ಮುಂದಿನ ವರ್ಷದಲ್ಲಿ 4 ಕಾರುಗಳನ್ನು ಬಿಡುಗಡೆ ಮಾಡಲಿರುವ Maruti
ಮಾರುತಿ ಇ ವಿಟಾರಾ ಗಾಗಿ dipan ಮೂಲಕ ಡಿಸೆಂಬರ್ 24, 2024 06:59 am ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಒಂದೆರಡು ನಿರೀಕ್ಷಿತ ಫೇಸ್‌ಲಿಫ್ಟ್‌ಗಳ ಜೊತೆಗೆ, ಮಾರುತಿ ತನ್ನ ಮೊದಲ ಇವಿಯನ್ನು ಭಾರತಕ್ಕೆ ತರಲಿದೆ ಮತ್ತು ಅದರ ಜನಪ್ರಿಯ ಎಸ್‌ಯುವಿಯ 3-ಸಾಲಿನ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಬಹುದು
ಮತ್ತೊಂದು ಹೊಸ ವರ್ಷವು ತನ್ನ ಉದಯದ ಅಂಚಿನಲ್ಲಿದೆ, ಹಾಗೆಯೇ, ಭಾರತವು ಹೊಸ ಕಾರುಗಳನ್ನು ಪಡೆಯುವ ನಿರೀಕ್ಷೆಯೂ ಹೆಚ್ಚಿದೆ. ಭಾರತದಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಕಾರು ತಯಾರಕ ಕಂಪೆನಿಯಾಗಿರುವ ಮಾರುತಿಯು, 2025 ರಲ್ಲಿ ಒಂದೆರಡು ಹೊಸ ಕಾರುಗಳನ್ನು ಮತ್ತು ಕೆಲವು ಫೇಸ್‌ಲಿಫ್ಟೆಡ್ ಕಾರುಗಳನ್ನು ಪರಿಚಯಿಸಬಹುದೆಂದು ನಿರೀಕ್ಷಿಸಲಾದ ಕಾರು ತಯಾರಕರಲ್ಲಿ ಒಂದಾಗಿದೆ. 2025 ರಲ್ಲಿ ಮಾರುತಿ ಭಾರತಕ್ಕೆ ತರಬಹುದಾದ ಎಲ್ಲಾ ಕಾರುಗಳನ್ನು ನೋಡೋಣ:
ಮಾರುತಿ ಇ-ವಿಟಾರಾ
ನಿರೀಕ್ಷಿತ ಬಿಡುಗಡೆ: 2025 ಜನವರಿ
ನಿರೀಕ್ಷಿತ ಬೆಲೆ: 22 ಲಕ್ಷ ರೂ.ನಿಂದ(ಎಕ್ಸ್ ಶೋರೂಂ)
ಇಟಲಿಯಲ್ಲಿ ಮೊದಲು ಅನಾವರಣಗೊಳಿಸಿದ ಪ್ರೊಡಕ್ಷನ್-ಸ್ಪೆಕ್ ಮಾರುತಿ ಇ ವಿಟಾರಾ, ಇತ್ತೀಚೆಗೆ ಭಾರತದಲ್ಲಿ ಈ ಕಾರು ತಯಾರಕರಿಂದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಎಲೆಕ್ಟ್ರಿಕ್ ಎಸ್‌ಯುವಿ 2025ರ ಜನವರಿ 17 ಮತ್ತು 22ರ ನಡುವೆ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ನಲ್ಲಿ ಭಾರತಕ್ಕೆ ತನ್ನ ಪಾದಾರ್ಪಣೆ ಮಾಡಲಿದೆ. ಗ್ಲೋಬಲ್-ಸ್ಪೆಕ್ ಮಾಡೆಲ್ 49 ಕಿ.ವ್ಯಾಟ್ ಮತ್ತು 61 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ ಮತ್ತು ಸುಮಾರು 550 ಕಿ.ಮೀ.ನಷ್ಟು ಕ್ಲೈಮ್ ಡ್ರೈವಿಂಗ್ ರೇಂಜ್‌ಅನ್ನು ನೀಡುವ ನಿರೀಕ್ಷೆಯಿದೆ. ಭಾರತೀಯ-ಸ್ಪೆಕ್ ಮಾಡೆಲ್‌ನ ವಿಶೇಷಣಗಳು ಸಹ ಇದೇ ರೀತಿ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಫೀಚರ್‌ಗಳ ವಿಷಯದಲ್ಲಿ, ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.1-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಫಿಕ್ಸ್‌ಡ್ ಪನರೋಮಿಕ್ ಗ್ಲಾಸ್ ರೂಫ್, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮರಾ ಮತ್ತು ಲೆವೆಲ್-2 ADAS ಫೀಚರ್‌ಗಳನ್ನು ಹೊಂದುವ ನಿರೀಕ್ಷೆಯಿದೆ.
7-ಆಸನಗಳ ಮಾರುತಿ ಗ್ರಾಂಡ್ ವಿಟಾರಾ
ನಿರೀಕ್ಷಿತ ಬಿಡುಗಡೆ: 2025ರ ಜೂನ್
ಮಾರುತಿ ಗ್ರ್ಯಾಂಡ್ ವಿಟಾರಾದ 3-ಸಾಲಿನ ಆವೃತ್ತಿಯನ್ನು ಇತ್ತೀಚೆಗೆ ಭಾರತೀಯ ರಸ್ತೆಗಳಲ್ಲಿ ಸ್ಪೈಡ್ ಟೆಸ್ಟಿಂಗ್ ಮಾಡಲಾಗಿದ್ದು, ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2025 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದೆಂದು ಸುಳಿವು ನೀಡಿತು. ಸೀಟಿಂಗ್ ಲೇಔಟ್ ಮಾತ್ರವಲ್ಲದೆ, ಪರೀಕ್ಷಾ ಆವೃತ್ತಿಯ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು, ಬಂಪರ್ ಮತ್ತು ಡ್ಯಾಶ್‌ಬೋರ್ಡ್ ಸೇರಿದಂತೆ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ನ ವಿನ್ಯಾಸವು 5-ಆಸನಗಳ ಗ್ರ್ಯಾಂಡ್ ವಿಟಾರಾಕ್ಕಿಂತ ಭಿನ್ನವಾಗಿತ್ತು ಮತ್ತು ಇ-ವಿಟಾರಾದಿಂದ ಸ್ಫೂರ್ತಿ ಪಡೆದಂತೆ ತೋರುತ್ತಿದೆ. ಹಾಗೆಯೇ, ಈ ಮುಂಬರುವ 7-ಆಸನಗಳ ಎಸ್‌ಯುವಿ ಕುರಿತು ಹೆಚ್ಚಿನ ಮಾಹಿತಿ ತಿಳಿಸಲು ನಾವು ಅಧಿಕೃತ ದೃಢೀಕರಣಕ್ಕಾಗಿ ಕಾಯಬೇಕಾಗಿದೆ.
ಫೀಚರ್‌ಗಳ ವಿಷಯದಲ್ಲಿ, ಇದು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ 5-ಸೀಟರ್ ಆವೃತ್ತಿಯ ಫೀಚರ್‌ಗಳನ್ನು ಉಳಿಸಿಕೊಳ್ಳಬಹುದು ಎಂದು ನಾವು ನಿರೀಕ್ಷಿಸುತ್ತೇವೆ.
ಇದನ್ನೂ ಓದಿ: ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ Maruti Wagon R, ಇಲ್ಲಿಯವರೆಗೆ 32 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ..!
ಮಾರುತಿ ಬಲೆನೊ ಫೇಸ್‌ಲಿಫ್ಟ್
ನಿರೀಕ್ಷಿತ ಬಿಡುಗಡೆ: ಮಾರ್ಚ್ 2025
ಮಾರುತಿ ಬಲೆನೊ ತನ್ನ ಎರಡನೇ ಜನರೇಶನ್‌ನ ಅವತಾರದಲ್ಲಿದೆ ಮತ್ತು 2022 ರಲ್ಲಿ ಅದರ ಕೊನೆಯ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಪ್‌ಡೇಟ್ ಅನ್ನು ಕಂಡು ಸುಮಾರು ಎರಡು ವರ್ಷಗಳಾಗುವುದರಿಂದ, 2025ರ ಮಾರ್ಚ್‌ನಲ್ಲಿ ಮಾರುತಿಯು ಬಲೆನೊದ ಮತ್ತೊಂದು ಫೇಸ್‌ಲಿಫ್ಟ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇದಲ್ಲದೆ, ವದಂತಿಯನ್ನು ನಂಬುವುದಾದರೆ, ಈ ಫೇಸ್‌ಲಿಫ್ಟೆಡ್ ಬಲೆನೊ ಹೈಬ್ರಿಡ್ ಪವರ್‌ಟ್ರೇನ್ ಸೆಟಪ್ ಅನ್ನು ಹೊಂದಿದ್ದು, ಕಾರು ತಯಾರಕರು 2024ರ ಆರಂಭದಿಂದಲೂ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.
ಫೀಚರ್‌ಗಳನ್ನು ಗಮನಿಸುವಾಗ, ಫೇಸ್‌ಲಿಫ್ಟೆಡ್ ಬಲೆನೊ ದೊಡ್ಡ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ಆರು ಏರ್‌ಬ್ಯಾಗ್‌ಗಳೊಂದಿಗೆ (ಸ್ಟ್ಯಾಂಡರ್ಡ್ ಆಗಿ) ಬರಬಹುದು.
ಮಾರುತಿ ಬ್ರೆಝಾ ಫೇಸ್‌ಲಿಫ್ಟ್
ನಿರೀಕ್ಷಿತ ಬಿಡುಗಡೆ: ಆಗಸ್ಟ್ 2025
2022 ರಲ್ಲಿ ಫೇಸ್‌ಲಿಫ್ಟ್ ಪಡೆದ ಬಲೆನೊದಂತೆಯೇ, ಮಾರುತಿ ಬ್ರೆಝಾ ಕೂಡ 2022 ರಲ್ಲಿ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ ಮತ್ತು ಅಂದಿನಿಂದ ಯಾವುದೇ ಸಮಗ್ರ ಆಪ್‌ಡೇಟ್ ಅನ್ನು ಸ್ವೀಕರಿಸಿಲ್ಲ. ಸ್ಕೊಡಾ ಕೈಲಾಕ್ ಮತ್ತು ಕಿಯಾ ಸಿರೋಸ್‌ನಂತಹ ಹೊಸ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಸಬ್-4ಎಮ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಪರ್ಧೆಯನ್ನು ಹೆಚ್ಚಿಸಿರುವುದರಿಂದ, ಬ್ರೆಝಾ ತನ್ನ ಪ್ರತಿಸ್ಪರ್ಧಿಗಳನ್ನು ಎದುರಿಸಲು ಹೆಚ್ಚಿನ ಫೀಚರ್‌ಗಳೊಂದಿಗೆ ಫೇಸ್‌ಲಿಫ್ಟ್ ಆಗಿ ಬರಬಹುದು.
ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಶನ್ ಮತ್ತು ಚಾಲಿತ ಮುಂಭಾಗದ ಸೀಟುಗಳು ಮತ್ತು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ) ಫೇಸ್‌ಲಿಫ್ಟೆಡ್ ಬ್ರೆಝಾದ ಫೀಚರ್ ಪಟ್ಟಿಯ ಭಾಗವಾಗಿರಬಹುದು. ಮಹೀಂದ್ರಾ ಎಕ್ಸ್‌ಯುವಿ 3XO, ಟಾಟಾ ನೆಕ್ಸಾನ್, ಮತ್ತು ಕಿಯಾ ಸಿರೋಸ್‌ನಂತಹ ಮೊಡೆಲ್‌ಗಳು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಈ ಫೀಚರ್ ಅನ್ನು ಪ್ರವೇಶಿಸುವಂತೆ ಮಾಡಿರುವುದರಿಂದ ಮಾರುತಿಯು ಪನರೋಮಿಕ್ ಸನ್‌ರೂಫ್ ಅನ್ನು ಈ ಪಟ್ಟಿಗೆ ಸೇರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಮಾರುತಿ ಭಾರತಕ್ಕೆ ಬೇರೆ ಯಾವ ಕಾರನ್ನು ತರಬಹುದು ಎಂದು ನೀವು ಯೋಚಿಸುತ್ತೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ