2023 ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿರುವ 10 ಕಾರುಗಳು ಯಾವ್ಯಾವುವು ಗೊತ್ತಾ?
ಕಿಯಾ ಸೆಲ್ಟೋಸ್ ಗಾಗಿ tarun ಮೂಲಕ ಜೂನ್ 27, 2023 02:33 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಮುಂದಿನ ಆರು ತಿಂಗಳಲ್ಲಿ, ನಾವು ನೋಡಲಿದ್ದೇವೆ ಆರು ಹೊಚ್ಚ ಹೊಸ ಕಾರುಗಳ ಬಿಡುಗಡೆ
2023ರ ಮೊದಲ ಆರು ತಿಂಗಳಲ್ಲಿ ಅನೇಕ ಪ್ರಮುಖ ಬಿಡುಗಡೆಗಳನ್ನು ನಾವು ಕಂಡೆವು. ಇದೀಗ ಮಹತ್ವಪೂರ್ಣ ಹಾಗೂ ಆಕರ್ಷಕ ಕಾರುಗಳ ಬಿಡುಗಡೆಗೆ ಕಾದು ನಿಂತಿರುವ ವರ್ಷದ ಉತ್ತರಾರ್ಧದತ್ತ ದೃಷ್ಟಿ ಹರಿಸುವ ಸಮಯ ಬಂದಿದೆ. ಹೊಸ ಇವಿ, ನವೀಕೃತ ಹಾಗೂ ಐದು ಬ್ರ್ಯಾಂಡ್‌ನ ಹೊಸ ಮಾಡೆಲ್‌ಗಳನ್ನು ನಾವು ನೋಡಲಿದ್ದೇವೆ. ನಮ್ಮ ಟಾಪ್ 10 ಆಯ್ಕೆಯ ಮುಂಬರುವ ಮಾಡೆಲ್‌ಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ:
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್
ನಿರೀಕ್ಷಿತ ಬೆಲೆ- ರೂ.10 ಲಕ್ಷದಿಂದ
ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿ ತನ್ನ ನಾಲ್ಕು ವರ್ಷಗಳ ಮಾರಾಟದ ಬಳಿಕ ಇದೀಗ ಮೊದಲ ಪ್ರಮುಖ ಅಪ್‌ಡೇಟ್ ಅನ್ನು ಪಡೆಯುತ್ತಿದೆ. ಇನ್‌ಫೊಟೇನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡ್ಯುಯಲ್ 10.25 ಇಂಚಿನ ಸ್ಕ್ರೀನ್‌ಗಳು, ವಿಹಂಗಮ ಸನ್‌ರೂಫ್ ಮತ್ತು ರಾಡಾರ್ ಆಧಾರಿತ ಎಡಿಎಸ್ ತಂತ್ರಜ್ಞಾನದಂತಹ ಅನೇಕ ಹೊಸ ಹೆಚ್ಚುವರಿ ಫೀಚರ್‌ಗಳೊಂದಿಗೆ ಬಾಹ್ಯ ಹಾಗೂ ಒಳಗಿನ ವಿನ್ಯಾಸದಲ್ಲಿ ಬದಲಾವಣೆ ಕಾಣಲಿದೆ. ಅದೇ 1.5-ಲೀಟರ್‌ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಮುಂದುವರಿಯಲಿದ್ದರೆ, ಹೊಸ 160PS 1.5- ಲೀಟರ್ ಟರ್ಬೋ ಪೆಟ್ರೋಲ್ ಯುನಿಟ್ ಅನ್ನು ಕೂಡಾ ಪರಿಚಯಿಸಲಾಗುತ್ತದೆ.
ಮಾರುತಿ ಇನ್ವಿಕ್ಟೋ
ನಿರೀಕ್ಷಿತ ಬೆಲೆ – ರೂ. 19 ಲಕ್ಷದಿಂದ
ಮಾರುತಿ ಬ್ರ್ಯಾಂಡ್‌ನ ಅತ್ಯಂತ ದುಬಾರಿ ಮಾಡೆಲ್ ಎನಿಸಿಕೊಂಡಿರುವ ಮಾರುತಿ ಇನ್ವಿಕ್ಟೋದ ಬಿಡುಗಡೆ ಜುಲೈ 6 ರಂದು ನಡೆಯಲಿದೆ. ಇನ್ವಿಕ್ಟೋ MPV ಎಂಬುದು ಟೊಯೊಟಾ ಇನ್ನೋವಾ ಹೈಕ್ರಾಸ್‌ನ ರಿಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿದೆ ಆದರೆ ಭಿನ್ನವಾಗಿಸಲು ಸಣ್ಣ ಸ್ಟೈಲಿಂಗ್‌ನ ಬದಲಾವಣೆ ಮಾಡಲಾಗಿದೆ. ವಿಹಂಗ ಸನ್‌ರೂಫ್, 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪವರ್‌ಯುಕ್ತ ಎರಡನೇ ಸಾಲಿನ ಒಟ್ಟಾಮ್ಯಾನ್ ಸೀಟ್‌ಗಳು, ಡ್ಯುಯಲ್-ಝೋನ್ ಎಸಿ ಮತ್ತು ಎಡಿಎಸ್‌ನೊಂದಿಗೆ ಇದು ಪ್ರೀಮಿಯಂ ಕಾರಾಗಿರಲಿದೆ. ಹೈಕ್ರಾಸ್‌ನಲ್ಲೂ ಇದ್ದ ಬಲಿಷ್ಠ ಹೈಬ್ರಿಡ್ ತಂತ್ರಜ್ಞಾನದೊಂದಿಗಿನ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಇನ್ವಿಕ್ಟೋ ಹೊಂದಿರಲಿದ್ದು, 23.24kmpl ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ.
ಹ್ಯುಂಡೈ ಎಕ್ಸ್‌ಟರ್
ನಿರೀಕ್ಷಿತ ಬೆಲೆ- ರೂ. 6 ಲಕ್ಷದಿಂದ
ಹ್ಯುಂಡ್ ಎಕ್ಸ್‌ಟರ್ ಎಂಬುದು ಈ ಕಾರುತಯಾರಕ ಸಂಸ್ಥೆಯ ಪ್ರವೇಶ ಹಂತದ ಎಸ್‌ಯುವಿಯಾಗಿರಲಿದ್ದು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಇದರ ಬಿಡುಗಡೆ ಜುಲೈ 10ಕ್ಕೆ ನಿಗದಿಯಾಗಿದೆ. ಇದು ಮೈಕ್ರೋ ಎಸ್‌ಯುವಿಯಾಗಿರಲಿದೆ ಹಾಗೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಿದೆ, ಮ್ಯಾನುವಲ್ ಹಾಗೂ AMT ಟ್ರಾನ್ಸ್‌ಮಿಶನ್‌ಗಳ ಆಯ್ಕೆ ದೊರಕಲಿದೆ. CNG ಆವೃತ್ತಿ ಕೂಡಾ ಮಾರಾಟಕ್ಕೆ ಬರಲಿದೆ. ಫೀಚರ್‌ಗಳ ನಿಟ್ಟಿನಲ್ಲಿ ನೋಡಿದರೆ, ಎಲೆಕ್ಟ್ರಿಕ್ ಸನ್‌ರೂಫ್, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ಹೋಂಡಾ ಎಲಿವೇಟ್
ನಿರೀಕ್ಷಿತ ಬೆಲೆ – ರೂ.12 ಲಕ್ಷದಿಂದ
ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಲಿರುವ ಒಂಭತ್ತನೇ ಮಾಡೆಲ್ ಹೋಂಡಾ ಎಲಿವೇಟ್ ಆಗಿರಲಿದೆ. ಪೆಟ್ರೋಲ್-ಮಾತ್ರ ವಿಧದ ಕಾರು ಇದಾಗಿರಲಿದ್ದು, ಸಿಟಿಯ 121PS 1.5-ಲೀಟರ್ i-VTEC ಎಂಜಿನ್ ಬಳಸಲಿದೆ. ಯಾವುದೇ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್‌ನ ಇರುವುದಿಲ್ಲ, ಆದರೆ ಇದರ ಇವಿ ಆವೃತ್ತಿಯು 2026ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಎಲೆಕ್ಟ್ರಿಕ್ ಸನ್‌ರೂಫ್, 10.25 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು ADAS ಇದರ ಪ್ರಮುಖ ಫೀಚರ್‌ಗಳಾಗಿರಲಿವೆ.
ಸಿಟ್ರಾನ್ C3 ಏರ್‌ಕ್ರಾಸ್
ನಿರೀಕ್ಷಿತ ಬೆಲೆ – ರೂ. 9 ಲಕ್ಷದಿಂದ
ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಹಾಗೂ ಹೋಂಡಾ ಎಲಿವೇಟ್‌ಗೆ ಇನ್ನೊಂದು ಪ್ರತಿಸ್ಪರ್ಧಿಯಾಗಿ ಬರಲಿದೆ ಸಿಟ್ರಾನ್ C3 ಏರ್‌ಕ್ರಾಸ್. ಭಾರತ ಕೇಂದ್ರಿತ C3 ಏರ್‌ಕ್ರಾಸ್ ಮೂರು ಸಾಲಿನ ಸೀಟಿಗಳ SUV ಆಗಿರಲಿದ್ದು, ಈ ಕಾಂಪಾಕ್ಟ್ SUV ಗಳೊಂದಿಗೆ ಸ್ಪರ್ಧಾತ್ಮಕ ದರ ಹೊಂದುವ ನಿರೀಕ್ಷೆಯಿದೆ. ಇದು 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಬಳಸಲಿದ್ದು, ಆಟೊಮ್ಯಾಟಿಕ್ ಟ್ರಾನ್ಸ್‌ಮಿಶನ್ ಅನ್ನು ಕೂಡಾ ಹೊಂದುವ ನಿರೀಕ್ಷೆ ನಮ್ಮದಾಗಿದೆ. 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಅವಳಿ ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು TPMS ಆರಾಮದಾಯಕತೆ ಹಾಗೂ ಸೌಕರ್ಯ ಎರಡನ್ನೂ ಒದಗಿಸಲಿವೆ.
ಹ್ಯುಂಡೈ i20 ನವೀಕೃತ
ನಿರೀಕ್ಷಿತ ಬೆಲೆ- ರೂ. 7.60 ಲಕ್ಷದಿಂದ
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಈಗಾಗಲೇ ಭಾರತದಲ್ಲಿ ಪರೀಕ್ಷೆ ಪ್ರಾರಂಭಿಸಿದ್ದು, ಮುಂಬರುವ ತಿಂಗಳುಗಳಲ್ಲಿ ನವೀಕೃತಗೊಳ್ಳಲಿದೆ. ನವೀಕೃತ ಹ್ಯುಂಡೈ i20 ಇಂಟೀರಿಯರ್‌ನಲ್ಲೂ ತುಸು ಬದಲಾವಣೆಯೊಂದಿಗೆ ಬಾಹ್ಯ ವಿನ್ಯಾಸದಲ್ಲಿ ಹೊಸತನವನ್ನು ತರಲಿದೆ. ಫೀಚರ್‌ಗಳ ಪಟ್ಟಿಗೆ ತೀರಾ ಹೆಚ್ಚೇನೂ ಹೊಸತನಗಳ ಸೇರ್ಪಡೆ ಇಲ್ಲದೇ ಹೋದರೂ, ಡ್ಯುಯಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಇರುವ ಸಾಧ್ಯತೆಯಿದೆ. ಅದೇ 1.2-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ಗಳೇ ಮುಂದುವರಿಯುವ ನಿರೀಕ್ಷೆಯಿದೆ, ಇವೆರಡೂ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಎರಡೂ ಆಯ್ಕೆಗಳಲ್ಲಿ ದೊರಕಲಿವೆ.
ಫೋರ್ಸ್ ಗೂರ್ಖಾ 5-ಡೋರ್
ನಿರೀಕ್ಷಿತ ಬೆಲೆ- ರೂ. 16 ಲಕ್ಷ
ಫೋರ್ಸ್ ಗೂರ್ಖಾದ ಫೈವ್-ಡೋರ್ ಆವೃತ್ತಿ ಮುಂದಿನ ಆರು ತಿಂಗಳಲ್ಲೇ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ. ತ್ರೀ-ಡೋರ್ ಆವೃತ್ತಿಯಂತೆಯೇ ಇದು ಕಾಣಲಿದೆ, ಆದರೆ ಹಿಂಭಾಗದ ಪ್ರೊಫೈಲ್ ಮಾತ್ರ ತುಸು ಹಿಗ್ಗಲಿದೆ. ಬಹು ಸೀಟಿಂಗ್ ಕಾನ್ಫಿಗರೇಶನ್‌ನೊಂದಿಗೆ ಕಾರು ಮಾರುಕಟ್ಟೆಗೆ ಬರುವ ನಿರೀಕ್ಷೆ ನಮ್ಮದಾಗಿದೆ. ಅದೇ 90PS 2.6-ಲೀಟರ್ ಡೀಸೆಲ್ ಎಂಜಿನ್‌ನ ಪವರ್‌ನೊಂದಿಗೆ 5-ಸ್ಪೀ ಮ್ಯಾನುವಲ್ ಟ್ರಾನ್ಸ್‌ಮಿಶನ್ ಸಹಿತವಾಗಿ ಗೂರ್ಖಾ ಬರಲಿದೆ.
BYD ಸೀಲ್
ನಿರೀಕ್ಷಿತ ಬೆಲೆ – ರೂ.60 ಲಕ್ಷ
ಭಾರತಕ್ಕೆ BYD ಯ ಮೂರನೇ ಎಲೆಕ್ಟ್ರಿಕ್ ಕಾರಾಗಿರುವ ಸೀಲ್, 2023ರ ಸೆಪ್ಟಂಬರ್-ಅಕ್ಟೋಬರ್ ಅವಧಿಯಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಪ್ರೀಮಿಯಂ ಸೆಡಾನ್ ದೊಡ್ಡ 82.5kWh ಬ್ಯಾಟರಿ ಪ್ಯಾಕ್ ಹೊಂದುವ ನಿರೀಕ್ಷೆಯಿದ್ದು, ಇದು 700 ಕಿಲೋಮೀಟರ್‌ಗಳ ತನಕ ರೇಂಜ್ ಕ್ಲೈಮ್ ಮಾಡುತ್ತದೆ. ಫೀಚರ್‌ಗಳಲ್ಲಿ ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ವಿಹಂಗಮ ಸನ್‌ರೂಫ್, ರಾಡಾರ್-ಆಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಇರುವ ನಿರೀಕ್ಷೆಯಿದೆ.
ಟಾಟಾ ಪಂಚ್ ಇವಿ
ನಿರೀಕ್ಷಿತ ಬೆಲೆ- ರೂ. 12 ಲಕ್ಷದಿಂದ
ಪಂಚ್ ಸಿಎನ್‌ಜಿ ಆವೃತ್ತಿಯನ್ನಷ್ಟೇ ಪಡೆಯುತ್ತಿಲ್ಲ, ಜತೆಗೆ ಇವಿ ಕೂಡಾ ಈ ವರ್ಷವೇ ಬರಲಿದೆ. ಟಿಯಾಗೋ ಮತ್ತು ನೆಕ್ಸಾನ್ ಇವಿಯಂತೆಯೇ, ಇದು ಕೂಡಾ 350 ಕಿಲೋಮೀಟರ್‌ಗಳ ತನಕ ಕ್ಲೈಮ್ ಮಾಡಿದ ರೇಂಜ್‌ನೊಂದಿಗಿನ ಬಹು ಪ್ಯಾಟರಿ ಪ್ಯಾಕ್‌ಗಳನ್ನು ಒದಗಿಸಬಹುದು. ಮೈಕ್ರೋ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯು ಈಗಾಗಲೇ ಕೆಲವು ಬಾರಿ ಪರೀಕ್ಷಾರ್ಥ ಸಂಚರಿಸುತ್ತಿರುವುದು ಪತ್ತೆಯಾಗಿದೆ, ಇದರ ಸ್ಟೈಲಿಂಗ್‌ನಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲವೆಂದು ಆ ವೇಳೆ ಕಂಡುಬಂದಿದೆ. ಇದರ ಫೀಚರ್‌ಗಳ ಪಟ್ಟಿಯು ಐಸಿಇ ಆವೃತ್ತಿಯ ಫೀಚರ್‌ನ ಪಟ್ಟಿಗೆ ಸಾದೃಶವಾಗಿದೆ. ಟಾಟಾ ಇವಿ ಲೈನಪ್‌ನಲ್ಲಿ ಇದರ ಸ್ಥಾನ ಟಿಯಾಗೋ ಇವಿ ಮತ್ತು ಟಿಗೋರ್ ಇವಿಗಿಂತ ಮೇಲಿರಲಿದೆ.
ನಿಸ್ಸಾನ್ X-ಟ್ರಯಲ್
ನಿರೀಕ್ಷಿತ ಬೆಲೆ- ರೂ 40 ಲಕ್ಷ
ಈ ವರ್ಷದ ಕೊನೆಯಲ್ಲಿ ನಿಸ್ಸಾನ್ X-ಟ್ರಯಲ್‌ನ ಬಿಡುಗಡೆಯನ್ನು ನಾವು ನೋಡುವ ಸಾಧ್ಯತೆಯಿದೆ, ಈ ಕಾರುತಯಾರಕ ಸಂಸ್ಥೆ ಪ್ರಸ್ತುತ ಪೂರ್ಣ ಪ್ರಮಾಣದ ಎಸ್‌ಯುವಿಯ ಪರೀಕ್ಷೆಯಲ್ಲಿ ನಿರತವಾಗಿದೆ. ಇದು ಟೊಯೊಟಾ ಫಾರ್ಚುನರ್ ಮತ್ತು ಎಂಜಿ ಗ್ಲೋಸ್ಟರ್‌ನಂತಹ ಎಸ್‌ಯುವಿಗಳ ಪ್ರತಿಸ್ಪರ್ಧಿಯಾಗಲಿದೆ. X-ಟ್ರಯಲ್ ಎಸ್‌ಯುವಿಯು 1.5-ಲೀಟರ್ ಮೈಲ್ಡ್-ಹೈಬ್ರಿಡ್ ಟರ್ಬೋ-ಪೆಟ್ರೋಲ್ ಎಂಜಿನ್ ಅಥವಾ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಚಾಲಿತವಾಗಿರಲಿದೆ. AWD ಆಯ್ಕೆಯೂ ದೊರಕಲಿದೆ. ಇದು ಪ್ರೀಮಿಯಂ ಮತ್ತು ಫೀಚರ್‌ಭರಿತ ಕಾರಾಗಿದ್ದು ಆಮದು ಮಾಡಿ ಮಾರಾಟ ಮಾಡಲಾಗುತ್ತದೆ.
(ಎಲ್ಲಾ ಬೆಲೆಗಳು ಎಕ್ಸ್-ಶೋರಂ)