• English
  • Login / Register

ಈ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗಲಿರುವ EV ಕಾರುಗಳ ಪಟ್ಟಿ

published on ಸೆಪ್ಟೆಂಬರ್ 04, 2024 06:37 pm by anonymous for ಎಂಜಿ windsor ev

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಮುಂಬರುವ ಹಬ್ಬದ ಸೀಸನ್‌ನಲ್ಲಿ, ನಾವು ಎಮ್‌ಜಿಯ ಮೂರನೇ ಇವಿಯ ಪರಿಚಯವನ್ನು ಮಾತ್ರ ನೋಡುವುದಲ್ಲದೆ, ಇದರೊಂದಿಗೆ ಕೆಲವು ಪ್ರೀಮಿಯಂ ಆಲ್-ಎಲೆಕ್ಟ್ರಿಕ್ ಎಸ್‌ಯುವಿಗಳು ಬಿಡುಗಡೆಗೆ ಸಿದ್ಧವಾಗಿದೆ

Here’s A Look At All The Electric Cars Slated To Go On Sale This Festive Season

ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಯಲ್ಲಿ ಬೆಳೆಯುತ್ತಿವೆ ಮತ್ತು ಪ್ರತಿ ವರ್ಷವೂ ಭಾರತದಲ್ಲಿ ಇವುಗಳು ಹೆಚ್ಚು  ಜನಪ್ರಿಯತೆಯನ್ನು ಪಡೆಯುತ್ತಿದೆ. ಇವಿ ಚಾರ್ಜಿಂಗ್ ನೆಟ್‌ವರ್ಕ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದರೂ, ಅನೇಕ ಖರೀದಿದಾರರು ತಮ್ಮ ತ್ವರಿತ ವಿದ್ಯುತ್ ವಿತರಣೆ, ದೀರ್ಘಾವಧಿಯಲ್ಲಿ ಸಂಭಾವ್ಯ ಉಳಿತಾಯ ಮತ್ತು ತುಲನಾತ್ಮಕವಾಗಿ ಪರಿಸರ-ಸ್ನೇಹಿ ಅಂಶದ ಕಾರಣದಿಂದ ಇವಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ, ಟಾಟಾ ಕರ್ವ್‌ ಇವಿ 2024ರಲ್ಲಿ ದೊಡ್ಡ ಬಿಡುಗಡೆಯಾಗಿದೆ. ಹಬ್ಬ ಹರಿದಿನಗಳು ಬರುತ್ತಿರುವುದರಿಂದ, ನಮ್ಮ ಮಾರುಕಟ್ಟೆಯಲ್ಲಿ ಮಾರಾಟವಾಗಲಿರುವ ಅಗ್ರ ನಾಲ್ಕು ಇವಿಗಳ ವಿವರಗಳು ಇಲ್ಲಿದೆ.

ಮರ್ಸೀಡೀಸ್‌ ಮೇಬ್ಯಾಕ್‌ ಇಕ್ಯೂಎಸ್‌ 680 ಎಸ್‌ಯುವಿ

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 5 

ನಿರೀಕ್ಷಿತ ಬೆಲೆ: ರೂ 3.5 ಕೋಟಿ (ಎಕ್ಸ್ ಶೋರೂಂ)

Mercedes-Benz Maybach EQS 680 Front Left Side

ಮೊದಲಿಗೆ, ಮರ್ಸಿಡೀಸ್‌ ಬೆಂಝ್‌ ಭಾರತದಲ್ಲಿ ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಮೇಬ್ಯಾಕ್, ಇಕ್ಯೂಎಸ್‌ 680 ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದು ಕ್ರೋಮ್ ಸ್ಟ್ರಿಪ್‌ಗಳೊಂದಿಗೆ ದೊಡ್ಡ ಕಪ್ಪು ಪ್ಯಾನೆಲ್ ಗ್ರಿಲ್ ಮತ್ತು ವಿಶಿಷ್ಟವಾದ ಎರಡು-ಟೋನ್ ಪೇಂಟ್‌ವರ್ಕ್ ಅನ್ನು ಹೊಂದಿದೆ, ಇದು ಜಾಗತಿಕವಾಗಿ ಮಾರಾಟವಾಗುವ ಸ್ಟ್ಯಾಂಡರ್ಡ್‌ ಇಕ್ಯೂಎಸ್‌ ಎಸ್‌ಯುವಿಯಿಂದ ಪ್ರತ್ಯೇಕಿಸುತ್ತದೆ. ಒಳಭಾಗದಲ್ಲಿ, ಅಸಾಧಾರಣ ಫೀಚರ್‌ ಎಂದರೆ ಟ್ರಿಪಲ್ ಸ್ಕ್ರೀನ್ ಸೆಟಪ್ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಡ್ಯುಯಲ್ 11.6-ಇಂಚಿನ ಡಿಸ್‌ಪ್ಲೇಗಳು. 

ಅಂತರಾಷ್ಟ್ರೀಯ-ಮೊಡೆಲ್‌ ಇಕ್ಯೂಎಸ್‌ 680 ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ 658 ಪಿಎಸ್‌ ಮತ್ತು 950 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ, ಇದು 600 ಕಿ.ಮೀ.ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಮರ್ಸಿಡಿಸ್ ಇಂಡಿಯಾ-ಸ್ಪೆಕ್ ಮಾಡೆಲ್‌ಗಾಗಿ ಪವರ್‌ಟ್ರೇನ್ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಎಜಿ ವಿಂಡ್ಸರ್‌ ಇವಿ

ಬರ್ಬಿಡುಗಡೆ ದಿನಾಂಕ: ಸೆಪ್ಟೆಂ 11, 2024

ನಿರೀಕ್ಷಿತ ಬೆಲೆ: ರೂ 20 ಲಕ್ಷ (ಎಕ್ಸ್ ಶೋ ರೂಂ)

MG Windsor EV in Ladakh

ವಿಂಡ್ಸರ್ ಇವಿ ಬಿಡುಗಡೆಯೊಂದಿಗೆ, ಎಮ್‌ಜಿಯು ಭಾರತದಲ್ಲಿ ತನ್ನ ಮೂರನೇ ಆಲ್-ಎಲೆಕ್ಟ್ರಿಕ್ ಕೊಡುಗೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಕಾರು ತಯಾರಕರು ಈಗಾಗಲೇ ಅದರ ಹೊರಭಾಗ ಮತ್ತು ಒಳಭಾಗದ ಟೀಸರ್‌ ಅನ್ನು ಬಿಡುಗಡೆ ಮಾಡಿದ್ದಾರೆ, ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು, 18-ಇಂಚಿನ ಅಲಾಯ್‌ ವೀಲ್‌ಗಳು, ಸ್ಥಿರವಾದ ಪನರೋಮಿಕ್‌ ಗ್ಲಾಸ್‌ ರೂಫ್‌ ಮತ್ತು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಪ್ರಮುಖ ಫೀಚರ್‌ಗಳನ್ನು ಖಚಿತಪಡಿಸಿದ್ದಾರೆ.

ಇದು 136 ಪಿಎಸ್‌ ಮತ್ತು 200 ಎನ್‌ಎಮ್‌ ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 50.6 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇಂಡೋನೇಷ್ಯಾ-ಸ್ಪೆಕ್ ಆವೃತ್ತಿಯು 460 ಕಿಮೀ ರೇಂಜ್‌ ಅನ್ನು ನೀಡುತ್ತದೆ ಎಂದು ಕ್ಲೈಮ್‌ ಮಾಡಲಾಗಿದೆ, ಆದರೆ ಭಾರತೀಯ ಮೊಡೆಲ್‌ ARAI ಪರೀಕ್ಷೆಯ ನಂತರ ಹೆಚ್ಚಿದ ರೆಂಜ್‌ ಅನ್ನು ಪಡೆಯಬಹುದು. 

ಇದನ್ನೂ ಓದಿt: MG Windsor EVಯ ಹೊರಭಾಗದ ವಿನ್ಯಾಸದ ಮತ್ತೊಂದು ಟೀಸರ್‌ ಔಟ್‌

ಕಿಯಾ ಇವಿ9

ಬಿಡುಗಡೆ ದಿನಾಂಕ: ಅಕ್ಟೋಬರ್ 3, 2024

ನಿರೀಕ್ಷಿತ ಬೆಲೆ: 80 ಲಕ್ಷ ರೂ.(ಎಕ್ಸ್ ಶೋರೂಂ)

Kia EV9 front

ಕಿಯಾ ತನ್ನ ಪ್ರಮುಖ ಆಲ್-ಎಲೆಕ್ಟ್ರಿಕ್ ಕೊಡುಗೆಯನ್ನು ಭಾರತೀಯ ಮಾರುಕಟ್ಟೆಗಾಗಿ ಅಕ್ಟೋಬರ್‌ನಲ್ಲಿ ಇವಿ 9 ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದು ಇವಿ6 ಜೊತೆಗೆ ಮಾರಾಟವಾಗಲಿದೆ ಮತ್ತು ಬಾಕ್ಸ್, ಉಬ್ಬಿದ ವಿನ್ಯಾಸವನ್ನು ಹೊಂದಿದೆ. ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ 12.3-ಇಂಚಿನ ಸ್ಕ್ರೀನ್ ಸೆಟಪ್ (ಒಂದು ಡ್ರೈವರ್ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ), 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್ ಮತ್ತು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌(ADAS) ಅನ್ನು ಪಡೆಯುತ್ತದೆ.

ಜಾಗತಿಕವಾಗಿ, ಇದು 76.1 ಕಿ.ವ್ಯಾಟ್‌ ಮತ್ತು 99.8 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ, 541 ಕಿಮೀ ವರೆಗೆ ರೇಂಜ್‌ ಅನ್ನು ನೀಡಬಹುದೆಂದು ಕ್ಲೈಮ್‌ ಮಾಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದನ್ನು ಹಿಂಬದಿ-ಚಕ್ರ-ಡ್ರೈವ್ (ರಿಯರ್‌-ವೀಲ್‌-ಡ್ರೈವ್‌) ಮತ್ತು ಆಲ್-ವೀಲ್-ಡ್ರೈವ್ (AWD) ಎರಡೂ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ಫೇಸ್‌ಲಿಫ್ಟ್ ಮಾಡಲಾದ ಬಿವೈಡಿ ಇ6

ಬಿಡುಗಡೆ ದಿನಾಂಕ: ಘೋಷಿಸಲಾಗಿಲ್ಲ

ನಿರೀಕ್ಷಿತ ಬೆಲೆ: ನಿಗದಿಪಡಿಸಲಾಗಿಲ್ಲ

BYD e6 Facelift Front

ಚೀನಾದ ವಾಹನ ತಯಾರಕ ಕಂಪೆನಿಯಾದ ಬಿವೈಡಿ ಭಾರತದಲ್ಲಿ ತನ್ನ ಫೇಸ್‌ಲಿಫ್ಟೆಡ್ ಇ6 ನ ಟೀಸರ್‌ನ ಬಿಡುಗಡೆ ಮಾಡಿದೆ. ಆಪ್‌ಡೇಟ್‌ ಮಾಡಲಾದ ಆಲ್-ಎಲೆಕ್ಟ್ರಿಕ್ ಎಮ್‌ಪಿವಿ ಈಗಾಗಲೇ ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ ಮತ್ತು ಹೊಸ ಎಲ್‌ಇಡಿ ಲೈಟಿಂಗ್ ಮತ್ತು ಡ್ಯುಯಲ್-ಟೋನ್ 17-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ರಿಫ್ರೆಶ್ ಮಾಡಿದ ಶೈಲಿಯನ್ನು ಹೊಂದಿದೆ. ಫೀಚರ್‌ನ ಹೈಲೈಟ್‌ಗಳು 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಮತ್ತು ಪನರೋಮಿಕ್‌ ಗ್ಲಾಸ್‌ ರೂಫ್‌ ಅನ್ನು ಒಳಗೊಂಡಿವೆ.

ಇ6 ನ ಅಂತಾರಾಷ್ಟ್ರೀಯ-ಸ್ಪೆಕ್‌ ಮೊಡೆಲ್‌ಗಳನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, ಅವುಗಳೆಂದರೆ, 55.4 ಕಿ.ವ್ಯಾಟ್‌ ಬ್ಯಾಟರಿಯನ್ನು 163 ಪಿಎಸ್‌ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ ಮತ್ತು 71.8 ಕಿ.ವ್ಯಾಟ್‌ ಬ್ಯಾಟರಿಯನ್ನು 204 ಪಿಎಸ್‌ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಎರಡನೆಯದು 530 ಕಿಮೀ.ಯಷ್ಟು ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಹೊಂದಿದೆ ಮತ್ತು ವಾಹನದಿಂದ ಪವರ್‌ಅನ್ನು ಲೋಡ್ ಮಾಡುವ ಸಾಮರ್ಥ್ಯಗಳನ್ನು ಹೊಂದಿದೆ.

ಮೇಲೆ ತಿಳಿಸಿದ ಯಾವ ಮೊಡೆಲ್‌ಗಳ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ ಎಂಬುದರ ಕುರಿತು ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ. 

 ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on M ಜಿ windsor ev

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ವೋಲ್ವೋ ಇಎಕ್ಸ್‌90
    ವೋಲ್ವೋ ಇಎಕ್ಸ್‌90
    Rs.1.50 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪಟೆಂಬರ್, 2024
  • ಕಿಯಾ ಇವಿ9
    ಕಿಯಾ ಇವಿ9
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • BYD eMAX 7
    BYD eMAX 7
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಮರ್ಸಿಡಿಸ್ eqs ಎಸ್ಯುವಿ
    ಮರ್ಸಿಡಿಸ್ eqs ಎಸ್ಯುವಿ
    Rs.2 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
×
We need your ನಗರ to customize your experience