Login or Register ಅತ್ಯುತ್ತಮ CarDekho experience ಗೆ
Login

2023ರ ಹೊಸ ಮರ್ಸಿಡೀಸ್ ಬೆಂಝ್ GLC ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು

ಮರ್ಸಿಡಿಸ್ glc ಗಾಗಿ tarun ಮೂಲಕ ಆಗಸ್ಟ್‌ 10, 2023 04:32 pm ರಂದು ಪ್ರಕಟಿಸಲಾಗಿದೆ

ಹೊರಭಾಗವು ಸೂಕ್ಷ್ಮವಾದ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಪಡೆದರೆ, ಒಳಭಾಗವು ಪ್ರಮುಖ ನವೀಕರಣಕ್ಕೆ ಒಳಗಾಗಿವೆ.

ಹೊಸ ಮರ್ಸಿಡೀಸ್-ಬೆಂಝ್ GLC ಭಾರತದಲ್ಲಿ ಬಿಡುಗಡೆಯಾಗಿದೆ. ಈ ವಾಹನದ ಬೆಲೆಯನ್ನು ಲಕ್ಷ 73.5 ರೂಪಾಯಿಗಳಿಂದ 74.5 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋರೂಂ) ಇರಿಸಲಾಗಿದೆ. ಈ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಇದರೊಂದಿಗೆ ಹಲವು ಹೊಸ ಫೀಚರ್‌ಗಳನ್ನು ಕೂಡ ಸೇರಿಸಲಾಗಿದೆ. ಈ ವಾಹನದಲ್ಲಿ ಅಪ್‌ಡೇಟ್ ಮಾಡಲಾದ ಪವರ್‌ಟ್ರೇನ್ ಅನ್ನು ಸಹ ನೀಡಲಾಗಿದೆ. ಮರ್ಸಿಡೀಜ್ ಬೆಂಝ್ GLC ಗಾಗಿ ಬುಕಿಂಗ್‌ಗಳು ಪ್ರಸ್ತುತ ತೆರೆದಿವೆ ಮತ್ತು ಆಸಕ್ತ ಗ್ರಾಹಕರು 1.5 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದಾಗಿದೆ.

ಹೊಸ ಮರ್ಸಿಡೀಸ್-ಬೆಂಝ್ GLC ಬಗೆಗಿನ ಪ್ರಮುಖಾಂಶಗಳನ್ನು ಕೆಳಗೆ ನೀಡಲಾಗಿದೆ:

ವೇರಿಯಂಟ್‌ವಾರು ಬೆಲೆಗಳು

ವೇರಿಯಂಟ್‌ಗಳು

ಬೆಲೆ

GLC 300

ರೂ. 73.5 ಲಕ್ಷ

GLC 220D

ರೂ. 74.5 ಲಕ್ಷ

ಹೊಸ GLC ಯ ಬೆಲೆ ಹಳೆಯ ಆವೃತ್ತಿಗಿಂತ ಸುಮಾರು 11 ಲಕ್ಷ ರೂಪಾಯಿಗಳಷ್ಟು ಅಧಿಕವಾಗಿದೆ. ಇದು ಎರಡು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ, ಆದರೆ ಅದರ GLC 200 ವೇರಿಯಂಟ್‌ನ ಬದಲಿಗೆ ಈಗ ಹೊಸ ವೇರಿಯಂಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಪರಿಚಿತ ಶೈಲಿ

ಹೊಸ ಮರ್ಸಿಡೀಸ್-ಬೆಂಝ್ GLC ಯ ನೋಟ ಅದರ ಹಿಂದಿನ ಆವೃತ್ತಿಗಿಂತ ಹೆಚ್ಚು ಭಿನ್ನವಾಗಿಲ್ಲ. ಮುಂಭಾಗದಲ್ಲಿ, ಇದು ಟ್ವೀಕ್ಡ್ ಗ್ರಿಲ್, ಶಾರ್ಪರ್ ಹೆಡ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಪಡೆಯುತ್ತದೆ.

ಹೊಸ 19-ಇಂಚಿನ ಆಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ ಸೈಡ್ ಪ್ರೊಫೈಲ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ. ಸೈಡ್‌ಗಳಲ್ಲಿ, ಇದು ಸ್ಲೋಪಿಂಗ್ ರೂಫ್‌ಲೈನ್ ಅನ್ನು ಪಡೆಯುತ್ತದೆ. ಹೊಸ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಮಾರ್ಪಡಿಸಿದ ಬಂಪರ್‌ನೊಂದಿಗೆ ರಿಯರ್ ಸೈಡ್ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ.

ಒಳಭಾಗದಲ್ಲಿ ಲಕ್ಸುರಿ

ಹೊಸ GLC ಕಾರಿನ ಕ್ಯಾಬಿನ್ ಹೊಸ ಮರ್ಸಿಡಿಸ್ ಸಿ-ಕ್ಲಾಸ್‌ನಿಂದ ಸ್ಫೂರ್ತಿ ಪಡೆದಿದೆ ಮತ್ತು ನೋಟದಲ್ಲಿ ಸಾಕಷ್ಟು ಕ್ಲಾಸಿಯಾಗಿ ಕಾಣುತ್ತದೆ. ಒಳಭಾಗದಲ್ಲಿ, ಇದು ಗ್ಲಾಸಿ ಗ್ರೇ ಅಪ್ಲಿಕ್‌ನೊಂದಿಗೆ ಡ್ಯುಯಲ್-ಟೋನ್ ಶೇಡ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ, ಒಳಭಾಗದಲ್ಲಿ ಹೊಸ ಟರ್ಬೈನ್ ಶೈಲಿಯ ಎಸಿ ವೆಂಟ್‌ಗಳನ್ನು ನೀಡಲಾಗಿದೆ, ಇದು ಸಾಕಷ್ಟು ವಿಶಿಷ್ಟ ನೋಟವನ್ನು ನೀಡುತ್ತದೆ.

ಫೀಚರ್‌ಗಳ ಪಟ್ಟಿ

ಇದರ ಪ್ರಮುಖ ಫೀಚರ್‌ಗಳ ಅಪ್‌ಗ್ರೇಡ್‌ಗಳಲ್ಲಿ ಹೊಚ್ಚ ಹೊಸ ಪೋರ್ಟೇಟ್-ಶೈಲಿಯ 11.9-ಇಂಚಿನ MBUX-ಚಾಲಿತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಸೇರಿವೆ. ಐಷಾರಾಮಿ ಎಸ್‌ಯುವಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, ಹೀಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳು ಮತ್ತು 64-ಕಲರ್ ಆಂಬಿಯೆಂಟ್ ಲೈಟಿಂಗ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.

ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು TPMS ಅನ್ನು ನೀಡಲಾಗಿದೆ, ಆದರೆ ADAS ಐಚ್ಛಿಕವಾಗಿರುತ್ತದೆ.

ಪವರ್‌ಟ್ರೇನ್ ಮಾಹಿತಿ

ಹೊಸ GLC ಪ್ರಸ್ತುತ ಮಾರಾಟವಾಗುತ್ತಿರುವ ಮಾಡೆಲ್‌ನಲ್ಲಿರುವಂತದ್ದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಗಳನ್ನು ಪಡೆಯುತ್ತದೆ. ಒಂದೇ ವ್ಯತ್ಯಾಸವೆಂದರೆ. ಈಗ ಅವುಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯುತ್ತವೆ:

GLC 300 ಪೆಟ್ರೋಲ್

GLC 220d ಡಿಸೆಲ್

ಎಂಜಿನ್

2-ಲೀಟರ್ 4-ಸಿಲಿಂಡರ್

2- ಲೀಟರ್ 4-ಸಿಲಿಂಡರ್

ಪವರ್ (PS)

258PS

197PS

ಟಾರ್ಕ್ (Nm)

400Nm

440Nm

ಟ್ರಾನ್ಸ್‌ಮಿಷನ್

9-ಸ್ಪೀಡ್ AT

9- ಸ್ಪೀಡ್ AT

ಇದು ಮರ್ಸಿಡಿಸ್‌ನ 4ಮ್ಯಾಟಿಕ್ ಆಲ್-ವೀಲ್ ಡ್ರೈವ್‌ಟ್ರೇನ್ ಅನ್ನು ವಿವಿಧ ಡ್ರೈವ್ ಮೋಡ್‌ಗಳೊಂದಿಗೆ ಪಡೆಯುತ್ತದೆ. ಕಂಪನಿಯು ತನ್ನ ಪೆಟ್ರೋಲ್ ವೇರಿಯಂಟ್ 14.7kmpl ಮೈಲೇಜ್ ನೀಡುತ್ತದೆ ಮತ್ತು ಡೀಸೆಲ್ ವೇರಿಯಂಟ್ 19.4kmpl ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

ಅಪ್‌ಡೇಟ್ ಮಾಡಲಾದ ಮೆರ್ಸಿಡೀಸ್-ಬೆಂಜ್ GLCಯು ಆಡಿ Q5, BMW X3 ಮತ್ತು ವೋಲ್ವೋ XC60 ಗಳೊಂದಿಗೆ ಪೈಪೋಟಿಯನ್ನು ಮುಂದುವರಿಸಿದೆ.

Share via

Write your Comment on Mercedes-Benz glc

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ