2020 ಹೋಂಡಾ ಸಿಟಿ 122PS ಟರ್ಬೊ ಪೆಟ್ರೋಲ್ ಅನ್ನು ಭಾರತದಲ್ಲಿ ಪಡೆಯುವುದಿಲ್ಲ.

published on ಡಿಸೆಂಬರ್ 02, 2019 03:42 pm by dhruv attri for ಹೋಂಡಾ ಸಿಟಿ 4 ನೇ ತಲೆಮಾರು

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಇಂಡಿಯಾ ಸ್ಪೆಕ್ 2020 ಹೋಂಡಾ ಸಿಟಿ  ಈಗ ಇರುವ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು BS6 ಟ್ಯೂನ್ ನಲ್ಲಿ ಮುಂದುವರೆಸುತ್ತಾರೆ.

2020 Honda City Won’t Get The 122PS Turbo Petrol In India

  • 1.0- ಲೀಟರ್ ಟರ್ಬೊ ಪೆಟ್ರೋಲ್ ಯೂನಿಟ್ ಹೆಚ್ಚು ಪವರ್ ನಿಂದ ಕೂಡಿದೆ ಮತ್ತು 1.5-ಲೀಟರ್  NA  ಗಿಂತ ಹೆಚ್ಚು ಟಾರ್ಕ್ ಹೊಂದಿದೆ. 
  • ಐದನೇ ಪೀಳಿಗೆಯ ಹೋಂಡಾ ಸಿಟಿ ಬಿಡುಗಡೆಯನ್ನು ಭಾರತದಲ್ಲಿ 2020 ಮದ್ಯದಲ್ಲಿ ನಿರೀಕ್ಷಿಸಬಹುದು 
  • ಅದು ಹೈಬ್ರಿಡ್ ಪವರ್ ಟ್ರೈನ್ ಅನ್ನು 2021 ಪ್ರಾರಂಭದಲ್ಲಿ ಪಡೆಯಬಹುದು

 ಐದನೇ ಪೀಳಿಗೆಯ ಸಿಟಿ ಅನ್ನು ಇತ್ತೀಚಿಗೆ ಥೈಲ್ಯಾಂಡ್ ನಲ್ಲಿ ಅನಾವರಣ ಮಾಡಲಾಯಿತು. ಸ್ಟೈಲಿಂಗ್ ವಿಚಾರಗಳು ಅಲ್ಲದೆ, ಈ ವೇದಿಕೆ ನವೀಕರಣಗಳು ಮತ್ತು ಹೆಚ್ಚಿನ ಫೀಚರ್ ಗಳನ್ನು ಕೊಡಲಾಗಿದೆ. ಅವುಗಳು ಹೊಸ 1.0-ಲೀಟರ್ , 3-ಸಿಲಿಂಡರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ ಅದು ಭಾರತದಲ್ಲಿ ಲಭ್ಯವಿರುವ 1.5-ಲೀಟರ್ ಯುನಿಟ್ ಗಿಂತಲೂ ಹೆಚ್ಚು ಪವರ್ ಕೊಡುತ್ತದೆ.  ಇಂದನ್ನು 2020 ಸಿಟಿ ಬಾನೆಟ್ ಒಳಗಡೆ  ಪಡೆಯಬಹುದೇ? ಮೂಲಗಳ ಪ್ರಕಾರ, ನಮಗೆ ಅದು ಲಭ್ಯವಿರುವುದಿಲ್ಲ. ಹೋಂಡಾ ಈಗ ಇರುವ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಅನ್ನು ಹಾಗೆ ಮುಂದುವರೆಸುತ್ತಾರೆ BS6 ನವೀಕರಣಗಳೊಂದಿಗೆ.

2020 Honda City Won’t Get The 122PS Turbo Petrol In India

ಥಾಯ್ ಆವೃತ್ತಿಯ 1.0-ಲೀಟರ್  (122PS/173Nm)  ಯುನಿಟ್  CVT  ಸಂಯೋಜನೆಯೊಂದಿಗೆ ಬರುತ್ತದೆ ಮತ್ತು ಅಧಿಕೃತವಾಗಿ  23.8kmpl  ಮೈಲೇಜ್ ಕೊಡುತ್ತದೆ. 1.5- ಲೀಟರ್ i-VTEC ಎಂಜಿನ್ ಭಾರತದಲ್ಲಿ ಲಭ್ಯವಿದೆ, ಆದರೆ ಅದು 119PS/145Nm  ಕೊಡುತ್ತದೆ ಮತ್ತು  5- ಸ್ಪೀಡ್ MT ಹಾಗು  CVT ಆಯ್ಕೆಯೊಂದಿಗೆ ಬರುತ್ತದೆ. 1.5-ಲೀಟರ್  i-DTEC ಎಂಜಿನ್  100PS/200Nm  ಕೊಡುತ್ತದೆ ಮತ್ತು ಅದು ಕೇವಲ  6- ಸ್ಪೀಡ್ ಮಾನ್ಯುಯಲ್ ಒಂದಿಗೆ ಲಭ್ಯವಿದೆ.  

 2020 Honda Jazz

ಆದರೆ, ನಾವು 1.5-ಲೀಟರ್ ಹೈಬ್ರಿಡ್ ಪವರ್ ಟ್ರೈನ್ ಅನ್ನು ಸಿಟಿ ಯಲ್ಲಿ ನಿರೀಕ್ಷಿಸಬಹುದು ಬಿಡುಗಡೆ ಆದ  ಸ್ವಲ್ಪ ದಿನಗಳ ನಂತರ. ಅದರಲ್ಲಿ 2019 ನಲ್ಲಿ ಬಿಡುಗಡೆ ಆದ  ಹೋಂಡಾ ಜಾಜ್ ನಲ್ಲಿ ಇರುವ ಡುಯಲ್ ಮೋಟಾರ್ ಹೈಬ್ರಿಡ್ ಯುನಿಟ್ ಇರುತ್ತದೆ ಅದನ್ನು  2019 ಟೋಕಿಯೋ ಮೋಟಾರ್ ಶೋ ನಲ್ಲಿ ಪ್ರದರ್ಶಿಸಲಾಗಿತ್ತು. ಹೊಸ ಹೈಬ್ರಿಡ್ ಪವರ್ ಟ್ರೈನ್ ನ ವಿವರ ಲಭ್ಯವಿಲ್ಲ. ಭಾರತದಲ್ಲಿ ಹೈಬ್ರಿಡ್ ಪವರ್ ಟ್ರೈನ್ ಅನ್ನು 2021 ಪ್ರಾರಂಭದಲ್ಲಿ ನಿರೀಕ್ಷಿಸಬಹುದು.

2020 Honda City Won’t Get The 122PS Turbo Petrol In India

ಹೋಂಡಾ ಭಾರತದಲ್ಲಿ  1.0-ಲೀಟರ್ ಎಂಜಿನ್ ಸಿಟಿ ಯಲ್ಲಿ ಕೊಡದಿರಬಹುದು, ಆದರೂ ಅದು ಭಾರತಕ್ಕೆ ಬರಬಹುದು. ಹೇಗೆ? CAFE ( ಕಾರ್ಪೊರೇಟ್ ಆವರೇಜ್ ಫ್ಯುಯೆಲ್ ಎಫಿಸೈನ್ಸಿ ನಾರ್ಮ್ಸ್ ) 2022 ಇಂದ ಅಳವಡಿಕೆಗೆ ಬರುತ್ತದೆ. CAFE ಗಾಗಿ ಎಲ್ಲ ಕಾರ್ ಬ್ರಾಂಡ್ ಗಳಲ್ಲಿ ಹೆಚ್ಚಿನ ಮೈಲೇಜ್ ಇರಬೇಕಾಗಬಹುದು.  ಆ ಎಂಜಿನ್ ಹೊಸ ಸಿಟಿ ಯಲ್ಲಿ ಸ್ಥಾನ ಪಡೆಯದಿರಬಹುದು, ಬಹುಶಃ ಇತರ ಮಾಡೆಲ್ ಗಳಲ್ಲಿ ಬರಬಹುದು. 

 2020  ಹೋಂಡಾ ಸಿಟಿ  ಬಿಡುಗಡೆಯನ್ನು ಭಾರತದಲ್ಲಿ 2020 ಮದ್ಯದಲ್ಲಿ ನಿರೀಕ್ಷಿಸಬಹುದು.  ಬೆಲೆ ಪಟ್ಟಿ ರೂ 9.81 ಲಕ್ಷ ಇಂದ ರೂ 14.16 ಲಕ್ಷ ವ್ಯಾಪ್ತಿಯಿಂದ ಸ್ವಲ್ಪ ಹೆಚ್ಚಾಗಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹೋಂಡಾ ನಗರ 4th Generation

Read Full News

explore ಇನ್ನಷ್ಟು on ಹೋಂಡಾ ಸಿಟಿ 4 ನೇ ತಲೆಮಾರು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience