• English
  • Login / Register

BMW iX xDrive50 ಭಾರತದಲ್ಲಿ ಬಿಡುಗಡೆ, ಬೆಲೆ 1.4 ಕೋಟಿ ರೂ.ನಿಂದ ಪ್ರಾರಂಭ

ಬಿಎಂಡವೋ ಐಎಕ್ಸ್‌ ಗಾಗಿ anonymous ಮೂಲಕ ಮಾರ್ಚ್‌ 27, 2024 01:09 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸದಾಗಿ ಬಿಡುಗಡೆಯಾದ ರೇಂಜ್‌ನಲ್ಲಿನ ಟಾಪ್ ವೇರಿಯಂಟ್ ದೊಡ್ಡ 111.5 kWh ಬ್ಯಾಟರಿ ಪ್ಯಾಕ್ ಮತ್ತು WLTP- ಕ್ಲೈಮ್‌ ಮಾಡಿದ 635 ಕಿಮೀ ರೇಂಜ್‌ ಅನ್ನು ಪಡೆಯುತ್ತದೆ.

BMW iX

  • BMW iX ಹೊಸ ರೇಂಜ್‌ನಲ್ಲಿ ಅತ್ಯುತ್ತಮವಾದ 'xDrive50' ಆವೃತ್ತಿಯನ್ನು ಪಡೆಯುತ್ತದೆ.

  • ಇದು ಪ್ರವೇಶ ಮಟ್ಟದ xDrive40 ಆವೃತ್ತಿಗಿಂತ 19 ಲಕ್ಷ ರೂಪಾಯಿ ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿದೆ.

  • ದೊಡ್ಡದಾದ 111.5 kWh ಬ್ಯಾಟರಿ ಪ್ಯಾಕ್ WLTP-ಪ್ರಮಾಣೀಕೃತ 635 ಕಿಮೀ ವ್ಯಾಪ್ತಿಯೊಂದಿಗೆ ಬರುತ್ತದೆ. 

  • ಡ್ಯುಯಲ್-ಮೋಟಾರ್ ಸೆಟಪ್ ಅನ್ನು ಪಡೆಯುತ್ತದೆ, 523 PS ಮತ್ತು 765 Nm ಅನ್ನು ಉತ್ಪಾದಿಸುತ್ತದೆ.

  • ದೊಡ್ಡ 22-ಇಂಚಿನ ಅಲಾಯ್‌ ವೀಲ್‌ಗಳನ್ನು ಸೇರ್ಪಡೆ ಮಾಡಿದ್ದನ್ನು ಹೊರತುಪಡಿಸಿ ಯಾವುದೇ ಇತರ ವೈಶಿಷ್ಟ್ಯಗಳನ್ನು ಬದಲಾಯಿಸಲಾಗಿಲ್ಲ.

BMW iX ಇದೀಗ 'xDrive50' ಎಂಬ ಹೊಸ ಟಾಪ್-ಸ್ಪೆಕ್ ಆವೃತ್ತಿಯನ್ನು ಪಡೆದಿದೆ, ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆ 1.4 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ. ಈಗಾಗಲೇ ಲಭ್ಯವಿರುವ ಎಂಟ್ರಿ-ಲೆವೆಲ್ xDrive40 ವೇರಿಯಂಟ್‌ಗಿಂತ ಇದರ ಬೆಲೆ ಸುಮಾರು 19 ಲಕ್ಷ ರೂ.ವರೆಗೆ ಹೆಚ್ಚಿದೆ. ಟಾಪ್-ಎಂಡ್ xDrive50 ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಹೆಚ್ಚು ಶಕ್ತಿಯುತ ಮೋಟರ್ ಅನ್ನು ಪಡೆಯುತ್ತದೆ, ಇದರಿಂದಾಗಿ ಪರ್ಫಾರ್ಮೆನೆನ್ಸ್‌ ಮತ್ತು ಕ್ಲೈಮ್ ಮಾಡಿದ ರೇಂಜ್‌ ಸುಧಾರಿಸಿದೆ. 

ವಿನ್ಯಾಸ ಮತ್ತು ವೈಶಿಷ್ಟ್ಯಗಳು

BMW iX Front

ಹೊಸ ಆವೃತ್ತಿಯ ವಿನ್ಯಾಸವು ಈಗಾಗಲೇ ಅಸ್ತಿತ್ವದಲ್ಲಿರುವ xDrive40  ಆವೃತ್ತಿಯಂತೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದಾಗಿಯೂ, ಟಾಪ್-ಎಂಡ್ xDrive50 22-ಇಂಚಿನ ಅಲಾಯ್‌ ವೀಲ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. 

BMW iX Cabin

ವೈಶಿಷ್ಟ್ಯಗಳ ವಿಷಯದಲ್ಲಿ ಇದು 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ 14.9-ಇಂಚಿನ ಇಂಫೋಟೈನ್‌ಮೆಂಟ್‌ ಸಿಸ್ಟಮ್‌, 18 ಸ್ಪೀಕರ್‌ಗಳೊಂದಿಗೆ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪನೋರಮಿಕ್ ಗ್ಲಾಸ್ ರೂಫ್ ಅನ್ನು ಪಡೆಯುತ್ತದೆ.

ಇದನ್ನೂ ಓದಿ: ಬಿಡುಗಡೆಗೊಂಡಾಗಿನಿಂದ 500 ಬುಕಿಂಗ್‌ಗಳನ್ನು ಪಡೆದ BYD Seal 

ಇದರ ಸುರಕ್ಷತಾ ಜಾಲವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಒಳಗೊಂಡಿದೆ.

ಪರ್ಫಾರ್ಮೆನೆನ್ಸ್‌

BMW iX

  BMW iX xDrive50 ದೊಡ್ಡದಾದ 111.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು WLTP- ಪ್ರಮಾಣೀಕರಿಸಿದ 635 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದ್ದು, ಒಂದು ಮುಂಭಾಗದ, ಮತ್ತೊಂದು ಹಿಂಭಾಗದ ಆಕ್ಸಲ್‌ಗಳಿಗೆ ಜೋಡಿಸಲ್ಪಟ್ಟಿದೆ, ಇದು AWD ಸಿಸ್ಟಮ್‌ ಅನ್ನು ಮಾಡುತ್ತದೆ. ಇದು 523 PS ಮತ್ತು 765 Nm ಅನ್ನು ಉತ್ಪಾದಿಸುತ್ತದೆ, ಇದು ಕೇವಲ 4.6 ಸೆಕೆಂಡುಗಳಲ್ಲಿ 0-100 kmph ಓಟವನ್ನು ತಲುಪಲು ಸಾಧ್ಯವಾಗಿಸುತ್ತದೆ. 

ಚಾರ್ಜಿಂಗ್‌

BMW iX Charging

iX xDrive50 195 kW ವರೆಗೆ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. 

ಚಾರ್ಜಿಂಗ್ ಸಮಯದ ಕುರಿತ ಮಾಹಿತಿ ಇಲ್ಲಿದೆ:

195 kW DC ಚಾರ್ಜರ್ - 35 ನಿಮಿಷಗಳಲ್ಲಿ 10% - 80%

50 kW DC ಚಾರ್ಜರ್ - 97 ನಿಮಿಷಗಳಲ್ಲಿ 10% - 80%

22 kW AC ಚಾರ್ಜರ್ - ಸುಮಾರು 5.5 ಗಂಟೆಗಳಲ್ಲಿ 100%

11 kW AC ಚಾರ್ಜರ್ - ಸುಮಾರು 11 ಗಂಟೆಗಳಲ್ಲಿ 100%

ಇದನ್ನೂ ಓದಿ: ಭಾರತದಲ್ಲಿ ಫೋಕ್ಸ್‌ವ್ಯಾಗನ್ ID.4ನ ಬಿಡುಗಡೆಯ ಟೈಮ್‌ಲೈನ್ ಬಹಿರಂಗ, ಹ್ಯುಂಡೈ ಐಯೊನಿಕ್ 5 ಇದರ ಪ್ರತಿಸ್ಪರ್ಧಿ   

BMW iX xDrive50 ಮಾರುಕಟ್ಟೆಯಲ್ಲಿ ಮರ್ಸಿಡಿಸ್ EQE SUV, ಜಾಗ್ವಾರ್ I-ಪೇಸ್, ಮತ್ತು Audi Q8 ಇ-ಟ್ರಾನ್ ಗೆ ಪ್ರತಿಸ್ಪರ್ಧಿಯಾಗಲಿದೆ. 

ಇನ್ನಷ್ಟು ಓದಿ: BMW iX ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
Anonymous
was this article helpful ?

0 out of 0 found this helpful

Write your Comment on BMW ಐಎಕ್ಸ್‌

Read Full News

explore ಇನ್ನಷ್ಟು on ಬಿಎಂಡವೋ ಐಎಕ್ಸ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience