• English
  • Login / Register

ಹೊಸ Mercedes-Benz E-Class ಖರೀದಿಸಿದ ಬಾಲಿವುಡ್ ಮತ್ತು ಟೆಲಿವಿಷನ್ ನಟಿ ಸೌಮ್ಯಾ ಟಂಡನ್

ಮರ್ಸಿಡಿಸ್ ಇ-ವರ್ಗ 2021-2024 ಗಾಗಿ rohit ಮೂಲಕ ಜುಲೈ 01, 2024 10:00 pm ರಂದು ಪ್ರಕಟಿಸಲಾಗಿದೆ

  • 57 Views
  • ಕಾಮೆಂಟ್‌ ಅನ್ನು ಬರೆಯಿರಿ

ಇ-ಕ್ಲಾಸ್ E 200, E 220d ಮತ್ತು E 350d ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ- ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆಗಳು 76.05 ಲಕ್ಷ ರೂ.ನಿಂದ 89.15 ಲಕ್ಷ ರೂ.ವರೆಗೆ ಇರಲಿದೆ. 

Saumya Tandon's new Mercedes-Benz E-Class

ಬಾಲಿವುಡ್‌ ಮತ್ತು ಕಿರುತೆರೆ ನಟಿ ಸೌಮ್ಯಾ ಟಂಡನ್ ಮರ್ಸಿಡಿಸ್-ಬೆಂಝ್‌ ಖರೀದಿಸಿದ ಇತ್ತೀಚಿನ ಸೆಲೆಬ್ರಿಟಿಯಾಗಿದ್ದಾರೆ. ಆದರೆ, ಜರ್ಮನ್ ಐಷಾರಾಮಿ ಕಾರು ತಯಾರಕರ ಎಸ್‌ಯುವಿಗಳನ್ನು ಆಯ್ಕೆ ಮಾಡುವ ಪ್ರಸಿದ್ಧ ವ್ಯಕ್ತಿಗಳ ಇತ್ತೀಚಿನ ಪ್ರವೃತ್ತಿಗಿಂತ ಭಿನ್ನವಾಗಿ, ಅವರು ಮರ್ಸಿಡಿಸ್-ಬೆಂಝ್‌ ಇ-ಕ್ಲಾಸ್ ಅನ್ನು ಖರೀದಿಸಿದ್ದಾರೆ. ಜಬ್ ವಿ ಮೆಟ್ ಚಿತ್ರದಲ್ಲಿನ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾದ ಈ ನಟಿ, ತನ್ನ ಐಷಾರಾಮಿ ಸೆಡಾನ್‌ನಲ್ಲಿ ಸೂಕ್ಷ್ಮವಾದ ಪೋಲಾರ್ ವೈಟ್ ಕಲರ್‌ಅನ್ನು ಆರಿಸಿಕೊಂಡಿದ್ದಾರೆ.

ಇ-ಕ್ಲಾಸ್ ಬಗ್ಗೆ ವಿವರವಾಗಿ

Mercedes-Benz E-Class

ಇ-ಕ್ಲಾಸ್, ಮರ್ಸಿಡಿಸ್-ಬೆನ್ಜ್‌ನ ಜಾಗತಿಕವಾಗಿ ಅತ್ಯಂತ ಜನಪ್ರಿಯ ಮೊಡೆಲ್‌, ಪ್ರಸ್ತುತ ಭಾರತದಲ್ಲಿ ಇದನ್ನು ಲಾಂಗ್-ವೀಲ್‌ಬೇಸ್ (LWB) ಆವೃತ್ತಿಯಲ್ಲಿ ನೀಡಲಾಗುತ್ತದೆ. ಮರ್ಸಿಡೀಸ್‌ ಬೆಂಝ್‌ ಇಂಡಿಯಾ-ಸ್ಪೆಕ್ ಸೆಡಾನ್ ಅನ್ನು E 200, E 220d ಮತ್ತು E 350d ಎಂಬ ಮೂರು ಆವೃತ್ತಿಗಳಲ್ಲಿ ಮಾರಾಟ ಮಾಡುತ್ತದೆ - ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆಗಳು 76.05 ಲಕ್ಷ ರೂ.ನಿಂದ 89.15 ಲಕ್ಷ ರೂ.ವರೆಗೆ ಇರಲಿದೆ. ಹೊಸ-ಜೆನ್ ಇ-ಕ್ಲಾಸ್ LWB ಭಾರತದಲ್ಲಿ 2024ರ ಅಂತ್ಯದ ವೇಳೆಗೆ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆಫರ್‌ನಲ್ಲಿರುವ ಪವರ್‌ಟ್ರೈನ್‌ಗಳು

ಸೌಮ್ಯಾ ಯಾವ ಪವರ್‌ಟ್ರೇನ್ ಅನ್ನು ಆರಿಸಿಕೊಂಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲವಾದರೂ, ಮರ್ಸಿಡಿಸ್ ಇ-ಕ್ಲಾಸ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಒದಗಿಸುತ್ತದೆ, ಅದರ ತಾಂತ್ರಿಕ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

 

2-ಲೀಟರ್, 4-ಸಿಲಿಂಡರ್ ಟರ್ಬೊ-ಪೆಟ್ರೋಲ್

2-ಲೀಟರ್, 4-ಸಿಲಿಂಡರ್ ಡೀಸೆಲ್

3-ಲೀಟರ್, 6-ಸಿಲಿಂಡರ್ ಡೀಸೆಲ್

ಪವರ್‌

197 ಪಿಎಸ್‌

200 ಪಿಎಸ್‌

286 ಪಿಎಸ್‌

ಟಾರ್ಕ್‌

320 ಎನ್‌ಎಮ್‌

440 ಎನ್‌ಎಮ್‌

600 ಎನ್‌ಎಮ್‌

ಟ್ರಾನ್ಸ್‌ಮಿಷನ್‌

9-ಸ್ಪೀಡ್‌ ಆಟೋಮ್ಯಾಟಿಕ್‌

9-ಸ್ಪೀಡ್‌ ಆಟೋಮ್ಯಾಟಿಕ್‌

9-ಸ್ಪೀಡ್‌ ಆಟೋಮ್ಯಾಟಿಕ್‌

ಸೆಡಾನ್‌ನ ಅತ್ಯಂತ ಶಕ್ತಿಶಾಲಿ ಡೀಸೆಲ್ ಆವೃತ್ತಿಯು 0-100 kmph ಓಟವನ್ನು 6 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತದೆ.

ಇದನ್ನೂ ಸಹ ಓದಿ: ಎಕ್ಸ್‌ಕ್ಲೂಸಿವ್‌: ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷೆಯ ವೇಳೆಯಲ್ಲಿ ಕಾಣಿಸಿಕೊಂಡ 2025ರ Skoda Kodiaq

ಇದು ಯಾವ ತಂತ್ರಜ್ಞಾನವನ್ನು ಪಡೆಯುತ್ತದೆ?

Mercedes-Benz E-Class cabin

ಇಂಡಿಯಾ-ಸ್ಪೆಕ್ ಇ-ಕ್ಲಾಸ್ 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ಪನೋರಮಿಕ್ ಸನ್‌ರೂಫ್, 3-ಝೋನ್‌ ಹವಾಮಾನ ನಿಯಂತ್ರಣ, ವೈರ್‌ಲೆಸ್ ಫೋನ್ ಚಾರ್ಜಿಂಗ್ (ಮುಂಭಾಗ ಮತ್ತು ಹಿಂಭಾಗ) ಮತ್ತು ಎಂಬಿಯೆಂಟ್‌ ಲೈಟಿಂಗ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

ಇದರ ಸುರಕ್ಷತಾ ಪ್ಯಾಕೇಜ್‌ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಮರ್ಸಿಡಿಸ್-ಬೆಂಝ್‌ ಇ-ಕ್ಲಾಸ್‌ನ ಪ್ರತಿಸ್ಪರ್ಧಿಗಳು

Mercedes-Benz E-Class rear

ಮರ್ಸಿಡಿಸ್-ಬೆಂಝ್‌ ಇ-ಕ್ಲಾಸ್‌ ಭಾರತದಲ್ಲಿ Audi A6, Volvo S90, ಮತ್ತುBMW 5 Series ಗಳಿಗೆ ನೇರಪ್ರತಿಸ್ಪರ್ಧಿಯಾಗಿದೆ. 

ಇದನ್ನು ಸಹ ಓದಿ: ಜುಲೈ 24 ರಂದು ಹೊಸ BMW 5 ಸಿರೀಸ್‌ LWB ಬಿಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ

ಇತ್ತೀಚಿನ ವಾಹನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ WhatsApp ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಡೀಸೆಲ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mercedes-Benz ಇ-ವರ್ಗ 2021-2024

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience