• English
  • Login / Register

ಮತ್ತೆ ಕಂಡುಬಂದಿದೆ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ ಟೆಸ್ಟ್ ರನ್

ಕಿಯಾ ಸೊನೆಟ್ ಗಾಗಿ tarun ಮೂಲಕ ಆಗಸ್ಟ್‌ 23, 2023 08:19 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಡಿಸೈನ್, ಅಪ್‌ಡೇಟ್ ಮಾಡಲಾದ ಇಂಟೀರಿಯರ್‌ಗಳು ಮತ್ತು ಇನ್ನಷ್ಟು ಫೀಚರ್‌ಗಳೊಂದಿಗೆ ಪಾದಾರ್ಪಣೆಯ ಮೂರು ವರ್ಷದ ನಂತರ ಸೋನೆಟ್ ಪುನರುಜ್ಜೀವ ಪಡೆಯುತ್ತಿದೆ  

Kia Sonet Facelift

  •  ಹೊಚ್ಚಹೊಸ ಫ್ರಂಟ್ ಪ್ರೊಫೈಲ್‌, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಹೊಸ ಟೇಲ್‌ಲೈಟ್‌ಗಳೊಂದಿಗೆ ನವೀಕೃತ ಸೋನೆಟ್ ಅನ್ನು ಸ್ಪೈ ಮಾಡಲಾಗಿದೆ.
  •  ಕ್ಯಾಬಿನ್ ಒಳಗೂ ಸೂಕ್ಷ್ಮ ಸ್ಟೈಲಿಂಗ್ ಅಪ್‌ಗ್ರೇಡ್ ಅನ್ನು ಪಡೆಯುವ ನಿರೀಕ್ಷೆ ಇದೆ.
  •  ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಮತ್ತು ಕ್ಲಸ್ಟರ್‌ಗಾಗಿ ಎರಡು 10.25-ಇಂಚು ಇಂಟಗ್ರೇಟಡ್ ಡಿಸ್‌ಪ್ಲೇಗಳನ್ನು ಪಡೆದಿರಬಹುದು.
  •  360-ಡಿಗ್ರಿ ಕ್ಯಾಮರಾ ಮತ್ತು ADAS ನಿಂದ ಸುರಕ್ಷತೆ ವರ್ಧಿಸಬಹುದು.
  •  ಮೊದಲಿದ್ದ ಪೆಟ್ರೋಲ್, ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳನ್ನೇ ಪಡೆದಿರುವ ಸಾಧ್ಯತೆ ಇದೆ.
  •  2024 ರ ಪ್ರಾರಂಭದಲ್ಲಿ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ.

 ಕವರ್‌ನೊಳಗೆ ಅಡಗಿರುವ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅನ್ನು ಮತ್ತೊಮ್ಮೆ ಸ್ಪೈ ಮಾಡಲಾಗಿದೆ. ಆದಾಗ್ಯೂ, ಈ ಪರೀಕ್ಷಾರ್ಥ ಕಾರು ಭಿನ್ನ ವೇರಿಯೆಂಟ್‌ನಂತೆ ಕಾಣುತ್ತದೆ. 2020ರಲ್ಲಿ ತನ್ನ ಪಾದಾರ್ಪಣೆಯ ನಂತರ ಮುಂದಿನ ವರ್ಷಾರಂಭದಲ್ಲಿ ಈ ಸಬ್‌ಕಾಂಪ್ಯಾಕ್ಟ್ SUV ತನ್ನ ಪ್ರಮುಖ ಅಪ್‌ಡೇಟ್ ಅನ್ನು ಪಡೆಯಲಿದೆ. 

 

ಹೊಸತೇನಿದೆ?

Kia Sonet Facelift

ಮುಂಭಾಗದಲ್ಲಿ, ಈ ಸೋನೆಟ್ ಫೇಸ್‌ಲಿಫ್ಟ್ ಅಪ್‌ಡೇಟ್ ಮಾಡಲಾದ LED ಹೆಡ್‌ಲೈಟ್‌ಗಳು ಮತ್ತು DRLಗಳು ಇದರೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಬಂಪರ್ ಅನ್ನು ಪಡೆದಿದೆ. ಅಲ್ಲದೇ ಬಂಪರ್‌ನ ಮೇಲೆ ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನೂ ಕಾಣಬಹುದಾಗಿದ್ದು, ಇದು ಈ SUVಗೆ ಹೊಸ ಫೀಚರ್ ಸೇರ್ಪಡೆಯಾಗಿದೆ. 

 ಇದು 16-ಇಂಚು ಅಲಾಯ್ ವ್ಹೀಲ್‌ಗಳ ತಾಜಾ ಜೊತೆಯನ್ನು ಪಡೆಯುತ್ತಿದ್ದು, ಹಿಂದೆ ಗುರುತಿಸಲಾದ GT ಲೈನ್ ಪರೀಕ್ಷಾ ಕಾರಿಗಿಂತ ಭಿನ್ನವಾಗಿ ಕಾಣುತ್ತದೆ. ಇದು ನವೀಕೃತ ಸೋನೆಟ್‌ನ HTX ಅಥವಾ HTX+ ವೇರಿಯೆಂಟ್ ಆಗಿರಬಹುದು ಎಂದು ನಾವು ಭಾವಿಸಿದ್ದೇವೆ.

 ಹಿಂಭಾಗದ ಪ್ರೊಫೈಲ್ ಸೆಲ್ಟೋಸ್‌ನಲ್ಲಿರುವಂತೆ ಸಂಪರ್ಕಿತ LED ಟೇಲ್‌ಲೈಟ್‌ಗಳನ್ನು ಪಡೆದಿದೆ. ಬಂಪರ್ ಮತ್ತು ಬೂಟ್ ಲಿಡ್‌ನಲ್ಲಿ ಕೆಲವು ಟ್ವೀಕ್‌ಗಳನ್ನು ನಿರೀಕ್ಷಿಸಬಹುದು.

 

ಇಂಟೀರಿಯರ್‌ಗೆ ಟ್ವೀಕ್‌ಗಳು

ಸ್ಪೈ ಚಿತ್ರದಲ್ಲಿ ಇಂಟೀರಿಯರ್ ಅನ್ನು ತೋರಿಸದೇ ಇದ್ದರೂ, ಕ್ಯಾಬಿನ್ ಸ್ಟೈಲಿಂಗ್‌ನಲ್ಲೂ ಕೆಲವು ಅಪ್‌ಡೇಟ್‌ಗಳನ್ನು ನಾವು ನಿರೀಕ್ಷಿಸಬಹುದು. ಸೆಂಟರ್ ಕನ್ಸೋಲ್, ಸೀಟ್ ಅಪ್‌ಹೋಲ್ಸ್‌ಟ್ರಿ ಮತ್ತು ಇಂಟೀರಿಯರ್ ಥೀಮ್ ಅನ್ನು ಹೊಸ ನೋಟಕ್ಕಾಗಿ ಅಪ್‌ಡೇಟ್ ಮಾಡಲಾಗಿದೆ.

Kia Sonet cabin

 

ಹೊಸ ಫೀಚರ್ ಸೇರ್ಪಡೆಗಳು

 ಈ ಹೊಸ ಸೋನೆಟ್, ಸೆಲ್ಟೋಸ್‌ನಲ್ಲಿರುವಂತೆ ಎರಡು ಡಿಸ್‌ಪ್ಲೇ ಸ್ಕ್ರೀನ್ ಸೆಟಪ್, 360-ಡಿಗ್ರಿ ಕ್ಯಾಮರಾ ಮತ್ತು ADAS(ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನೂ ಪಡೆದಿರುವ ಸಾಧ್ಯತೆ ಇದೆ.

 ಪ್ರಸ್ತುತ ಇದು ಇಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪ್ಯಾಡಲ್ ಶಿಫ್ಟರ್‌ಗಳು, ಆರರ ತನಕದ ಏರ್‌ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಮುಂತಾದವುಗಳಿಂದ ಪೀಚರ್‌ಭರಿತವಾಗಿದೆ.

 ಇದನ್ನೂ ಓದಿ:  ಸಬ್-ಕಾಂಪ್ಯಾಕ್ಟ್ SUV ನಲ್ಲೂ ನಾವು ವಿಹಂಗಮ ಸನ್‌ರೂಫ್ ನೋಡಬಹುದೇ?

  ಪವರ್‌ಟ್ರೇನ್ ಅಪ್‌ಡೇಟ್‌ಗಳು 

2024ರ ಸೋನೆಟ್ ಪ್ರಸ್ತುತ ಇರುವ ಇಂಜಿನ್‌ಗಳ ಸೆಟ್ ಅನ್ನೇ ಹೊಂದಿರಬೇಕು, ಇದು 83PS 1.2-ಲೀಟರ್ ಪೆಟ್ರೋಲ್ 120PS 1-ಟರ್ಬೋ ಪೆಟ್ರೋಲ್ ಮತ್ತು 115PS 1.5-ಲೀಟರ್ ಡೀಸೆಲ್ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಟರ್ಬೋ ಪೆಟ್ರೋಲ್ ಮತ್ತು ಡೀಸೆಲ್ iMT (ಮ್ಯಾನುವಲ್, ಕ್ಲಚ್ ಪೆಡಲ್ ರಹಿತ) ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು ಆಟೋಮ್ಯಾಟಿ ಟ್ರಾನ್ಸ್‌ಮಿಷನ್ ಅನ್ನೂ ಆಯ್ಕೆ ಮಾಡಬಹುದಾಗಿದೆ.

 

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Kia Sonet Facelift

ಈ ನವೀಕೃತ ಸೋನೆಟ್ ತನ್ನ ಪ್ರಸ್ತುತ ಬೆಲೆ ಶ್ರೇಣಿಯ ಬೆಲೆಯಾದ ರೂ 7.79 ಲಕ್ಷದಿಂದ ರೂ 14.89 ಲಕ್ಷಕ್ಕೆ ಏರಿಸಲಿದೆ. ಇದು ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ XUV300, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಸುಝುಕಿ ಬ್ರೆಝಾಗೆ ಪೈಪೋಟಿ ನೀಡಲಿದೆ.

 ಚಿತ್ರದ ಮೂಲ

was this article helpful ?

Write your Comment on Kia ಸೊನೆಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience