ಬ್ರೇಕಿಂಗ್: ಭಾರತದಲ್ಲಿ ಕಾರುಗಳನ್ನು ತಯಾರಿಸಲು ವಾಪಾಸ್ ಬರುತ್ತಿರುವ Ford
ಫೋರ್ಡ್ ಯಡೋವರ್ ಗಾಗಿ shreyash ಮೂಲಕ ಸೆಪ್ಟೆಂಬರ್ 16, 2024 04:39 pm ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಚೆನ್ನೈನಲ್ಲಿ ತನ್ನ ಉತ್ಪಾದನಾ ಘಟಕವನ್ನು ಪುನಃ ತೆರೆಯಲು ಫೋರ್ಡ್ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು (LOI) ಕಳುಹಿಸಿದೆ, ಆದರೆ ಇದು ಕೇವಲ ರಫ್ತು ಮಾಡಲು ಮಾತ್ರ
ಇಂಟರ್ನೆಟ್ ನಲ್ಲಿ ಸಾಕಷ್ಟು ಊಹಾಪೋಹಗಳ ನಂತರ, ಫೋರ್ಡ್ ಮೋಟಾರ್ ಭಾರತಕ್ಕೆ ಮರಳಲು ನಿರ್ಧರಿಸಿದ್ದು, ಚೆನ್ನೈನಲ್ಲಿ ತನ್ನ ಉತ್ಪಾದನಾ ಘಟಕವನ್ನು ಮತ್ತೆ ತೆರೆಯಲು ನಿರ್ಧರಿಸಿದೆ. ಆದರೆ, ರಫ್ತ್ತು ಮಾಡಲು ಮಾತ್ರ ಪ್ಲಾಂಟ್ ಮತ್ತೆ ತೆರೆಯಲಿದೆ. ಅತ್ಯಂತ ಸ್ಪರ್ಧಾತ್ಮಕವಾದ ಭಾರತೀಯ ಕಾರ್ ಮಾರುಕಟ್ಟೆಯಲ್ಲಿ ಕಡಿಮೆ ಮಾರಾಟ ಮತ್ತು ಹಣಕಾಸಿನ ನಷ್ಟದಿಂದಾಗಿ 2021 ರಲ್ಲಿ ಅಮೇರಿಕನ್ ಬ್ರ್ಯಾಂಡ್ ಭಾರತದಲ್ಲಿ ತನ್ನ ಕಾರುಗಳ ಮಾರಾಟವನ್ನು ನಿಲ್ಲಿಸಿತು. ಫೆಬ್ರವರಿ 2022 ರಲ್ಲಿ 20 ಬ್ರಾಂಡ್‌ಗಳಿಗೆ ಸರ್ಕಾರದ PLI ಪ್ರೋತ್ಸಾಹಕ ಕಾರ್ಯಕ್ರಮದಲ್ಲಿ ಅದನ್ನು ಪಟ್ಟಿ ಮಾಡಿದ ನಂತರ ಜನರು ಫೋರ್ಡ್ ಭಾರತಕ್ಕೆ ಹಿಂತಿರುಗುವ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಫೋರ್ಡ್ ಎವರೆಸ್ಟ್ ಅನ್ನು ಭಾರತದಲ್ಲಿ ನೋಡಿದ ನಂತರ ಈ ಸುದ್ದಿಗೆ ಇನ್ನಷ್ಟು ಬಲ ಬಂದಿದೆ.
ಫೋರ್ಡ್ ಇಂಟರ್‌ನ್ಯಾಶನಲ್ ಮಾರ್ಕೆಟ್ಸ್ ಗ್ರೂಪ್‌ನ ಅಧ್ಯಕ್ಷರಾದ ಕೇ ಹಾರ್ಟ್ ಮಾತನಾಡಿ, "ಪ್ರಪಂಚದಾದ್ಯಂತ ಹೊಸ ಮಾರುಕಟ್ಟೆಗಳನ್ನು ತಲುಪಲು ತಮಿಳುನಾಡಿನಲ್ಲಿ ಲಭ್ಯವಿರುವ ಉತ್ಪಾದನಾ ಕೌಶಲ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ಭಾರತದಲ್ಲಿ ವ್ಯಾಪಾರ ಮಾಡುವ ನಮ್ಮ ಬದ್ಧತೆಯನ್ನು ನಾವು ಮತ್ತೊಮ್ಮೆ ತೋರಿಸಲು ಬಯಸುತ್ತೇವೆ."
ಭಾರತದಲ್ಲಿ ಫೋರ್ಡ್ ಮತ್ತೆ ಕಾರುಗಳನ್ನು ಮಾರಾಟ ಮಾಡಲು ಶುರುಮಾಡುತ್ತದೆಯೇ?
ನೀವು ಭಾರತದಲ್ಲಿ ಫೋರ್ಡ್ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಚೆನ್ನೈನಲ್ಲಿ ಉತ್ಪಾದನೆಯನ್ನು ಪುನರಾರಂಭಿಸಲು ತಮಿಳುನಾಡು ಸರ್ಕಾರಕ್ಕೆ ಫೋರ್ಡ್ ಉದ್ದೇಶ ಪತ್ರವನ್ನು (LOI) ಸಲ್ಲಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಫೋರ್ಡ್ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ. ಫೋರ್ಡ್ ಅದರ ಪ್ಲಾಂಟ್ ನಲ್ಲಿ ತಯಾರಿಸಲು ನೋಡುತ್ತಿರುವ ಕಾರುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಬಹುದು.
ಸದ್ಯಕ್ಕೆ, ಬ್ರ್ಯಾಂಡ್ ವಿದೇಶಕ್ಕೆ ಕಾರುಗಳನ್ನು ರಫ್ತ್ತು ಮಾಡುವತ್ತ ಮಾತ್ರ ಗಮನಹರಿಸುತ್ತದೆ. ಭಾರತದಲ್ಲಿ ಮತ್ತೆ ಕಾರುಗಳ ಮಾರಾಟ ಪ್ರಾರಂಭಿಸುವ ಬಗ್ಗೆ ಕಂಪನಿಯು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವ ಪ್ಲಾನ್
ಫೋರ್ಡ್ ಈಗ ಚೆನ್ನೈನಲ್ಲಿ 12,000 ಉದ್ಯೋಗಿಗಳನ್ನು ಹೊಂದಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 2,500 ರಿಂದ 3,000 ಜನರಿಗೆ ಉದ್ಯೋಗ ನೀಡಲು ನೋಡುತ್ತಿದೆ. ಫೋರ್ಡ್ ಈಗಾಗಲೇ ಗುಜರಾತ್‌ನ ಸನಂದ್‌ನಲ್ಲಿ ಎಂಜಿನ್ ಉತ್ಪಾದನಾ ಘಟಕವನ್ನು ಹೊಂದಿದೆ.
ಫೋರ್ಡ್ ಈ ಹಿಂದೆ ಏನು ಹೇಳಿಕೆ ನೀಡಿತ್ತು
ಫೋರ್ಡ್ 2021 ರಲ್ಲಿ ಭಾರತದಲ್ಲಿ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸಿದಾಗ, ಮಸ್ಟಾಂಗ್ ಸ್ಪೋರ್ಟ್ಸ್ ಕೂಪ್, ಮಸ್ಟಾಂಗ್ ಮ್ಯಾಕ್-e ಎಲೆಕ್ಟ್ರಿಕ್ SUV ಮತ್ತು ಬಹುಶಃ ರೇಂಜರ್ ಪಿಕಪ್‌ನಂತಹ ಮಾಡೆಲ್ ಗಳನ್ನು ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್ (CBU) ಗಳಾಗಿ ಭಾರತಕ್ಕೆ ತರುವುದಾಗಿ ಹೇಳಿತ್ತು. ಇತ್ತೀಚೆಗೆ, ಹೊಸ ಫೋರ್ಡ್ ಎವರೆಸ್ಟ್ (ಎಂಡೀವರ್ SUV) ಮತ್ತು ರೇಂಜರ್ ಪಿಕಪ್ ಭಾರತದಲ್ಲಿ ಕಾಣಿಸಿಕೊಂಡಿದ್ದು, ಫೋರ್ಡ್ ಶೀಘ್ರದಲ್ಲೇ ಅವುಗಳನ್ನು ಭಾರತಕ್ಕೆ ತರಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ.
ಫೋರ್ಡ್ ಭಾರತದಲ್ಲಿ ಮತ್ತೆ ಕಾರುಗಳನ್ನು ಲಾಂಚ್ ಮಾಡಬೇಕೇ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.