X3 ಗೆ ಹೊಸ ಡೀಸೆಲ್ ವೇರಿಯೆಂಟ್‌ಗಳನ್ನು ಸೇರಿಸಿದ ಬಿಎಂಡಬ್ಲ್ಯೂ
ಬಿಎಂಡವೋ ಎಕ್ಸ3 2022-2025 ಗಾಗಿ ansh ಮೂಲಕ ಮಾರ್ಚ್ 31, 2023 07:29 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಈ ಐಷಾರಾಮಿ ಎಸ್‌ಯುವಿ ಹೊಸ ಆರಂಭಿಕ ಮಟ್ಟದ xLine ವೇರಿಯೆಂಟ್ ಅನ್ನು ಪಡೆಯುತ್ತಿದೆ.
- ಇದರ ಡೀಸೆಲ್ ಎಂಜಿನ್ 190PS ಮತ್ತು 400Nm ಅನ್ನು ನೀಡುತ್ತದೆ.
- ಈ ಯೂನಿಟ್ ಎಂಟು-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೊತೆಯಾಗಿದೆ.
- ಎರಡೂ ಆಲ್-ವ್ಹೀಲ್ ಡ್ರೈವ್‌ನೊಂದಿಗೆ xDrive ವೇರಿಯೆಂಟ್‌ಗಳಾಗಿವೆ.
- ಇದರ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಕೇವಲ ಕಾಸ್ಮೆಟಿಕ್ ಅಂಶಗಳನ್ನು ಸೇರಿಸಲಾಗಿದೆ.
- X3 ನ ಬೆಲೆಯನ್ನು ರೂ. 67.50 ಲಕ್ಷದಿಂದ ರೂ. 69.90 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್).
ಬಿಎಂಡಬ್ಲ್ಯೂ ಇತ್ತೀಚೆಗೆ ಎಸ್‌ಯುವಿಯ ಪೆಟ್ರೋಲ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ನಂತರ X3 ನ ವೇರಿಯೆಂಟ್‌ಗಳನ್ನು ಮರುಸಂಯೋಜಿಸಿದೆ. ಕಾರು ತಯಾರಕರು ಈ ಅದನ್ನು ಎರಡು ಡಿಸೇಲ್-ಚಾಲಿತ ವೇರಿಯೆಂಟ್‌ಗಳನ್ನು ನೀಡುತ್ತಿದ್ದು, ಅವುಗಳಲ್ಲಿ ಒಂದು ಲಕ್ಷುರಿ ಆವೃತ್ತಿಯ ಸ್ಥಾನ ತುಂಬಿದೆ.
ಬೆಲೆಗಳು
ವೇರಿಯೆಂಟ್‌ಗಳು |
ಬೆಲೆ (ಎಕ್ಸ್-ಶೋರೂಮ್) |
xDrive20d xLine |
ರೂ. 67.50 ಲಕ್ಷ |
xDrive20d M Sport |
ರೂ. 69.90 ಲಕ್ಷ |
ಈ X3 xLine ವೇರಿಯೆಂಟ್ ಲಕ್ಷುರಿ ಆವೃತ್ತಿಯ ಬದಲಾಗಿ ಬಿಡುಗಡೆಯಾಗಿರುವ ಆವೃತ್ತಿಯಾಗಿದ್ದು, ಅದಕ್ಕಿಂತ ರೂ. 20,000 ನಷ್ಟು ಅಧಿಕ ಬೆಲೆಯನ್ನು ಹೊಂದಿದೆ. ಈ ಎರಡೂ ವೇರಿಯೆಂಟ್‌ಗಳು ಡಿಸೇಲ್ ಚಾಲಿತವಾಗಿದೆ ಮತ್ತು ಯಾವುದೇ ಪೆಟ್ರೋಲ್ ಪವರ್‌ಟ್ರೇನ್ ಲಭ್ಯವಿಲ್ಲ.
ಏನೇನು ಬದಲಾವಣೆ?
ವಿನ್ಯಾಸದ ವಿಷಯದಲ್ಲಿ, xLine ವೇರಿಯೆಂಟ್‌ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಎಸ್‌ಯುವಿಯು ಎಲ್‌ಇಡಿ ಲೈಟಿಂಗ್ ಎಲಿಮೆಂಟ್‌ಗಳು ಮತ್ತು 19-ಇಂಚಿನ ಅಲಾಯ್ ವ್ಹೀಲ್‌ಗಳಂತಹ ಪ್ರಮಾಣಿತ ಸಾಧನಗಳೊಂದಿಗೆ ಬರುತ್ತದೆ. ಇದರ ಕ್ಯಾಬಿನ್ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮೂರು-ಝೋನ್ ಕ್ಲೈಮೇಟ್ ಕಂಟ್ರೋಲ್, ವಿಹಂಗಮವಾದ ಗಾಜಿನ ರೂಫ್, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ರಿಯರ್ ವ್ಯೂ ಕ್ಯಾಮರಾದೊಂದಿಗೆ ಸಂಪೂರ್ಣವಾಗಿ ತಯಾರಾಗಿದೆ.
ಈ M ಸ್ಪೋರ್ಟ್ ವೇರಿಯೆಂಟ್ ಎಕ್ಸ್‌ಟೀರಿಯರ್‌ನಲ್ಲಿ ಕೆಲವು ಸ್ಪೋರ್ಟಿಯರ್ ವಿನ್ಯಾಸದೊಂದಿಗೆ ಬರುತ್ತದೆ. ಗಾಳಿಯ ಒಳಹರಿವು ಮತ್ತು ಒಳಸೇರುವಿಕೆಯ ಹೊಳಪಿನಿಂದ ಕೂಡಿದ ಕಪ್ಪು ಬಣ್ಣದಿಂದ ಮಾಡಲ್ಪಟ್ಟಿದೆ. ಕಡ್ನಿ ಗ್ರಿಲ್, ರೂಫ್ ರೈಲ್‌ಗಳು ಕಿಟಕಿಯ ಗ್ರಾಫಿಕ್ಸ್ ಗಾಜು ಹೊಳಪಿನ ಕಪ್ಪು ಬಣ್ಣದಲ್ಲಿಯೂ ಲಭ್ಯವಿದೆ. ಈ M ಸ್ಪೋರ್ಟ್ ವೇರಿಯೆಂಟ್ ಸ್ಪೋರ್ಟ್ ಸೀಟುಗಳು, M ಲೆದರ್ ಸೀಟುಗಳು, M ಇಂಟೀರಿಯರ್ ಟ್ರಿಮ್, ಡೈನಾಮಿಕ್ ಡ್ಯಾಂಪರ್ ಕಂಟ್ರೋಲ್, ಸರೌಂಡ್ ವ್ಯೂ ಕ್ಯಾಮರಾ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ.
ಸುರಕ್ಷತೆಯ ವಿಷಯದಲ್ಲಿ, ವೇರಿಯೆಂಟ್‌ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೆಕ್ ಅಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ISOFIX ಮಕ್ಕಳ ಸೀಟ್ ಮೌಂಟ್‌ಗಳು, ಕಾರ್ನರಿಂಗ್ ಬ್ರೆಕ್ ಕಂಟ್ರೋಲ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೆಕ್ ಅನ್ನು ಹೊಂದಿದೆ.
ಪವರ್‌ಟ್ರೇನ್
X3 ಈಗ 190PS ಮತ್ತು 400Nm ಅನ್ನು ನೀಡುವ 2-ಲೀಟರ್, ನಾಲ್ಕು-ಸಿಲಿಂಡರ್ ಡಿಸೇಲ್ ಎಂಜಿನ್ ಅನ್ನು ಹೊಂದಿದೆ. ಈ ಡಿಸೇಲ್ ಯೂನಿಟ್ ಎಂಟು-ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟ್ರೋನಿಕ್ ಸ್ಪೋರ್ಟ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ ಮತ್ತು ಈ ಎಸ್‌ಯುವಿಯು ಬಿಎಂಡಬ್ಲ್ಯೂ xDrive ಆಲ್-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಪಡೆಯುತ್ತದೆ. ಈ ಎಸ್‌ಯುವಿ 7.9 ಸೆಕೆಂಡುಗಳಲ್ಲಿ ಶೂನ್ಯದಿಂದ 100kmph ವೇಗವನ್ನು ಸಾಧಿಸಬಲ್ಲುದು ಮತ್ತು 213kmph ನ ಟಾಪ್-ಸ್ಪೀಡ್ ಅನ್ನು ಹೊಂದಿದೆ.
ಇದನ್ನೂ ಓದಿ: ಬಿಎಂಡಬ್ಲ್ಯೂ ಭಾರತದಲ್ಲಿ ನವೀಕೃತ X7 ಅನ್ನು ಪರಿಚಯಿಸುತ್ತಿದೆ
2022 ರಲ್ಲಿ ನವೀಕೃತ X3 ನೊಂದಿಗೆ ನೀಡಲಾದ 252PS 2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಇನ್ನು ಮುಂದೆ ಲಭ್ಯವಿಲ್ಲ.
ಪ್ರತಿಸ್ಪರ್ಧಿಗಳು
ಈ ಬಿಎಂಡಬ್ಲ್ಯೂ X3 ಆಡಿ Q5, ವೋಲ್ವೋ XC60 ಮತ್ತು ಮುಂಬರುವ ಮರ್ಸಿಡಿಸ್-ಬೆಂಝ್ GLC ಗೆ ಪ್ರತಿಸ್ಪರ್ಧಿಯಾಗಲಿದೆ.