ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ 5 ಕಾರುಗಳ ವಿವರಗಳು
ಕಿಯಾ ಕಾರ್ನಿವಲ್ ಗಾಗಿ anonymous ಮೂಲಕ ಸೆಪ್ಟೆಂಬರ್ 30, 2024 08:53 pm ರಂದು ಪ್ರಕಟಿಸಲಾಗಿದೆ
- 122 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ತಿಂಗಳು ನಮ್ಮ ಮಾರುಕಟ್ಟೆಗೆ ಒಂದೆರಡು ಹೊಸ ಮೊಡೆಲ್‌ಗಳನ್ನು ಪರಿಚಯಿಸುವುದರೊಂದಿಗೆ, ಅಸ್ತಿತ್ವದಲ್ಲಿರುವ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳು ಮಾರುಕಟ್ಟೆಗೆ ಬರಲಿದೆ
ಮಹೀಂದ್ರಾ ಥಾರ್ ರೋಕ್ಸ್‌ನಂತಹ ಬಹುನಿರೀಕ್ಷಿತ ಮೊಡೆಲ್‌ಗಳಿಂದ ಹಿಡಿದು 500 ಸೀಮಿತ ಎಡಿಷನ್‌ನ 1 ಬಿಎಮ್‌ಡಬ್ಲ್ಯೂ ಎಕ್ಸ್‌ಎಮ್ ಲೇಬಲ್ ರೆಡ್‌ನವರೆಗೆ, ಸೆಪ್ಟೆಂಬರ್ ತಿಂಗಳಿನಲ್ಲಿ ನಮಗೆ ಅನೇಕ ಹೊಸ ಕಾರುಗಳ ಬಿಡುಗಡೆಗೆ ಸಾಕ್ಷಿಯಾಗಿದ್ದೇವೆ. ಅಕ್ಟೋಬರ್ ಅಷ್ಟೇನು ಬ್ಯೂಸಿ ತಿಂಗಳು ಆಗದಿದ್ದರೂ, ಹಬ್ಬದ ಸೀಸನ್‌ನ ಲಾಭ ಪಡೆಯಲು ವಿವಿಧ ಸೆಗ್ಮೆಂಟ್‌ಗಳ ಕಾರು ತಯಾರಕರು ಹೊಸ ಲಾಂಚ್‌ಗಳನ್ನು ಸಿದ್ಧಪಡಿಸಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ.
2024ರ ಕಿಯಾ ಕಾರ್ನೀವಲ್
ಬಿಡುಗಡೆ ದಿನಾಂಕ: ಅಕ್ಟೋಬರ್ 3
ನಿರೀಕ್ಷಿತ ಬೆಲೆ: 40 ಲಕ್ಷ ರೂ.
ಕಿಯಾವು ಅಕ್ಟೋಬರ್ 3ರಂದು ಭಾರತದಲ್ಲಿ ಎರಡು ಮೊಡೆಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಅವುಗಳಲ್ಲಿ ಒಂದು 2024ರ ಕಾರ್ನಿವಲ್ ಆಗಿದೆ. ಕಾರು ತಯಾರಕರು ಈಗಾಗಲೇ ಪ್ರೀಮಿಯಂ ಎಮ್‌ಪಿವಿಯನ್ನು ಅನ್ನು ಅನಾವರಣಗೊಳಿಸಿದ್ದಾರೆ, ಅದರ ಬುಕಿಂಗ್ ಪ್ರಸ್ತುತ ನಡೆಯುತ್ತಿದೆ. ಇದರ ಬೆಲೆ 40 ಲಕ್ಷ ರೂ .ನಿಂದ ಪ್ರಾರಂಭವಾಗಬಹುದೆಂದು (ಎಕ್ಸ್ ಶೋ ರೂಂ) ನಿರೀಕ್ಷಿಸಲಾಗಿದೆ ಮತ್ತು ಅದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
2024ರ ಕಾರ್ನಿವಲ್ ಲಿಮೋಸಿನ್ ಮತ್ತು ಲಿಮೋಸಿನ್ ಪ್ಲಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ, ಎರಡನ್ನು ಏಳು-ಸೀಟರ್ ವಿನ್ಯಾಸದೊಂದಿಗೆ ಮಾತ್ರ ನೀಡಲಾಗುತ್ತದೆ. ಪ್ರಮುಖ ಫೀಚರ್‌ಗಳಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಪವರ್ ಮೋಡ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಸೇರಿವೆ. ಕಾರ್ನಿವಲ್ 193 ಪಿಎಸ್/441 ಎನ್‌ಎಮ್ 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು ಮಾರುತಿ ಇನ್ವಿಕ್ಟೊ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್‌ಗೆ ಪ್ರೀಮಿಯಂ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ಕಿಯಾ ಇವಿ9
ಬಿಡುಗಡೆ ದಿನಾಂಕ: ಅಕ್ಟೋಬರ್ 3
ನಿರೀಕ್ಷಿತ ಬೆಲೆ: 80 ಲಕ್ಷ ರೂ.
ಕಾರ್ನಿವಲ್ ಜೊತೆಗೆ ಕಿಯಾವು ಭಾರತದಲ್ಲಿ ತನ್ನ ಅತ್ಯಂತ ದುಬಾರಿ ಆಲ್-ಎಲೆಕ್ಟ್ರಿಕ್ ಕಾರು ಆಗಿರುವ ಇವಿ9 ಅನ್ನು ಬಿಡುಗಡೆಗೊಳಿಸಲಿದೆ. ಇದನ್ನು ಸಂಪೂರ್ಣವಾಗಿ ಆಮದು ಮಾಡಲಾದ ಮೊಡೆಲ್ ಆಗಿ ಮಾರಾಟ ಮಾಡಲಾಗುವುದು ಮತ್ತು ಇದರ ಬೆಲೆಯು ಸುಮಾರು 80 ಲಕ್ಷ ರೂ.(ಎಕ್ಸ್ ಶೋರೂಂ) ಇರುವ ನಿರೀಕ್ಷೆಯಿದೆ. ಆಯ್ದ ಡೀಲರ್‌ಶಿಪ್‌ಗಳಲ್ಲಿ ಎಸ್‌ಯುವಿಯನ್ನು ಅನಧಿಕೃತವಾಗಿ 10 ಲಕ್ಷ ರೂ.ಗೆ ಮುಂಗಡವಾಗಿ ಬುಕ್ ಮಾಡಬಹುದು.
ಕಿಯಾವು ಇವಿ9 ಅನ್ನು 99.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ 384 ಪಿಎಸ್ ಮತ್ತು 700 ಎನ್‌ಎಮ್ ಉತ್ಪಾದಿಸುವ ಡ್ಯುಯಲ್-ಮೋಟರ್ ಸೆಟಪ್‌ನೊಂದಿಗೆ 561 ಕಿಮೀ.ಯಷ್ಟು ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡುತ್ತದೆ. ಇದು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎಲ್ಲಾ ಸಾಲುಗಳಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಸೀಟ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಬಿಡುಗಡೆಯಾದಾಗ, ಇದು ಆಡಿ ಕ್ಯೂ8 ಇ-ಟ್ರಾನ್, ಬಿಎಂಡಬ್ಲ್ಯು ಐಎಕ್ಸ್ ಮತ್ತು ಮರ್ಸಿಡಿಸ್-ಬೆಂಜ್ ಇಕ್ಯೂಇ ಎಸ್‌ಯುವಿಗಳಂತಹ ಪ್ರೀಮಿಯಂ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ: KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue
ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್
ಬಿಡುಗಡೆ ದಿನಾಂಕ: ಅಕ್ಟೋಬರ್ 4
ನಿರೀಕ್ಷಿತ ಬೆಲೆ: 6.30 ಲಕ್ಷ ರೂ.
ನಿಸ್ಸಾನ್ 2024 ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದೆ, ಇದನ್ನು ಅಕ್ಟೋಬರ್ 4 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೊಸ ಫೀಚರ್‌ಗಳನ್ನು ಒಳಗೊಂಡಿರುವ ಆಪ್‌ಡೇಟ್ ಮಾಡಲಾದ ಕ್ಯಾಬಿನ್‌ನೊಂದಿಗೆ ಸ್ಟೈಲಿಂಗ್ ಆಪ್‌ಡೇಟ್‌ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪವರ್‌ಟ್ರೇನ್ ವಿಷಯದಲ್ಲಿ, ನಿಸ್ಸಾನ್ 2024 ಮ್ಯಾಗ್ನೈಟ್ ಅನ್ನು ಅದೇ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಪ್ರಸ್ತುತ ಲಭ್ಯವಿರುವ ಎಂಜಿನ್‌ಗಳು 72 ಪಿಎಸ್ 1-ಲೀಟರ್ ನ್ಯಾಚುರಲಿ-ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 100 ಪಿಎಸ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್. ಎರಡೂ ಎಂಜಿನ್ ಆಯ್ಕೆಗಳು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಗಳೊಂದಿಗೆ ಲಭ್ಯವಿರುತ್ತವೆ. ಬೆಲೆಯ ಪ್ರಕಾರ, ಆಪ್‌ಡೇಟ್ ಮಾಡಲಾದ ಮ್ಯಾಗ್ನೈಟ್ ಪ್ರಸ್ತುತ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ, ಇದು ಪ್ರಸ್ತುತ 5.99 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಬೆಲೆಯನ್ನು ಹೊಂದಿದೆ.
ಬಿವೈಡಿ ಇಮ್ಯಾಕ್ಸ್7
ಬಿಡುಗಡೆ ದಿನಾಂಕ: ಅಕ್ಟೋಬರ್ 8
ನಿರೀಕ್ಷಿತ ಬೆಲೆ: 30 ಲಕ್ಷ ರೂ.
ಫೇಸ್‌ಲಿಫ್ಟೆಡ್ ಬಿವೈಡಿ ಇ6 ಅಥವಾ ಇಮ್ಯಾಕ್ಸ್ 7 ಅಕ್ಟೋಬರ್ 8ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿವೈಡಿ ಎಲೆಕ್ಟ್ರಿಕ್ ಎಮ್‌ಪಿವಿಯ ಮೊದಲ 1,000 ಬುಕಿಂಗ್‌ಗಳಿಗೆ ವಿಶೇಷ ಪ್ರಯೋಜನಗಳನ್ನು ಘೋಷಿಸಿದೆ. ಇದು 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಪನರೋಮಿಕ್ ಗ್ಲಾಸ್ ರೂಫ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಆಸನಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಲೆವೆಲ್-2 ADAS ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಜಾಗತಿಕವಾಗಿ, ಇದು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇದು 530 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ, ಆದರೆ ಭಾರತ-ಸ್ಪೆಕ್ ಪವರ್‌ಟ್ರೇನ್ ವಿವರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಇದನ್ನೂ ಓದಿ: ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಎರಡು ಸನ್‌ರೂಫ್ ಆಯ್ಕೆ ಈಗ ಟಾಟಾ ನೆಕ್ಸಾನ್‌ನಲ್ಲಿ ಕೂಡ ಲಭ್ಯ
0 out of 0 found this helpful