BYD e6 ಫೇಸ್‌ಲಿಪ್ಟ್‌ನ ಟೀಸರ್ ಔಟ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಬಿವೈಡಿ ಈ6 ಗಾಗಿ samarth ಮೂಲಕ ಆಗಸ್ಟ್ 30, 2024 07:28 pm ರಂದು ಪ್ರಕಟಿಸಲಾಗಿದೆ
- 74 Views
- ಕಾಮೆಂಟ್ ಅನ್ನು ಬರೆಯಿರಿ
ಆರಂಭದಲ್ಲಿ ಬಿವೈಡಿ ಇ6 ಅನ್ನು 2021ರಲ್ಲಿ ಕೇವಲ-ಫ್ಲೀಟ್ ಆಯ್ಕೆಯಾಗಿ ಪರಿಚಯಿಸಲಾಯಿತು, ಆದರೆ ನಂತರ ಖಾಸಗಿ ಖರೀದಿದಾರರಿಗೂ ಲಭ್ಯವಾಯಿತು
- ಬಿವೈಡಿ ಇ6 ಭಾರತೀಯ ಮಾರುಕಟ್ಟೆಯಲ್ಲಿ ವಾಹನ ತಯಾರಕರ ಮೊದಲ ಕಾರು ಆಗಿತ್ತು.
- ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಇದನ್ನು ಬಿವೈಡಿ M6 ಎಂದು ಕರೆಯಲಾಗುತ್ತದೆ, ಇದು ಇತ್ತೀಚೆಗೆ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ.
- ಆಪ್‌ಡೇಟ್ ಮಾಡಲಾದ ಮೊಡೆಲ್ ಹೊಸ ಎಲ್ಇಡಿ ಲೈಟಿಂಗ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 17-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
- ಇತರ ನಿರೀಕ್ಷಿತ ಆಪ್‌ಡೇಟ್‌ಗಳಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್ ಗ್ಲಾಸ್ ರೂಫ್ ಸೇರಿವೆ.
- ಜಾಗತಿಕವಾಗಿ, M6 55.4 ಕಿ.ವ್ಯಾಟ್ ಮತ್ತು 71.8 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇದು 530 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
- ಫೇಸ್‌ಲಿಫ್ಟೆಡ್ ಮಾಡೆಲ್ ಪ್ರಸ್ತುತ ಮೊಡೆಲ್‌ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ, ಪ್ರಸ್ತುತ ಇದರ ಬೆಲೆ 29.15 ಲಕ್ಷ ರೂ.ನಿಂದ (ಎಕ್ಸ್-ಶೋರೂಂ ದೆಹಲಿ) ಪ್ರಾರಂಭವಾಗಲಿದೆ.
BYD e6 ಅನ್ನು ನಮ್ಮ ಮಾರುಕಟ್ಟೆಯಲ್ಲಿ ಕಾರು ತಯಾರಕರ ಮೊದಲ ಕಾರು ಆಗಿ ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು ಮತ್ತು ಅಂದಿನಿಂದ ಇದು ಯಾವುದೇ ಪ್ರಮುಖ ಆಪ್‌ಡೇಟ್ ಅನ್ನು ಪಡೆದಿಲ್ಲ. ಈಗ, ಅದರ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದ ನಂತರ, BYD ಇಂಡಿಯಾವು ಶೀಘ್ರದಲ್ಲೇ ರಿಫ್ರೆಶ್ಡ್ ಎಲೆಕ್ಟ್ರಿಕ್ ಎಮ್‌ಪಿವಿಯ ಬಿಡುಗಡೆಯ ಸುಳಿವು ನೀಡಿದೆ. ಜಾಗತಿಕವಾಗಿ ಇದು ಬಿವೈಡಿ M6 ಆಗಿ ಲಭ್ಯವಿದೆ, ಇದು 6- ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಆದರೆ ಭಾರತದಲ್ಲಿ ಪ್ರಸ್ತುತ ಇ6 ಅನ್ನು 5-ಆಸನಗಳ ಸಂರಚನೆಯಲ್ಲಿ ಮಾತ್ರ ನೀಡಲಾಗುತ್ತದೆ. ಎಲೆಕ್ಟ್ರಿಕ್ ಎಮ್‌ಪಿವಿಯ ಭಾರತೀಯ ಮೊಡೆಲ್‌ನಲ್ಲಿ ಯಾವ ಫೀಚರ್‌ಗಳನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ಪರಿಶೀಲಿಸೋಣ.
ಎಕ್ಸ್‌ಟೀರಿಯರ್
ಒಟ್ಟಾರೆ ಬಾಹ್ಯ ಆಕೃತಿಯು ಒಂದೇ ಆಗಿರುತ್ತದೆ, ಆದರೆ ಇದು ನಯವಾದ ಮತ್ತು ಆಧುನಿಕ ನೋಟವನ್ನು ಹೊಂದಿರುತ್ತದೆ. ಮುಂಭಾಗದಲ್ಲಿ, ಇದು ಬಿವೈಡಿ Atto 3 ನಲ್ಲಿರುವಂತೆ ಪರಿಷ್ಕೃತ ಆಂತರಿಕ ಬೆಳಕಿನ ಅಂಶಗಳೊಂದಿಗೆ ಆಪ್‌ಡೇಟ್ ಮಾಡಲಾದ LED ಹೆಡ್‌ಲೈಟ್‌ಗಳಿಗೆ ವಿಸ್ತರಿಸುವ ಪೂರ್ಣ-ಅಗಲ ಸಿಲ್ವರ್ ಬಾರ್ ಅನ್ನು ಪಡೆಯುತ್ತದೆ. ಮುಂದೆ, ಬಂಪರ್‌ನಲ್ಲಿ ಇರಿಸಲಾದ ಕ್ಯಾಮೆರಾವನ್ನು ನೀವು ಗಮನಿಸಬಹುದು, ಇದು 360-ಡಿಗ್ರಿ ಸೆಟಪ್‌ನ ಭಾಗವಾಗಿದೆ ಮತ್ತು ಮುಂಭಾಗದಲ್ಲಿ ರಾಡಾರ್ ಆಗಿದೆ, ಇದು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ ಎಂದು ಸೂಚಿಸುತ್ತದೆ. ಇದು ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್‌ಗಳನ್ನು ಸಹ ಒಳಗೊಂಡಿದೆ. ಇದು ಕೆಳಗಿನ ಭಾಗದಲ್ಲಿ ಕ್ರೋಮ್ ಆಕ್ಸೆಂಟ್‌ಗಳೊಂದಿಗೆ ಬದಲಾವಣೆ ಮಾಡಿದ ಬಂಪರ್‌ಗಳನ್ನು ಪಡೆಯುತ್ತದೆ.
ಜಾಗತಿಕ ಮೊಡೆಲ್ 17-ಇಂಚಿನ ವೈ-ಸ್ಪೋಕ್ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, ಪರಿಷ್ಕೃತ ಎಲ್‌ಇಡಿ ಟೈಲ್ ಲೈಟ್ ಸೆಟಪ್‌ನಿಂದಾಗಿ ಎಮ್‌ಪಿವಿ ಈಗ ತೀಕ್ಷ್ಣವಾದ ನೋಟವನ್ನು ಹೊಂದಿದೆ. 'BYD' ಲೋಗೋವನ್ನು ಟೈಲ್‌ಗೇಟ್‌ನಲ್ಲಿ ಇರಿಸಲಾಗಿದೆ ಮತ್ತು ಟೈಲ್ ಲೈಟ್‌ಗಳನ್ನು ಕನೆಕ್ಟ್ ಮಾಡುವ ಕ್ರೋಮ್ ಸ್ಟ್ರಿಪ್ ಇರುತ್ತದೆ.
ಕ್ಯಾಬಿನ್, ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ
ಗ್ಲೋಬಲ್-ಸ್ಪೆಕ್ ಮೊಡೆಲ್‌ನ ಒಳಭಾಗದಲ್ಲಿ, ಇದು ವುಡನ್ ಇನ್ಸರ್ಟ್‌ನೊಂದಿಗೆ ನೀಡಲಾದ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್‌ನೊಂದಿಗೆ ಡ್ಯುಯಲ್-ಟೈಮ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಹೊಸ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ವೈಶಿಷ್ಟ್ಯಗೊಳಿಸಲು ಸೆಂಟರ್ ಕನ್ಸೋಲ್ ಅನ್ನು ಸ್ವಲ್ಪಮಟ್ಟಿಗೆ ಮಾರ್ಪಾಡು ಮಾಡಲಾಗಿದೆ. BYD ಇದಕ್ಕೆ ಹೆಚ್ಚು ಆಧುನಿಕವಾಗಿ ಕಾಣುವ ಸ್ಟೀರಿಂಗ್ ಚಕ್ರವನ್ನು ನೀಡಿದೆ, ಅದೇ ಟ್ವಿನ್-ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಮಧ್ಯದಲ್ಲಿ ಬಣ್ಣದ MID (ಮಲ್ಟಿ ಇಂಫೋರ್ಮೆಶನ್ ಡಿಸ್‌ಪ್ಲೇ)ಯೊಂದಿಗೆ ಉಳಿಸಿಕೊಂಡಿದೆ.
ಫೀಚರ್‌ಗಳ ವಿಷಯದಲ್ಲಿ, ಭಾರತೀಯ-ಸ್ಪೆಕ್ ದೊಡ್ಡ 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಸಿಸ್ಟಮ್ (ಪ್ರಸ್ತುತ ಮೊಡೆಲ್ 10.1-ಇಂಚಿನ ಸಿಸ್ಟಮ್‌ಅನ್ನು ಹೊಂದಿದೆ) ವೈರ್‌ಲೆಸ್ ಫೋನ್ ಚಾರ್ಜರ್, ಪನರೋಮಿಕ್ ಗ್ಲಾಸ್ ರೂಫ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳಂತಹ ಕೆಲವು ಫೀಚರ್‌ಗಳನ್ನು ಎರವಲು ಪಡೆಯಬಹುದು. ಹೆಚ್ಚುವರಿಯಾಗಿ ಇದು ಚಾಲಕನಿಗೆ 6-ವೇ ಚಾಲಿತ ಸೀಟ್ ಅನ್ನು ಮತ್ತು ಮುಂಭಾಗದ ಪ್ರಯಾಣಿಕರಿಗೆ 4-ವೇ ಚಾಲಿತ ಸೀಟ್ ಅನ್ನು ಸಹ ಪಡೆಯಬಹುದು.
ಸುರಕ್ಷತೆಯ ದೃಷ್ಟಿಯಿಂದ, ಫೇಸ್‌ಲಿಫ್ಟೆಡ್ ಬಿವೈಡಿ ಇ6 ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ISOFIX ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯಬಹುದು. ಮೇಲೆ ಹೇಳಿದಂತೆ, ಇದು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಸೆಂಟ್ರಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಸೇರಿದಂತೆ ADAS ಅನ್ನು ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿತ ಪವರ್‌ಟ್ರೇನ್
ಬಿವೈಡಿ ಇ6 ಅಂತಾರಾಷ್ಟ್ರೀಯವಾಗಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ, ಮೊದಲನೆಯದು 55.4 ಕಿ.ವ್ಯಾಟ್ ಪ್ಯಾಕ್ ಮತ್ತು ಎರಡನೇಯದು ಬಿವೈಡಿಯ ಬ್ಲೇಡ್ ಪ್ಯಾಕ್ ಆಗಿರುವ 71.8 ಕಿ.ವ್ಯಾಟ್. 55.4 ಕಿ.ವ್ಯಾಟ್ ಪ್ಯಾಕ್ ತನ್ನ ಇ-ಮೋಟಾರ್‌ನಿಂದ 163 ಪಿಎಸ್ ಅನ್ನು ಉತ್ಪಾದಿಸುತ್ತದೆ, ಆದರೆ 71.8 ಕಿವ್ಯಾಟ್ ಪ್ಯಾಕ್ 204 ಪಿಎಸ್ ಅನ್ನು ಉತ್ಪಾದಿಸುತ್ತದೆ. ಇದು 530 ಕಿಮೀ (NEDC) ರೇಂಜ್ ಅನ್ನು ಹೊಂದಿದೆ ಮತ್ತು ವೆಹಿಕಲ್-ಟು-ಲೋಡ್ (V2L) ಫಂಕ್ಷನ್ ಅನ್ನು ಒಳಗೊಂಡಿದೆ.
ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಫೇಸ್‌ಲಿಫ್ಟೆಡ್ ಬಿವೈಡಿ ಇ6 ಪ್ರಸ್ತುತ ಮೊಡೆಲ್‌ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ, ದೆಹಲಿಯಲ್ಲಿ ಪ್ರಸ್ತುತ ಇದರ ಬೆಲೆ 29.15 ಲಕ್ಷ ರೂ.ನಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ ಆದರೆ ಎಮ್‌ಪಿವಿಯು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಎಲೆಕ್ಟ್ರಿಕ್ ಪರ್ಯಾಯವಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: E6 ಆಟೋಮ್ಯಾಟಿಕ್