• English
  • Login / Register

ಜುಲೈ 24 ರಂದು ಹೊಸ BMW 5 ಸಿರೀಸ್‌ LWB ಬಿಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ

ಬಿಎಂಡವೋ 5 ಸರಣಿ ಗಾಗಿ sonny ಮೂಲಕ ಜೂನ್ 28, 2024 08:05 pm ರಂದು ಪ್ರಕಟಿಸಲಾಗಿದೆ

  • 91 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು ಭಾರತದಲ್ಲಿ ಮೊದಲ ಉದ್ದದ ವೀಲ್‌ಬೇಸ್ 5 ಸಿರೀಸ್‌ ಆಗಲಿದೆ ಮತ್ತು ಇದನ್ನು ಭಾರತದಲ್ಲಿಯೇ ಜೋಡಿಸಲಾಗುವುದು

2024 BMW 5 Series for India

 ಇತ್ತೀಚಿನ ಜನರೇಶನ್‌ನ BMW 5 ಸಿರೀಸ್‌ನ ಐಷಾರಾಮಿ ಎಕ್ಸ್‌ಕ್ಯೂಟಿವ್‌ ಸೆಡಾನ್ 2024ರ ಮೇ ತಿಂಗಳಿನಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿತು ಮತ್ತು ಕೇವಲ ಒಂದು ವರ್ಷದ ನಂತರ, ಇದೀಗ  ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ವಾಸ್ತವವಾಗಿ, ಇದರ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯು ಸ್ಪೋರ್ಟಿ ಲುಕ್‌ನಲ್ಲಿ ನಮಗೆ ಮೊದಲು ಬಂದಿದ್ದು, ಬಿಎಮ್‌ಡಬ್ಲ್ಯೂ ಐ5 ಎಮ್‌60 ಅನ್ನು 2024ರ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈಗ, ಇಂಧನ ಚಾಲಿತ ಎಂಜಿನ್‌ 5 ಸಿರೀಸ್‌ಗಾಗಿ ಅದರ ಉದ್ದದ ವೀಲ್‌ಬೇಸ್ (LWB) ರೂಪದಲ್ಲಿ ಬುಕಿಂಗ್‌ಗಳನ್ನು ತೆರೆಯಲಾಗಿದೆ.

ಆಪ್‌ಡೇಟ್‌ ಮಾಡಲಾದ ಡಿಸೈನ್‌

ಎಂಟನೇ-ಪೀಳಿಗೆಯ 5 ಸಿರೀಸ್‌ ಈಗ ಮುಂಭಾಗದಲ್ಲಿ ತೀಕ್ಷ್ಣವಾದ ವಿವರಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕ ಪ್ರೆಸೆನ್ಸ್‌ ಅನ್ನು ನೀಡುತ್ತದೆ ಮತ್ತು ಬದಿ ಮತ್ತು ಹಿಂಭಾಗದ ಪ್ರೊಫೈಲ್‌ಗಳಿಗೆ ಮೃದುವಾದ ಅಂಚುಗಳನ್ನು ನೀಡುತ್ತದೆ. ಇದು ಇತ್ತೀಚಿನ ನಯವಾದ ಬಿಎಮ್‌ಡಬ್ಲ್ಯೂ ಎಲ್‌ಇಡಿ ಲೈಟಿಂಗ್ ಸೆಟಪ್ ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪಡೆಯುತ್ತದೆ, ಆದರೆ ಗ್ರಿಲ್ ಸಹ ಪ್ರಕಾಶಿಸಲ್ಪಟ್ಟಿದೆ. ಭಾರತೀಯ ಖರೀದಿದಾರರು ಈ ಬಿಎಮ್‌ಡಬ್ಲ್ಯೂ ಸೆಡಾನ್‌ನ LWB ಆವೃತ್ತಿಯನ್ನು ಪಡೆಯುವುದು ಇದೇ ಮೊದಲು. ಜಾಗತಿಕ ಮಾರುಕಟ್ಟೆಗಳು 19-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯಬಹುದಾದರೂ, ಭಾರತ-ಸ್ಪೆಕ್ ಮೊಡೆಲ್‌ 18 ಇಂಚಿನದ್ದನ್ನು ಮಾತ್ರ ಪಡೆಯುತ್ತದೆ.

ಮಾಡರ್ನ್‌ ಕ್ಯಾಬಿನ್‌

ಹೊಸ-ಪೀಳಿಗೆಯ ಬಿಎಮ್‌ಡಬ್ಲ್ಯೂ 5 ಸಿರೀಸ್‌ನ ಒಳಗೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 12.3-ಇಂಚಿನ ಸ್ಕ್ರೀನ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ 14.9-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬ್ರ್ಯಾಂಡ್‌ನ ಪ್ರಸ್ತುತ ಸಂಯೋಜಿತ ಡಿಸ್‌ಪ್ಲೇಗಳನ್ನು ನೀವು ಕಾಣಬಹುದು. ಹೊಸ 7 ಸಿರೀಸ್‌ನಂತೆ, ಸೆಂಟ್ರಲ್‌ ಎಸಿ ವೆಂಟ್‌ಗಳನ್ನು ಡ್ಯಾಶ್‌ಬೋರ್ಡ್‌ಗೆ ಸಂಯೋಜಿಸಲಾಗಿದೆ ಮತ್ತು ಅವುಗಳನ್ನು ದೃಷ್ಟಿಗೆ ದೂರವಿರಿಸಲು ಮಾಡಲಾಗಿದೆ.

2024 BMW 5 Series interior

BMW ಎಕ್ಸ್‌ಕ್ಯೂಟಿವ್‌ ಸೆಡಾನ್‌ನಿಂದ ನೀವು ನಿರೀಕ್ಷಿಸಿದಷ್ಟು ಇಂಟಿರೀಯರ್‌ ಐಷಾರಾಮಿಯಾಗಿದೆ, ಆದರೆ ಈಗ ಅವುಗಳನ್ನು ಲೆದರ್‌-ಮುಕ್ತವಾಗಿ ಮಾಡಲ್ಪಟ್ಟಿರುವುದರಿಂದ, ಅವುಗಳು ಈಗ ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿವೆ. ಪ್ರಮುಖ 7 ಸಿರೀಸ್‌ನಂತೆ, ಇದು ಸೆಂಟ್ರಲ್‌ ಕನ್ಸೋಲ್‌ನಲ್ಲಿ ಕ್ರಿಸ್ಟಲ್‌ ಅಂಶಗಳನ್ನು ಸಹ ಪಡೆಯುತ್ತದೆ.

ಫೀಚರ್‌ಗಳ ಬಗ್ಗೆ ಹೇಳುವುದಾದರೆ,

ಫೀಚರ್‌ಗಳ ವಿಷಯದಲ್ಲಿ, ಇಂಡಿಯಾ-ಸ್ಪೆಕ್ ನ್ಯೂ-ಜೆನ್ 5 ಸಿರೀಸ್‌ ಈಗ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, 18-ಸ್ಪೀಕರ್ ಬೋವರ್ಸ್ ಮತ್ತು ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ನಾಲ್ಕು-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಫಿಕ್ಸ್‌ಡ್‌ ಪ್ಯಾನರೋಮಿಕ್‌ ಗ್ಲಾಸ್‌ ರೂಫ್‌ ಮತ್ತು ಕಂಫರ್ಟ್‌ ಸೀಟ್‌ಗಳನ್ನು ಸಹ ಪಡೆಯುತ್ತದೆ.

ಸುರಕ್ಷತಾ ಕಿಟ್ ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಮತ್ತಷ್ಟು ಅಸಿಸ್ಟ್‌ಗಳನ್ನು ಒಳಗೊಂಡಿದೆ. ಆದಾಗಿಯೂ, ಬಿಎಮ್‌ಡಬ್ಲ್ಯೂ ಭಾರತ-ಸ್ಪೆಕ್ ಮೊಡೆಲ್‌ಗಾಗಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಬಿಟ್ಟುಬಿಟ್ಟಿದೆ.

ಎಂಜಿನ್‌ಗಳು

ಜಾಗತಿಕವಾಗಿ, ಹೊಸ-ಜನರೇಶನ್‌ನ ಬಿಎಮ್‌ಡಬ್ಲ್ಯೂ 5 ಸಿರೀಸ್‌ಅನ್ನು ಪೆಟ್ರೋಲ್, ಡೀಸೆಲ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಶುದ್ಧ-ವಿದ್ಯುತ್ ಬಿಎಮ್‌ಡಬ್ಲ್ಯೂ i5 ಆಯ್ಕೆಯ ಜೊತೆಗೆ ನೀಡಲಾಗುತ್ತದೆ. ಆದಾಗ್ಯೂ, ಇಂಡಿಯಾ-ಸ್ಪೆಕ್‌ಗಾಗಿ ಪವರ್‌ಟ್ರೇನ್ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ನಾವು ಹೈಬ್ರಿಡ್ ಆಯ್ಕೆಯನ್ನು ನಿರೀಕ್ಷಿಸುತ್ತಿಲ್ಲ.

ನಿರೀಕ್ಷಿತ ಬೆಲೆ ಮತ್ತು ಬಿಡುಗಡೆ

ಹೊಸ ಬಿಎಮ್‌ಡಬ್ಲ್ಯೂ 5 ಸಿರೀಸ್‌ ಎಲ್‌ಡಬ್ಲ್ಯೂಬಿ ಬೆಲೆಗಳು ಜುಲೈ 24 ರಂದು ಬಹಿರಂಗಗೊಳ್ಳಲಿವೆ. ಇದು ಭಾರತದಲ್ಲಿ ಸ್ಥಳೀಯವಾಗಿ ಮತ್ತು ಚೆನ್ನೈ ಬಳಿಯ ಬಿಎಮ್‌ಡಬ್ಲ್ಯೂ ಘಟಕದಲ್ಲಿ ಜೋಡಿಸಲ್ಪಡುತ್ತದೆ ಮತ್ತು ಇದರ ಬೆಲೆ 70 ಲಕ್ಷ ರೂ.(ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗಬಹುದೆಂದು  ನಿರೀಕ್ಷಿಸಲಾಗಿದೆ. ಈ ಐಷಾರಾಮಿ ಸೆಡಾನ್ Mercedes-Benz E-Class, Audi A6 ಮತ್ತು Volvo S90 ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on BMW 5 ಸರಣಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience