• English
    • Login / Register

    2023ರ ಹೊಸ ಮರ್ಸಿಡೀಸ್ ಬೆಂಝ್ GLC ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು

    ಮರ್ಸಿಡಿಸ್ glc ಗಾಗಿ tarun ಮೂಲಕ ಆಗಸ್ಟ್‌ 10, 2023 04:32 pm ರಂದು ಪ್ರಕಟಿಸಲಾಗಿದೆ

    • 23 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೊರಭಾಗವು ಸೂಕ್ಷ್ಮವಾದ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಪಡೆದರೆ, ಒಳಭಾಗವು ಪ್ರಮುಖ ನವೀಕರಣಕ್ಕೆ ಒಳಗಾಗಿವೆ.

    Mercedes-Benz GLC 2023

    ಹೊಸ ಮರ್ಸಿಡೀಸ್-ಬೆಂಝ್ GLC ಭಾರತದಲ್ಲಿ ಬಿಡುಗಡೆಯಾಗಿದೆ. ಈ ವಾಹನದ ಬೆಲೆಯನ್ನು ಲಕ್ಷ 73.5 ರೂಪಾಯಿಗಳಿಂದ 74.5 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋರೂಂ) ಇರಿಸಲಾಗಿದೆ. ಈ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಇದರೊಂದಿಗೆ ಹಲವು ಹೊಸ ಫೀಚರ್‌ಗಳನ್ನು ಕೂಡ ಸೇರಿಸಲಾಗಿದೆ. ಈ ವಾಹನದಲ್ಲಿ ಅಪ್‌ಡೇಟ್ ಮಾಡಲಾದ ಪವರ್‌ಟ್ರೇನ್ ಅನ್ನು ಸಹ ನೀಡಲಾಗಿದೆ. ಮರ್ಸಿಡೀಜ್ ಬೆಂಝ್ GLC ಗಾಗಿ ಬುಕಿಂಗ್‌ಗಳು ಪ್ರಸ್ತುತ ತೆರೆದಿವೆ ಮತ್ತು ಆಸಕ್ತ ಗ್ರಾಹಕರು 1.5 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದಾಗಿದೆ.

     ಹೊಸ ಮರ್ಸಿಡೀಸ್-ಬೆಂಝ್ GLC ಬಗೆಗಿನ ಪ್ರಮುಖಾಂಶಗಳನ್ನು ಕೆಳಗೆ ನೀಡಲಾಗಿದೆ:

     

     ವೇರಿಯಂಟ್‌ವಾರು ಬೆಲೆಗಳು

    Mercedes-Benz GLC 2023

     

    ವೇರಿಯಂಟ್‌ಗಳು

    ಬೆಲೆ

    GLC 300

    ರೂ. 73.5 ಲಕ್ಷ

    GLC 220D

    ರೂ.  74.5 ಲಕ್ಷ

     ಹೊಸ GLC ಯ ಬೆಲೆ ಹಳೆಯ ಆವೃತ್ತಿಗಿಂತ ಸುಮಾರು 11 ಲಕ್ಷ ರೂಪಾಯಿಗಳಷ್ಟು ಅಧಿಕವಾಗಿದೆ. ಇದು ಎರಡು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ, ಆದರೆ ಅದರ GLC 200  ವೇರಿಯಂಟ್‌ನ ಬದಲಿಗೆ ಈಗ ಹೊಸ ವೇರಿಯಂಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

     

    ಪರಿಚಿತ ಶೈಲಿ

    Mercedes-Benz GLC 2023

     ಹೊಸ ಮರ್ಸಿಡೀಸ್-ಬೆಂಝ್ GLC ಯ ನೋಟ ಅದರ ಹಿಂದಿನ ಆವೃತ್ತಿಗಿಂತ ಹೆಚ್ಚು ಭಿನ್ನವಾಗಿಲ್ಲ. ಮುಂಭಾಗದಲ್ಲಿ, ಇದು ಟ್ವೀಕ್ಡ್ ಗ್ರಿಲ್, ಶಾರ್ಪರ್ ಹೆಡ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಪಡೆಯುತ್ತದೆ.

     ಹೊಸ 19-ಇಂಚಿನ ಆಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ ಸೈಡ್ ಪ್ರೊಫೈಲ್‌ನಲ್ಲಿ  ಬದಲಾವಣೆಗಳನ್ನು ಮಾಡಲಾಗಿಲ್ಲ. ಸೈಡ್‌ಗಳಲ್ಲಿ, ಇದು ಸ್ಲೋಪಿಂಗ್ ರೂಫ್‌ಲೈನ್ ಅನ್ನು ಪಡೆಯುತ್ತದೆ. ಹೊಸ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಮಾರ್ಪಡಿಸಿದ ಬಂಪರ್‌ನೊಂದಿಗೆ ರಿಯರ್ ಸೈಡ್ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ. 

     ಒಳಭಾಗದಲ್ಲಿ ಲಕ್ಸುರಿ

    Mercedes-Benz GLC 2023

     ಹೊಸ GLC ಕಾರಿನ ಕ್ಯಾಬಿನ್ ಹೊಸ ಮರ್ಸಿಡಿಸ್ ಸಿ-ಕ್ಲಾಸ್‌ನಿಂದ ಸ್ಫೂರ್ತಿ ಪಡೆದಿದೆ ಮತ್ತು ನೋಟದಲ್ಲಿ ಸಾಕಷ್ಟು ಕ್ಲಾಸಿಯಾಗಿ ಕಾಣುತ್ತದೆ. ಒಳಭಾಗದಲ್ಲಿ, ಇದು ಗ್ಲಾಸಿ ಗ್ರೇ ಅಪ್ಲಿಕ್‌ನೊಂದಿಗೆ  ಡ್ಯುಯಲ್-ಟೋನ್ ಶೇಡ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ, ಒಳಭಾಗದಲ್ಲಿ ಹೊಸ ಟರ್ಬೈನ್ ಶೈಲಿಯ ಎಸಿ ವೆಂಟ್‌ಗಳನ್ನು ನೀಡಲಾಗಿದೆ, ಇದು ಸಾಕಷ್ಟು ವಿಶಿಷ್ಟ ನೋಟವನ್ನು ನೀಡುತ್ತದೆ.

     

    ಫೀಚರ್‌ಗಳ ಪಟ್ಟಿ

    Mercedes-Benz GLC 2023

    ಇದರ ಪ್ರಮುಖ ಫೀಚರ್‌ಗಳ ಅಪ್‌ಗ್ರೇಡ್‌ಗಳಲ್ಲಿ ಹೊಚ್ಚ ಹೊಸ ಪೋರ್ಟೇಟ್-ಶೈಲಿಯ 11.9-ಇಂಚಿನ MBUX-ಚಾಲಿತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಸೇರಿವೆ. ಐಷಾರಾಮಿ ಎಸ್‌ಯುವಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, ಹೀಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳು  ಮತ್ತು 64-ಕಲರ್ ಆಂಬಿಯೆಂಟ್ ಲೈಟಿಂಗ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.

     ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು TPMS ಅನ್ನು ನೀಡಲಾಗಿದೆ, ಆದರೆ ADAS ಐಚ್ಛಿಕವಾಗಿರುತ್ತದೆ.

     

    ಪವರ್‌ಟ್ರೇನ್ ಮಾಹಿತಿ

    Mercedes-Benz GLC 2023

     ಹೊಸ GLC ಪ್ರಸ್ತುತ ಮಾರಾಟವಾಗುತ್ತಿರುವ ಮಾಡೆಲ್‌ನಲ್ಲಿರುವಂತದ್ದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಗಳನ್ನು ಪಡೆಯುತ್ತದೆ. ಒಂದೇ ವ್ಯತ್ಯಾಸವೆಂದರೆ. ಈಗ ಅವುಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯುತ್ತವೆ:

     

    GLC 300 ಪೆಟ್ರೋಲ್

    GLC 220d ಡಿಸೆಲ್

    ಎಂಜಿನ್ 

    2-ಲೀಟರ್ 4-ಸಿಲಿಂಡರ್

    2- ಲೀಟರ್ 4-ಸಿಲಿಂಡರ್

    ಪವರ್ (PS)

    258PS 

    197PS

    ಟಾರ್ಕ್ (Nm)

    400Nm 

    440Nm 

    ಟ್ರಾನ್ಸ್‌ಮಿಷನ್

    9-ಸ್ಪೀಡ್ AT

    9- ಸ್ಪೀಡ್ AT

     ಇದು ಮರ್ಸಿಡಿಸ್‌ನ 4ಮ್ಯಾಟಿಕ್ ಆಲ್-ವೀಲ್ ಡ್ರೈವ್‌ಟ್ರೇನ್ ಅನ್ನು ವಿವಿಧ ಡ್ರೈವ್ ಮೋಡ್‌ಗಳೊಂದಿಗೆ ಪಡೆಯುತ್ತದೆ. ಕಂಪನಿಯು ತನ್ನ ಪೆಟ್ರೋಲ್ ವೇರಿಯಂಟ್ 14.7kmpl ಮೈಲೇಜ್ ನೀಡುತ್ತದೆ ಮತ್ತು ಡೀಸೆಲ್ ವೇರಿಯಂಟ್ 19.4kmpl ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

     ಅಪ್‌ಡೇಟ್ ಮಾಡಲಾದ ಮೆರ್ಸಿಡೀಸ್-ಬೆಂಜ್ GLCಯು  ಆಡಿ Q5, BMW X3 ಮತ್ತು ವೋಲ್ವೋ XC60 ಗಳೊಂದಿಗೆ ಪೈಪೋಟಿಯನ್ನು ಮುಂದುವರಿಸಿದೆ.

    was this article helpful ?

    Write your Comment on Mercedes-Benz glc

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    related news

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience