• English
  • Login / Register

2024ರ ಜನವರಿಯ ಕಾರು ಮಾರಾಟದಲ್ಲಿ 10 ಕಾರ್ ಬ್ರಾಂಡ್‌ಗಳದ್ದೇ ಮೆಲುಗೈ: ಟಾಟಾವನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಮರಳಿ ಪಡೆದ ಹ್ಯುಂಡೈ

ಫೆಬ್ರವಾರಿ 12, 2024 04:15 pm ರಂದು ansh ಮೂಲಕ ಪ್ರಕಟಿಸಲಾಗಿದೆ

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈ, ಟಾಟಾ ಮತ್ತು ಮಹೀಂದ್ರಾ ಕಂಪನಿಗಳಿಗಿಂತ ಹೆಚ್ಚು ಮಾರಾಟ ಪಡೆಯುವ ಮೂಲಕ ಮಾರುತಿ ಇನ್ನೂ ಮೊದಲ ಸ್ಥಾನದಲ್ಲಿದೆ

Top Selling Car Brands Of January 2024

ಹೊಸ ವರ್ಷದ ಪ್ರಾರಂಭದೊಂದಿಗೆ, 2024ರ ಜನವರಿಯ ಕಾರು ಮಾರಾಟ ಅಂಕಿಅಂಶಗಳ ಬ್ರ್ಯಾಂಡ್-ವಾರು ವಿಭಜನೆಯಿಂದ ಸೂಚಿಸಿದಂತೆ ಅನೇಕ ಕಾರು ತಯಾರಕರು ಮಾರಾಟದಲ್ಲಿ ಗುರುತರವಾದ ಗೆಲುವನ್ನು ಸಾಧಿಸಿದ್ದಾರೆ. ಪ್ರತಿ ತಿಂಗಳಂತೆ, ಮಾರುತಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಹಾಗೆಯೇ, ಟಾಟಾವು 2023ರ ಡಿಸೆಂಬರ್ ನಲ್ಲಿ ಪಡೆದಿದ್ದ ಎರಡನೇ ಸ್ಥಾನವು ಈ ಬಾರಿ ಹುಂಡೈ ಪಾಲಾಗಿದೆ. ಜನವರಿ 2024 ರ ಅತಿ ಹೆಚ್ಚು ಮಾರಾಟವಾದ ಕಾರ್ ಬ್ರ್ಯಾಂಡ್‌ಗಳ ವಿವರಗಳು ಇಲ್ಲಿವೆ.

ಬ್ರ್ಯಾಂಡ್

2024 ಜನವರಿ 

2023 ಡಿಸೆಂಬರ್ 

ತಿಂಗಳಿನಿಂದ ತಿಂಗಳ ಬೆಳವಣಿಗೆ (%)

ಜನವರಿ 2023

ವರ್ಷದಿಂದ ವರ್ಷಕ್ಕೆ ಬೆಳವಣಿಗೆ (%)

ಮಾರುತಿ 

1,66,802

1,04,778

59.2

1,47,348

13.2

ಹುಂಡೈ 

57,115

42,750

33.6

50,106

14

ಟಾಟಾ 

53,635

43,471

23.4

47,990

11.8

ಮಹೀಂದ್ರಾ

43,068

35,171

22.5

33,040

30.4

ಕಿಯಾ

23,769

12,536

89.6

28,634

-17

ಟೊಯೋಟಾ

23,197

21,372

8.5

12,728

82.3

ಹೋಂಡಾ

8,681

7,902

9.9

7,821

11

ರೆನಾಲ್ಟ್

3,826

1,988

92.5

3,008

27.2

ಎಂಜಿ

3,825

4,400

-13.1

4,114

-7

ವೋಕ್ಸ್‌ವ್ಯಾಗನ್

3,267

4,930

-33.7

2,906

12.4

ಗಮನಿಸಬೇಕಾದ ಪ್ರಮುಖ ಸಂಗತಿ

Maruti Fronx

  •  2024ರ ಜನವರಿಯಲ್ಲಿ ಸುಮಾರು 1.67 ಲಕ್ಷ ಕಾರುಗಳ ಮಾರಾಟದೊಂದಿಗೆ ಮಾರುತಿ ಅಗ್ರಸ್ಥಾನದಲ್ಲಿದೆ. ಈ ಕಾರು ತಯಾರಕರು ತಿಂಗಳಿನಿಂದ ತಿಂಗಳಿಗೆ (MoM) ಸುಮಾರು 60 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದಾರೆ ಮತ್ತು ಇದರ ವರ್ಷದಿಂದ ವರ್ಷಕ್ಕೆ (YoY) ಮಾರಾಟವು 13 ಪ್ರತಿಶತಕ್ಕಿಂತ ಹೆಚ್ಚಿದೆ.

  • ಈ ತಿಂಗಳ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ತನ್ನ ಎರಡನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಇದರ ಮಾಸಿಕ ಮಾರಾಟವು 34 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ವಾರ್ಷಿಕ ಮಾರಾಟವು 14 ಪ್ರತಿಶತದಷ್ಟು ಹೆಚ್ಚಾಗಿದೆ.

  • ಟಾಟಾ ಮೂರನೇ ಸ್ಥಾನಕ್ಕೆ ಕುಸಿದಿದ್ದರೂ, MoM (23 ಪ್ರತಿಶತಕ್ಕಿಂತ ಹೆಚ್ಚು) ಮತ್ತು YoY (ಬಹುತೇಕ 12 ಪ್ರತಿಶತ) ಮಾರಾಟದ ಅಂಕಿಅಂಶಗಳಲ್ಲಿ ಧನಾತ್ಮಕ ಬೆಳವಣಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ, ಹೀಗಾಗಿ ಒಟ್ಟು 50,000 ಕಾರುಗಳ ಮಾರಾಟವನ್ನು ಸಾಧಿಸಿದೆ.

Mahindra Scorpio N

  • 2024ರ ಜನವರಿಯಲ್ಲಿ ಮಹೀಂದ್ರಾ ಮಾರಾಟವು 40,000 ಯುನಿಟ್‌ಗಳನ್ನು ದಾಟಿದೆ. ಅದರ MoM ಮಾರಾಟವು 22.5 ಪ್ರತಿಶತದಷ್ಟು ಏರಿಕೆಯಾಗಿದೆ ಮತ್ತು YYY ಅಂಕಿಅಂಶಗಳು 30 ಪ್ರತಿಶತದಷ್ಟು ಹೆಚ್ಚಾಗಿದೆ. 

  • 2024ರ ಜನವರಿಯಲ್ಲಿ 23,000 ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾದ ಕಾರಣ ಕಿಯಾ ಮಾಸಿಕ ಮಾರಾಟವು ದ್ವಿಗುಣಗೊಂಡಿದೆ. ಆದರೆ, ಜನವರಿ 2023 ಕ್ಕೆ ಹೋಲಿಸಿದರೆ, ಅದರ YYY ಮಾರಾಟ ಅಂಕಿಅಂಶಗಳು 17 ಪ್ರತಿಶತದಷ್ಟು ಕಡಿಮೆಯಾಗಿದೆ.

  • ಟೊಯೋಟಾ ಈ ಜನವರಿಯಲ್ಲಿ ತನ್ನ ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಭಾರಿ ಹೆಚ್ಚಳವನ್ನು ಕಂಡಿತು (82 ಪ್ರತಿಶತಕ್ಕಿಂತ ಹೆಚ್ಚು), ಅದರ ಮಾಸಿಕ ಮಾರಾಟವು 8.5 ಪ್ರತಿಶತದಷ್ಟು ಹೆಚ್ಚಾಗಿದೆ. ಇದು 10,000 ಯುನಿಟ್‌ಗಳ ಮಾರಾಟದ ಗಡಿ ದಾಟಿದ ಕೊನೆಯ ಬ್ರ್ಯಾಂಡ್ ಆಗಿದೆ.

Toyota Innova Hycross

  •  ಹೋಂಡಾದ MoM ಮತ್ತು YoY ಮಾರಾಟವು ಜನವರಿಯಲ್ಲಿ ಒಂದೇ ರೀತಿಯ ಬೆಳವಣಿಗೆಯನ್ನು ಹೊಂದಿತ್ತು. ಇದರ ಮಾಸಿಕ ಮಾರಾಟವು ಸುಮಾರು 10 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ವಾರ್ಷಿಕ ಮಾರಾಟವು 11 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿತು.

  • ಮಾರಾಟದಲ್ಲಿ ಯಾವುದೇ ರೀತಿಯ ಕುಸಿತವನ್ನು ಕಾಣದ ಪಟ್ಟಿಯಲ್ಲಿ ರೆನಾಲ್ಟ್ ಕೊನೆಯ ಬ್ರಾಂಡ್ ಆಗಿದೆ. ಇದರ ಮಾಸಿಕ ಮಾರಾಟವು ಸರಿಸುಮಾರು ಡಬಲ್‌ ಆಗಿದೆ ಮತ್ತು ವಾರ್ಷಿಕ ಮಾರಾಟವು 27 ಪ್ರತಿಶತದಷ್ಟು ಹೆಚ್ಚಾಗಿದೆ.

  • ಎಮ್‌ಜಿಯು ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ನಷ್ಟವನ್ನು ಅನುಭವಿಸಿದ ಏಕೈಕ ಬ್ರಾಂಡ್ ಆಗಿದೆ. ಅದರ MoM ಮಾರಾಟವು 13 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ವಾರ್ಷಿಕ ಮಾರಾಟವು 7 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. 

Volkswagen Virtus

ಕೊನೆಯದಾಗಿ, ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಫೋಕ್ಸ್‌ವ್ಯಾಗನ್ 10 ನೇ ಸ್ಥಾನವನ್ನು ಪಡೆದುಕೊಂಡಿದೆ. ಮಾಸಿಕ ಮಾರಾಟದಲ್ಲಿ ಇದು 33 ಪ್ರತಿಶತದಷ್ಟು ನಷ್ಟವನ್ನು ಅನುಭವಿಸಿದರೂ, ಅದರ ವಾರ್ಷಿಕ ಮಾರಾಟದ ಅಂಕಿಅಂಶಗಳು ಇನ್ನೂ 12 ಪ್ರತಿಶತದಷ್ಟು ಏರಿಕೆ ಕಂಡಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

1 ಕಾಮೆಂಟ್
1
G
guru kalle
Feb 10, 2024, 4:05:54 PM

Car sales are increasing. However for IT professionals, salary is not increasing but lay offs are happening and hirings are not happening easily forget about salary hikes. How can they buy new car ??

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience