ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್‌ಡೇಟ್ ಮಾಡಲಿದೆ ಭಾರತ್ NCAP

published on ಆಗಸ್ಟ್‌ 23, 2023 05:47 pm by rohit

  • 14 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಅಪ್‌ಡೇಟ್‌ಗಳನ್ನು ವಿಶಾಲವಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳಾಗಿ ವರ್ಗೀಕರಿಸಲಾಗಿದ್ದು, ಇದರಲ್ಲಿ 360-ಡಿಗ್ರಿ ಕ್ಯಾಮರಾ ಮತ್ತು ರಿಯರ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಸೇರಿದೆ

Bharat NCAP

  •  ಭಾರತ್ NCAP ಅಕ್ಟೋಬರ್ 1, 2023 ರಂದು ಕಾರ್ಯರೂಪಕ್ಕೆ ಬರಲಿದೆ.

  •  ಇದು ಗ್ಲೋಬಲ್ NCAP ಯಂತಹ ಇತರ ಅಂತಾರಾಷ್ಟ್ರೀಯ ಕಾರು-ಸುರಕ್ಷತಾ ಮೌಲ್ಯಮಾಪನ ಸಂಸ್ಥೆಗಳಂತೆಯೇ ಪರೀಕ್ಷೆಗಳನ್ನು ನಡೆಸುತ್ತದೆ.

  •  ಸಕ್ರಿಯ ಸುರಕ್ಷತಾ ಫೀಚರ್‌ಗಳು ದುರ್ಘಟನೆಗಳು ಸಂಭವಿಸುವುದನ್ನು ತಪ್ಪಿಸಲು ನೆರವಾಗುತ್ತದೆ.

  •  ನಿಷ್ಕ್ರಿಯ ಸುರಕ್ಷತಾ ತಂತ್ರಜ್ಞಾನವು ಯಾವುದಾದರೂ ವಾಹನವು ಅಪಘಾತಕ್ಕೆ ಒಳಗಾದರೆ, ಒಳಗಿರುವ ಪ್ರಯಾಣಿಕರಿಗೆ ಉಂಟಾಗುವ ಅಪಾಯವನ್ನು ಕನಿಷ್ಠಗೊಳಿಸಲು ನೆರವಾಗುತ್ತದೆ.

  •  ಹಿಂದಿನ ಸರ್ಕಾರವು-ಕಡ್ಡಾಯಗೊಳಿಸಿದ ಸುರಕ್ಷತಾ ಅಪ್‌ಡೇಟ್‌ಗಳು ಮುಂಭಾಗದ ಎರಡು ಏರ್‌ಬ್ಯಾಗ್‌ಗಳು ಮತ್ತು ABS ಜೊತೆಗೆ EBD ಅನ್ನು ಒಳಗೊಂಡಿದೆ.

 ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿಯವರು ಇತ್ತೀಚೆಗೆ ಭಾರತ್ NCAP (ಭಾರತದ್ದೇ ಆದ ಹೊಸ ಕಾರುಗಳ ಮೌಲ್ಯಮಾಪನಾ ಪ್ರೋಗ್ರಾಂ) ಅನ್ನು ಉದ್ಘಾಟನೆ ಮಾಡಿದರು. ಇದು ಈಗಾಗಲೇ ಇರುವಂಥ ಮತ್ತು ಹೊಸ ಕಾರುಗಳ ಕ್ರ್ಯಾಶ್‌ ಟೆಸ್ಟಿಂಗ್ ಮಾಡಲು ವಿವಿಧ ಮಾನದಂಡಗಳನ್ನು ಒಳಗೊಂಡಿದೆ ಮತ್ತು ನಂತರ ಅವುಗಳಿಗೆ ಒಟ್ಟಾರೆ ರೇಟಿಂಗ್ ನೀಡುತ್ತದೆ. ಪ್ರಸ್ತುತಿಯ ಸಂದರ್ಭದಲ್ಲಿ, ಭಾರತ್ NCAP ಪ್ರೋಟೋಕಾಲ್‌ಗಳು ಮುಂದಕ್ಕೆ ವಿಕಸನಗೊಳ್ಳಲಿವೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸುರಕ್ಷತಾ ಮಾನದಂಡಗಳಿಗೆ ಒತ್ತು ನೀಡಲಿವೆ ಎಂಬುದನ್ನೂ ಹೇಳಲಾಗಿದೆ. ಕೆಲವು ಸಲಹೆಗಳನ್ನು ಪರಿಗಣಿಸಲಾಗಿದ್ದು ಅವುಗಳನ್ನು ವಿಶಾಲವಾದ ಎರಡು ವರ್ಗಗಳನ್ನಾಗಿ ಈ ಕೆಳಗೆ ವಿವರಿಸಲಾಗಿದೆ.

 

ಸಕ್ರಿಯ ಸುರಕ್ಷತಾ ವ್ಯವಸ್ಥೆಗಳು

ADAS

 ಸಕ್ರಿಯ ಸುರಕ್ಷತಾ ವ್ಯವಸ್ಥೆಗಳು ಅಗತ್ಯವಾಗಿ ಸುರಕ್ಷತಾ ಫೀಚರ್‌ಗಳಾಗಿದ್ದು ಅಪಘಾತ ಅಥವಾ ದುರದೃಷ್ಟಕರ ಘಟನೆಯನ್ನು ತಡೆಗಟ್ಟುವಲ್ಲಿ ನೆರವಾಗುತ್ತವೆ. ಕೆಲವೊಂದು ಉದಾಹರಣೆಗಳು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ, ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS), ಮತ್ತು TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

 ESCಯನ್ನು ಶೀಘ್ರದಲ್ಲಿ ಕಡ್ಡಾಯ ಸುರಕ್ಷತಾ ಫೀಚರ್ ಆಗಿ ಮಾಡುವ ನಿರೀಕ್ಷೆ ಇದ್ದು, ಭವಿಷ್ಯದಲ್ಲಿ ಭಾರತ್ NCAP ಯಿಂದ ಉತ್ತಮ ಸುರಕ್ಷತಾ ರೇಟಿಂಗ್ ಪಡೆಯಲು 360 ಡಿಗ್ರಿ ಕ್ಯಾಮರಾ, ಆಟೋನೋಮಸ್ ಎಮರ್ಜನ್ಸಿ ಬ್ರೇಕಿಂಗ್ (AEB) ಮತ್ತು ಬ್ರೇಕ್ ಅಸಿಸ್ಟ್, ಹಾಗೂ ಲೇನ್ ಡಿಪರ್ಚರ್ ವಾರ್ನಿಂಗ್ ಮೂಲ ಅವಶ್ಯಕತೆಗಳಾಗಬಹುದು.

Nissan Magnite 360-degree camera

ಪ್ರಸ್ತುತ, ಕೆಲವು ಡ್ರೈವರ್ ಅಸಿಸ್ಟ್ ಕಾರ್ಯಗಳೊಂದಿಗಿನ ಈ ಫೀಚರ್‌ಗಳು ಮುಖ್ಯವಾಗಿ ADAS ಹೊಂದಿರುವ ಕಾರುಗಳಲ್ಲಿ ಮಾತ್ರ ಲಭ್ಯವಿದೆ. 360-ಡಿಗ್ರಿ ಕ್ಯಾಮರಾ ಇದಕ್ಕೆ ಅಪವಾದವಾಗಿದ್ದು, ಆದರೂ ಈಗ ಮಾರುತಿ ಬಲೆನೋ ಮತ್ತು ಬ್ರೆಝಾ, ನಿಸ್ಸಾನ್ ಮ್ಯಾಗ್ನೈಟ್, ಮತ್ತು ಟೊಯೋಟಾ ಅರ್ಬನ್ ಕ್ರ್ಯೂಸರ್ ಹೈರೈಡರ್ ಸೇರಿದಂತೆ ಪ್ರಚಲಿತ ಕಾರುಗಳಲ್ಲಿಯೂ ಲಭ್ಯವಿದೆ.

 ಇದನ್ನೂ ಓದಿ:  GM ಮೋಟರ್ಸ್‌ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ಹ್ಯುಂಡೈ ಆರಂಭಿಸಲಿದೆ ತನ್ನ ಮೂರನೇ ಉತ್ಪಾದನಾ ಘಟಕ

 ಇತರ ADAS ಕಾರ್ಯಗಳೆಂದರೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈಬೀಮ್ ಅಸಿಸ್ಟ್ ಮತ್ತು ರಿಯರ್-ಕ್ರಾಸ್ ಟ್ರಾಫಿಕ್ ಅಲರ್ಟ್. ಕಿಯಾ ಸೆಲ್ಟೋಸ್, MG ಹೆಕ್ಟರ್, ಟಾಟಾ ಸಫಾರಿ, ಮತ್ತು ಹ್ಯುಂಡೈ ಟಕ್ಸನ್ ಮುಂತಾದ ಕಾರುಗಳು ಈ ADAS ಫೀಚರ್‌ಗಳನ್ನು ಪಡೆದಿವೆ.

 

ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳು

Hyundai Exter six airbags

 ನಿಷ್ಕ್ರಿಯ ಸುರಕ್ಷತಾ ಫೀಚರ್‌ಗಳು ಎಂದರೆ ಅಪಘಾತ ಅಥವಾ ದುರ್ಘಟನೆಗಳು ನಡೆದಾಗ, ಪ್ರಯಾಣಿಕರಿಗೆ ಹೆಚ್ಚಿನ ಹಾನಿಯುಂಟಾಗದಂತೆ ಕಾರ್ಯನಿರ್ವಹಿಸುವಂಥವು ಆಗಿವೆ. ಉದಾಹರಣೆಗೆ ಸೀಟ್‌ಬೆಲ್ಟ್‌ಗಳು, ಏರ್‌ಬ್ಯಾಗ್‌ಗಳು ಮತ್ತು ಕ್ರಂಪಲ್ ಝೋನ್‌ಗಳು.

 ಭಾರತ್ NCAP ಜಾರಿಗೆ ಬಂದ ನಂತರ ವಾಹನಗಳಿಗೆ ಫುಲ್-ಫ್ರಂಟಲ್ ಕ್ರ್ಯಾಶ್ ಟೆಸ್ಟ್ ಅನ್ನೂ ನಡೆಸಲಾಗುತ್ತದೆ, ಅಲ್ಲದೇ ವಾಹನಗಳಿಗೆ ಸುರಕ್ಷತಾ ರೇಟಿಂಗ್‌ಗಳನ್ನು ನೀಡಲು ಹೆಚ್ಚಿನ ಪರೀಕ್ಷೆಗಳು ಮತ್ತು ಮಾನದಂಡಗಳನ್ನು ನೀಡುವ ಸೂಚನೆಯನ್ನೂ MoRTH ನೀಡಿದೆ. ಇದು ಒಬ್ಲಿಕ್ ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ರಿಯರ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಅನ್ನೂ ಒಳಗೊಂಡಿರುತ್ತದೆ.

Electric cars

 ಅಲ್ಲದೇ BNCAPಯು EV ಮತ್ತು ಪರ್ಯಾಯ ಇಂಧನ ಮಾಡೆಲ್‌ಗಳಿಗೆ ನಿರ್ದಿಷ್ಟದ ಸುರಕ್ಷತಾ ಮೌಲ್ಯಮಾಪನ ಪ್ರೋಟೋಕಾಲ್ ಅನ್ನು ಸೇರಿಸುವ ಯೋಜನೆಯನ್ನೂ ಹೊಂದಿದೆ. ಕೊನೆಯದು CNG ಮತ್ತು ಫ್ಲೆಕ್ಸ್-ಇಂಧನ ಚಾಲಿತ ಕಾರುಗಳಾಗಿರಬಹುದು ಎಂದು ನಾವು ಭಾವಿಸಿದ್ದೇವೆ. ಅಂತಹ ಮಾಡೆಲ್‌ಗಳು ಸಾಮಾನ್ಯ ಪೆಟ್ರೋಲ್ ಅಥವಾ ಡೀಸೆಲ್ ಮಾಡೆಲ್‌ಗಳಿಗೆ ಹೋಲಿಸಿದರೆ, ವಿಭಿನ್ನ ರಚನೆಗಳನ್ನು ಹೊಂದಿರಬಹುದು ಮತ್ತು ರೂಢಿಯಲ್ಲಿರುವ ಕ್ರ್ಯಾಶ್ ಟೆಸ್ಟ್‌ಗಳಿಂದ ಇವುಗಳ ಸುರಕ್ಷತೆಯನ್ನು ನಿಖರವಾಗಿ ಮೌಲ್ಯಮಾಪನ ನಡೆಸಲಾಗದು. ಈ ಪರ್ಯಾಯ ಇಂಧನ ವಾಹನಗಳು ಹೆಚ್ಚುವರಿ ಟ್ಯಾಂಕ್‌ನಿಂದ ಸೋರಿಕೆ ಅಥವಾ EVಗಳಿಂದ ವಿದ್ಯುತ್ ಹೊರಸೂಸುವಿಕೆ ಮುಂತಾದ ಅಪಾಯಗಳನ್ನು ಒಳಗೊಂಡಿರಬಹುದು.

 ಆದಾಗ್ಯೂ, ಭಾರತ್ NCAPಗೆ ಈ ಹೊಸತಾಗಿ ಸೂಚಿಸಲಾದ ಅಪ್‌ಡೇಟ್‌ಗಳನ್ನು ಯಾವಾಗ ಮಾಡಲಾಗುತ್ತದೆ ಎಂಬುದನ್ನು ಸಚಿವಾಲಯವು ಇನ್ನೂ ಸ್ಪಷ್ಟಪಡಿಸಲಿಲ್ಲ. ಹೆಚ್ಚಿನ NCAPಗಳು 4-5 ವರ್ಷಗಳ ಅಂತರದಲ್ಲಿ ಪ್ರೋಟೋಕಾಲ್‌ಗಳನ್ನು ಅಪ್‌ಡೇಟ್ ಮಾಡುತ್ತವೆ.

ಇದನ್ನೂ ಓದಿ:  ಇಲ್ಲಿಯ ತನಕ 2023 ರನ್ನು ಪರಿಸರ ಸ್ನೇಹಿಯಾಗಿಸಿದ 6 ಇಲೆಕ್ಟ್ರಿಕ್ ಕಾರುಗಳು

 

ಭಾರತ್ NCAP: ಒಂದು ತ್ವರಿತ ರಿಕ್ಯಾಪ್

ಭಾರತ್ NCAPಯೊಂದಿಗೆ ಭಾರತವು ಸುರಕ್ಷತಾ ಮೌಲ್ಯಮಾಪನ ಪ್ರೋಗ್ರಾಂಗಳ ಜಾಗತಿಕ ಭ್ರಾತೃತ್ವವನ್ನು ಸೇರುತ್ತದೆ. ಇದು ಕಾರುಗಳನ್ನು ಫ್ರಂಟಲ್ ಆಫ್‌ಸೆಟ್ ಮತ್ತು ಸೈಡ್ ಇಂಪ್ಯಾಕ್ಟ್ ಟೆಸ್ಟ್‌ಗಳು ಮುಂತಾದ ವಿವಿಧ ಕ್ರ್ಯಾಶ್ ಟೆಸ್ಟ್‌ಗಳಿಗೆ ಒಳಪಡಿಸಿ ಅವುಗಳ ಫಲಿತಾಂಶವನ್ನು ಆಧರಿಸಿ, ಅವುಗಳಿಗೆ ರೇಟಿಂಗ್ ನೀಡುತ್ತದೆ. ಭಾರತ್ NCAP ಈ ವರ್ಷ ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತದೆ. ಈ ಪರೀಕ್ಷೆಗಳಿಗೆ ಪರಿಗಣಿಸಲಾಗುವ ವಿವಿಧ ನಿಯತಾಂಕಗಳನ್ನು MoRTH ಹಂಚಿಕೊಂಡಿದ್ದು, ಇವುಗಳನ್ನು ಪರೀಕ್ಷಿಸಬೇಕಾದ ವಾಹನದ ಪ್ರಕಾರ, ರೇಟಿಂಗ್ ವ್ಯವಸ್ಥೆಗಳು, ಮತ್ತು ಇನ್ನಷ್ಟು ವಿವರಗಳನ್ನು ನಮ್ಮ ಮುಖ್ಯ ಕಥೆಯಲ್ಲಿ ತಿಳಿಸಲಾಗಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience