• English
  • Login / Register

Skoda Kylaq ಮತ್ತು ಅದರ ಪ್ರತಿಸ್ಪರ್ಧಿಗಳ ಪವರ್‌ಟ್ರೇನ್ ವಿಶೇಷಣಗಳ ಹೋಲಿಕೆ, ಯಾವುದು ಬೆಸ್ಟ್‌ ?

ಸ್ಕೋಡಾ kylaq ಗಾಗಿ shreyash ಮೂಲಕ ಅಕ್ಟೋಬರ್ 27, 2024 10:09 pm ರಂದು ಪ್ರಕಟಿಸಲಾಗಿದೆ

  • 224 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೆಚ್ಚಿನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತವೆ, ಕೈಲಾಕ್ ಮಾತ್ರ ಕುಶಾಕ್‌ನಿಂದ ಎರವಲು ಪಡೆದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ

Skoda Kylaq vs Rivals: Powertrain Specifications Compared

ಸ್ಕೋಡಾ ಕೈಲಾಕ್ ನವೆಂಬರ್ 6 ರಂದು ತನ್ನ ಜಾಗತಿಕವಾಗಿ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ ಮತ್ತು ಅದಕ್ಕಿಂತ ಮುಂಚಿತವಾಗಿ ವಾಹನ ತಯಾರಕರು ಅದರ ಪವರ್‌ಟ್ರೇನ್ ವಿಶೇಷಣಗಳನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ. ಕೈಲಾಕ್ ನೇರವಾಗಿ ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನಂತಹ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ. ಕೈಲಾಕ್‌ನ ಎಂಜಿನ್ ವಿಶೇಷಣಗಳು ಅದರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುವುದು ಇಲ್ಲಿದೆ.

ಗಮನಿಸಿ: ಕೈಲಾಕ್ ಕೇವಲ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುವುದರಿಂದ ನಾವು ಇತರ ಮೊಡೆಲ್‌ಗಳ ಪೆಟ್ರೋಲ್ ವೇರಿಯೆಂಟ್‌ಗಳನ್ನು ಮಾತ್ರ ಪರಿಗಣಿಸಿದ್ದೇವೆ.

ಮೊಡೆಲ್‌

ಎಂಜಿನ್‌

ಪವರ್‌

ಟಾರ್ಕ್‌

ಗೇರ್‌ಬಾಕ್ಸ್‌

ಸ್ಕೋಡಾ ಕೈಲಾಕ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

115 ಪಿಎಸ್‌

178 ಎನ್‌ಎಮ್‌

6MT / 6AT

ಟಾಟಾ ನೆಕ್ಸಾನ್‌

1.2-ಲೀಟರ್‌ ಟರ್ಬೋ-ಪೆಟ್ರೋಲ್‌

120 ಪಿಎಸ್‌

170 ಎನ್‌ಎಮ್‌

5MT / 6MT / 6AMT / 7DCT

ಮಾರುತಿ ಬ್ರೆಝಾ

1.5-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌

103 ಪಿಎಸ್‌

137 ಎನ್‌ಎಮ್‌

5MT / 6AT

ಹ್ಯುಂಡೈ ವೆನ್ಯೂ

1.2-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌

83 ಪಿಎಸ್‌

114 ಎನ್‌ಎಮ್‌

5MT

1-ಲೀಟರ್‌ ಟರ್ಬೋ ಪೆಟ್ರೋಲ್‌

120 ಪಿಎಸ್‌

172 ಎನ್‌ಎಮ್‌

6MT / 7DCT

ಕಿಯಾ ಸೋನೆಟ್

1.2-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌

83 ಪಿಎಸ್‌

114 ಎನ್‌ಎಮ್‌

5MT

1-ಲೀಟರ್‌ ಟರ್ಬೋ ಪೆಟ್ರೋಲ್‌

120 ಪಿಎಸ್‌

172 ಎನ್‌ಎಮ್‌

6iMT / 7DCT

ಮಹೀಂದ್ರಾ ಎಕ್ಸ್‌ಯುವಿ 3XO

1.2-ಲೀಟರ್‌ ಟರ್ಬೋ ಪೆಟ್ರೋಲ್‌

111 ಪಿಎಸ್‌

200 ಎನ್‌ಎಮ್‌

6MT / 6AT

1.2-ಲೀಟರ್‌ TGDi ಟರ್ಬೋ ಪೆಟ್ರೋಲ್‌

131 ಪಿಎಸ್‌

230 ಎನ್‌ಎಮ್‌

ನಿಸ್ಸಾನ್ ಮ್ಯಾಗ್ನೈಟ್

1-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌

72 ಪಿಎಸ್‌

96 ಎನ್‌ಎಮ್‌

5MT / 5AMT

1-ಲೀಟರ್‌ ಟರ್ಬೋ-ಪೆಟ್ರೋಲ್‌

100 ಪಿಎಸ್‌

160 ಎನ್‌ಎಮ್‌ (MT), 152 ಎನ್‌ಎಮ್‌ (CVT)

5MT / CVT

ರೆನಾಲ್ಟ್ ಕಿಗರ್

1-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌

72 ಪಿಎಸ್‌

96 ಎನ್‌ಎಮ್‌

5MT / 5AMT

1-ಲೀಟರ್‌ ಟರ್ಬೋ-ಪೆಟ್ರೋಲ್‌

100 ಪಿಎಸ್‌

160 ಎನ್‌ಎಮ್‌ (MT), 152 ಎನ್‌ಎಮ್‌ (CVT)

5MT / CVT

 

DCT -ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್, AT - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌, T-GDi - ಡೈರೆಕ್ಟ್ ಇಂಜೆಕ್ಷನ್ ಟರ್ಬೊ-ಪೆಟ್ರೋಲ್

ಸ್ಕೋಡಾ ಕೈಲಾಕ್ ಅನ್ನು ಒಂದೇ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದು, ಆದರೆ ನೆಕ್ಸಾನ್ ಮತ್ತು ಬ್ರೆಜ್ಜಾವನ್ನು ಹೊರತುಪಡಿಸಿ, ಅದರ ಹೆಚ್ಚಿನ ಪ್ರತಿಸ್ಪರ್ಧಿಗಳು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಕೈಲಾಕ್‌ನ 1-ಲೀಟರ್ ಎಂಜಿನ್ ಅನ್ನು ನೇರವಾಗಿ ವೆನ್ಯೂ ಮತ್ತು ಸೋನೆಟ್‌ನ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಬಹುದು, ಸ್ಕೋಡಾ ಎಸ್‌ಯುವಿಯು ಅದರ ಕೊರಿಯನ್ ಕೌಂಟರ್‌ಪಾರ್ಟ್‌ಗಳಿಗಿಂತ 5 ಪಿಎಸ್‌ನಷ್ಟು ಕಡಿಮೆ ಉತ್ಪಾದಿಸುತ್ತದೆ. ಮತ್ತೊಂದೆಡೆ, ಎಕ್ಸ್‌ಯುವಿ 3ಎಕ್ಸ್‌ಒ ಎರಡು ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ನೀಡುತ್ತದೆ, ಅದರ 131 ಪಿಎಸ್‌ T-GDi (ಡೈರೆಕ್ಟ್ ಇಂಜೆಕ್ಷನ್ ಟರ್ಬೊ-ಪೆಟ್ರೋಲ್) ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಆಗಿದೆ.

ಗೇರ್‌ಬಾಕ್ಸ್‌ ಆಯ್ಕೆಗಳಿಗೆ ಬಂದಾಗ, ನೆಕ್ಸಾನ್ ಆಯ್ಕೆ ಮಾಡಲು ನಾಲ್ಕು ಗೇರ್‌ಬಾಕ್ಸ್‌ಗಳನ್ನು ನೀಡುತ್ತದೆ, ಆವುಗಳೆಂದರೆ, 5-ಸ್ಪೀಡ್ ಮ್ಯಾನುವಲ್‌, 6-ಸ್ಪೀಡ್  ಮ್ಯಾನುವಲ್‌, 6-ಸ್ಪೀಡ್ AMT ಮತ್ತು 7-ಸ್ಪೀಡ್ ಡಿಸಿಟಿ. ಕೈಲಾಕ್, ಬ್ರೆಝಾ ಮತ್ತು ಎಕ್ಸ್‌ಯುವಿ 3XO ಗಳು ಒಪ್ಶನಲ್‌ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ನೊಂದಿಗೆ ಬರುವ ಏಕೈಕ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾಗಿವೆ. ಮತ್ತೊಂದೆಡೆ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ತಮ್ಮ ಟರ್ಬೊ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ನೀಡುವ ಎರಡು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾಗಿವೆ. 

ಇದನ್ನೂ ಓದಿ: ಮೊದಲ ಬಾರಿಗೆ ಪ್ರತ್ಯಕ್ಷವಾದ ಸ್ಕೋಡಾ ಕೈಲಾಕ್‌ನ ಬೇಸ್ ವೇರಿಯೆಂಟ್‌..!

ಕೈಲಾಕ್‌ನಲ್ಲಿ ನಿರೀಕ್ಷಿತ ಫೀಚರ್‌ಗಳು

Skoda Kushaq 10-inch touchscreen

ಸ್ಕೋಡಾ ಕುಶಾಕ್ ಟಚ್‌ಸ್ಕ್ರೀನ್ ಚಿತ್ರವನ್ನು ಮಾಹಿತಿಗಾಗಿ ಬಳಸಲಾಗಿದೆ

ಇದು 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹಿಂಭಾಗದ ದ್ವಾರಗಳೊಂದಿಗೆ ಆಟೋ AC ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರಲಿದೆ. ಕೈಲಾಕ್ ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ 6-ರೀತಿಯಲ್ಲಿ ಆಡ್ಜಸ್ಟ್‌ ಮಾಡಬಹುದಾದ ಮುಂಭಾಗದ ಆಸನಗಳನ್ನು ಸಹ ಪಡೆಯುತ್ತದೆ. ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಒಳಗೊಂಡಿರುತ್ತದೆ ಮತ್ತು ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವ ನಿರೀಕ್ಷೆಯಿದೆ.

ನಿರೀಕ್ಷಿತ ಬೆಲೆ

ಸ್ಕೋಡಾ ಕೈಲಾಕ್ ಸ್ಕೋಡಾ ಕುಶಾಕ್‌ಗಿಂತ ಕೆಳಗಿರುತ್ತದೆ ಮತ್ತು ಇದರ ಎಕ್ಸ್‌ಶೋರೂಮ್‌ ಬೆಲೆಗಳು 8.50 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Skoda kylaq

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience