• English
  • Login / Register

ವಿದೇಶದಿಂದ ಸಂಪೂರ್ಣವಾಗಿ ಆಮದು ಆಗುತ್ತಿರುವ BMW i5 M60 ಬಿಡುಗಡೆ, ಹಾಗದರೆ ಇದರ ಬೆಲೆ ಎಷ್ಟಿರಬಹುದು ?

ಬಿಎಂಡವೋ i5 ಗಾಗಿ rohit ಮೂಲಕ ಏಪ್ರಿಲ್ 25, 2024 10:30 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

BMW ನ ಪರ್ಫಾರ್ಮೆನ್ಸ್‌-ಆಧಾರಿತ ಎಲೆಕ್ಟ್ರಿಕ್ ಸೆಡಾನ್‌ನ ಡೆಲಿವರಿಗಳು 2024ರ ಮೇ ತಿಂಗಳಿನಿಂದ ಪ್ರಾರಂಭವಾಗುತ್ತವೆ

BMW i5 M60 launched in India

  • i5 ಹೊಸ-ಜನ್ 5 ಸಿರೀಸ್‌ ಸೆಡಾನ್‌ನ ಆಲ್-ಎಲೆಕ್ಟ್ರಿಕ್ ಉತ್ಪನ್ನವಾಗಿದೆ.
  • ಬಿಎಮ್‌ಡಬ್ಲ್ಯೂ ಐ5 ಅನ್ನು ಟಾಪ್-ಸ್ಪೆಕ್ M60 ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿರ್ಮಿತ ಕಾರನ್ನು ಆಮದು ಮಾಡಿಕೊಳ್ಳಲಿದೆ. 
  • i5 M60 ಸಾಮಾನ್ಯ i5 ಗಿಂತ M-ನಿರ್ದಿಷ್ಟ ಗ್ರಿಲ್, ಅಲಾಯ್‌ ವೀಲ್‌ಗಳು ಮತ್ತು ಬ್ಯಾಡ್ಜ್‌ಗಳನ್ನು ಹೊಂದಿದೆ.
  • ಬಿಎಮ್‌ಡಬ್ಲ್ಯೂ ಇದನ್ನು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಪನೋರಮಿಕ್ ಗ್ಲಾಸ್‌ ರೂಫ್‌ ಮತ್ತು ADAS ಗಳೊಂದಿಗೆ ಸಜ್ಜುಗೊಳಿಸಿದೆ.
  • 81.2 kWh ಬ್ಯಾಟರಿ ಪ್ಯಾಕ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್ 601 PS ಮತ್ತು 795 Nm ಅನ್ನು ಉತ್ಪಾದಿಸುತ್ತದೆ, ಹಾಗೆಯೇ 500 ಕಿಮೀ ರೇಂಜ್‌ ಅನ್ನು ಹೊಂದಲಿದೆ. 

ಹೊಸ-ಜೆನ್ 5 ಸಿರೀಸ್‌ನ ಆಲ್-ಎಲೆಕ್ಟ್ರಿಕ್ ಆವೃತ್ತಿಯಾದ BMW i5 ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸನ್ನದ್ಧವಾಗಿದೆ. ಬಿಎಮ್‌ಡಬ್ಲ್ಯೂ ಇದನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ M60 xDrive ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿರ್ಮಿತ ಕಾರನ್ನು ಆಮದು ಮಾಡಿಕೊಳ್ಳಲಿದೆ ಮತ್ತು ಭಾರತದಾದ್ಯಂತ ಇದರ ಬೆಲೆಯನ್ನು 1.20 ಕೋಟಿ ರೂ. (ಎಕ್ಸ್-ಶೋರೂಮ್) ಗೆ ನಿಗದಿಪಡಿಸಿದೆ. ಇದರ ಬುಕಿಂಗ್‌ಗಳು ಇಂದಿನಿಂದಲೇ ಆರಂಭವಾಗಲಿದೆ ಮತ್ತು ಅದರ ಡೆಲಿವರಿಗಳು ಮೇ ತಿಂಗಳಿನಿಂದ ಪ್ರಾರಂಭವಾಗುತ್ತದೆ.

ಬಾಹ್ಯ ವಿನ್ಯಾಸದ ಹೈಲೈಟ್ಸ್‌ಗಳು

BMW i5 M60

5 ಸಿರೀಸ್‌ನ ಇತ್ತೀಚಿನ ಜನರೇಶನ್‌ನ ಆಧಾರದ ಮೇಲೆ, ಇದು ಇನ್ನೂ ಭಾರತಕ್ಕೆ ಬರಬೇಕಿದೆ, i5 ಹಿಂದಿನದಕ್ಕಿಂತ ಕೆಲವು ವಿನ್ಯಾಸ ವ್ಯತ್ಯಾಸಗಳನ್ನು ಪಡೆಯಲಿದೆ, ಅಡಾಪ್ಟಿವ್ LED ಹೆಡ್‌ಲೈಟ್‌ಗಳು ಮತ್ತು ಎರಡು ಲಂಬವಾಗಿ ನೆಲೆಗೊಂಡಿರುವ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಸುತ್ತುವರಿದ ಮುಚ್ಚಿದ ಗ್ರಿಲ್ (ಪ್ರಕಾಶದೊಂದಿಗೆ) ಟರ್ನ್‌ ಇಂಡಿಕೇಟರ್‌ಗಳಂತೆ ದ್ವಿಗುಣಗೊಳ್ಳುತ್ತವೆ.

BMW i5 M60 side
BMW i5 M60 rear

i5 M60 ಆವೃತ್ತಿಯು 20-ಇಂಚಿನ M-ನಿರ್ದಿಷ್ಟ ಅಲಾಯ್‌ ವೀಲ್‌ಗಳಿಗೆ ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಹೊಸ ವಿನ್ಯಾಸವನ್ನು ಹೊಂದಿದೆ, ಇದು ಸಾಮಾನ್ಯ i5 ನಿಂದ ಪ್ರತ್ಯೇಕಿಸುತ್ತದೆ. BMW ಇದನ್ನು M-ನಿರ್ದಿಷ್ಟ ಬ್ಯಾಡ್ಜ್‌ಗಳು ಮತ್ತು ಗ್ರಿಲ್, ಒಆರ್‌ವಿಎಮ್‌ಗಳು, ಚಕ್ರಗಳು ಮತ್ತು ರೂಫ್‌ಗೆ ಕಪ್ಪು ಸಾರವನ್ನು ನೀಡುತ್ತಿದೆ. i5 M60 ಕಪ್ಪು ಡಿಫ್ಯೂಸರ್ ಮತ್ತು ಕಾರ್ಬನ್ ಫೈಬರ್ ಫಿನಿಶ್‌ನೊಂದಿಗೆ ಬೂಟ್ ಲಿಪ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ.

ಇದು ಆಲ್ಪೈನ್ ವೈಟ್‌ನಲ್ಲಿ ಮೆಟಲಿಕ್‌ ಆಲ್ಲದ ಬಣ್ಣದ ಆಯ್ಕೆಯಾಗಿ ಮತ್ತು ಈ ಕೆಳಗೆ ನೀಡಲಾಗಿರುವ ಮೆಟಾಲಿಕ್ ಶೇಡ್‌ಗಳಲ್ಲಿ ಲಭ್ಯವಿದೆ - ಎಮ್‌ ಬ್ರೂಕ್ಲಿನ್ ಗ್ರೇ, ಎಮ್‌ ಕಾರ್ಬನ್ ಬ್ಲಾಕ್, ಕೇಪ್ ಯಾರ್ಕ್ ಗ್ರೀನ್, ಫೈಟೋನಿಕ್ ಬ್ಲೂ, ಬ್ಲ್ಯಾಕ್ ಸಫೈರ್, ಸೋಫಿಸ್ಟೋ ಗ್ರೇ, ಆಕ್ಸೈಡ್ ಗ್ರೇ ಮತ್ತು ಮಿನರಲ್ ವೈಟ್. ಹೆಚ್ಚುವರಿ ವೆಚ್ಚದಲ್ಲಿ ಕೆಲವು ಒಪ್ಶನಲ್‌ ಪೇಂಟ್ ಶೇಡ್‌ಗಳಿವೆ, ಅವುಗಳೆಂದರೆ, ಫ್ರೋಜನ್ ಪೋರ್ಟಿಮಾವೊ ಬ್ಲೂ, ಫ್ರೋಜನ್ ಡೀಪ್ ಗ್ರೇ, ಫ್ರೋಜನ್ ಪ್ಯೂರ್ ಗ್ರೇ ಮತ್ತು ಟ್ಯಾನ್ಸನೈಟ್ ಬ್ಲೂ.

ಕ್ಯಾಬಿನ್ ಮತ್ತು ವೈಶಿಷ್ಟ್ಯದ ಆಪ್‌ಡೇಟ್‌ಗಳು

BMW i5 M60 cabin

ಒಳಭಾಗದಲ್ಲಿ, BMW i5 M60 ಎಲ್ಲಾ-ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ ಮತ್ತು ಡ್ಯಾಶ್‌ಬೋರ್ಡ್ ಡ್ಯುಯಲ್ ಕರ್ವ್ಡ್-ಡಿಸ್‌ಪ್ಲೇ ಸೆಟಪ್‌ನಿಂದ ಪ್ರಾಬಲ್ಯ ಹೊಂದಿದೆ. BMW ಇದರಲ್ಲಿನ ಸ್ಪೋರ್ಟಿ ಅನುಭವವನ್ನು ಇನ್ನಷ್ಟು ಹೆಚ್ಚಿಸಲು M-ನಿರ್ದಿಷ್ಟ ಸ್ಟೀರಿಂಗ್ ವೀಲ್ ಮತ್ತು ಸೀಟುಗಳನ್ನು ಸಹ ನೀಡುತ್ತಿದೆ.

i5 ಕ್ಯಾಬಿನ್‌ನಲ್ಲಿ 14.9-ಇಂಚಿನ ಟಚ್‌ಸ್ಕ್ರೀನ್ ಯೂನಿಟ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, 4-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪನೋರಮಿಕ್ ಗ್ಲಾಸ್ ರೂಫ್ ಅನ್ನು ಪಡೆಯುತ್ತದೆ. ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಇದನ್ನೂ ಓದಿ:  2024ರ Jeep Wrangler ಬಿಡುಗಡೆ, ಬೆಲೆಗಳು 67.65 ಲಕ್ಷ ರೂ.ನಿಂದ ಪ್ರಾರಂಭ

ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್‌ನ ವಿವರಗಳು

ವಿವರಗಳು

i5 M60

ಬ್ಯಾಟರಿಯ ಗಾತ್ರ

81.2 ಕಿ.ವ್ಯಾ

WLTP-ಕ್ಲೈಮ್ ಮಾಡಿದ ಶ್ರೇಣಿ

516 ಕಿ.ಮೀ. ವರೆಗೆ

ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ

2 (1 ಮುಂಭಾಗ + 1 ಹಿಂಭಾಗ)

ಪವರ್‌

601 ಪಿಎಸ್

ಟಾರ್ಕ್‌

795 ಎನ್ಎಂ

i5 M60 ಕೇವಲ 3.8 ಸೆಕೆಂಡ್‌ಗಳಲ್ಲಿ 0 ರಿಂದ 100 kmph ಗೆ ಹೋಗಬಹುದು ಮತ್ತು ಇದು ಆಲ್-ವೀಲ್-ಡ್ರೈವ್ (AWD) ಸೆಟಪ್‌ ಅನ್ನು ಹೊಂದಿದೆ.

ಚಾರ್ಜಿಂಗ್ ಆಯ್ಕೆಗಳು

BMW i5 M60 charging

ಬಿಎಮ್‌ಡಬ್ಲ್ಯೂ i5 M60 xDrive ಆವೃತ್ತಿಯು ಹೋಮ್ AC ವಾಲ್‌ಬಾಕ್ಸ್ ಚಾರ್ಜರ್ ಜೊತೆಗೆ 11 kW ವರೆಗೆ ಚಾರ್ಜ್ ಸಾಮರ್ಥ್ಯದೊಂದಿಗೆ ಬರುತ್ತದೆ, ಹಾಗೆಯೇ ಇದರೊಂದಿಗೆ ಒಪ್ಶನಲ್‌ 22 ಕಿ.ವ್ಯಾಟ್‌ AC ಚಾರ್ಜರ್ ಸಹ ಕೊಡುಗೆಯಲ್ಲಿದೆ.

BMW ಇಂಡಿಯಾದ EV ಲೈನ್‌ಅಪ್ ಮತ್ತು i5 ನ ಪ್ರತಿಸ್ಪರ್ಧಿಗಳು

 i5 ಎಲೆಕ್ಟ್ರಿಕ್ ಸೆಡಾನ್ ಬಿಎಮ್‌ಡಬ್ಲ್ಯೂನ ಭಾರತೀಯ ಇವಿ ಲೈನ್‌ಆಪ್‌ನಲ್ಲಿ i4 ಮತ್ತು i7ರ ನಡುವೆ ಇರುತ್ತದೆ.  ಬಿಎಮ್‌ಡಬ್ಲ್ಯೂ ನಮ್ಮ ಮಾರುಕಟ್ಟೆಯಲ್ಲಿ iX1 ಮತ್ತು iX ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಸಹ ನೀಡುತ್ತದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಆಡಿ ಇ-ಟ್ರಾನ್ ಜಿಟಿ ಮತ್ತು ಪೋರ್ಷೆ ಟೇಕಾನ್‌ನ ಎಂಟ್ರಿ-ಲೆವೆಲ್‌ನ ಆವೃತ್ತಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಬಿಎಮ್‌ಡಬ್ಲ್ಯೂ i5 M60 ಅನ್ನು ಲಿಮಿಡೆಡ್‌ ಕಿಲೋಮೀಟರ್‌ಗಳೊಂದಿಗೆ ಸ್ಟ್ಯಾಂಡರ್ಡ್‌ 2-ವರ್ಷದ ವಾರಂಟಿಯೊಂದಿಗೆ ನೀಡುತ್ತಿದೆ, ಇದನ್ನು ಯಾವುದೇ ರೀತಿಯ ಕಿಲೋಮೀಟರ್‌ಗಳ ಮಿತಿ ಇಲ್ಲದೆ ಐದು ವರ್ಷಗಳವರೆಗೆ ವಿಸ್ತರಿಸಬಹುದು. i5ನ ಬ್ಯಾಟರಿ ಪ್ಯಾಕ್ 8 ವರ್ಷ/1.6 ಲಕ್ಷ ಕಿಮೀ ವರೆಗೆ ವಾರಂಟಿಯನ್ನು ಹೊಂದಿದೆ.

ಇನ್ನಷ್ಟು ಓದಿ: i5 ಆಟೋಮ್ಯಾಟಿಕ್‌

was this article helpful ?

Write your Comment on BMW i5

explore ಇನ್ನಷ್ಟು on ಬಿಎಂಡವೋ i5

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ವೇವ್ ಮೊಬಿಲಿಟಿ eva
    ವೇವ್ ಮೊಬಿಲಿಟಿ eva
    Rs.7 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf7
    vinfast vf7
    Rs.50 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • ಸ್ಕೋಡಾ elroq
    ಸ್ಕೋಡಾ elroq
    Rs.50 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf3
    vinfast vf3
    Rs.10 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf9
    vinfast vf9
    Rs.65 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience