Login or Register ಅತ್ಯುತ್ತಮ CarDekho experience ಗೆ
Login

BYD Seal ಪ್ರೀಮಿಯಂ ರೇಂಜ್ ವರ್ಸಸ್‌ Hyundai Ioniq 5: ವಿಶೇಷಣಗಳ ಹೋಲಿಕೆ

ಬಿವೈಡಿ ಸೀಲ್ ಗಾಗಿ shreyash ಮೂಲಕ ಮೇ 02, 2024 11:40 am ರಂದು ಮಾರ್ಪಡಿಸಲಾಗಿದೆ

ಸೀಲ್ ಮತ್ತು ಅಯೋನಿಕ್ 5 ಎರಡೂ ವೈಶಿಷ್ಟ್ಯ-ಭರಿತ ಇವಿಗಳಾಗಿವೆ, ಆದರೂ ಸೀಲ್ ತನ್ನ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಹೆಚ್ಚಿನ ಪರ್ಫಾರ್ಮೆನ್ಸ್‌ ಅನ್ನು ನೀಡುತ್ತದೆ

ನೀವು 50 ಲಕ್ಷಕ್ಕಿಂತ ಕಡಿಮೆ ಬೆಲೆಯ ಪ್ರೀಮಿಯಂ ಇವಿಗಾಗಿ ಹುಡುಕುತ್ತಿದ್ದರೆ, ಇತ್ತೀಚೆಗೆ ಬಿಡುಗಡೆಯಾದ BYD ಸೀಲ್ ಮತ್ತು ಹ್ಯುಂಡೈ Ioniq 5 ನಂತಹ ಒಂದೆರಡು ಆಯ್ಕೆಗಳನ್ನು ನೀವು ಈಗ ಹೊಂದಿದ್ದೀರಿ. ಬಿವೈಡಿ ಸೀಲ್ ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ ಆಗಿದ್ದರೆ, ಐಯೋನಿಕ್ 5 ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಕ್ರಾಸ್ಒವರ್ ಆಗಿದೆ. ಸೀಲ್‌ನ ಮಿಡ್-ಸ್ಪೆಕ್ ಪ್ರೀಮಿಯಂ ರೇಂಜ್ ಆವೃತ್ತಿಯು ಹ್ಯುಂಡೈನ ಈ ಇವಿಗೆ ಹತ್ತಿರದ ಬೆಲೆಯನ್ನು ಹೊಂದಿದೆ. ಬ್ರೋಷರ್‌ನಲ್ಲಿರುವ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಪರಿಭಾಷೆಯಲ್ಲಿ ಅವುಗಳನ್ನು ಹೋಲಿಕೆ ಮಾಡೋಣ, ಆದರೆ ಮೊದಲು, ಅವುಗಳ ಬೆಲೆಗಳು ಹೇಗಿವೆ ಎಂಬುದು ಇಲ್ಲಿದೆ.

ಬೆಲೆ

BYD ಸೀಲ್ ಪ್ರೀಮಿಯಂ ರೇಂಜ್‌

ಹುಂಡೈ ಐಯೋನಿಕ್ 5

45.55 ಲಕ್ಷ ರೂ.

46.05 ಲಕ್ಷ ರೂ.

  • BYD ಸೀಲ್‌ನ ಪ್ರೀಮಿಯಂ ರೇಂಜ್‌ ಆವೃತ್ತಿಯು ಹ್ಯುಂಡೈ ಐಯೋನಿಕ್ 5 ಗಿಂತ 50,000 ರೂ.ನಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಐಯೋನಿಕ್ 5 ಅನ್ನು ಒಂದೇ ಆವೃತ್ತಿಯಲ್ಲಿ ಮಾತ್ರ ನೀಡಲಾಗುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಆಯಾಮಗಳು

ಮೊಡೆಲ್‌ಗಳು

ಬಿವೈಡಿ ಸೀಲ್

ಹುಂಡೈ ಐಯೋನಿಕ್ 5

ಉದ್ದ

4800 ಮಿ.ಮೀ.

4635 ಮಿ.ಮೀ.

ಅಗಲ

1875 ಮಿ.ಮೀ.

1890 ಮಿ.ಮೀ.

ಎತ್ತರ

1460 ಮಿ.ಮೀ.

1625 ಮಿ.ಮೀ.

ವ್ಹೀಲ್‌ಬೇಸ್

2920 ಮಿ.ಮೀ.

3000 ಮಿ.ಮೀ.

  • ಬಿವೈಡಿ ಸೀಲ್ ಸೆಡಾನ್ ಆಗಿರುವುದರಿಂದ, ಹ್ಯುಂಡೈ ಐಯೋನಿಕ್ 5 ಗಿಂತ 165 ಮಿ.ಮೀ.ನಷ್ಟು ಉದ್ದವಾಗಿದೆ. ಆದರೆ, ಐಯೋನಿಕ್ 5 ಸೀಲ್‌ಗಿಂತ 15 ಮಿ.ಮೀ ನಷ್ಟು ಜಾಸ್ತಿ ಅಗಲವಿದೆ ಮತ್ತು 165 ಮಿ.ಮೀ ನಷ್ಟು ಜಾಸ್ತಿ ಎತ್ತರವಾಗಿದೆ.

  • ಉದ್ದದ ಹೊರತಾಗಿಯೂ, ಬಿವೈಡಿ ಸೀಲ್‌ನ ವ್ಹೀಲ್‌ಬೇಸ್ ಹ್ಯುಂಡೈ ಐಯೊನಿಕ್ 5 ಗಿಂತ 80 ಮಿ.ಮೀ ನಷ್ಟು ಚಿಕ್ಕದಾಗಿದೆ.

  • ಕ್ಯಾಬಿನ್ ಸ್ಥಳಾವಕಾಶದ ವಿಷಯದಲ್ಲಿ, ಹ್ಯುಂಡೈನ ಇವಿಯು BYD ಎಲೆಕ್ಟ್ರಿಕ್ ಸೆಡಾನ್‌ಗಿಂತ ಪ್ರಯೋಜನವನ್ನು ಹೊಂದಿರಬಹುದು ಎಂದು ಊಹಿಸಬಹುದು.

ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್

ಮೊಡೆಲ್‌ಗಳು

BYD ಸೀಲ್ ಪ್ರೀಮಿಯಂ ರೇಂಜ್‌

ಹುಂಡೈ ಐಯೋನಿಕ್ 5

ಬ್ಯಾಟರಿ ಪ್ಯಾಕ್

82.56 ಕಿ.ವ್ಯಾಟ್‌

72.6 ಕಿ.ವ್ಯಾಟ್‌

ಡ್ರೈವ್ ಟೈಪ್‌

ರಿಯರ್‌ ವೀಲ್‌ ಡ್ರೈವ್‌

ರಿಯರ್‌ ವೀಲ್‌ ಡ್ರೈವ್‌

ಪವರ್‌

313 ಪಿಎಸ್‌

217 ಪಿಎಸ್‌

ಟಾರ್ಕ್

360 ಎನ್‌ಎಮ್‌

350 ಎನ್‌ಎಮ್‌

ಕ್ಲೈಮ್ ಮಾಡಲಾದ ರೇಂಜ್‌

650 ಕಿ.ಮೀ.

631 ಕಿ.ಮೀ

  • ಮಿಡ್-ಸ್ಪೆಕ್ ಬಿವೈಡಿ ಸೀಲ್ ಹ್ಯುಂಡೈ ಐಯೋನಿಕ್ 5 ಗಿಂತ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಆದರೆ ಕ್ಲೈಮ್ ಮಾಡಲಾದ ರೇಂಜ್‌ ಕೇವಲ 19 ಕಿ.ಮೀ ನಷ್ಟು ಮಾತ್ರ ಹೆಚ್ಚಿದೆ.

  • ಸೀಲ್ ಎಲೆಕ್ಟ್ರಿಕ್ ಸೆಡಾನ್ ಐಯೋನಿಕ್ 5 ಗಿಂತ 96 ಪಿಎಸ್‌ನಷ್ಟು ಹೆಚ್ಚಿನ ಪವರ್‌ ಅನ್ನು ನೀಡುತ್ತದೆ. ಅದಾಗಿಯೂ ಎರಡೂ ಇವಿಗಳ ಟಾರ್ಕ್ ಔಟ್‌ಪುಟ್ ನಡುವಿನ ವ್ಯತ್ಯಾಸವು ಕೇವಲ 10 ಎನ್‌ಎಮ್‌ ಆಗಿದೆ, ಸೀಲ್ ಹೆಚ್ಚಿನ ಟಾರ್ಕ್ ಔಟ್‌ಪುಟ್ ಅನ್ನು ಹೊಂದಿದೆ.

  • ಇಲ್ಲಿ ಎರಡೂ EVಗಳು ರಿಯರ್‌ ವೀಲ್‌ ಡ್ರೈವ್‌ ಮಾಡುವ ಏಕೈಕ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿವೆ.

ಇದನ್ನು ಸಹ ನೋಡಿ: ಪ್ರೊಡಕ್ಷನ್-ಸ್ಪೆಕ್ Mercedes-Benz EQGನ ವಿವರಗಳು ಲೀಕ್! ನಾಲ್ಕು ಗೇರ್‌ಬಾಕ್ಸ್‌ಗಳ ಸೇರ್ಪಡೆಯೊಂದಿಗೆ 1,000 Nm ಗಿಂತ ಹೆಚ್ಚು ಟಾರ್ಕ್ ಉತ್ಪಾದಿಸಬಲ್ಲ ಆಲ್-ಎಲೆಕ್ಟ್ರಿಕ್ G-ಕ್ಲಾಸ್

ಚಾರ್ಜಿಂಗ್‌

BYD ಸೀಲ್ ಪ್ರೀಮಿಯಂ ರೇಂಜ್‌

ಹುಂಡೈ ಐಯೋನಿಕ್ 5

ಬ್ಯಾಟರಿ ಪ್ಯಾಕ್

82.56 ಕಿ.ವ್ಯಾ

72.6 ಕಿ.ವ್ಯಾ

ಎಸಿ ಚಾರ್ಜರ್

7 ಕಿ.ವ್ಯಾ

11 ಕಿ.ವ್ಯಾ

ಡಿಸಿ ಫಾಸ್ಟ್ ಚಾರ್ಜರ್

150 ಕಿ.ವ್ಯಾ

150 ಕಿ.ವ್ಯಾ ,350 ಕಿ.ವ್ಯಾ

  • ಬಿವೈಡಿ ಸೀಲ್‌ಗೆ ಹೋಲಿಸಿದರೆ, ಹ್ಯುಂಡೈ ಐಯೋನಿಕ್ 5 ಸ್ಪೀಡ್‌ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ, ಇದರಲ್ಲಿ 350 ಕಿ.ವ್ಯಾಟ್‌ DC ಫಾಸ್ಟ್ ಚಾರ್ಜಿಂಗ್ ಸೇರಿದೆ.

  • AC ಫಾಸ್ಟ್ ಚಾರ್ಜಿಂಗ್ ವಿಷಯದಲ್ಲಿಯೂ ಸಹ, ಐಯೋನಿಕ್ 5 ಚಾರ್ಜ್ ಮಾಡಲು ಸೀಲ್‌ಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ಹ್ಯುಂಡೈ ಇವಿ ಸಹ ಚಿಕ್ಕ ಬ್ಯಾಟರಿಯನ್ನು ಹೊಂದಿದೆ ಆದ್ದರಿಂದ 0-100 ಪ್ರತಿಶತದಷ್ಟು ಚಾರ್ಜಿಂಗ್ ವೇಗವಾಗಿರಬೇಕು.

  • ಇಲ್ಲಿರುವ ಎರಡೂ ಇವಿಗಳು 150 ಕಿ.ವ್ಯಾಟ್‌ ಡಿಸಿ ಸ್ಪೀಡ್‌ ಚಾರ್ಜಿಂಗ್ ಆಯ್ಕೆಯನ್ನು ಸಹ ಬೆಂಬಲಿಸುತ್ತವೆ.

ವೈಶಿಷ್ಟ್ಯಗಳ ಹೈಲೈಟ್ಸ್‌

ಮೊಡೆಲ್‌ಗಳು

ಬಿವೈಡಿ ಸೀಲ್

ಹ್ಯುಂಡೈ ಐಯೋನಿಕ್ 5

ಹೊರಭಾಗ

  • ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು

  • ಎಲ್ಇಡಿ ಟೈಲ್ ಲೈಟ್ಸ್

  • ಅನುಕ್ರಮ ಹಿಂದಿನ ಟರ್ನ್‌ ಇಂಡಿಕೇಟರ್‌ಗಳು

  • ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು

  • 19 ಇಂಚಿನ ಅಲಾಯ್ ವೀಲ್‌ಗಳು

  • ಪ್ಯಾರಾಮೆಟ್ರಿಕ್ ಪಿಕ್ಸೆಲ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು

  • ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು

  • ಆಕ್ಟಿವ್‌ ಏರ್ ಫ್ಲಾಪ್

  • 20 ಇಂಚಿನ ಅಲಾಯ್ ವೀಲ್‌ಗಳು

ಇಂಟಿರೀಯರ್‌

  • ಲೆದರ್ ಸೀಟ್ ಅಪ್ಹೋಲ್ಸ್‌ಟೆರಿ

  • ಲೆದರ್ ಸುತ್ತಿದ ಸ್ಟೀರಿಂಗ್ ವೀಲ್‌

  • ಮೆಮೊರಿ ಕಾರ್ಯದೊಂದಿಗೆ 8-ವೇ ಚಾಲಿತ ಡ್ರೈವರ್ ಸೀಟ್

  • 6-ವೇ ಚಾಲಿತ ಸಹ-ಚಾಲಕನ ಆಸನ

  • ಹಿಂಭಾಗದ ಫೋಲ್ಡ್-ಔಟ್ ಆರ್ಮ್‌ರೆಸ್ಟ್

  • 4-ವೇ ಚಾಲಿತ ಲಂಬರ್‌ ಎಡ್ಜಸ್ಟ್‌ಮೆಂಟ್‌ ಡ್ರೈವರ್ ಸೀಟ್

  • ಪರಿಸರ ಸ್ನೇಹಿ ಲೆದರ್‌ ಆಪ್ಹೊಲ್ಸ್‌ಟೆರಿ

  • ಪವರ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು

  • ಮೆಮೊರಿ ಸೀಟ್ ಕಾನ್ಫಿಗರೇಶನ್ (ಎಲ್ಲಾ ಆಸನಗಳು)

  • ಫೋಲ್ಡ್‌ ಮಾಡಬಹುದಾದ ಹಿಂಭಾಗದ ಆರ್ಮ್ ರೆಸ್ಟ್

  • ಸ್ಲೈಡಿಂಗ್ ಫ್ರಂಟ್ ಸೆಂಟರ್ ಕನ್ಸೋಲ್

  • ಸ್ಲೈಡ್ ಮತ್ತು ಒರಗಿಸಲು ಎಡ್ಜಸ್ಟ್‌ ಮಾಡಬಹುದಾದ ಹಿಂಬದಿಯ ಸೀಟ್‌ಗಳು

ಸೌಕರ್ಯ ಮತ್ತು ಅನುಕೂಲತೆ

  • ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್

  • ವೆಂಟಿಲೇಟೆಡ್‌ ಮತ್ತು ಹೀಟೆಡ್‌ ಫ್ರಂಟ್‌ ಸೀಟ್‌ಗಳು

  • ಆಂಬಿಯೆಂಟ್ ಲೈಟಿಂಗ್

  • ಹಿಂದಿನ ಎಸಿ ವೆಂಟ್‌ಗಳು

  • ಪನೋರಮಿಕ್ ಗ್ಲಾಸ್‌ ರೂಫ್‌

  • 2 ವೈರ್‌ಲೆಸ್ ಫೋನ್ ಚಾರ್ಜರ್‌ಗಳು

  • ಹೀಟೆಡ್‌ ORVM ಗಳು

  • ಮೂಡ್ ಲೈಟಿಂಗ್

  • V2L (ವಾಹನದಿಂದ ಲೋಡ್) ಕಾರ್ಯ

  • ಹೆಡ್ಸ್-ಅಪ್ ಡಿಸ್‌ಪ್ಲೇ

  • ಏರ್ ಪ್ಯೂರಿಫೈಯರ್

  • ORVM ಗಳಿಗೆ ಮೆಮೊರಿ ಫಂಕ್ಷನ್‌

  • ಡೋರ್ ಮಿರರ್ ಆಟೋ ಟಿಲ್ಟ್ ಫಂಕ್ಷನ್

  • ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್

  • ವೆಂಟಿಲೇಟೆಡ್‌ ಮತ್ತು ಹೀಟೆಡ್‌ ಫ್ರಂಟ್‌ ಸೀಟ್‌ಗಳು

  • ಹೀಟ್‌ ಆಗುವ ಹಿಂದಿನ ಸೀಟುಗಳು

  • ಆಂಬಿಯೆಂಟ್ ಲೈಟಿಂಗ್

  • ಚಾಲಿತ ಟೈಲ್‌ಗೇಟ್

  • ಹೀಟೆಡ್‌ ORVM ಗಳು

  • ವೈರ್‌ಲೆಸ್ ಫೋನ್ ಚಾರ್ಜರ್

  • ಹಿಂದಿನ ಕಿಟಕಿಯ ಸನ್‌ಶೇಡ್‌

  • ಪನೋರಮಿಕ್ ಸನ್‌ರೂಫ್

  • V2L (ವಾಹನದಿಂದ ಲೋಡ್) ಫಂಕ್ಷನ್‌

ಇಂಫೋಟೈನ್‌ಮೆಂಟ್‌

  • 15.6-ಇಂಚಿನ ರೊಟೇಶನಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • 12-ಸ್ಪೀಕರ್ ಡೈನಾಡಿಯೊ ಸೌಂಡ್ ಸಿಸ್ಟಮ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಚಾಲಕನ ಡಿಸ್‌ಪ್ಲೇ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ 12.3-ಇಂಚಿನ ಸಂಯೋಜಿತ ಡ್ಯುಯಲ್ ಸ್ಕ್ರೀನ್‌ಗಳು

  • 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಆಪಲ್ ಕಾರ್ಪ್ಲೇ

  • ಆಂಬಿಯೆಂಟ್ ಸೌಂಡ್

ಸುರಕ್ಷತೆ

  • 9 ಏರ್‌ಬ್ಯಾಗ್‌ಗಳು

  • 360 ಡಿಗ್ರಿ ಕ್ಯಾಮೆರಾ

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

  • ಹಿಂಭಾಗದ ಡಿಫಾಗರ್

  • ಮಳೆ-ಸೆನ್ಸಿಂಗ್ ವೈಪರ್‌ಗಳು (ಫ್ರೇಮ್‌ಲೆಸ್)

  • ಸ್ವಯಂ ಹಿಡಿತದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಹಿಲ್ ಹೋಲ್ಡ್ ಅಸಿಸ್ಟ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಟ್ರಾಕ್ಷನ್ ಕಂಟ್ರೋಲ್

  • ISOFIX ಚೈಲ್ಡ್ ಸೀಟ್ ಆಧಾರ

  • ADAS ತಂತ್ರಜ್ಞಾನ

  • 6 ಏರ್‌ಬ್ಯಾಗ್‌ಗಳು

  • 360 ಡಿಗ್ರಿ ಕ್ಯಾಮೆರಾ

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಹಿಲ್ ಹೋಲ್ಡ್ ಅಸಿಸ್ಟ್

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

  • ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

  • ISOFIX ಚೈಲ್ಡ್ ಸೀಟ್ ಆಧಾರ

  • ಮಳೆ-ಸೆನ್ಸಿಂಗ್ ವೈಪರ್‌ಗಳು

  • ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್

  • ADAS ತಂತ್ರಜ್ಞಾನ

  • ಬಿವೈಡಿ ಸೀಲ್ ಮತ್ತು ಹ್ಯುಂಡೈ ಐಯೋನಿಕ್ 5 ಎರಡೂ ಪ್ರೀಮಿಯಂ ಕೊಡುಗೆಗಳಾಗಿ ಸಮಗ್ರ ವೈಶಿಷ್ಟ್ಯಗಳ ಪಟ್ಟಿಯನ್ನು ನೀಡುತ್ತವೆ. ಆದರೆ, ಸೀಲ್ ದೊಡ್ಡದಾದ 15.6-ಇಂಚಿನ ರೊಟೇಶನಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದನ್ನು 12-ಸ್ಪೀಕರ್ ಡೈನಾಡಿಯೊ ಸೌಂಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.

  • ಹೋಲಿಸಿದರೆ, ಐಯೋನಿಕ್ 5 ಇಂಟಿಗ್ರೇಟೆಡ್ 12.3-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ). ಐಯೋನಿಕ್ 5 ಬೋಸ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ, ಆದರೆ ಕೇವಲ 8 ಸ್ಪೀಕರ್‌ಗಳನ್ನು ಹೊಂದಿದೆ.
  • ಸೀಲ್ ಮತ್ತು ಐಯೋನಿಕ್ 5, ಎರಡೂ ಬಿಸಿಯಾದ ಮತ್ತು ವೆಂಟಿಲೇಟೆಡ್‌ ಮುಂಭಾಗದ ಆಸನಗಳೊಂದಿಗೆ ಬರುತ್ತವೆ, ಆದರೆ ಐಯೋನಿಕ್ 5 ಬಿಸಿಯಾದ ಹಿಂಭಾಗದ ಆಸನಗಳನ್ನು ಸಹ ನೀಡುತ್ತದೆ, ಅದನ್ನು ಸ್ಲೈಡ್ ಮತ್ತು
  • ಹಿಂದಕ್ಕೆ ಒರಗಿಸಬಹುದು.
  • ಹ್ಯುಂಡೈಯ ಈ ಇವಿಯಲ್ಲಿರುವ ಮತ್ತೊಂದು ಕ್ಯಾಬಿನ್ ವಿಶೇಷತೆ ಎಂದರೆ ಮುಂಭಾಗದಲ್ಲಿ ಸ್ಲೈಡಿಂಗ್ ಸೆಂಟರ್ ಕನ್ಸೋಲ್ ಆಗಿದೆ.
  • ಹಾಗೆಯೇ, ಇಲ್ಲಿ ಎರಡೂ EVಗಳು ವೆಹಿಕಲ್-ಟು-ಲೋಡ್ (V2L) ಸೌಲಭ್ಯವನ್ನು ಹೊಂದಿವೆ. ಈ ವೈಶಿಷ್ಟ್ಯವು ಕಾರಿನ ಬ್ಯಾಟರಿಯನ್ನು ಬಳಸಿಕೊಂಡು ನಿಮ್ಮ ಇತರ ಎಲೆಕ್ಟ್ರಿಕ್‌ ಸಾಧನಗಳಿಗೆ ಪವರ್‌ ತುಂಬಿಸಬಹುದು.
  • ಸುರಕ್ಷತೆಯ ವಿಷಯದಲ್ಲಿ, ಬಿವೈಡಿ ಸೀಲ್ 9 ಏರ್‌ಬ್ಯಾಗ್‌ಗಳನ್ನು ನೀಡುತ್ತದೆ, ಆದರೆ ಹ್ಯುಂಡೈ ಐಯೋನಿಕ್ 5 ಕೇವಲ 6 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ. ಸುರಕ್ಷತಾ ಸಾಧನಗಳಾದ 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಎರಡೂ EV ಗಳಲ್ಲಿ ಲಭ್ಯವಿದೆ.

ಅಂತಿಮ ಮಾತು

ಬಿವೈಡಿ ಸೀಲ್ ಮತ್ತು ಹ್ಯುಂಡೈ ಐಯೋನಿಕ್ 5 ಎರಡೂ ವೈಶಿಷ್ಟ್ಯ-ಲೋಡ್ ಆಗಿದ್ದು, 600 ಕಿ.ಮೀ ಗಿಂತ ಹೆಚ್ಚಿನ ಚಾಲನಾ ರೇಂಜ್‌ ಅನ್ನು ನೀಡುತ್ತವೆ. ಆದರೆ, ಸೀಲ್ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಮತ್ತು ಐಯೋನಿಕ್ 5 ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಆದ್ದರಿಂದ, ನೀವು ಪರ್ಫಾರ್ಮೆನ್ಸ್‌ಗೆ ಆದ್ಯತೆ ನೀಡುವವರಾಗಿದ್ದರೆ ಮತ್ತು ಲೋ-ಸ್ಲಂಗ್‌ ಸೆಡಾನ್‌ ಬಗ್ಗೆ ನೀವು ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಬಿವೈಡಿ ಸೀಲ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೊಂದೆಡೆ, ನೀವು ಎಸ್‌ಯುವಿ ಬಾಡಿ ಸ್ಟೈಲ್ ಅನ್ನು ಬಯಸುವುವರಾದರೆ, ಕ್ಯಾಬಿನ್ ಮತ್ತು ಬೂಟ್‌ನಲ್ಲಿ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದ್ದರೆ, ಹಾಗೆಯೇ ಕೆಟ್ಟದಾಗಿ ವಿನ್ಯಾಸಗೊಳಿಸಿದ ಸ್ಪೀಡ್ ಹಂಪ್‌ನ ಮೇಲೆ ನೀವು ಹೋದಾಗಲೆಲ್ಲಾ ಯಾವುದೇ ಕಿರಿಕಿರಿಯನ್ನು ಬಯಸದಿದ್ದರೆ, ಹ್ಯುಂಡೈ ಐಯೊನಿಕ್ 5 ನಿಮಗೆ ಹೆಚ್ಚು ಸೂಕ್ತವಾಗಿರುತ್ತದೆ.

ಈ ಎರಡರಲ್ಲಿ ನೀವು ಯಾವುದನ್ನು ಆರಿಸುತ್ತೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಹೆಚ್ಚು ಓದಿ: ಸೀಲ್‌ ಆಟೋಮ್ಯಾಟಿಕ್‌

Share via

Write your Comment on BYD ಸೀಲ್

N
nag
May 3, 2024, 10:15:35 AM

Also the resale value of the ioniq as compared to seal

R
raja
Apr 25, 2024, 11:16:41 AM

The Biggest Problem in BYD is Ground Clearance. All are Intentionally Avoiding that Point. In India Cars must Above 190 mm. Then only it's in Safe

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ