತ್ತು AC ಕಂಟ್ರೋಲ್‌ಗಳ ವಿನ್ಯಾಸವು ಸ್ವಚ್ಛವಾಗಿದ್ದರೂ, ಅವುಗಳ ಅನುಭವ ಮತ್ತು ಫಿನಿಶ್‌ ಅನ್ನು ಇನ್ನೂ ಉತ್ತಮಗೊಳಿಸಬಹುದಿತ್ತು. ಗೇರ್ ಲಿವರ್‌ನ ಸುತ್ತಲಿನ ಡಯಲ್‌ಗಳು ಮತ್ತು ಬಟನ್‌ಗಳು ಸಹ ಸ್ವಲ್ಪ ಬೇಸಿಕ್‌ ಆಗಿ ಕಾಣುತ್ತವೆ ಮತ್ತು ಪಿಯಾನೋ ಬ್ಲ್ಯಾಕ್ ಪ್ಯಾನೆಲ್‌ನಿಂದಾಗಿ ಸ್ಕ್ರ್ಯಾಚ್-ಫ್ರೀ ಆಗಿಇರಿಸಿಕೊಳ್ಳಲು ಕಷ್ಟವಾಗಬಹುದು.

ನಿರ್ವಹಿಸಲು ಕಷ್ಟಕರವಾದ ಮತ್ತೊಂದು ವಿಷಯವೆಂದರೆ ಸೀಟ್ ಅಪ್ಹೋಲ್ಸ್‌ಟೆರಿ, ಲೈಟ್‌ ಆಗಿರುವ ಬಣ್ಣವನ್ನು ನೀಡಲಾಗಿದೆ. ಆದರೆ ನಂತರ ಈ ತಿಳಿ ಬಣ್ಣವು ಕ್ಯಾಬಿನ್‌ಗೆ ಗಾಳಿಯ ಅನುಭವವನ್ನು ತರುತ್ತದೆ ಮತ್ತು ತೆರೆದ ಸನ್‌ರೂಫ್‌ನೊಂದಿಗೆ, ಆ ಅನುಭವ ಇನ್ನಷ್ಟು ಹೆಚ್ಚಾಗುತ್ತದೆ. 

ಆದರೆ ನಿರ್ವಹಣೆ ಹೊರತುಪಡಿಸಿ, ಅವು ಸಾಕಷ್ಟು ಆರಾಮದಾಯಕವಾಗಿವೆ. ಬೆಂಬಲ ಉತ್ತಮವಾಗಿದೆ ಮತ್ತು ಕುಶನ್‌ ಸಹ ಆರಾಮದಾಯಕವಾಗಿದೆ. ಪರಿಪೂರ್ಣ ಡ್ರೈವಿಂಗ್ ಪೊಸಿಶನ್‌ನ ಸೆಟ್‌ ಮಾಡುವುದು ಈಗ ಸುಲಭವಾಗಿದೆ, ಏಕೆಂದರೆ ಎಲೆಕ್ಟ್ರಿಕ್ ಆಗಿ ಹೊಂದಿಸಬಹುದಾದ ಆಸನಗಳು ಮತ್ತು ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಆದರೆ ಆಶ್ಚರ್ಯಕರ ಎಂಬಂತೆ, ಟೆಲಿಸ್ಕೋಪಿಕ್ ಹೊಂದಾಣಿಕೆಯನ್ನು ಅದರ ಟಾಪ್-ಎಂಡ್‌ ಮೊಡೆಲ್‌ AX7L ಟ್ರಿಮ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಎರಡನೇ ಸಾಲು

Mahindra XUV700 Review: The Perfect Family SUV, Almost

XUV700 ನ ಎರಡನೇ ಸಾಲಿನಲ್ಲಿ ದೊಡ್ಡ ಬದಲಾವಣೆಯು ಬರುತ್ತದೆ, ಅಲ್ಲಿ ನೀವು ಈಗ ಕ್ಯಾಪ್ಟನ್ ಸೀಟ್‌ಗಳ ಆಯ್ಕೆಯನ್ನು ಹೊಂದುತ್ತೀರಿ. ಕಾರು ಸ್ವಲ್ಪ ಎತ್ತರವಾಗಿರುವುದರಿಂದ ಎರಡನೇ ಸಾಲಿಗೆ ಪ್ರವೇಶಿಸಲು ಸ್ವಲ್ಪ ಪ್ರಯತ್ನಪಡಬೇಕಾಗಿ ಬರಬಹುದು, ಆದರೆ ಒಮ್ಮೆ ನೀವು ಕುಳಿತರೆ, ಈ ಆಸನಗಳು ಮುಂಭಾಗದ ಆಸನಗಳಿಗಿಂತ ಹೆಚ್ಚಿನ ಸೌಕರ್ಯ ಮತ್ತು ಸಪೋರ್ಟ್‌ ಅನ್ನು ನೀಡುತ್ತವೆ.

ಬೇಸ್ ವಿಶಾಲವಾಗಿದೆ ಮತ್ತು ದೊಡ್ಡ ದೇಹ ಗಾತ್ರವನ್ನು ಹೊಂದಿರುವ ಜನರಿಗೆ ಸಹ ಉತ್ತಮ ಬೆಂಬಲವನ್ನು ನೀಡುತ್ತದೆ. ಸಾಕಷ್ಟು ಹೆಡ್‌ರೂಮ್, ಮೊಣಕಾಲು ಇಡುವಲ್ಲಿ ಜಾಗ ಮತ್ತು ಫುಟ್‌ರೂಮ್ ಕೂಡ ಇದೆ. ಇತರ ಎಲ್ಲಾ ಕ್ಯಾಪ್ಟನ್ ಸೀಟ್‌ಗಳಂತೆ, ನೀವು ಮೀಸಲಾದ ಆರ್ಮ್‌ರೆಸ್ಟ್‌ಗಳನ್ನು ಪಡೆಯುತ್ತೀರಿ, ಆದರೆ ಇನ್ನೋವಾ ಕ್ರಿಸ್ಟಾದಲ್ಲಿ ಇರುವಂತೆ, ನೀವು ಬಯಸಿದ ಎತ್ತರದಲ್ಲಿ ಕುಳಿತುಕೊಳ್ಳಲು ಇದನ್ನು ಎಡ್ಜಸ್ಟ್‌ ಮಾಡಲು ಸಾಧ್ಯವಿಲ್ಲ.

ಬಾಸ್ ಮೋಡ್ ಆಯ್ಕೆಯೂ ಇದೆ, ಆದರೆ ಇದು ಮ್ಯಾನುಯಲ್‌ ಆಗಿದೆ. ಆದ್ದರಿಂದ ನೀವು ಆಸನಗಳನ್ನು ಚಲಿಸುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಪ್ರಯಾಣಿಕರನ್ನು ತಂಪಾಗಿರಿಸಲು, ನೀವು ಎಸಿ ವೆಂಟ್‌ಗಳನ್ನು ಪಡೆಯುತ್ತೀರಿ, ಆದರೆ ಅದಕ್ಕೆ ಯಾವುದೇ ಬ್ಲೋವರ್ ಕಂಟ್ರೋಲ್‌ಗಳಿಲ್ಲ. 

ಮೂರನೇ ಸಾಲು

Mahindra XUV700 Review: The Perfect Family SUV, Almost

ಮೂರನೇ ಸಾಲಿನ ಸೀಟ್‌ಗೆ ತೆರಳಲು ಕೇವಲ ಒಂದು ಆಯ್ಕೆಗೆ ನಿರ್ಬಂಧಿಸಲಾಗಿದೆ, ಏಕೆಂದರೆ ಕ್ಯಾಪ್ಟನ್ ಸೀಟ್‌ಗಳು ಸಾಮಾನ್ಯಕ್ಕಿಂತ ವಿಶಾಲವಾಗಿವೆ. ಇದರ ಪರಿಣಾಮವಾಗಿ, ನೇರವಾಗಿ ಮೂರನೇ ಸಾಲಿಗೆ ನೆಗೆಯಲು ಸ್ಥಳಾವಕಾಶವಿಲ್ಲ. ನೀವು ಕೆಳಗೆ ಇಳಿಯಬೇಕು, ಎಡಭಾಗದ ಆಸನಗಳನ್ನು ಮಡಚಬೇಕು ಮತ್ತು ಉರುಳಿಸಬೇಕು, ಅದು ಸುಲಭವಾಗಿದೆ ಮತ್ತು ನಂತರ ಕೊನೆಯ ಸಾಲಿಗೆ ಹೋಗಬೇಕು. ಆದರೆ ಒಮ್ಮೆ ನೀವು ಮೂರನೇ ಸಾಲಿನಲ್ಲಿ ಕುಳಿತರೆ, ಈ ಸಾಲು ಚಿಕ್ಕ ಮಕ್ಕಳಿಗೆ ಮಾತ್ರ ಒಳ್ಳೆಯದು ಎಂದು ನಿಮಗೆ ಭಾಸವಾಗುತ್ತದೆ.

ಮೊದಲನೆಯದಾಗಿ, ನೀವು ಎರಡನೇ ಸಾಲಿನ ಆಸನಗಳನ್ನು ಸರಿಸಲು ಸಾಧ್ಯವಿಲ್ಲ ಮತ್ತು ರೆಕ್ಲೈನ್ ಆಂಗಲ್‌ಗಳನ್ನು ಮಾತ್ರ ಆಡ್ಜಸ್ಟ್‌ ಮಾಡಬಹುದು. ವಯಸ್ಕರು ಇಲ್ಲಿ ಕುಳಿತುಕೊಳ್ಳಬಹುದು, ಆದರೆ ಮೊಣಕಾಲು ಮತ್ತು ಪಾದ ಇಡುವಲ್ಲಿ ಜಾಗದ ಕೊರತೆಯಿಂದಾಗಿ ಅವರ ಪ್ರಯಾಣ ಹೆಚ್ಚು ಸಂತೋಷವಾಗಿರುವುದಿಲ್ಲ. ಹೆಡ್‌ರೂಮ್ ಕೂಡ ಎತ್ತರದ ಪ್ರಯಾಣಿಕರಿಗೆ ಕಡಿಮೆ ಅನಿಸುತ್ತದೆ, ಆದ್ದರಿಂದ ಇದು ವಿಶೇಷವಾಗಿ ದೂರದ ಪ್ರಯಾಣಗಳಿಗೆ ಸೂಕ್ತವಾದ ಸೀಟಿನ ಸಾಲು ಅಲ್ಲ.

Mahindra XUV700 Review: The Perfect Family SUV, Almost

ಸೌಕರ್ಯಕ್ಕಾಗಿ, ನೀವು ಇಲ್ಲಿ ಕಂಟ್ರೋಲ್ ನಾಬ್ ಜೊತೆಗೆ ಮೀಸಲಾದ AC ವೆಂಟ್‌ಗಳನ್ನು ಪಡೆಯುತ್ತೀರಿ, ಆದ್ದರಿಂದ ಮೂರನೇ ಸಾಲಿನ ಪ್ರಯಾಣಿಕರು ತಾಪಮಾನ ಕಂಟ್ರೋಲ್‌ನ ಬಗ್ಗೆ ಯಾವುದೇ ದೂರುಗಳನ್ನು ಹೊಂದಿರುವುದಿಲ್ಲ. ಆದರೆ ಇಲ್ಲಿ ಬಳಸಿದ ಪ್ಲಾಸ್ಟಿಕ್‌ಗಳ ಬಗ್ಗೆ ದೂರು ನೀಡಬಹುದು, ಅದು ತುಂಬಾ ಹಾರ್ಡ್‌ ಅನಿಸುತ್ತದೆ ಮತ್ತು ಸ್ಕ್ರಾಚಿಯಾಗಿದೆ. ಇಲ್ಲಿ ಯಾವುದೇ ಸಾಫ್ಟ್-ಟಚ್ ಮೆಟೀರಿಯಲ್ ಇಲ್ಲ, ಆದ್ದರಿಂದ ಅನುಭವವು ಸ್ವಲ್ಪ ಕಡಿಮೆ ಅನಿಸುತ್ತದೆ. 

ಪ್ರಾಯೋಗಿಕತೆ

Mahindra XUV700 Review: The Perfect Family SUV, Almost

XUV700 ಅತ್ಯಂತ ಪ್ರಾಯೋಗಿಕ ಎಸ್‌ಯುವಿ ಆಗಿ ಮುಂದುವರೆದಿದೆ. ಮುಂದಿನ ಸಾಲಿನಲ್ಲಿ, ಬಾಗಿಲಿನ ಪಾಕೆಟ್‌ಗಳಲ್ಲಿ 1-ಲೀಟರ್ ಬಾಟಲ್‌ ಇಡಲು ಜಾಗವಿದೆ ಮತ್ತು ಅದರ ಹಿಂದೆ, ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಸ್ಥಳವಿದೆ.  ಮಧ್ಯದಲ್ಲಿ ಎರಡು ಕಪ್ ಹೋಲ್ಡರ್‌ಗಳನ್ನು ಒದಗಿಸಲಾಗಿದೆ ಮತ್ತು ಸೆಂಟ್ರಲ್ ಆರ್ಮ್‌ರೆಸ್ಟ್ ಅಡಿಯಲ್ಲಿ, ತಂಪಾಗುವ ಶೇಖರಣಾ ಬಾಕ್ಸ್‌ ಇದೆ, ಅಲ್ಲಿ ನೀವು ನಿಮ್ಮ ಪಾನೀಯಗಳನ್ನು ತಂಪಾಗಿರಿಸಿಕೊಳ್ಳಬಹುದು. ನೀವು ಎರಡು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಫೋನ್‌ಗಾಗಿ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಮೀಸಲಾದ ಸ್ಲಾಟ್ ಕೂಡ ಇದೆ.

ಗ್ಲೋವ್‌ಬಾಕ್ಸ್ ಗಾತ್ರವು ಯೋಗ್ಯವಾಗಿದೆ ಮತ್ತು ಕಾರಿನ ದಾಖಲೆಗಳನ್ನು ಸಂಗ್ರಹಿಸಲು ಅದರಲ್ಲಿ ಮೀಸಲಾದ ಸ್ಲಾಟ್ ಇದೆ, ಇದು ಗ್ಲೋವ್‌ ಕಂಪಾರ್ಟ್‌ಮೆಂಟ್‌ನಲ್ಲಿಯೇ ಜಾಗವನ್ನು ಮುಕ್ತಗೊಳಿಸುತ್ತದೆ.

Mahindra XUV700 Review: The Perfect Family SUV, Almost

ಎರಡನೇ ಸಾಲಿನಲ್ಲಿ, ನಿಮ್ಮ ಫೋನ್ ಅನ್ನು ಸಂಗ್ರಹಿಸಲು ನೀವು ಡೋರ್ ಪಾಕೆಟ್‌ಗಳು ಮತ್ತು ಎಸಿ ವೆಂಟ್‌ಗಳ ಕೆಳಗಿನ ವಿಭಾಗವನ್ನು ಸಹ ಪಡೆಯುತ್ತೀರಿ. ಸೀಟ್ ಪಾಕೆಟ್‌ಗಳು ಮ್ಯಾಗಜೀನ್‌ಗಳು ಅಥವಾ ಡಾಕ್ಯುಮೆಂಟ್‌ಗಳಿಗೆ ಸಾಕಷ್ಟು ಉತ್ತಮವಾಗಿವೆ ಮತ್ತು 5- ಮತ್ತು 7-ಆಸನಗಳ ಆವೃತ್ತಿಗಳಲ್ಲಿ, ಸೆಂಟ್ರಲ್‌ ಆರ್ಮ್‌ರೆಸ್ಟ್‌ನಲ್ಲಿ ಎರಡು ಕಪ್ ಹೋಲ್ಡರ್‌ಗಳಿವೆ. ಚಾರ್ಜ್ ಮಾಡಲು ನೀವು ಇಲ್ಲಿ ಟೈಪ್-ಸಿ ಪೋರ್ಟ್ ಅನ್ನು ಪಡೆಯುತ್ತೀರಿ.

ಮೂರನೇ ಸಾಲಿನಲ್ಲಿ, ಎರಡೂ ಪ್ರಯಾಣಿಕರು ಕಪ್ ಹೋಲ್ಡರ್‌ಗಳನ್ನು ಮತ್ತು ಚಾರ್ಜ್ ಮಾಡಲು 12 V ಸಾಕೆಟ್ ಅನ್ನು ಪಡೆಯುತ್ತಾರೆ. ಆದ್ದರಿಂದ ಎಕ್ಸ್‌ಯುವಿ700 ಕೇವಲ ಎಲ್ಲಾ ಮೂರು ಸಾಲುಗಳಿಗೆ ಪ್ರಾಯೋಗಿಕತೆಯ ಅಂಶವನ್ನು ಗುರುತಿಸುತ್ತದೆ.

ವೈಶಿಷ್ಟ್ಯಗಳು

Mahindra XUV700 Review: The Perfect Family SUV, Almost

ಈ ಅಪ್‌ಡೇಟ್‌ನೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ700 ಅನ್ನು ಇನ್ನಷ್ಟು ವೈಶಿಷ್ಟ್ಯಪೂರ್ಣಗೊಳಿಸಿದೆ. ಇದು ಹಿಂದೆ  ಕೆಲವು ವೈಶಿಷ್ಟ್ಯಗಳು ಮಿಸ್‌ ಆಗಿದ್ದವು ಮತ್ತು ಈಗ ಅವುಗಳಲ್ಲಿ ಕೆಲವುಗಳನ್ನು ಇಲ್ಲಿ ಸೇರಿಸಲಾಗಿದೆ. ಹೊಸ ಸೇರ್ಪಡೆಗಳು ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಒಆರ್‌ವಿಎಮ್‌ಗಳಿಗಾಗಿ ಸೆಗ್ಮೆಂಟ್‌ನ ಮೊದಲ ಮೆಮೊರಿ ಫಂಕ್ಷನ್‌ ಅನ್ನು ಒಳಗೊಂಡಿವೆ, ಆದರೂ ಇದು ಟಾಪ್‌-ಎಂಡ್‌ನ ಎರಡು ಆವೃತ್ತಿಗಳಿಗೆ ಸೀಮಿತವಾಗಿವೆ.

ಅದರ ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಟಾಪ್-ಸ್ಪೆಕ್ ಮಹೀಂದ್ರಾ ಎಕ್ಸ್‌ಯುವಿ700 ವೈಶಿಷ್ಟ್ಯಗಳ ಪಟ್ಟಿ

10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

ಮೆಮೊರಿ ಫಂಕ್ಷನ್‌ನೊಂದಿಗೆ 6-ವೇ ಚಾಲಿತ ಚಾಲಕ ಆಸನ

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು

ಮಳೆ ಸಂವೇದಿ ವೈಪರ್‌ಗಳು

ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್

ಪೂರ್ಣ LED ಹೆಡ್‌ಲ್ಯಾಂಪ್‌ಗಳು ಮತ್ತು ಅನುಕ್ರಮ ಟರ್ನ್‌ ಇಂಡಿಕೇಟರ್‌ಗಳೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳು

ಕಾರ್ನೆರಿಂಗ್ ಲ್ಯಾಂಪ್ 

ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ)

18-ಇಂಚಿನ ಡೈಮಂಡ್ ಕಟ್ ಅಲಾಯ್‌ಗಳು

ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

ಪನೋರಮಿಕ್ ಸನ್‌ರೂಫ್

ಕನೆಕ್ಟೆಡ್‌ ಕಾರ್‌ ಟೆಕ್ನಾಲಾಜಿ (AdrenoX)

12-ಸ್ಪೀಕರ್ ಸೌಂಡ್ ಸಿಸ್ಟಮ್ (AX7 L ಮಾತ್ರ)

360-ಡಿಗ್ರಿ ಕ್ಯಾಮೆರಾ (AX7 L ಮಾತ್ರ)

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (AX7 L ಮಾತ್ರ)

ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ (AX7 L ಮಾತ್ರ)

ಎಲೆಕ್ಟ್ರಿಕ್ ಪಾಪ್ ಔಟ್ ಡೋರ್ ಹ್ಯಾಂಡಲ್‌ಗಳು (AX7 L ಮಾತ್ರ)

ವೈರ್‌ಲೆಸ್ ಫೋನ್ ಚಾರ್ಜಿಂಗ್ (AX7 L ಮಾತ್ರ)

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (AX7 L ಮಾತ್ರ)

ನಿಷ್ಕ್ರಿಯ ಕೀಲಿ ರಹಿತ ಪ್ರವೇಶ (AX7 L ಮಾತ್ರ)

ಹಿಂದಿನ ಎಲ್ಇಡಿ ಅನುಕ್ರಮ ಟರ್ನ್‌ ಇಂಡಿಕೇಟರ್‌ಗಳು (AX7 L ಮಾತ್ರ)

ವೆಂಟಿಲೇಟೆಡ್ ಸೀಟ್‌ಗಳು (AX7 L ಮಾತ್ರ)

ಒಆರ್‌ವಿಎಮ್‌ಗಾಗಿ ಮೆಮೊರಿ ಫಂಕ್ಷನ್‌ (AX7 L ಮಾತ್ರ)

ಬ್ಲೈಂಡ್ ವ್ಯೂ ಮಾನಿಟರ್ (AX7 L ಮಾತ್ರ)

ನೀವು ಬಾಗಿಲು ತೆರೆದಾಗ ಸೀಟ್‌ಗಳ ಚಲನೆ, ಒಆರ್‌ವಿಎಮ್‌ಗಳಿಗೆ ಮೆಮೊರಿ ಫಂಕ್ಷನ್‌ ಮತ್ತು ಎಲೆಕ್ಟ್ರಿಕ್ ಫ್ಲಶ್ ಡೋರ್ ಹ್ಯಾಂಡಲ್‌ಗಳಂತಹ ವೈಶಿಷ್ಟ್ಯಗಳು ನೀವು ಪ್ರೀಮಿಯಂ ಐಷಾರಾಮಿ ಕಾರುಗಳಲ್ಲಿ ಕಾಣುವ ವೈಶಿಷ್ಟ್ಯಗಳಾಗಿವೆ. ಈ ವೈಶಿಷ್ಟ್ಯಗಳ ಕಾರ್ಯಗತಗೊಳಿಸುವಿಕೆಯು ಕೆಲವು ಸ್ಥಳಗಳಲ್ಲಿ ಉತ್ತಮವಾಗಿದೆ ಮತ್ತು ಇತರರಲ್ಲಿ ಅಷ್ಟು ಉತ್ತಮವಾಗಿಲ್ಲ. ವೈಶಿಷ್ಟ್ಯಗಳ ಕೆಲವು ಧನಾತ್ಮಕ ಅಂಶಗಳು ಇಲ್ಲಿವೆ:

Mahindra XUV700 Review: The Perfect Family SUV, Almost

10.25-ಇಂಚಿನ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು: ಎರಡೂ ಸ್ಕ್ರೀನ್‌ಗಳು ಒಂದೇ ಅಂಚಿನಲ್ಲಿ ಉತ್ತಮವಾಗಿ ಕಾಣುವುದು ಮಾತ್ರವಲ್ಲ, ಅವುಗಳನ್ನು ನಿರ್ವಹಿಸುವ ಅನುಭವವೂ ಉತ್ತಮವಾಗಿದೆ. ಗ್ರಾಫಿಕ್ಸ್ ಗರಿಗರಿಯಾಗಿದೆ, ರೆಸ್ಪಾನ್ಸ್‌ ಉತ್ತಮವಾಗಿದೆ ಮತ್ತು ನೀವು ಡ್ರೈವರ್ ಡಿಸ್‌ಪ್ಲೇನಲ್ಲಿ ಡಿಸ್‌ಪ್ಲೇ ಮೋಡ್‌ಗಳನ್ನು ಕಸ್ಟಮೈಸ್ ಮಾಡಬಹುದು. ಆದ್ದರಿಂದ ನೀವು ಅದನ್ನು ಕನಿಷ್ಠವಾಗಿ ಹೊಂದಿಸಬಹುದು ಅಥವಾ ಎಲ್ಲಾ ರೀತಿಯ ಮಾಹಿತಿಯೊಂದಿಗೆ ಆಕ್ರಮಣಕಾರಿಯನ್ನಾಗಿ ಮಾಡಬಹುದು. ಹೌದು, ಇದು ವಯರ್‌ಲೆಸ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಪಡೆಯುತ್ತದೆ.

ಡ್ರೈವರ್‌ನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಪ್ರದರ್ಶಿಸಬಹುದಾದ ಇನ್ ಬಿಲ್ಟ್ ನ್ಯಾವಿಗೇಶನ್‌ಗಳು ಇದರ ಪ್ಲಸ್ ಪಾಯಿಂಟ್‌ಗಳು. ಸ್ಕ್ರೀನ್‌ನಲ್ಲಿ ಸ್ವಲ್ಪ ಅಥವಾ ಪೂರ್ಣ-ಸ್ಕ್ರೀನ್‌ ಡಿಸ್‌ಪ್ಲೇಯೊಂದಿಗೆ ನೀವು ಇಲ್ಲಿಯೂ ಸಹ ಆಯ್ಕೆಗಳನ್ನು ಹೊಂದಿದ್ದೀರಿ. ಇದರಲ್ಲಿ ಗೂಗಲ್ ಮ್ಯಾಪ್ಸ್ ಇಂಟಿಗ್ರೇಷನ್ ಇದ್ದಲ್ಲಿ ಈ ಡೀಲ್ ಇನ್ನಷ್ಟು ಸಿಹಿಯಾಗುತ್ತಿತ್ತು.

12-ಸ್ಪೀಕರ್ ಸೌಂಡ್ ಸಿಸ್ಟಂ: ಹೆಚ್ಚಿನ ವಲ್ಯೂಮ್‌ನಲ್ಲಿ ಸಹ ಕ್ರಿಸ್ಪ್‌ ಮತ್ತು ಕ್ಲೀಯರ್‌ ಆಗಿದೆ. ವಾಸ್ತವವಾಗಿ, ಇದು 3D ತಲ್ಲೀನಗೊಳಿಸುವ ಸೌಂಡ್ ಮೋಡ್ ಅನ್ನು ಪಡೆಯುತ್ತದೆ, ಇದು ನಿಮಗೆ ಸರಿಯಾದ ಕನ್ಸರ್ಟ್ ತರಹದ ಅನುಭವವನ್ನು ನೀಡುತ್ತದೆ. ಇದು ನಿಮಗೆ ಇಷ್ಟವಿಲ್ಲದಿದ್ದರೆ, ನೀವು ಆಫ್ ಮಾಡಬಹುದು ಮತ್ತು ಬೇಕಾದರ ಬೇರೆ ಸೆಟ್ಟಿಂಗ್ ಅನ್ನು ಬಳಸಬಹುದು.

Mahindra XUV700 Review: The Perfect Family SUV, Almost

ಡ್ರೈವರ್ ಸೀಟ್‌ಗಳು ಮತ್ತು ಒಆರ್‌ವಿಎಮ್‌ಗಳಿಗಾಗಿ 3 ಮೆಮೊರಿ ಸೆಟ್ಟಿಂಗ್‌ಗಳು: ವಿಶೇಷವಾಗಿ ಕುಟುಂಬದಲ್ಲಿ ಹಲವು ಬಳಕೆದಾರರಿದ್ದರೆ, ಇದು ಬಹಳ ಸೂಕ್ತವಾದ ವೈಶಿಷ್ಟ್ಯವಾಗಿದೆ. ಒಆರ್‌ವಿಎಮ್‌ಗಾಗಿ ಮೆಮೊರಿ ಸೆಟ್ಟಿಂಗ್ ಅದನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಹೆಚ್ಚಿನ ವೈಶಿಷ್ಟ್ಯಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸುತ್ತಿದ್ದರೂ, XUV700 ಅನ್ನು ಇನ್ನೂ ಉತ್ತಮವಾಗಿ ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:

Mahindra XUV700 Review: The Perfect Family SUV, Almost

ವೆಂಟಿಲೇಟೆಡ್ ಸೀಟ್‌ಗಳ ಇಂಟಿಗ್ರೇಶನ್‌: ಸೀಟ್ ವೆಂಟಿಲೇಶನ್‌ ಅನ್ನು ಸಕ್ರಿಯಗೊಳಿಸಲು ಯಾವುದೇ ಪ್ರತ್ಯೇಕ ಬಟನ್ ಇಲ್ಲ. ಬದಲಾಗಿ, ನೀವು ಸ್ಕ್ರೀನ್‌ನ ಮೇಲಿನ ಸಣ್ಣ ಐಕಾನ್ ಅನ್ನು ಟ್ಯಾಪ್ ಮಾಡಬೇಕು, ಇದು ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇಅನ್ನು ಬಳಸುವಾಗ ನೀವು ಒಂದೆರಡು ಕ್ಲಿಕ್‌ಗಳೊಂದಿಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ವಿಶೇಷವಾಗಿ, ಚಾಲನೆ ಮಾಡುವಾಗ ಇದು ಅತ್ಯಂತ ಸೂಕ್ತವಾದ ಇಂಟಿಗ್ರೇಶನ್‌ ಅಲ್ಲ. 

360-ಡಿಗ್ರಿ ಕ್ಯಾಮರಾ ಮತ್ತು ಬ್ಲೈಂಡ್ ವ್ಯೂ ಮಾನಿಟರ್: ಅವುಗಳ ಎರಡೂ ಫೀಡ್ ಫ್ರೇಮ್ ರೇಟ್‌ಗಳು ನಿಧಾನವಾಗಿರುತ್ತವೆ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ನಂತರದ ಆಲೋಚನೆಯಂತೆ ಭಾಸವಾಗುತ್ತದೆ ಮತ್ತು ರಾತ್ರಿಯಲ್ಲಿ ಹೆಚ್ಚು ಸಹಾಯಕವಾಗುವುದಿಲ್ಲ.

ಈ ಆಪ್‌ಡೇಟ್‌ನ ಹೊರತಾಗಿಯೂ, ಎಕ್ಸ್‌ಯುವಿ700 ನ ಕೆಲವು ವೈಶಿಷ್ಟ್ಯಗಳನ್ನು ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಚಾಲಿತ ಪ್ರಯಾಣಿಕರ ಆಸನ, ವೆಂಟಿಲೇಟೆಡ್ ಕ್ಯಾಪ್ಟನ್ ಸೀಟ್‌ಗಳು, ಚಾಲಿತ ಟೈಲ್‌ಗೇಟ್, ಆಂಬಿಯೆಂಟ್ ಲೈಟಿಂಗ್, ಆಟೋ-ಡಿಮ್ಮಿಂಗ್‌ IRVM ಮತ್ತು ಎಲ್ಲಾ ಪ್ರಯಾಣಿಕರಿಗೆ ಒನ್‌-ಟಚ್‌ ಪವರ್ ವಿಂಡೋಗಳು ಮಿಸ್‌ ಆಗಿದೆ. 

ಸುರಕ್ಷತೆ

Mahindra XUV700 Review: The Perfect Family SUV, Almost

ಸುರಕ್ಷತಾ ಕಿಟ್ XUV700 ನ ಪ್ರಬಲ ಸೂಟ್‌ಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಇದಕ್ಕೆ ಪೂರ್ಣ 5-ಸ್ಟಾರ್ ರೇಟಿಂಗ್ ನೀಡಿದೆ ಮತ್ತು ಅದರ ಕಿಟ್ ಕೂಡ ಕೆಲವು ವ್ಯಾಪಕವಾದ ತಂತ್ರಜ್ಞಾನಗಳನ್ನು ಪ್ಯಾಕ್ ಮಾಡಿದೆ.

7 ಏರ್‌ಬ್ಯಾಗ್‌ಗಳು

ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ

ISOFIX ಮೌಂಟ್‌ಗಳು

2 ನೇ ಹಂತದ ADAS

ಬ್ಲೈಂಡ್ ಸ್ಪಾಟ್ ಮಾನಿಟರ್

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಬೆಟ್ಟದ ಇಳಿಯುವಿಕೆಯ ಕಂಟ್ರೋಲ್‌

360 ಡಿಗ್ರಿ ಕ್ಯಾಮೆರಾ

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌

ಸಾಮಾನ್ಯ ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಹೊರತಾಗಿ, XUV700 ಕ್ಯಾಮೆರಾ ಮತ್ತು ರೇಡಾರ್-ಆಧಾರಿತ ವ್ಯವಸ್ಥೆಯನ್ನು ಒಳಗೊಂಡಿರುವ ಲೆವೆಲ್-2 ADAS ಸಿಸ್ಟಮ್‌ಗಳನ್ನು ಹೊಂದಿದೆ, ಇದನ್ನು ಭಾರತೀಯ ಚಾಲನಾ ಪರಿಸ್ಥಿತಿಗಳಿಗಾಗಿ ಬದಲಾವಣೆ ಮಾಡಲಾಗಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ಗಳಂತಹ ವೈಶಿಷ್ಟ್ಯಗಳು ಇದನ್ನು ಇನ್ನೂ ಉತ್ತಮವಾದ ಹೈವೇ ಕ್ರೂಸರ್ ಆಗಿ ಮಾಡಲು ಸಹಾಯ ಮಾಡುತ್ತದೆ.

ಇದಲ್ಲದೆ, ಈ ವೈಶಿಷ್ಟ್ಯಗಳು ಒಳನುಗ್ಗುವ ಭಾವನೆ ಇಲ್ಲದಿದ್ದರೂ, ನೀವು ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯ ಕೆಲವು ಟ್ಯಾಪ್‌ಗಳನ್ನು ಬಯಸಿದರೆ ನೀವು ಅವುಗಳನ್ನು ಆಫ್ ಮಾಡಬಹುದು. ಹಾಗೆಯೇ ಇದರಲ್ಲಿ ಯಾವುದೇ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ ಇಲ್ಲ, ವಿಶೇಷವಾಗಿ ಈ ಸೈಜ್‌ನ ಕಾರುಗಳಿಗೆ ಇದು ಉಪಯುಕ್ತ ವೈಶಿಷ್ಟ್ಯವಾಗಿದೆ.

ಡ್ರೈವಿಂಗ್ ಅನಿಸಿಕೆಗಳು

Mahindra XUV700 Review: The Perfect Family SUV, Almost

 

2-ಲೀಟರ್ ಟರ್ಬೊ-ಪೆಟ್ರೋಲ್

2.2-litre diesel

ಪವರ್‌

200 ಪಿಎಸ್‌

156ಪಿಎಸ್‌ 

185ಪಿಎಸ್‌

ಟಾರ್ಕ್

380 ಎನ್‌ಎಮ್‌

360ಎನ್‌ಎಮ್‌

450ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನುಯಲ್‌/ಆಟೋಮ್ಯಾಟಿಕ್‌

6-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌/ಆಟೋಮ್ಯಾಟಿಕ್‌

ಡ್ರೈವ್ ಟ್ರೈನ್

ಫ್ರಂಟ್‌ ವೀಲ್‌

ಫ್ರಂಟ್‌ ವೀಲ್‌

ಫ್ರಂಟ್‌ ಅಥವಾ ಆಲ್-ವೀಲ್ (ಆಟೋಮ್ಯಟಿಕ್‌ನಲ್ಲಿ ಮಾತ್ರ)

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೆರಡರಲ್ಲೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆ ಲಭ್ಯವಿದ್ದು, ಎಕ್ಸ್‌ಯುವಿ700 ಜೊತೆಗೆ ಲಭ್ಯವಿರುವ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ ಯಾವುದೇ ಕೊರತೆಯಿಲ್ಲ. ನಾವು ಪರೀಕ್ಷೆಗೆ ಒಳಪಡಿಸಿದ 185ಪಿಎಸ್‌ 2.2-ಲೀಟರ್ ಡೀಸೆಲ್ ಎಂಜಿನ್‌ ಆವೃತ್ತಿಯನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಈ ಪವರ್‌ಟ್ರೇನ್ ಆಯ್ಕೆಗಳು ಕಾರ್ಯಕ್ಷಮತೆಯ ವಿಷಯದಲ್ಲಿ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

Mahindra XUV700 Review: The Perfect Family SUV, Almost

ಡೀಸೆಲ್ ಎಂಜಿನ್‌ಗೆ ಶಬ್ದ ಮತ್ತು  ವೈಬ್ರೇಷನ್‌ಗಳು ಒಳ್ಳೆಯದು. ಆರಂಭದಲ್ಲಿ ಎಂಜಿನ್ ಅನ್ನು ಸ್ಟಾರ್ಟ್‌ ಮಾಡಿದಾಗ ಕ್ಯಾಬಿನ್ ಒಳಗೆ ಕೆಲವು ವೈಬ್ರೇಷನ್‌ ಮತ್ತು ಎಂಜಿನ್ ಶಬ್ದವನ್ನು ನೀವು ಅನುಭವಿಸುವಿರಿ. ಆದರೆ ಒಮ್ಮೆ ನೀವು ಡ್ರೈವ್‌ನ ಪ್ರಾರಂಭಿಸಿದಾಗ, ಕಂಪನಗಳು ಕಡಿಮೆಯಾಗುತ್ತವೆ, ಆದರೂ ಕೆಲವು ಎಂಜಿನ್ ಶಬ್ದ ಕೇಳುತ್ತದೆ, ವಿಶೇಷವಾಗಿ ನೀವು ಕಾರನ್ನು ವೇಗವಾಗಿ ಚಲಾಯಿಸಿದಾಗ.

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಇದು ತನ್ನ ಕೆಳಗಿನ ಶ್ರೇಣಿಯಿಂದಲೇ ಸಾಕಷ್ಟು ಟಾರ್ಕ್ ಅನ್ನು ಹೊಂದಿದೆ, ಆದ್ದರಿಂದ ಅದು ನಗರದಲ್ಲಿರಲಿ ಅಥವಾ ಹೆದ್ದಾರಿಯಲ್ಲಿರಲಿ - ಓವರ್‌ಟೇಕ್‌ಗಳು ಸುಲಭದಲ್ಲಿ ಸಾಧ್ಯವಾಗುತ್ತದೆ. ಇದರ ಟ್ರಾನ್ಸ್‌ಮಿಷನ್‌ ಸಹ ಮೃದುವಾಗಿರುತ್ತದೆ, ಮತ್ತು ನಿಮಗೆ ಓವರ್‌ಟೇಕ್ ಅಗತ್ಯವಿದ್ದಾಗ, ಯಾವುದೇ ಪ್ರಮುಖ ವಿಳಂಬವಿಲ್ಲದೆ ಅದು ಡೌನ್‌ಶಿಫ್ಟ್ ಆಗುತ್ತದೆ. ನೀವು ಬಯಸಿದಲ್ಲಿ ಗೇರ್ ಲಿವರ್ ಮೂಲಕ ಮ್ಯಾನುಯಲ್‌ ಆಗಿ ಗೇರ್ ಬದಲಾಯಿಸುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ (ಯಾವುದೇ ಪ್ಯಾಡಲ್ ಶಿಫ್ಟರ್‌ಗಳಿಲ್ಲ).

Mahindra XUV700 Review: The Perfect Family SUV, Almost

ಇಲ್ಲಿ  ZIP, ZAP ಮತ್ತು ZOOM ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿವೆ, ಅಲ್ಲಿ ಸ್ಟೀರಿಂಗ್‌ನ ಭಾರ ಮತ್ತು ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ. ZOOM ನಲ್ಲಿ, ಅದರ ಸ್ಪೋರ್ಟಿಯಸ್ಟ್ ಮೋಡ್, ಗೇರ್‌ಬಾಕ್ಸ್ ಗೇರ್‌ಗಳನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಥ್ರೊಟಲ್ ಪ್ರತಿಕ್ರಿಯೆಯು ಚುರುಕುಗೊಳ್ಳುತ್ತದೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಥ್ರೊಟಲ್, ಸ್ಟೀರಿಂಗ್, ಬ್ರೇಕ್‌ಗಳು ಮತ್ತು AC ಸೆಟ್ಟಿಂಗ್‌ಗಳನ್ನು ಆಡ್ಜಸ್ಟ್‌ ಮಾಡಬಹುದಾದ ಕಸ್ಟಮ್ ಮೋಡ್ ಸಹ ಇದೆ.

ನಮ್ಮ ಮಿಶ್ರ ಡ್ರೈವಿಂಗ್ ಪರಿಸ್ಥಿತಿಗಳಲ್ಲಿ, ಇದು ನಮಗೆ ಸುಮಾರು 10-12 kmpl ಮೈಲೇಜ್ ನೀಡಿತು, ಇದು ಈ ಗಾತ್ರದ ಕಾರಿಗೆ ಉತ್ತಮ ಎನ್ನಬಹುದು. ಹೆದ್ದಾರಿಯಲ್ಲಿ ನೀವು ಉತ್ತಮ ಇಂಧನ ದಕ್ಷತೆಯನ್ನು ನಿರೀಕ್ಷಿಸಬಹುದು, ಆದರೆ ನೀವು ಪೆಟ್ರೋಲ್ ಎಂಜಿನ್‌ನೊಂದಿಗೆ 10 ಕ್ಕಿಂತ ಕೆಳಗೆ ಪಡೆದರೆ ಆಶ್ಚರ್ಯಪಡಬೇಡಿ.

ರೈಡ್‌ ಮತ್ತು ನಿರ್ವಹಣೆ

Mahindra XUV700 Review: The Perfect Family SUV, Almost

XUV700 ತನ್ನ ಸಮಂಜಸವಾದ ರೈಡ್‌ ಮತ್ತು ನಿರ್ವಹಣೆಯ ನಡವಳಿಕೆಯಿಂದ ಪ್ರಭಾವ ಬೀರುವುದನ್ನು ಮುಂದುವರೆಸಿದೆ. ಮೊದಲನೆಯದಾಗಿ, ಅದರ ಸ್ಟೀರಿಂಗ್ ವೀಲ್ ಹಗುರವಾಗಿರುತ್ತದೆ, ಆದ್ದರಿಂದ ಅದನ್ನು ಕುಶಲತೆಯಿಂದ ನಿರ್ವಹಿಸುವುದು ಮತ್ತು ನಗರದಲ್ಲಿ U-ತಿರುವುಗಳನ್ನು ಮಾಡುವುದು ಸುಲಭ. ನಂತರ ಅದರ ರೈಡ್‌ನ ಗುಣಮಟ್ಟ ಬೇರೆನೆ ಲೆವೆಲ್‌ ಆಗಿದೆ.  ಇದು ಸಣ್ಣ ಅಥವಾ ದೊಡ್ಡ ಹೊಂಡಗಳಾಗಿದ್ದರೂ ಸಹ ನೀವು ಯಾವುದೇ ದೂರುಗಳನ್ನು ಹೊಂದಿರುವುದಿಲ್ಲ ಮತ್ತು ಒರಟಾದ ರಸ್ತೆಗಳನ್ನು ಸಹ ಸುಲಭವಾಗಿ ನಿಭಾಯಿಸಬಹುದು, ಅದರ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನಿಂದ ಇದು ಸಾಧ್ಯವಾಗುತ್ತದೆ, ಇದು ಆತ್ಮವಿಶ್ವಾಸವನ್ನು ಪ್ರೇರೇಪಿಸುತ್ತದೆ.

ಹೆದ್ದಾರಿಯಲ್ಲಿನ ಸಮತೋಲನ ಮತ್ತು ಸ್ಥಿರತೆಯು ಸಹ ಪ್ರಶಂಸನೀಯವಾಗಿದೆ ಮತ್ತು ಇದು ನಿಮ್ಮ ಕುಟುಂಬಕ್ಕೆ ದೂರು ನೀಡಲು ಯಾವುದೇ ಕಾರಣವನ್ನು ನೀಡುವುದಿಲ್ಲ. ಹೌದು, ಇಂತಹ ದೊಡ್ಡ SUV ಆಗಿರುವುದರಿಂದ, ತಿರುವುಗಳಲ್ಲಿ ಹರಿದಾಡುವ ಬಾಡಿ ರೋಲ್ ಇದೆ, ಆದರೂ ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿದೆ. ಆದರೆ ಹೌದು, ಸ್ಟೀರಿಂಗ್ ಚಕ್ರವು ಹೆಚ್ಚು ತೂಗುವುದಿಲ್ಲ, ಆದ್ದರಿಂದ ಅದನ್ನು ತಿರುವುಗಳಲ್ಲಿ ಅತ್ಯಾಕರ್ಷಕ ಎಂದು ಕರೆಯಲಾಗುವುದಿಲ್ಲ, ಆದರೂ ಅದು ಇನ್ನೂ ಸ್ಥಿರವಾಗಿ ಉಳಿದಿದೆ.

ಅಂತಿಮ ಮಾತು

Mahindra XUV700 Review: The Perfect Family SUV, Almost

ಎಲ್ಲಾ ನ್ಯಾಯಸಮ್ಮತದೊಂದಿಗೆ, XUV700 ಈ ಆಪ್‌ಡೇಟ್‌ಗಳೊಂದಿಗೆ ಬಹಳಷ್ಟು ಬದಲಾಗಿಲ್ಲ. ಈ ಹಿಂದೆ ಮಿಸ್‌ ಆಗಿದ್ದ ಕೆಲವು ವೈಶಿಷ್ಟ್ಯಗಳು, ಹೊಸ 6-ಆಸನಗಳ ಲೇಔಟ್ ಮತ್ತು ಹೊಸ ಆಲ್-ಬ್ಲ್ಯಾಕ್ ಥೀಮ್ ಅನ್ನು ಸೇರಿಸಲಾಗಿದೆ.

ಇದಲ್ಲದೆ, ನೀವು ಎರಡನೇ ಸಾಲಿನಲ್ಲಿ ಸಾಕಷ್ಟು ಸಮಯವನ್ನು ಕಳೆಯಲು ಬಯಸಿದರೆ ಅಥವಾ ನಿಮ್ಮ ಪೋಷಕರಿಗೆ ಆರಾಮದಾಯಕವಾದ ಎರಡನೇ ಸಾಲನ್ನು ಹುಡುಕುತ್ತಿದ್ದರೆ, ಆ ಹೊಸ 6-ಆಸನಗಳ ಲೇಔಟ್‌ ನಿಮ್ಮ ಉತ್ತಮ ಆಯ್ಕೆಯಲ್ಲಿ ಒಂದಾಗುತ್ತದೆ. ಇದು ಸರಿಹೊಂದಿಸುತ್ತದೆ ಮತ್ತು ನಿಮಗೆ ಆರಾಮದಾಯಕ ಅನುಭವನ್ನು ನೀಡುವುದರೊಂದಿಗೆ ಸುರಕ್ಷಿತವಾಗಿರಿಸುತ್ತದೆ.

Mahindra XUV700 Review: The Perfect Family SUV, Almost

ಹೌದು, ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಕೆಲವು ಸಣ್ಣ ವೈಶಿಷ್ಟ್ಯಗಳು ಮಿಸ್‌ ಆಗಿವೆ. ಅವುಗಳನ್ನು ಸೇರಿಸಿದರೆ ಕ್ಯಾಬಿನ್ ಅನುಭವವನ್ನು ಇನ್ನಷ್ಟು ಸುಧಾರಿಸುತ್ತದೆ. ಆದರೂ, ನೀವು ಯಾವುದೇ ಪ್ರಮುಖ ರಾಜಿ ಮಾಡಿಕೊಳ್ಳುತ್ತಿರುವಂತೆ ಅಲ್ಲ. ಚಾಲನಾ ಅನುಭವವು ಉತ್ತಮವಾಗಿದೆ, ಇದು ಕೇವಲ ಉತ್ತಮ ಚಾಫರ್‌-ಚಾಲಿತ ಕಾರಿಗಿಂತಲೂ ಹೆಚ್ಚು ಮಾಡುತ್ತದೆ.

ಆದ್ದರಿಂದ ಮಹೀಂದ್ರಾ ಎಕ್ಸ್‌ಯುವಿ700 ತನ್ನ ಕಮಾಂಡಿಂಗ್ ರೋಡ್‌ ಪ್ರೆಸೆನ್ಸ್‌ ಮತ್ತು ಸೊಗಸಾದ ನೋಟದೊಂದಿಗೆ ಇನ್ನೂ ಪ್ರಬಲವಾಗಿದೆ; ವಿಶಾಲವಾದ ಮತ್ತು ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್, ಇದು ಈಗ ಇನ್ನೂ ಉತ್ಕೃಷ್ಟವಾಗಿದೆ, ನಿಜವಾಗಿಯೂ ಆರಾಮದಾಯಕವಾದ ರೈಡಿಂಗ್‌ ಗುಣಮಟ್ಟ, ಮತ್ತು ಎಲ್ಲಾ ಡ್ರೈವಿಂಗ್ ಪರಿಸ್ಥಿತಿಗಳಿಗೆ ಶಕ್ತಿಯುತವಾದ ಕಾರ್ಯಕ್ಷಮತೆಯೊಂದಿಗೆ ಬಹು ಎಂಜಿನ್ ಆಯ್ಕೆಗಳು, ಈ ಎಲ್ಲಾ ಗುಣಲಕ್ಷಣಗಳು ಇದನ್ನು ಮೊದಲಿಗಿಂತಲೂ ಉತ್ತಮವಾದ ಆಲ್-ರೌಂಡರ್ ಫ್ಯಾಮಿಲಿ ಎಸ್‌ಯುವಿಯನ್ನಾಗಿ ಮಾಡುತ್ತವೆ.

Mahindra XUV700 Review: The Perfect Family SUV, Almost

ಮತ್ತು ಅಂತಿಮವಾಗಿ, ಕೇಕ್ ಮೇಲಿನ ಐಸಿಂಗ್ ನಂತೆ ಎಸ್‌ಯುವಿಗಾಗಿ ವೈಟಿಂಗ್‌ ಪಿರೇಡ್‌ ಈಗ ಕಡಿಮೆಯಾಗಿದೆ, ಆದ್ದರಿಂದ ನೀವು ಎಕ್ಸ್‌ಯುವಿ700 ಅನ್ನು ಮನೆಗೆ ತರಲು ಯೋಚಿಸುತ್ತಿದ್ದರೆ, ನೀವು ಈಗ ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಮಾಡಬಹುದು.

Published by
ujjawall

ಮಹೀಂದ್ರ ಎಕ್ಸ್‌ಯುವಿ 700

ರೂಪಾಂತರಗಳು*Ex-Showroom Price New Delhi
mx 5str diesel (ಡೀಸಲ್)Rs.14.59 ಲಕ್ಷ*
mx 7str diesel (ಡೀಸಲ್)Rs.14.99 ಲಕ್ಷ*
mx e 5str diesel (ಡೀಸಲ್)Rs.15.09 ಲಕ್ಷ*
mx e 7str diesel (ಡೀಸಲ್)Rs.15.49 ಲಕ್ಷ*
ax3 5str diesel (ಡೀಸಲ್)Rs.16.99 ಲಕ್ಷ*
ax3 e 5str diesel (ಡೀಸಲ್)Rs.17.49 ಲಕ್ಷ*
ax5 5str diesel (ಡೀಸಲ್)Rs.18.29 ಲಕ್ಷ*
ಎಎಕ್ಸ್‌5 7 ಸೀಟರ್‌ ಡೀಸೆಲ್ (ಡೀಸಲ್)Rs.19.04 ಲಕ್ಷ*
ಎಎಕ್ಸ್‌5 ಎಸ್‌ 7 ಸೀಟರ್‌ ಡೀಸಲ್ (ಡೀಸಲ್)Rs.17.74 ಲಕ್ಷ*
ax5 s e 7str diesel (ಡೀಸಲ್)Rs.18.24 ಲಕ್ಷ*
ax3 5str diesel at (ಡೀಸಲ್)Rs.18.59 ಲಕ್ಷ*
ax5 5str diesel at (ಡೀಸಲ್)Rs.19.89 ಲಕ್ಷ*
ಎಎಕ್ಸ್‌5 7 ಸೀಟರ್‌ ಡೀಸೆಲ್ ಆಟೋಮ್ಯಾಟಿಕ್‌ (ಡೀಸಲ್)Rs.20.64 ಲಕ್ಷ*
ಎಎಕ್ಸ್‌5 ಎಸ್‌ 7 ಸೀಟರ್‌ ಡೀಸಲ್ ಎಟಿ (ಡೀಸಲ್)Rs.19.24 ಲಕ್ಷ*
ಎಎಕ್ಸ್‌7 6 ಸೀಟರ್‌ ಡೀಸಲ್ (ಡೀಸಲ್)Rs.20.19 ಲಕ್ಷ*
ax7 7str diesel (ಡೀಸಲ್)Rs.19.99 ಲಕ್ಷ*
ಎಎಕ್ಸ್‌7 6 ಸೀಟರ್‌ ಡೀಸಲ್ ಎಟಿ (ಡೀಸಲ್)Rs.22.34 ಲಕ್ಷ*
ax7 7str diesel at (ಡೀಸಲ್)Rs.22.14 ಲಕ್ಷ*
ax7l 6str diesel (ಡೀಸಲ್)Rs.23.24 ಲಕ್ಷ*
ax7l 7str diesel (ಡೀಸಲ್)Rs.22.99 ಲಕ್ಷ*
ax7 7str diesel at awd (ಡೀಸಲ್)Rs.23.34 ಲಕ್ಷ*
ax7l 6str diesel at (ಡೀಸಲ್)Rs.24.94 ಲಕ್ಷ*
ax7l 7str diesel at (ಡೀಸಲ್)Rs.24.74 ಲಕ್ಷ*
ax7l 7str diesel at awd (ಡೀಸಲ್)Rs.25.74 ಲಕ್ಷ*
mx 5str (ಪೆಟ್ರೋಲ್)Rs.13.99 ಲಕ್ಷ*
mx 7str (ಪೆಟ್ರೋಲ್)Rs.14.49 ಲಕ್ಷ*
mx e 5str (ಪೆಟ್ರೋಲ್)Rs.14.49 ಲಕ್ಷ*
mx e 7str (ಪೆಟ್ರೋಲ್)Rs.14.99 ಲಕ್ಷ*
ax3 5str (ಪೆಟ್ರೋಲ್)Rs.16.39 ಲಕ್ಷ*
ax3 e 5str (ಪೆಟ್ರೋಲ್)Rs.16.89 ಲಕ್ಷ*
ax5 5str (ಪೆಟ್ರೋಲ್)Rs.17.69 ಲಕ್ಷ*
ax5 e 5str (ಪೆಟ್ರೋಲ್)Rs.18.19 ಲಕ್ಷ*
ax3 5str at (ಪೆಟ್ರೋಲ್)Rs.17.99 ಲಕ್ಷ*
ಎಎಕ್ಸ್‌5 7 ಸೀಟರ್‌ (ಪೆಟ್ರೋಲ್)Rs.18.34 ಲಕ್ಷ*
ಎಎಕ್ಸ್‌5 ಇ 7 ಸೀಟರ್‌ (ಪೆಟ್ರೋಲ್)Rs.18.84 ಲಕ್ಷ*
ಎಎಕ್ಸ್‌5 ಎಸ್‌ 7 ಸೀಟರ್‌ (ಪೆಟ್ರೋಲ್)Rs.16.89 ಲಕ್ಷ*
ax5 s e 7str (ಪೆಟ್ರೋಲ್)Rs.17.39 ಲಕ್ಷ*
ax5 5str at (ಪೆಟ್ರೋಲ್)Rs.19.29 ಲಕ್ಷ*
ಎಎಕ್ಸ್‌5 7 ಸೀಟರ್‌ ಎಟಿ (ಪೆಟ್ರೋಲ್)Rs.19.94 ಲಕ್ಷ*
ಎಎಕ್ಸ್‌5 ಎಸ್‌ 7 ಸೀಟರ್‌ ಎಟಿ (ಪೆಟ್ರೋಲ್)Rs.18.64 ಲಕ್ಷ*
ಎಎಕ್ಸ್‌7 6 ಸೀಟರ್‌ (ಪೆಟ್ರೋಲ್)Rs.19.69 ಲಕ್ಷ*
ax7 7str (ಪೆಟ್ರೋಲ್)Rs.19.49 ಲಕ್ಷ*
ax7 6str at (ಪೆಟ್ರೋಲ್)Rs.21.64 ಲಕ್ಷ*
ax7 7str at (ಪೆಟ್ರೋಲ್)Rs.21.44 ಲಕ್ಷ*
ax7l 6str at (ಪೆಟ್ರೋಲ್)Rs.24.14 ಲಕ್ಷ*
ax7l 7str at (ಪೆಟ್ರೋಲ್)Rs.23.94 ಲಕ್ಷ*

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience