• English
  • Login / Register

2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ

ಮರ್ಸಿಡಿಸ್ glc ಗಾಗಿ shreyash ಮೂಲಕ ಆಗಸ್ಟ್‌ 11, 2023 08:13 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ 2023 GLC ಈಗ ರೂ. 11 ಲಕ್ಷಗಳಷ್ಟು ದುಬಾರಿಯಾಗಿದೆ. 

2023 Mercedes-Benz GLC vs Audi Q5, BMW X3, Volvo XC60: Price Comparison

ಎರಡನೇ ತಲೆಮಾರಿನ ಮರ್ಸಿಡಿಸ್-ಬೆಂಝ್ GLC ಭಾರತದಲ್ಲಿ ಬಿಡುಗಡೆಯಾಗಿದ್ದು, ಈಗ ರೂ. 73.5 ಲಕ್ಷಗಳಷ್ಟು (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಆರಂಭಿಕ ಬೆಲೆಯನ್ನು ಹೊಂದಿದೆ. ಸ್ಲೀಕರ್ ಶೈಲಿಯ ಹೊರತಾಗಿ ಹೊಸ ಮರ್ಸಿಡಿಸ್ ಬೆಂಝ್ GLC ಸ್ವಲ್ಪ ಮಟ್ಟಿಗಿನ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮೊದಲಿನ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ.

ಈ ಅಪ್‌ಡೇಟ್‌ಗಳೊಂದಿಗೆ, 2023 GLC ಯು, ಆಡಿ Q5, ಬಿಎಂಡಬ್ಲ್ಯೂ X3, ಮತ್ತು ವೋಲ್ವೋ XC60ಗಳಿಂದ ಪೈಪೋಟಿ ಎದುರಿಸುತ್ತದೆ. ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೊಸ GLC ಬೆಲೆ ಹೇಗಿದೆ ಎಂಬುದನ್ನು ಪರಿಶೀಲಿಸೋಣ.

ಬೆಲೆ ಪರಿಶೀಲನೆ

ಮರ್ಸಿಡಿಸ್-ಬೆಂಝ್ GLC

ಆಡಿ Q5

ಬಿಎಂಡಬ್ಲ್ಯೂ X3

ವೋಲ್ವೋ XC60

 

 

 

B5 ಅಲ್ಟಿಮೇಟ್ - ರೂ 67.50 ಲಕ್ಷ

ಎಕ್ಸ್‌ಡ್ರೈವ್20d - ರೂ 68.50 ಲಕ್ಷ

 

ಟೆಕ್ನಾಲಜಿ - ರೂ 68.22 ಲಕ್ಷ

 

 

ಡ್ರೈವ್20d M ಸ್ಪೋರ್ಟ್ - ರೂ 70.90 ಲಕ್ಷ

GLC 300 - ರೂ 73.5 ಲಕ್ಷ

 

GLC 220d - ರೂ 74.5 ಲಕ್ಷ

 

ಎಕ್ಸ್‌ಡ್ರೈವ್ M40i - ರೂ 87.70 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ದೆಹಲಿ

 

ಪ್ರಮುಖ ಸಾರಾಂಶಗಳು

Mercedes-Benz GLC

  •  ಈ ಹೊಸ GLC ಹಿಂದಿನ ಆವೃತ್ತಿಗಿಂತ ರೂ 11 ಲಕ್ಷಗಳವರೆಗೆ ದುಬಾರಿಯಾಗಿದೆ ಹಾಗೂ ಅದರ ವಿಭಾಗದಲ್ಲಿ ಅತ್ಯಧಿಕ ಆರಂಭಿಕ ಬೆಲೆಯನ್ನು ಹೊಂದಿದೆ. ಇದರ ಎಲ್ಲಾ ಪ್ರತಿಸ್ಪರ್ಧಿಗಳು –ಆಡಿ A5, ವೋಲ್ವೋ XC60, ಮತ್ತು ಬಿಎಂಡಬ್ಲ್ಯೂ BMW X3 (M40i ವೇರಿಯೆಂಟ್ ಹೊರತುಪಡಿಸಿ) –2023 GLC ಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. 

  • ಆಡಿ Q5 ಯ ಟಾಪ್-ಸ್ಪೆಕ್ ಟೆಕ್ನಾಲಜಿ ವೇರಿಯೆಂಟ್ ಅನುಗುಣ-ಶ್ರೇಣಿಯ ಟಾಪ್ GLC 220d ಗಿಂತ ಸುಮಾರು ರೂ.6 ಲಕ್ಷಗಳಷ್ಟು ಕಡಿಮೆ ಬೆಲೆಯನ್ನು ಹೊಂದಿರಬಹುದು.

  • ಈ ಹೋಲಿಕೆಯನ್ನು ಇತರ ಮಾದರಿಗಿಂತ ಭಿನ್ನವಾಗಿ ವೋಲ್ವೋ XC60 ಅನ್ನು ಏಕೈಕ, ಸಂಪೂರ್ಣ-ಲೋಡ್ ಮಾಡಲಾದ ಟ್ರಿಮ್‌ನಲ್ಲಿ ನೀಡಲಾಗುತ್ತಿದ್ದು, ರೂ. 67.50 ಲಕ್ಷಗಳಷ್ಟು ಬೆಲೆಯೊಂದಿಗೆ ಇದು ಹೊಸ GLC ಗಿಂತ ರೂ. 7 ಲಕ್ಷಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. 

  • ಈ 2023 GLC ಅದೇ 2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಉಳಿಸಿಕೊಂಡಿದ್ದು ಇದಕ್ಕೆ ಸ್ವಲ್ಪ ಮಟ್ಟಿಗಿನ ಹೈಬ್ರಿಡ್ ತಂತ್ರಜ್ಞಾನವನ್ನು ಸಂಯೋಜಿಸಲಾಗಿದೆ. ಪೆಟ್ರೋಲ್ ಪವರ್‌ಟ್ರೇನ್ 258PS ಮತ್ತು 400Nm ಬಿಡುಗಡೆಗೊಳಿಸಿದರೆ, ಡೀಸೆಲ್ ಯೂನಿಟ್ 197PS ಮತ್ತು 440Nm ಬಿಡುಗಡೆಗೊಳಿಸುತ್ತದೆ. ಎರಡೂ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದ್ದು, ಆಲ್-ವ್ಹೀಲ್-ಡ್ರೈವ್ ಒಂದು ಪ್ರಮಾಣಿತ ಫೀಚರ್‌ ಆಗಿದೆ.

  • ಮರ್ಸಿಡಿಸ್ GLC ಯ ಪೆಟ್ರೋಲ್ ಎಂಜಿನ್‌ನಿಂದ 14.7kmpl ಮತ್ತು ಡೀಸೆಲ್ ಎಂಜಿನ್‌ನಿಂದ 19.4kmpl ಇಂಧನ-ದಕ್ಷತೆಯ ಅಂಕಿಅಂಶವನ್ನು ಘೋಷಿಸಿದ್ದು, ಇದು ಇದರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಎಂದು ಹೇಳಿಕೊಂಡಿದೆ.  

Volvo XC60

  •   ವೋಲ್ವೋ XC60 ಅನ್ನು 2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಹಾಗೂ ಸ್ವಲ್ಪ ಮಟ್ಟಿಗಿನ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೀಡುತ್ತದೆ ಹಾಗೂ ಇದು 250PS ಮತ್ತು 350Nm ಕ್ಲೈಮ್ ಮಾಡುತ್ತದೆ. ಇಲ್ಲಿ ಸ್ವಲ್ಪ ಮಟ್ಟಿಗಿನ-ಹೈಬ್ರಿಡ್ ಸೆಟಪ್ ಹೊಂದಿರುವುದು ಮರ್ಸಿಡಿಸ್-ಬೆಂಝ್ GLC ಮತ್ತು ವೋಲ್ವೋ XC60 ಮಾತ್ರವಾಗಿದೆ.
  • ಇನ್ನೊಂದೆಡೆ, ಆಡಿ Q5 2-ಲೀಟರ್ 4-ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು 249PS ಮತ್ತು 370Nm ಅನ್ನು ಬಿಡುಗಡೆಗೊಳಿಸುತ್ತದೆ. ಈ ಎಂಜಿನ್ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಅನ್ನು ಪಡೆದಿದ್ದು, ಆಲ್-ವ್ಹೀಲ್-ಡ್ರೈವ್ ಪವರ್ ಅನ್ನು ಹೊಂದಿದೆ.

 ಇದನ್ನೂ ಓದಿ:  530 ಕಿಲೋಮೀಟರ್ ರೇಂಜ್‌ಗೆ ಬಹಿರಂಗಗೊಂಡ ವೋಲ್ವೋ C40; ಆಗಸ್ಟ್‌ನಲ್ಲಿ ಬಿಡುಗಡೆ

BMW X3 M40i

  •  ಬಿಎಂಡಬ್ಲ್ಯೂ X3ಯ M40i ಟ್ರಿಮ್ ಇದರಲ್ಲಿ ದುಬಾರಿ ಕಾರಾಗಿದ್ದು ಇದರ ಬೆಲೆಯು ರೂ. 87.70 ಲಕ್ಷ. ಇದು X3 ನ ಸ್ಪೋರ್ಟಿಯರ್ ಆವೃತ್ತಿಯಾಗಿದ್ದು, ಇದು 360PS ಬಿಡುಗಡೆಗೊಳಿಸುವ 3-ಲೀಟರ್ ಇನ್‌ಲೈನ್-6 ಟರ್ಬೋ-ಪೆಟ್ರೋಲ್ ಎಂಜಿನ್ ಜೊತೆಗೆ ಬರುತ್ತದೆ, ಹಾಗೂ ಇದು ಈ ಹೋಲಿಕೆಯಲ್ಲಿ ಅತ್ಯಂತ ಶಕ್ತಿಶಾಲಿ ಕೊಡುಗೆಯಾಗಿದೆ.

  • X3 ನ ನಿಯಮಿತ ವೇರಿಯೆಂಟ್‌ಗಳು 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು 190PS ಮತ್ತು 400Nm ಬಿಡುಗಡೆಗೊಳಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದ್ದು ಇದು ಆಲ್-ವ್ಹೀಲ್ ಡ್ರೈವ್ ಅನ್ನು ಪ್ರಮಾಣಿತ ಫೀಚರ್‌ ಆಗಿದೆ. 

ಇದನ್ನೂ ಪರಿಶೀಲಿಸಿ: ಭಾರತದಲ್ಲಿ Rs 86.50 ಲಕ್ಷಕ್ಕೆ ಬಿಎಂಡಬ್ಲ್ಯೂ X3 M40i ಬಿಡುಗಡೆ  

 

Mercedes-Benz GLC 2023

  • 2023 GLC, ಪೋಟ್ರೈಟ್ ಶೈಲಿಯ 11.9-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, TPMS, ಮತ್ತು ಸುಧಾರಿತ ಡ್ರೈವರ್ ಸಹಾಯ ವ್ಯವಸ್ಥೆ (ADAS) ಅನ್ನು ಹೊಂದಿದೆ.

  •  GLC ನಂತರ, ವೋಲ್ವೋ XC60 ಮಾತ್ರ ADAS ಫೀಚರ್‌ನೊಂದಿಗೆ ಬರಲಿದೆ. ಆದಾಗ್ಯೂ, ಇದರ 9-ಇಂಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ಈ ವಿಭಾಗದಲ್ಲಿಯೇ ಅತಿ ಚಿಕ್ಕದಾಗಿದೆ.

Audi Q5 Interior

  • ಆಡಿಯು ಸ್ವಲ್ಪ ದೊಡ್ಡದಾದ 10.1-ಇಂಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. ಇದು 3-ಝೋನ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಫೀಚರ್‌ಗಳಾಗಿ ಹೊಂದಿದೆ.

  • ಈ ಹೋಲಿಕೆಯಲ್ಲಿರುವ ಎಲ್ಲಾ ನಾಲ್ಕು ಎಸ್‌ಯುವಿಗಳು 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ ಅನ್ನು ಹೊಂದಿದೆ. ಆದಾಗ್ಯೂ, ಹೊಸ GLC ಮತ್ತು ವೋಲ್ವೋ XC60 ಮಾತ್ರವೇ 360-ಡಿಗ್ರಿ ಕ್ಯಾಮರಾವನ್ನು ಹೊಂದಿವೆ. ಈ ಮರ್ಸಿಡಿಸ್ ಎಸ್‌ಯುವಿ ಹೆಚ್ಚುವರಿಯಾಗಿ, ಬೋನೆಟ್ ಅಡಿಯಲ್ಲಿ ನೆಲದ ವೀಕ್ಷಣೆಯನ್ನು ಮಾಡಬಹುದಾದ “ಪಾರದರ್ಶಕ ಬೋನೆಟ್” ಫೀಚರ್‌ ಅನ್ನು ಪಡೆಯುತ್ತದೆ. ಇದು ಪರಿಚಯವಿಲ್ಲದ ರಸ್ತೆಗಳಲ್ಲಿ ಚಲಿಸುವಾಗ ಉಪಯುಕ್ತವಾಗಿರುತ್ತದೆ.

ಇನ್ನಷ್ಟು ಇಲ್ಲಿ ಓದಿ : GLC ಆಟೋಮ್ಯಾಟಿಕ್

was this article helpful ?

Write your Comment on Mercedes-Benz glc

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience