ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ
ಆಡಿ ಕ್ಯೂ8 ಈ-ಟ್ರಾನ್ ಗಾಗಿ shreyash ಮೂಲಕ ಆಗಸ್ಟ್ 18, 2023 08:52 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಅಪ್ಡೇಟ್ ಮಾಡಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಯು ಎರಡು ಬಾಡಿ ಪ್ರಕಾರಗಳಲ್ಲಿ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ಗಳೊಂದಿಗೆ 600 ಕಿಮೀ ವ್ಯಾಪ್ತಿಯ ಭರವಸೆಯನ್ನು ನೀಡುತ್ತದೆ.
-
5 ಲಕ್ಷ ರೂ. ನೀಡಿ ಈ ಎಲೆಕ್ಟ್ರಿಕ್ ಎಸ್‌ಯುವಿಯ ಬುಕಿಂಗ್ ಅನ್ನು ಮಾಡಬಹುದಾಗಿದೆ.
-
ಈಗ ಎರಡು ದೊಡ್ಡ ಬ್ಯಾಟರಿ ಪ್ಯಾಕ್ ನ ಆಯ್ಕೆಗಳೊಂದಿಗೆ ಬರುತ್ತದೆ: 89 kWh ಮತ್ತು 114kWh, ಇದು 600 ಕಿ.ಮೀ ವರೆಗಿನ ವ್ಯಾಪ್ತಿಯನ್ನು ನೀಡುತ್ತದೆ.
-
ಅಪ್ಡೇಟ್ ಮಾಡಿರುವ ಎಲೆಕ್ಟ್ರಿಕ್ ಎಸ್ಯುವಿ ಈಗ ಅದರ ಬೇಸ್-ಮಾಡೆಲ್ ಇ-ಟ್ರಾನ್ 50 ವೇರಿಯೆಂಟ್ ನೊಂದಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
-
ಎರಡು ವೇರಿಯೆಂಟ್ ಮತ್ತು ಎರಡು ಬಾಡಿ ಶೈಲಿಗಳಲ್ಲಿ ಲಭ್ಯವಿದೆ:ಎಸ್‌ಯುವಿ ಮತ್ತು ಸ್ಪೋರ್ಟ್‌ಬ್ಯಾಕ್ (ಎಸ್‌ಯುವಿ -ಕೂಪ್)
-
ಇದು ಅದರ ಹಿಂದಿನ ಆವೃತ್ತಿಗಿಂತ 12 ಲಕ್ಷ ರೂ ವರೆಗೆ ದುಬಾರಿಯಾಗಿದೆ.
ಆಡಿ ಕ್ಯೂ8 ಇ-ಟ್ರಾನ್ ಫೇಸ್‌ಲಿಫ್ಟ್ ಭಾರತಾದ್ಯಂತ ಆರಂಭಿಕವಾಗಿ 1.14 ಕೋಟಿ ರೂ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆಡಿ ಎಸ್‌ಯುವಿಗಳ ಪ್ರಮುಖ ಶ್ರೇಣಿಯಲ್ಲಿ "Q8" ಎಲೆಕ್ಟ್ರಿಕ್ ಎಸ್ಯುವಿ ಈಗ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಆಡಿ ಕಂಪೆನಿ ಈಗಾಗಲೇ 5 ಲಕ್ಷ ರೂಪಾಯಿಗಳ ಟೋಕನ್ ಮೊತ್ತಕ್ಕೆ ತನ್ನ ಬುಕಿಂಗ್ ಆಯ್ಕೆಯನ್ನು ತೆರೆದಿದ್ದಾರೆ.
ಮೊದಲಿನಂತೆ, Q8 ಇ-ಟ್ರಾನ್ ನನ್ನು ಕ್ಯೂ8 ಇ-ಟ್ರಾನ್ 50 ಮತ್ತು ಕ್ಯೂ8 ಇ-ಟ್ರಾನ್ 55 ಎಂಬ ಎರಡು ವೇರಿಯೆಂಟ್ ಗಳಲ್ಲಿ ನೀಡಲಾಗುತ್ತಿದೆ. ಹಾಗೆಯೇ ಇದು ಎಸ್‌ಯುವಿ ಮತ್ತು ಸ್ಪೋರ್ಟ್‌ಬ್ಯಾಕ್ (ಎಸ್‌ಯುವಿ -ಕೂಪ್) ಎಂಬ ಎರಡು ಬಾಡಿ ಶೈಲಿಗಳಲ್ಲಿ ಲಭ್ಯವಿದೆ. ಅವುಗಳ ಬೆಲೆಗಳನ್ನು ಕೆಳಗೆ ವಿವರಿಸಲಾಗಿದೆ.
ಬೆಲೆ ಪಟ್ಟಿ
ವೇರಿಯೆಂಟ್ |
ಬೆಲೆ |
ಕ್ಯೂ8 ಇ-ಟ್ರಾನ್ 50 |
1.14 ಕೋಟಿ ರೂ |
ಕ್ಯೂ8 ಇ-ಟ್ರಾನ್ 55 |
1.18 ಕೋಟಿ ರೂ |
ಕ್ಯೂ8 ಇ-ಟ್ರಾನ್ 50 ಸ್ಪೋರ್ಟ್‌ಬ್ಯಾಕ್ |
1.26 ಕೋಟಿ ರೂ |
ಕ್ಯೂ8 ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ |
1.31 ಕೋಟಿ ರೂ |
ಎಲ್ಲಾ ಬೆಲೆಗಳು ಭಾರತಾದ್ಯಂತ ಎಕ್ಸ್ ಶೋರೂಂನದ್ದಾಗಿದೆ
ಹೊಳೆಯುವ ಲುಕ್
ಸಾಮಾನ್ಯವಾಗಿ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಉತ್ತಮವಾದ ಲುಕ್ ಹೊಂದಿದೆ, ಆದರೆ ಫೇಸ್‌ಲಿಫ್ಟ್‌ನೊಂದಿಗೆ ಅದು ಈಗ ಮೊದಲಿಗಿಂತ ಹೆಚ್ಚು ನಯವಾಗಿ ಕಾಣುತ್ತದೆ. ಎರಡೂ ಹೆಡ್‌ಲೈಟ್‌ಗಳ ನಡುವೆ ಗ್ರಿಲ್‌ನ ಮೇಲ್ಭಾಗದಲ್ಲಿ ಡಿಆರ್ಎಲ್ ಸ್ಟ್ರಿಪ್‌ನೊಂದಿಗೆ ಅಪ್ಡೇಟ್ ಆಗಿರುವ ಆಡಿ ಲೋಗೋವನ್ನು ಒಳಗೊಂಡಿರುವ ಹೊಸ ಗ್ರಿಲ್ ವಿನ್ಯಾಸದೊಂದಿಗೆ ಮುಂಭಾಗವನ್ನು ನವೀಕರಿಸಲಾಗಿದೆ. ಇದು ಇನ್ನೂ ಹಿಂದಿನ ಇ-ಟ್ರಾನ್ ಅನ್ನು ಬದಿಯಿಂದ ಮತ್ತು ಹಿಂಭಾಗದಿಂದ ಹೋಲುತ್ತದೆ, ಆದರೆ ಈಗ ಹೊಸ ಅಲಾಯ್ ವೀಲ್ ಗಳನ್ನು ಪಡೆಯುತ್ತದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಮರುವಿನ್ಯಾಸ ಮಾಡಲಾಗಿದೆ.
ಇದನ್ನೂ ಓದಿ: 2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ
ಇಂಟೀರಿಯರ್ ಮತ್ತು ವೈಶಿಷ್ಟ್ಯಗಳು
ಒಳಗೆ, ಡ್ಯಾಶ್‌ಬೋರ್ಡ್ ವಿನ್ಯಾಸವು ಅದರ ಈ ಹಿಂದಿನ ಲುಕ್ ಗೆ ಹೋಲುತ್ತದೆ, ಆದರೆ ಕ್ಯಾಬಿನ್ ಇನ್ನೂ ಬೆಲೆಬಾಳುವಂತಿದೆ. ಎಸ್‌ಯುವಿ ಮೂರು ಇಂಟೀರಿಯರ್ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ: ಒಕಾಪಿ ಬ್ರೌನ್, ಪರ್ಲ್ ಬೀಜ್ ಮತ್ತು ಬ್ಲಾಕ್ .ಇದು 12.3-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, 10.1-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ವಿವಿಧ ಹವಾಮಾನ ನಿಯಂತ್ರಣಗಳಿಗಾಗಿ ಮುಖ್ಯ ಇನ್ಫೋಟೈನ್‌ಮೆಂಟ್ ಪರದೆಯ ಕೆಳಗೆ ಇರಿಸಲಾಗಿರುವ 8.6-ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಟ್ರೈ-ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿದೆ.
Q8 ಇ-ಟ್ರಾನ್ ನಾಲ್ಕು-ಜೋನ್ ಹವಾಮಾನ ನಿಯಂತ್ರಣ, ಪವರ್-ಹೊಂದಾಣಿಕೆ ಮತ್ತು ಮಸಾಜ್ ಕಾರ್ಯದೊಂದಿಗೆ ವೆಂಟಿಲೇಟೆಡ್ ಸೀಟ್ ಗಳನ್ನು, 16-ಸ್ಪೀಕರ್ ಬ್ಯಾಂಗ್ ಮತ್ತು 705W ಔಟ್‌ಪುಟ್‌ನೊಂದಿಗೆ ಒಲುಫ್‌ಸೆನ್ 3-D ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಮತ್ತು ಪನರೊಮಿಕ್ ಸನ್‌ರೂಫ್ ನ್ನು ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಇದು 8 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಹೊಂದಿದೆ.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್
ಆಡಿ ಕ್ಯೂ8 ಇ-ಟ್ರಾನ್ ಅನ್ನು ದೊಡ್ಡ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ ಮತ್ತು ಅವುಗಳ ರೇಂಜ್ ಮತ್ತು ಕಾರ್ಯಕ್ಷಮತೆ ಕೆಳಗಿನ ಕೋಷ್ಟಕದಲ್ಲಿ ವಿವರಿಸಿದಂತೆ ಬದಲಾಗುತ್ತದೆ.
ವೇರಿಯೆಂಟ್ ಗಳು |
ಕ್ಯೂ8 ಇ-ಟ್ರಾನ್ 50 |
ಕ್ಯೂ8 ಇ-ಟ್ರಾನ್ 55 |
ಬ್ಯಾಟರಿ ಪ್ಯಾಕ್ |
89kWh |
114kWh |
ಪವರ್/ಟಾರ್ಕ್ |
340ಪಿಎಸ್ / 664ಎನ್ಎಂ |
408ಪಿಎಸ್ / 664 ಎನ್ಎಂ |
ವಿದ್ಯುತ್ ಮೋಟಾರ್ |
ಡ್ಯುಯಲ್-ಮೋಟಾರ್, ಆಲ್-ವೀಲ್ ಡ್ರೈವ್ |
ಡ್ಯುಯಲ್-ಮೋಟಾರ್, ಆಲ್-ವೀಲ್ ಡ್ರೈವ್ |
ಘೋಷಿಸಿರುವ ರೇಂಜ್ |
419 ಕಿಮೀ / 505 ಕಿಮೀ (ಸ್ಪೋರ್ಟ್‌ಬ್ಯಾಕ್) |
582ಕಿಮೀ/ 600ಕಿಮೀ (ಸ್ಪೋರ್ಟ್‌ಬ್ಯಾಕ್) |
ಎರಡೂ ಬ್ಯಾಟರಿ ಪ್ಯಾಕ್‌ಗಳು ದೊಡ್ಡದಾಗಿವೆ ಮತ್ತು ಹೆಚ್ಚಿನ ರೇಂಜ್ ನ್ನು ಒದಗಿಸುತ್ತವೆ. ಹಾಗೆಯೇ ಎಲೆಕ್ಟ್ರಿಕ್ ಮೋಟಾರ್‌ಗಳು ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ಯಾಕ್ ಮಾಡುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಕ್ಯೂ8 ಇ-ಟ್ರಾನ್ ಈಗ ದೊಡ್ಡದಾದ 114 kWh ಬ್ಯಾಟರಿ ಪ್ಯಾಕ್‌ನೊಂದಿಗೆ 600 ಕಿಮೀವರೆಗಿನ WLTP (ವರ್ಲ್ಡ್ ವೈಡ್ ಹಾರ್ಮೋನೈಜ್ಡ್ ಲೈಟ್ ವೆಹಿಕಲ್ಸ್ ಟೆಸ್ಟ್ ಪ್ರೊಸೀಜರ್ )ಘೋಷಿಸಿರುವ ರೇಂಜ್ ನ್ನು ನೀಡುತ್ತದೆ. ಮೊದಲು, ಇ-ಟ್ರಾನ್ ಅನ್ನು 71kWh ಮತ್ತು 95kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುತ್ತಿತ್ತು, ಇದು 484 ಕಿಮೀವರೆಗಿನ ವ್ಯಾಪ್ತಿಯನ್ನು ನೀಡುತ್ತಿತ್ತು.
ಚಾರ್ಜಿಂಗ್ ವಿವರಗಳು
ಎಲೆಕ್ಟ್ರಿಕ್ ಎಸ್‌ಯುವಿ 170kW DC ವೇಗದ ಚಾರ್ಜಿಂಗ್ ಮತ್ತು 22kW AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಿಂದಿನ ವೇಗದ ಚಾರ್ಜಿಂಗ್ ವಿಧಾನವನ್ನು ಬಳಸಿಕೊಂಡು, ಬ್ಯಾಟರಿಯನ್ನು 31 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು, ಆದರೆ 20 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಮಾಡಲು 26 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಬ್ಯಾಟರಿಯ ತಾಪಮಾನ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ಚಾರ್ಜಿಂಗ್ ಸಮಯಗಳು ಬದಲಾಗಬಹುದು.
ಪ್ರತಿಸ್ಪರ್ಧಿಗಳು
ಭಾರತದ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಬಿಎಂಡಬ್ಲ್ಯೂ iX ಮತ್ತು ಜಾಗ್ವಾರ್ I-ಪೇಸ್‌ನೊಂದಿಗೆ ಆಡಿ ಕ್ಯೂ8 ಇ-ಟ್ರಾನ್ ತನ್ನ ಪೈಪೋಟಿಯನ್ನು ಮುಂದುವರೆಸಿದೆ.
ಹೆಚ್ಚು ಓದಿ : ಕ್ಯೂ8 ಇ-ಟ್ರಾನ್ ಆಟೋಮ್ಯಾಟಿಕ್