ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್‌ಗಳು ಪ್ರಾರಂಭ
ಜೂನ್ 19, 2024 10:05 pm ರಂದು dipan ಮೂಲಕ ಪ್ರಕಟಿಸಲಾಗಿದೆ
- 50 Views
- ಕಾಮೆಂಟ್ ಅನ್ನು ಬರೆಯಿರಿ
ಮೊಟ್ಟಮೊದಲ ಆಲ್-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ಅನ್ನು ಈಗ ಭಾರತದಲ್ಲಿ ಕಾರು ತಯಾರಕರ ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು
- ಎಲೆಕ್ಟ್ರಿಕ್ ಕಂಟ್ರಿಮ್ಯಾನ್‌ಗಾಗಿ ಜಾಗತಿಕ ಉತ್ಪಾದನೆಯು ಈ ವರ್ಷದ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಇದರ ಭಾರತದ ಬೆಲೆಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.
- ಎಲ್ಲಾ-ಹೊಸ ಮಿನಿ ಕೂಪರ್‌ನಂತೆಯೇ ಮರುವಿನ್ಯಾಸಗೊಳಿಸಲಾದ ಅಷ್ಟಭುಜಾಕೃತಿಯ ಮುಂಭಾಗದ ಗ್ರಿಲ್ ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ.
- ಒಳಭಾಗದಲ್ಲಿ, ಇದು 9.4-ಇಂಚಿನ ಸುತ್ತಿನ OLED ಟಚ್‌ಸ್ಕ್ರೀನ್ ಅನ್ನು ಕೇಂದ್ರಬಿಂದುವಾಗಿ ಪಡೆಯುತ್ತದೆ, ಇದು ಸಾಂಪ್ರದಾಯಿಕ ಇನ್ಸ್‌ಟ್ರುಮೆಂಟ್‌ಕ್ಲಸ್ಟರ್ ಅನ್ನು ಬದಲಾಯಿಸುತ್ತದೆ.
- ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ 66.4 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ನಲ್ಲಿ 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಿದ ರೇಂಜ್ ಅನ್ನು ಪಡೆಯಲಿದೆ.
2023ರ ಕೊನೆಯಲ್ಲಿ, ಮೊಟ್ಟಮೊದಲ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ ಜಾಗತಿಕವಾಗಿ ಅನಾವರಣಗೊಂಡಿತು. ಈ ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಲಿದೆ ಮತ್ತು ಅದಕ್ಕಾಗಿ ಪೂರ್ವ-ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
ಎಕ್ಸ್‌ಟಿರೀಯರ್
2024ರ ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಬ್ರ್ಯಾಂಡ್‌ನ ಐದು-ಡೋರ್‌ನ ಕೊಡುಗೆಯಾಗಿ ಅದರ ಕ್ಲಾಸಿಕ್ ಆಕಾರವನ್ನು ಉಳಿಸಿಕೊಂಡು ಸೊಗಸಾದ ವಿನ್ಯಾಸವನ್ನು ಪಡೆಯುತ್ತದೆ. ಇದು ಸಂಕೀರ್ಣ ವಿನ್ಯಾಸದ ಅಂಶಗಳೊಂದಿಗೆ ಹೊಸ ಅಷ್ಟಭುಜಾಕೃತಿಯ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ, ಡಿಎಲ್‌ಆರ್‌ಗಳಿಗಾಗಿ ಕಸ್ಟಮೈಸ್ ಮಾಡಬಹುದಾದ ಲೈಟ್ ಪ್ಯಾಟರ್ನ್‌ಗಳೊಂದಿಗೆ ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳಿಂದ ಸುತ್ತುವರಿದಿದೆ.
ಬದಿಯಿಂದ ಗಮನಿಸುವಾಗ, ಇದು 20 ಇಂಚುಗಳಷ್ಟು ಗಾತ್ರದಲ್ಲಿ ಹೊಸ ಅಲಾಯ್ ವೀಲ್ ವಿನ್ಯಾಸಗಳನ್ನು ಹೊಂದಿದೆ.
ಹಿಂಭಾಗವು ಆಧುನಿಕ ಪಿಕ್ಸಲೇಟೆಡ್ ನೋಟದೊಂದಿಗೆ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ. ಮಿನಿ ಮುಂಬರುವ ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಅನ್ನು ಆರು ಬಣ್ಣಗಳಲ್ಲಿ ನೀಡುತ್ತಿದೆ, ಅವುಗಳೆಂದರೆ, ಸ್ಮೋಕಿ ಗ್ರೀನ್, ಸ್ಲೇಟ್ ಬ್ಲೂ, ಚಿಲ್ಲಿ ರೆಡ್ II, ಬ್ರಿಟಿಷ್ ರೇಸಿಂಗ್ ಗ್ರೀನ್, ಬ್ಲೇಜಿಂಗ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್.
ಇಂಟಿರೀಯರ್‌ಗಳು
2024 ಮಿನಿ ಕಂಟ್ರಿಮ್ಯಾನ್ ಇವಿಯ ಒಳಭಾಗವು ಹೊಚ್ಚ ಹೊಸದು ಮತ್ತು ಐಕಾನಿಕ್ ವೃತ್ತಾಕಾರದ ಥೀಮ್‌ನೊಂದಿಗೆ ಮುಂದುವರಿಯುತ್ತದೆ. ಇದರ ಡ್ಯಾಶ್‌ಬೋರ್ಡ್ 9.4-ಇಂಚಿನ ರೌಂಡ್ OLED ಟಚ್‌ಸ್ಕ್ರೀನ್‌ನಿಂದ ಕೇಂದ್ರಬಿಂದುವಾಗಿ ಹೈಲೈಟ್ ಆಗಿದೆ. ಈ ಕೇಂದ್ರೀಯ ಪರದೆಯು ಕೇವಲ ಇನ್ಫೋಟೈನ್‌ಮೆಂಟ್ ಯೂನಿಟ್ ಆಗಿರುವುದಿಲ್ಲ, ಆದರೆ ಡ್ರೈವರ್-ಸಂಬಂಧಿತ ಎಲ್ಲಾ ಮಾಹಿತಿಯನ್ನು ಪ್ರದರ್ಶಿಸುತ್ತದೆ ಮತ್ತು ಇಲ್ಲಿ ಯಾವುದೇ ಸಾಂಪ್ರದಾಯಿಕ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಇಲ್ಲ. ಒಂದು ಒಪ್ಶನಲ್ ಹೆಡ್ಸ್-ಅಪ್ ಡಿಸ್ಪ್ಲೇ ಒಂದು ಎಕ್ಸಸ್ಸರಿಯಾಗಿ ಲಭ್ಯವಿದೆ.
ಪಾರ್ಕಿಂಗ್ ಬ್ರೇಕ್, ಗೇರ್ ಸೆಲೆಕ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಎಕ್ಸ್‌ಪಿರೀಯೆನ್ಸ್ ಮೋಡ್ ಟಾಗಲ್ ಮತ್ತು ವಾಲ್ಯೂಮ್ ಕಂಟ್ರೋಲ್ ಅನ್ನು ಸೆಂಟ್ರಲ್ ಸ್ಕ್ರೀನ್‌ನ ಕೆಳಗಿರುವ ಟಾಗಲ್ ಬಾರ್ ಕನ್ಸೋಲ್‌ನಲ್ಲಿ ಅಂದವಾಗಿ ಆಯೋಜಿಸಲಾಗಿದೆ. ಗೇರ್ ಲಿವರ್ ಇದ್ದ ಜಾಗದಲ್ಲಿ ವೈರ್ ಲೆಸ್ ಚಾರ್ಜಿಂಗ್ ಟ್ರೇ ಅಳವಡಿಸಲಾಗಿದೆ. ಒಂದು ಪ್ಯಾನರೊಮಿಕ್ ಗ್ಲಾಸ್‌ನ ರೂಫ್ ಕ್ಯಾಬಿನ್‌ನ ಒಳಗೆ ಯೋಗ್ಯವಾದ ಬೆಳಕು ಮತ್ತು ಗಾಳಿಯನ್ನು ನೀಡುತ್ತದೆ. ಹಾಗೆಯೇ, ಹಿಂದಿನ ಸೀಟುಗಳನ್ನು 40:20:40 ವಿಭಜನೆಯಲ್ಲಿ ಮಡಚಿಕೊಂಡರೆ, ಬೂಟ್‌ಸ್ಪೇಸ್‌ಅನ್ನು 460 ರಿಂದ 1450 ಲೀಟರ್‌ಗಳಿಗೆ ಹೆಚ್ಚಿಸಬಹುದು.
ಫೀಚರ್‌ಗಳು ಮತ್ತು ಸುರಕ್ಷತೆ
ವೈಶಿಷ್ಟ್ಯಗಳ ವಿಷಯದಲ್ಲಿ, ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಎಡಿಷನ್ ಎಲೆಕ್ಟ್ರಿಕ್ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಡ್ರೈವರ್ ಸೀಟಿನಲ್ಲಿ ಮಸಾಜ್ ಫಂಕ್ಷನ್, ಆಂಬಿಯೆಂಟ್ ಲೈಟಿಂಗ್, ರಿಯರ್‌ವ್ಯೂ ಮಿರರ್ ಒಳಗೆ ಎಲೆಕ್ಟ್ರೋಕ್ರೊಮಿಕ್, ಆಟೋ ಎಸಿ ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಪಡೆಯುತ್ತದೆ.
ಸುರಕ್ಷತೆಯ ಪ್ರಕಾರ, ಇವಿಯು ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಸೂಟ್ ಅನ್ನು ಪಡೆಯುತ್ತದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಸ್ಟೀರಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇದು ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಪಡೆಯುತ್ತದೆ.
ಬ್ಯಾಟರಿ, ಮೋಟಾರ್ ಮತ್ತು ರೇಂಜ್
ಮಿನಿ ಎಲೆಕ್ಟ್ರಿಕ್ ಕಂಟ್ರಿಮ್ಯಾನ್‌ಗೆ ಜಾಗತಿಕವಾಗಿ E ಮತ್ತು SE ಎಂಬ ಎರಡು ಆಯ್ಕೆಗಳನ್ನು ಒದಗಿಸುತ್ತದೆ, ಎರಡೂ ಒಂದೇ 66.4 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಮಿನಿ ಕಂಟ್ರಿಮ್ಯಾನ್ E ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು ಅದು 204 ಪಿಎಸ್ ಮತ್ತು 250 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, WLTP ಕ್ಲೈಮ್ ಮಾಡಲಾದ 462 ಕಿ.ಮೀ. ರೇಂಜ್ ಅನ್ನು ಹೊಂದಿದೆ. ಇದು ಮುಂಭಾಗದ ಚಕ್ರಗಳನ್ನು ಚಾಲನೆ ಮಾಡುವ ಸಿಂಗಲ್ ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಇದು 8.6 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ತಲುಪುತ್ತದೆ ಮತ್ತು ಅದರ ಗರಿಷ್ಠ ವೇಗ 170 kmph ಆಗಿದೆ.
ಹೆಚ್ಚು ಶಕ್ತಿಯುತವಾದ SEಯು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ, ಪ್ರತಿ ಆಕ್ಸಲ್‌ನಲ್ಲಿ ಒಂದು, ಆಲ್-ವೀಲ್-ಡ್ರೈವ್ ಸಾಮರ್ಥ್ಯ ಮತ್ತು ಒಟ್ಟು 313 ಪಿಎಸ್ ಮತ್ತು 494 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಈ ಸೆಟಪ್ 433 ಕಿಮೀ ವರೆಗಿನ WLTP-ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ. ಪರ್ಫಾರ್ಮೆನ್ಸ್‌ನ ಅಂಕಿಅಂಶವನ್ನು ಗಮನಿಸುವಾಗ 0-100 kmph ವೇಗವನ್ನು ತಲುಪುವ ಸಮಯವು 5.6 ಸೆಕೆಂಡುಗಳಾಗಿದ್ದು, ಮತ್ತು 180 kmph ಟಾಪ್ ಸ್ಪೀಡ್ ಆಗಿದೆ.
ಎರಡೂ ಮೊಡೆಲ್‌ಗಳು 130 ಕಿ.ವ್ಯಾಟ್ DC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ, ಇದರಲ್ಲಿ 30 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಪ್ರತಿಸ್ಪರ್ಧಿಗಳು
ಆಲ್-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ ಪ್ರಸ್ತುತ ಲಭ್ಯವಿರುವ ಪೆಟ್ರೋಲ್ ಚಾಲಿತ ಮೊಡೆಲ್‌ಗಿಂತ ಹೆಚ್ಚಿನ ಬೆಲೆಯನ್ನು ನಿರೀಕ್ಷಿಸಲಾಗಿದೆ, ಪ್ರಸ್ತುತ ಇದರ ಬೆಲೆಗಳು 48.10 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಮಾಹಿತಿಗಾಗಿ, ಆಲ್-ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್‌ಇ ಕೊನೆಯದಾಗಿ 53.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಯನ್ನು ನಿಗದಿಪಡಿಸಲಾಗಿದೆ. ಇದು BMW iX1 ಮತ್ತು Volvo XC40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸಲಿದೆ.