ಬಿಎಮ್‌ಡಬ್ಲ್ಯೂ ಐಎಕ್ಸ್1 ಬಿಡುಗಡೆ; ಈ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ 66.90 ಲಕ್ಷ ರೂ. ನಿಗದಿ
ಬಿಎಂಡವೋ ಐಎಕ್ಸ್1 ಗಾಗಿ shreyash ಮೂಲಕ ಸೆಪ್ಟೆಂಬರ್ 28, 2023 09:25 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಬಿಎಮ್‌ಡಬ್ಲ್ಯೂ ಐಎಕ್ಸ್1 ಎಲೆಕ್ಟ್ರಿಕ್ ಎಸ್‌ಯುವಿ 66.4 ಕಿ.ವ್ಯಾಟ್‌ನ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಇದು ಡಬ್ಲ್ಯೂಎಲ್‌ಟಿಪಿ (WLTP) ನಲ್ಲಿ ಕ್ಲೈಮ್ ಮಾಡಿದಂತೆ 440 ಕಿ.ಮೀನಷ್ಟು ದೂರವನ್ನು ತಲುಪುತ್ತದೆ.
ಬಿಎಮ್‌ಡಬ್ಲ್ಯೂ ಐಎಕ್ಸ್1 ಅದರ ICE ಕೌಂಟರ್ಪಾರ್ಟ್ ಆಗಿರುವ ಬಿಎಮ್‌ಡಬ್ಲ್ಯೂ ಎಕ್ಸ್1 (ಇಂಧನದಿಂದ ಚಾಲಿತ) ನೊಂದಿಗೆ ತನ್ನ ವೇದಿಕೆಯನ್ನು ಹಂಚಿಕೊಳ್ಳುತ್ತದೆ.
- ಭಾರತದಲ್ಲಿ, ಇದು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನೊಂದಿಗೆ ಒಂದೇ xDrive30 ವೇರಿಯೆಂಟ್ ನಲ್ಲಿ ಮಾತ್ರ ನೀಡಲಾಗುತ್ತದೆ.
- ಡ್ಯುಯಲ್-ಮೋಟಾರ್ ವೇರಿಯೆಂಟ್ 313PS ಮತ್ತು 494Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.
- ಒಳಭಾಗದಲ್ಲಿ ಇದು ಇಂಟಿಗ್ರೇಟೆಡ್ ಕರ್ವ್ ಡಿಸ್ಪ್ಲೇ, ಮುಂಭಾಗದ ಪವರ್ಡ್ ಸೀಟುಗಳು ಮತ್ತು ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.
- ಭಾರತದಲ್ಲಿ ವೋಲ್ವೋ XC40 ರೀಚಾರ್ಜ್ ಮತ್ತು C40 ರೀಚಾರ್ಜ್‌ಗೆ ಬಿಎಮ್‌ಡಬ್ಲ್ಯೂ ಐಎಕ್ಸ್1 ಪ್ರತಿಸ್ಪರ್ಧಿಯಾಗಿದೆ.
ಬಿಎಮ್‌ಡಬ್ಲ್ಯೂ ಐಎಕ್ಸ್1 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತದಾದ್ಯಂತ 66.90 ಲಕ್ಷ ರೂ.ನ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆ ಮಾಡುವ ಮೂಲಕ ಬಿಎಮ್‌ಡಬ್ಲ್ಯೂ ಭಾರತದಲ್ಲಿ ತನ್ನ ಇವಿ ಬಿಡುಗಡೆಗಳ ಸರಣಿಯನ್ನು ಮುಂದುವರೆಸುತ್ತಿದೆ. ಪ್ರಸ್ತುತ-ತಲೆಮಾರಿನ ICE ಆವೃತ್ತಿಯಾಗಿರುವ X1 ಮಾಡೆಲ್‌ನ ಬಿಡುಗಡೆಯಾದ ಸುಮಾರು 8 ತಿಂಗಳ ನಂತರ ಮತ್ತು ಅದರ ಜಾಗತಿಕ ಬಿಡುಗಡೆಯ ಒಂದು ವರ್ಷದ ನಂತರ ಇದು ಬಂದಿದೆ. ಇದು iX, i7 ಮತ್ತು i4 ಜೊತೆಗೆ ಭಾರತದಲ್ಲಿ ಬಿಡುಗಡೆಯಾಗುವ ನಾಲ್ಕನೇ ಬಿಎಂಡಬ್ಲ್ಯೂ EV ಆಗಿದೆ. iX1 ತನ್ನ ಪ್ಲಾಟ್‌ಫಾರ್ಮ್ ಅನ್ನು ಅದರ ಆಂತರಿಕ ದಹನಕಾರಿ ಎಂಜಿನ್ (ICE) ಪ್ರತಿರೂಪವಾದ X1 ನೊಂದಿಗೆ ಹಂಚಿಕೊಳ್ಳುತ್ತದೆ. ಇದು ಏನು ಕೊಡುಗೆಯಾಗಿ ನೀಡುತ್ತದೆ ಎಂಬುದನ್ನು ನೋಡೋಣ.
X1 ಗಿಂತ ಕೆಲವೇ ಕೆಲವು ಬದಲಾವಣೆಗಳು
ಬಿಎಂಡಬ್ಲ್ಯೂ iX1 ವಿನ್ಯಾಸದ ವಿಷಯದಲ್ಲಿ ICE ಆವೃತ್ತಿಯಾಗಿರುವ X1 ಅನ್ನು ಹೋಲುತ್ತದೆ, ಹೆಚ್ಚಾಗಿ ವೋಲ್ವೋ XC40 ಮತ್ತು XC40 ರೀಚಾರ್ಜ್‌ನಂತೆ ಕಾಣುತ್ತದೆ. ಅಂತಾರಾಷ್ಟ್ರೀಯ ಮಾದರಿಯಂತಲ್ಲದೆ, ಭಾರತದಲ್ಲಿ ಬಿಡುಗಡೆಯಾಗಿರುವ ಐಎಕ್ಸ್1 ಬಂಪರ್‌ಗಳು ಮತ್ತು ಸೈಡ್ ಸ್ಕರ್ಟ್‌ಗಳ ಮೇಲೆ ನೀಲಿ ಸೇರಿಸುವಿಕೆಯನ್ನು ಪಡೆಯುವುದಿಲ್ಲ. ಇದು ಪ್ರಮುಖ ಬಿಎಂಡಬ್ಲ್ಯೂ ಕಿಡ್ನಿ ಕ್ರೋಮ್ ಗ್ರಿಲ್, ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮುಚ್ಚಲ್ಪಟ್ಟಿದೆ ಮತ್ತು ಎಕ್ಸ್1 ಎಸ್‌ಯುವಿಯಿಂದ ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳಂತಹ ಅಂಶಗಳನ್ನು ಉಳಿಸಿಕೊಂಡಿದೆ.
ಎಕ್ಸ್1ನ ಎಂ-ಸ್ಪೋರ್ಟ್ ಆವೃತ್ತಿಯಲ್ಲಿ ಕಂಡುಬರುವಂತೆ ಇದು 18-ಇಂಚಿನ M ಲೈಟ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಹಿಂಭಾಗದಲ್ಲಿ, iX1 ಅಡ್ಡಲಾಗಿ ಜೋಡಿಸಲಾದ ಎಲ್-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ದಪ್ಪನಾಗಿ ಕಾಣುವ ಹಿಂಭಾಗದ ಬಂಪರ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ಬಿಎಂಡಬ್ಲ್ಯೂ 2 ಸರಣಿಯ ಗ್ರ್ಯಾನ್ ಕೂಪೆ ಎಂ ಪರ್ಫಾರ್ಮೆನ್ಸ್ ಆವೃತ್ತಿ ಬಿಡುಗಡೆ
ಕ್ಯಾಬಿನ್
ಒಳಭಾಗದಲ್ಲಿ , ಬಿಎಂಡಬ್ಲ್ಯೂ iX1 ಎಲೆಕ್ಟ್ರಿಕ್ ಎಸ್‌ಯುವಿ ಅದರ ICE ಆವೃತ್ತಿಯಂತೆ ಅದೇ ರೀತಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹಂಚಿಕೊಳ್ಳುತ್ತದೆ. ಇದರಲ್ಲಿರುವ ಪ್ರಮುಖ ಅಂಶವೆಂದರೆ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10.7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಅದರ ಕರ್ವ್ ಆದ ಇಂಟಿಗ್ರೇಟೆಡ್ ಡಿಸ್ಪ್ಲೇ, ಇದು ಬಿಎಂಡಬ್ಲ್ಯೂ ನ i-ಡ್ರೈವ್ 8.5 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಸಹ ಸಪೋರ್ಟ್ ಆಗುತ್ತದೆ. ಎಲ್ಲಾ ಹವಾಮಾನ ನಿಯಂತ್ರಣಗಳನ್ನು ಟಚ್‌ಸ್ಕ್ರೀನ್ ಇಂಟರ್ಫೇಸ್‌ನಿಂದ ನಿಯಂತ್ರಿಸಲಾಗುತ್ತದೆ.
ಐಎಕ್ಸ್1 ನಲ್ಲಿನ ಇತರ ವೈಶಿಷ್ಟ್ಯಗಳೆಂದರೆ 12-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಮಸಾಜ್ ಫಂಕ್ಷನ್‌ನೊಂದಿಗೆ ವಿದ್ಯುನ್ಮಾನವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಉನ್ನತ ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪನೋರಮಿಕ್ ಸನ್‌ರೂಫ್. ಸುರಕ್ಷತೆಯ ವಿಷಯದಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಪಾರ್ಕ್ ಅಸಿಸ್ಟ್ ಮತ್ತು ಬ್ರೇಕ್ ಕಾರ್ಯದೊಂದಿಗೆ ಕ್ರೂಸ್ ಕಂಟ್ರೋಲ್ ಮತ್ತು ಫ್ರಂಟ್-ಅಪಘಾತ ಎಚ್ಚರಿಕೆಯಂತಹ ಡ್ರೈವರ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಪವರ್‌ಟ್ರೇನ್
ಬಿಎಂಡಬ್ಲ್ಯೂ iX1 66.4 ಕಿ.ವ್ಯಾಟ್ ಒಟ್ಟು ಶಕ್ತಿ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು xDrive30 ವೆರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದೆ. ಇದು 313PS ಮತ್ತು 494Nm ನಷ್ಟು ಶಕ್ತಿಯನ್ನು ಉತ್ಪಾದಿಸುವ ಮೂಲಕ ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ ಕಾನ್ಫಿಗರೇಶನ್ ಅನ್ನು ಹೊಂದಿದೆ. ಡಬ್ಲ್ಯೂಎಲ್‌ಟಿಪಿ (WLTP) ನಲ್ಲಿ ಕ್ಲೈಮ್ ಮಾಡಿದಂತೆ 440 ಕಿ.ಮೀನಷ್ಟು ವ್ಯಾಪ್ತಿಯನ್ನು ಹೊಂದಿದೆ. 11 ಕಿ.ವ್ಯಾಟ್ ವಾಲ್‌ಬಾಕ್ಸ್ AC ಚಾರ್ಜರ್ ಬ್ಯಾಟರಿಯನ್ನು ಖಾಲಿಯಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು 6.3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಪ್ರತಿಸ್ಪರ್ಧಿಗಳು
ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ iX1 ವೋಲ್ವೋ XC40 ರೀಚಾರ್ಜ್ ಮತ್ತು C40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸುತ್ತದೆ ಮತ್ತು ಬಿವೈಡಿ Atto 3 ಮತ್ತು ಹುಂಡೈ ಐಯೋನಿಕ್ 5 ಗೆ ಐಷಾರಾಮಿ ಪರ್ಯಾಯವಾಗಿದೆ.