• English
  • Login / Register

ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳು

ಆಗಸ್ಟ್‌ 25, 2023 08:20 am ರಂದು tarun ಮೂಲಕ ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತ್ NCAP ನಿಯಮಗಳು ಜಾಗತಿಕ NCAPಗೆ ಸರಿಸಮಾನವಾಗಿದ್ದರೂ, ನಮ್ಮ ರಸ್ತೆ ಮತ್ತು ಚಾಲನಾ ಪರಿಸ್ಥಿತಿಗಳ ಆಧಾರದ ಮೇಲೆ ಭಾರತಕ್ಕೆ ನಿರ್ದಿಷ್ಟವಾದ ಕೆಲವು ಟ್ವೀಕ್‌ಗಳಿವೆ

Bharat NCAP vs Global NCAP

ಭಾರತ್ NCAP ಯನ್ನು ಪರಿಚಯಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯಲ್ಲಿ ಭಾರತವು ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತಿದೆ. ಇನ್ನುಮುಂದೆ ಭಾರತದಲ್ಲಿ ಮಾರಾಟವಾಗುವ ಕಾರುಗಳಿಗೆ ಸುರಕ್ಷತಾ ರೇಟಿಂಗ್ ನೀಡಲು ದೇಶದಲ್ಲಿಯೇ ಕ್ರ್ಯಾಶ್ ಟೆಸ್ಟ್ ಮಾಡಬಹುದು. ಆದರೆ, ಕಾರು ರಸ್ತೆಗಿಳಿಯಲು ಕಾನೂನು ಪ್ರಕಾರ ಮೂಲಭೂತ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಿದ ಬಳಿಕ, ತಯಾರಕರಿಗೆ ಈ ರೇಟಿಂಗ್ ವ್ಯವಸ್ಥೆಯು ಒಂದು ಸ್ವಯಂಪ್ರೇರಿತ ಪ್ರಕ್ರಿಯೆಯಾಗಿರುತ್ತದೆ. ಭಾರತ್ NCAP ಅಕ್ಟೋಬರ್ 2023 ರಿಂದ ಜಾರಿಗೆ ಬರಲಿದೆ.

View this post on Instagram

A post shared by CarDekho India (@cardekhoindia)

ಇಲ್ಲಿಯವರೆಗೆ, 'ಸೇಫರ್ ಕಾರ್ಸ್ ಫಾರ್ ಇಂಡಿಯಾ' ಎಂಬ ಕಾರ್ಯಕ್ರಮದ ಭಾಗವಾಗಿ ಜಾಗತಿಕ NCAPಯಿಂದ ಮೇಡ್-ಇನ್-ಇಂಡಿಯಾ ಕಾರುಗಳಿಗೆ ಕ್ರ್ಯಾಶ್-ಟೆಸ್ಟ್ ರೇಟಿಂಗ್‌ಗಳನ್ನು ನೀಡಲಾಗುತ್ತಿತ್ತು. ಭಾರತದಲ್ಲಿ ಮಾರಾಟವಾಗುವ ಹೊಸ ಕಾರುಗಳಿಗೆ ಸುರಕ್ಷತಾ ರೇಟಿಂಗ್‌ಗಳನ್ನು ಹಂಚಿಕೊಂಡ 10 ವರ್ಷಗಳ ನಂತರ ಮತ್ತು ಹೆಚ್ಚಿನ ರೇಟಿಂಗ್ ಹೊಂದಿರುವ ಕಾರುಗಳತ್ತ ಖರೀದಿದಾರರ ಒಲವನ್ನು  ಗಮನಿಸಿದ ನಂತರ, BNCAP ತನ್ನದೇ ಆದ ಮಾನದಂಡಗಳನ್ನು ಹೊಂದಿಸಲು GNCAP ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳನ್ನು ಬಳಸಿಕೊಂಡಿದೆ ಎಂಬುದು ಅರ್ಥಪೂರ್ಣವಾಗಿದೆ.

 

ಯಾವ ಮಾನದಂಡಗಳು ಮತ್ತು ಅಸೆಸ್‌ಮೆಂಟ್‌ಗಳು ಒಂದೇ ರೀತಿ ಇವೆ?

NCAP ಯ ಎರಡೂ ಆವೃತ್ತಿಗಳು ಈ ಕೆಳಗಿನ ಪರೀಕ್ಷೆಗಳನ್ನು ಒಳಗೊಂಡಿವೆ:

Mahindra Thar frontal impact test

  •  ಫ್ರಂಟಲ್ ಇಂಪ್ಯಾಕ್ಟ್: ಫ್ರಂಟಲ್ ಆಫ್‌ಸೆಟ್ ಬ್ಯಾರಿಯರ್ ಪರೀಕ್ಷೆಗಳನ್ನು 64kmph ವೇಗದಲ್ಲಿ ನಡೆಸಲಾಗುವುದು. ಇದರ ಮೂಲಕ, ತಲೆ, ಕುತ್ತಿಗೆ, ಎದೆ, ಸೊಂಟ ಮತ್ತು ಮೊಣಕಾಲಿನ ಪ್ರದೇಶಗಳ ಮೇಲಿನ ಇಂಪ್ಯಾಕ್ಟ್ ಅನ್ನು ಮೌಲ್ಯಮಾಪನ ಮಾಡಬಹುದು.

  •  ಸೈಡ್ ಪೋಲ್ ಇಂಪ್ಯಾಕ್ಟ್: ಸೈಡ್ ಪೋಲ್ ಇಂಪ್ಯಾಕ್ಟ್ ಪರೀಕ್ಷೆಯನ್ನು 29kmph ವೇಗದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಲು ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳಿರುವುದು ಅವಶ್ಯವಾಗಿದೆ.

  •  ಸೈಡ್ ಬ್ಯಾರಿಯರ್: 50kmph ವೇಗದಲ್ಲಿ, ಕುಳಿತಿರುವ ಪ್ರಯಾಣಿಕರಿಗೆ ಆಗಬಹುದಾದ ಹಾನಿಯನ್ನು ಮೌಲ್ಯಮಾಪನ ಮಾಡಲು ಬ್ಯಾರಿಯರ್ ಅನ್ನು ಸೈಡ್‌ಗೆ ಬಲವಾಗಿ ಗುದ್ದಲಾಗುತ್ತದೆ.

  •  ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್: ESC ಸಕ್ರಿಯ ಸುರಕ್ಷತಾ ಫೀಚರ್ ಆಗಿದ್ದು, ಇದು ಟೈರ್ ಸ್ಕಿಡ್ಡಿಂಗ್ ಅನ್ನು ತಡೆಯುತ್ತದೆ. ಕಾರುಗಳಲ್ಲಿ ESC ಅನ್ನು ಮಾನದಂಡವಾಗಿ ಅಳವಡಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಒಂದು ಪರೀಕ್ಷೆಯೂ ಇರಲಿದೆ.

  •  ಪಾದಚಾರಿ ಕಂಪ್ಲೈಂಟ್ ಫ್ರಂಟ್ ವಿನ್ಯಾಸ: ಕಾರುಗಳು ಈಗ ಪಾದಚಾರಿ-ಸ್ನೇಹಿ ಬಂಪರ್ ಮತ್ತು ಬಾನೆಟ್ ವಿನ್ಯಾಸವನ್ನು ಹೊಂದಿರುವುದು ಕಡ್ಡಾಯವಾಗಿದೆ, ಇದರಿಂದಾಗಿ ಅಪಘಾತದ ಸಂದರ್ಭದಲ್ಲಿ ಪಾದಚಾರಿಗಳಿಗೆ ಕನಿಷ್ಠ ಗಾಯಗಳಾಗುತ್ತವೆ.

 ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳಿಗಾಗಿ ಎಲ್ಲಾ ಕಾರುಗಳು ಈ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಮತ್ತು ಯಶಸ್ವಿಯಾಗಿ ತೇರ್ಗಡೆಯಾಗಬೇಕಾಗುತ್ತದೆ.

 ಫ್ರಂಟ್ ಆಫ್‌ಸೆಟ್ ಪರೀಕ್ಷೆಗಳನ್ನು 64kmph ವೇಗದಲ್ಲಿ ನಡೆಸಲಾಗುವುದು. ಸೈಡ್ ಬ್ಯಾರಿಯರ್ ಪರೀಕ್ಷೆಯನ್ನು 50kmph ವೇಗದಲ್ಲಿ ನಡೆಸಲಾಗುತ್ತದೆ, ಆದರೆ ಪೋಲ್ ಟೆಸ್ಟ್ ಅನ್ನು 29kmph ವೇಗದಲ್ಲಿ ನಡೆಸಲಾಗುತ್ತದೆ. GNCAP ನಿಯಮಗಳಂತೆಯೇ, ಭಾರತ್ NCAP ಸಹ ಕಾರಿನ ರಚನಾತ್ಮಕ ಸಂಯೋಜನೆ ಮತ್ತು ಅದರ ಸುರಕ್ಷತಾ ನೆರವು ತಂತ್ರಜ್ಞಾನಗಳನ್ನು ಪರಿಗಣಿಸುತ್ತದೆ.

Hyundai Exter six airbags

3-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಳ್ಳಲು, ಕಾರುಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್ ಮತ್ತು ಫ್ರಂಟ್ ರೋ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಹೊಂದಿರಬೇಕು. ಇವುಗಳಲ್ಲಿ ಯಾವುದಾದರೂ ಇಲ್ಲದಿದ್ದಲ್ಲಿ, ಮೌಲ್ಯಮಾಪನದಲ್ಲಿ ಕೆಲವು ಅಂಕಗಳನ್ನು ಕಡಿತಗೊಳಿಸಲಾಗುವುದು.

 ಇದನ್ನೂ ಓದಿ:  ಕಿಯಾ ಸಾನೆಟ್ ಫೇಸ್‌ಲಿಫ್ಟ್ ಮತ್ತೊಮ್ಮೆ ಪರೀಕ್ಷೆಯ ಸಮಯದಲ್ಲಿ ಕಂಡುಬಂದಿದೆ; 2024 ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ

 ಅದೇ ಸ್ಕೋರ್‌ಗಳು ಮತ್ತು ಸ್ಟಾರ್ ರೇಟಿಂಗ್‌ಗಳು

 ಒಂದರಿಂದ ಐದರವರೆಗಿನ ಸ್ಕೋರ್‌ಗಳು ಬದಲಾಗುವುದಿಲ್ಲ. ಪ್ರತಿ ಸ್ಟಾರ್ ರೇಟಿಂಗ್‌ಗೆ ಅಗತ್ಯವಿರುವ ಕನಿಷ್ಠ ಸ್ಕೋರ್‌ಗಳನ್ನು ಕೆಳಗೆ ನೀಡಲಾಗಿದೆ:

Global NCAP To Start Crash Tests In India By End Of 2023

ವಯಸ್ಕ ಪ್ರಯಾಣಿಕ ರಕ್ಷಣೆ

ಪ್ರಯಾಣಿಕ ಶಿಶುವಿನ ರಕ್ಷಣೆ

ಸ್ಟಾರ್ ರೇಟಿಂಗ್

ಸ್ಕೋರ್

ಸ್ಟಾರ್ ರೇಟಿಂಗ್

ಸ್ಕೋರ್

5 ಸ್ಟಾರ್‌ಗಳು

27

5 ಸ್ಟಾರ್‌ಗಳು

41

4 ಸ್ಟಾರ್‌ಗಳು

22

4 ಸ್ಟಾರ್‌ಗಳು

35

3 ಸ್ಟಾರ್‌ಗಳು

16

3 ಸ್ಟಾರ್‌ಗಳು

27

2 ಸ್ಟಾರ್‌ಗಳು

10

2 ಸ್ಟಾರ್‌ಗಳು

18

ಜಾಗತಿಕ NCAP ಕಾರ್ಯವಿಧಾನಗಳಿಗೆ ಸರಿಸಮಾನವಾಗಿ, ಭಾರತ್ NCAP ಭಾರತಕ್ಕೆ-ನಿರ್ದಿಷ್ಟವಾದ ಕೆಲವು ಮಾರ್ಪಾಡುಗಳನ್ನು ಮತ್ತು ಅಂತಿಮ ಸ್ಕೋರ್ ಅನ್ನು ನಿರ್ಧರಿಸುವಾಗ ವೈಯಕ್ತಿಕ ಮಾನದಂಡಗಳ ವೈಟೇಜ್ ಅನ್ನು ಪರಿಗಣಿಸುತ್ತದೆ.

ಏನು ಭಿನ್ನವಾಗಿದೆ?

ಹೊಸದಾಗಿ ಪರಿಚಯಿಸಲಾದ ಭಾರತ್ NCAPಗಿಂತ ಜಾಗತಿಕ NCAP ಮುಂದಿರುವ ಕಾರಣ, ಈ ಸಮಯದಲ್ಲಿ ಭಾರತ್ NCAP ಯ ಭಾಗವಾಗಿರದ ಕೆಲವು ಸುರಕ್ಷತಾ ಮಾನದಂಡಗಳಿವೆ.

Kia Seltos rear seatbelts

ಅವುಗಳಲ್ಲಿ ಪ್ರಮುಖವಾದದ್ದೆಂದರೆ ಹೆಚ್ಚಿನ ಸುರಕ್ಷತಾ ರೇಟಿಂಗ್‌ ಅನ್ನು ಹೊಂದಿರುವ ರಿಯರ್ ಸೀಟ್ ಬೆಲ್ಟ್ ರಿಮೈಂಡರ್. ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಿಯರ್ ಸೀಟ್ ಬೆಲ್ಟ್ ರಿಮೈಂಡರ್‌ಗಳು ಸಹ ಕಡ್ಡಾಯವಾಗಿವೆ ಎಂದು ಈ ಹಿಂದೆ ಹೇಳಿದ್ದರು, ಅದರ ನಂತರ ಹಲವಾರು ತಯಾರಕರು ಈ ಫೀಚರ್‌ನೊಂದಿಗೆ ತಮ್ಮ ಕಾರುಗಳನ್ನು ಅಪ್‌ಡೇಟ್ ಮಾಡಿದ್ದಾರೆ.

ಪರೀಕ್ಷೆಗಳು ಹೆಚ್ಚಾಗಿ ಜಾಗತಿಕ NCAP ಮಾರ್ಗಸೂಚಿಗಳನ್ನು ಆಧರಿಸಿರುವುದರಿಂದ, ಸರ್ಕಾರವು ಭಾರತೀಯ ಚಾಲನಾ ಪರಿಸ್ಥಿತಿಗಳು ಮತ್ತು ರಸ್ತೆಗಳನ್ನು ಸಹ ಗಣನೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ:  ಟೊಯೊಟಾ ರುಮಿಯಾನ್, ಮಾರುತಿ ಎರ್ಟಿಗಾ-ಆಧಾರಿತ MPV, ಆಗಸ್ಟ್-ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದ ವೇಳೆಗೆ ಮಾರಾಟಕ್ಕೆ ಲಭ್ಯವಾಗಬಹುದು

ರೇಟಿಂಗ್‌ಗಳು ಶುರು

 ಕೊನೆಯದಾಗಿ, ಎಲ್ಲಾ ಭಾರತ್ NCAP ಪರೀಕ್ಷಿತ ಕಾರುಗಳು ತಮ್ಮ ವಯಸ್ಕ ಮತ್ತು ಶಿಶುವಿನ ಸುರಕ್ಷತೆಯ ರೇಟಿಂಗ್ ಅನ್ನು ತೋರಿಸುವ ಸ್ಟಿಕ್ಕರ್ ಅನ್ನು ಹೊಂದಿರುತ್ತವೆ. ಮಾಡೆಲ್, ವೇರಿಯಂಟ್ ಹೆಸರು ಮತ್ತು ಪರೀಕ್ಷಾ ವರ್ಷವನ್ನು ಸಹ ಸ್ಟಿಕ್ಕರ್‌ನಲ್ಲಿ ನಮೂದಿಸಲಾಗುತ್ತದೆ. PR ಸಾಮಗ್ರಿಗಳಿಗಿಂತ ಭಿನ್ನವಾಗಿ, ಈ ಸ್ಟಿಕ್ಕರ್ ಅನ್ನು BNCAP ಯಲ್ಲಿ ನಾಲ್ಕು ಸ್ಟಾರ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡುವ ಕಾರುಗಳಿಗೂ ಅನ್ವಯಿಸುವ ಸಾಧ್ಯತೆಯಿದೆ.

 ಪರೀಕ್ಷಾ ಕಾರ್ಯವಿಧಾನಗಳನ್ನು ಅಪ್‌ಡೇಟ್ ಮಾಡುತ್ತಿರಲು ಸರ್ಕಾರ ಯೋಜಿಸಿದೆ . ಕ್ರ್ಯಾಶ್ ಟೆಸ್ಟ್ ಏಜೆನ್ಸಿಯು ರಿಯರ್ ಕ್ರ್ಯಾಶ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಟೆಸ್ಟ್ ಮತ್ತು ಆಯ್ದ ADAS ಫೀಚರ್‌ಗಳನ್ನು (ಲೇನ್ ಡಿಪಾರ್ಚರ್ ವಾರ್ನಿಂಗ್, ಬ್ರೇಕ್ ಅಸಿಸ್ಟ್ ಮತ್ತು ಆಟೋನಮಸ್ ಎಮೆರ್ಜೆನ್ಸಿ ಬ್ರೇಕಿಂಗ್) ಮೌಲ್ಯಮಾಪನದಲ್ಲಿ ಕಡ್ಡಾಯವಾಗಿ ಸೇರಿಸಲು ಯೋಜಿಸಿದೆ.

 ಭಾರತ್ NCAP ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳಿಗಾಗಿ ಹಲವಾರು ತಯಾರಕರು ಈಗಾಗಲೇ ಕಾಯುತ್ತಿದ್ದಾರೆ. ಈ ಕ್ರಮವು ಪ್ರಯಾಣಿಕರ ಸುರಕ್ಷತೆಯ ಮೇಲೆ ಕೇಂದ್ರೀಕರಿಸಲು ತಯಾರಕರನ್ನು ಪ್ರೋತ್ಸಾಹಿಸುತ್ತದೆ, ಹಾಗಾಗಿ ರಸ್ತೆ ಅಪಘಾತದ ಸಾವುಗಳನ್ನು ಕನಿಷ್ಠವಾಗುತ್ತದೆ. ಅಕ್ಟೋಬರ್ 2023 ರಲ್ಲಿ ಜಾರಿಗೆ ಬಂದ ನಂತರ ಹಲವಾರು ಕಾರುಗಳು ಕ್ರ್ಯಾಶ್ ಪರೀಕ್ಷೆಗೆ ಒಳಪಡುವ ನಿರೀಕ್ಷೆಯಿದೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience