• English
  • Login / Register

2024 ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್‌ಲಿಫ್ಟ್ ಮತ್ತು BYD Seal

ಹುಂಡೈ ಕ್ರೇಟಾ ಎನ್ ಲೈನ್ ಗಾಗಿ ansh ಮೂಲಕ ಮಾರ್ಚ್‌ 01, 2024 08:46 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ತಿಂಗಳು ಹ್ಯುಂಡೈ ಮತ್ತು ಮಹೀಂದ್ರಾದಿಂದ ಎಸ್‌ಯುವಿಗಳು ಬಿಡುಗಡೆಯಾಗಲಿದೆ ಮತ್ತು BYD ಭಾರತದಲ್ಲಿ ತನ್ನ ಅತ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ.

Upcoming Cars In March 2024: Hyundai Creta N-Line, Mahindra XUV300 Facelift, And BYD Seal

2024ರ ಫೆಬ್ರವರಿಯು ಭಾರತೀಯ ಆಟೋ ಉದ್ಯಮಕ್ಕೆ ಬಿಡುಗಡೆಯ ಸಂಖ್ಯೆಯ ದೃಷ್ಟಿಯಿಂದ ಅತ್ಯಂತ ರೋಮಾಂಚಕಾರಿ ತಿಂಗಳು ಆಗಿರಲಿಲ್ಲ, ಆದರೆ ಮಾರ್ಚ್ ತಿಂಗಳು ಖರೀದಿದಾರರಿಗೆ ಆಯ್ಕೆ ಮಾಡಲು ಕೆಲವು ಹೊಚ್ಚ ಹೊಸ ಮೊಡೆಲ್‌ಗಳ ಭರವಸೆಯನ್ನು ನೀಡುತ್ತದೆ. ಈ ತಿಂಗಳಲ್ಲಿ, ನಾವು ಅಂತಿಮವಾಗಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ N ಲೈನ್ ಆವೃತ್ತಿಯನ್ನು ಪಡೆಯುತ್ತೇವೆ, ಆದರೆ ಅದಕ್ಕೂ ಮೊದಲು BYD ಸೀಲ್ ಎಕ್ಲೆಕ್ಟಿಕ್ ಸೆಡಾನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಮಹೀಂದ್ರಾ XUV300 ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅನಾವರಣಗೊಳಿಸಬಹುದು. ಈ ಮುಂಬರುವ ಮೊಡೆಲ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಹುಂಡೈ ಕ್ರೆಟಾ ಎನ್ ಲೈನ್

Hyundai Creta N-Line

 ಹುಂಡೈ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ ಮತ್ತು ಇದು ರೆಗುಲರ್‌ ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಲವು ವಿನ್ಯಾಸ ಬದಲಾವಣೆಗಳೊಂದಿಗೆ ಬರುತ್ತದೆ. ಕ್ರೆಟಾ ಎನ್‌-ಲೈನ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/253 Nm) ನಿಂದ ಚಾಲಿತವಾಗುತ್ತದೆ ಮತ್ತು ಹೆಚ್ಚಾಗಿ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ರೆಗುಲರ್‌ ಕ್ರೆಟಾದಲ್ಲಿ ನೀಡಲಾಗುವುದಿಲ್ಲ) ಮತ್ತು 7-ಸ್ಪೀಡ್‌ DCT ಆಟೋಮ್ಯಾಟಿಕ್‌ ಆಯ್ಕೆಯನ್ನು ಪಡೆಯುತ್ತದೆ. ಒಳಭಾಗದಲ್ಲಿ, ಇದು ಬಾಹ್ಯ ವಿನ್ಯಾಸದ ಸ್ಪೋರ್ಟಿಯರ್ ನೇಚರ್‌ಅನ್ನು ಹೊಂದಿಸಲು ವಿಭಿನ್ನ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಇದು ಹ್ಯುಂಡೈ ಕ್ರೆಟಾದ ಟಾಪ್‌-ಎಂಡ್‌ ಮೊಡೆಲ್‌ಗಳನ್ನು ಆಧರಿಸಿದೆ ಮತ್ತು ಇದರ ಎಕ್ಸ್‌ಶೋರೂಂ ಬೆಲೆಗಳು 17.50 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನು ಸಹ ಓದಿ: Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್‌ಲೈನ್‌ನಲ್ಲಿ ಅಲ್ಲ..!

BYD ಸೀಲ್

BYD Seal

ಭಾರತೀಯ ಮಾರುಕಟ್ಟೆಗೆ BYD ಯ ಇತ್ತೀಚಿನ ಕೊಡುಗೆಯಾಗಿರುವ BYD ಸೀಲ್ ಅನ್ನು ಮಾರ್ಚ್ 5 ರಂದು ಬಿಡುಗಡೆ ಮಾಡಲಾಗುವುದು. ಭಾರತದಲ್ಲಿ ಈ ಎಲೆಕ್ಟ್ರಿಕ್ ಸೆಡಾನ್, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದೆ, 61.4 ಕಿ.ವ್ಯಾಟ್‌ ಮತ್ತು 82.5 ಕಿ.ವ್ಯಾಟ್‌, ಮತ್ತು 570 ಕಿ.ಮೀ.ವರೆಗೆ WLTP- ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಪವರ್‌ಟ್ರೇನ್‌ಗಳೊಂದಿಗೆ ನೀಡಲಾಗುತ್ತದೆ. ಒಳಭಾಗದಲ್ಲಿ, ಇದು 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ರೊಟೇಟ್‌ ಆಗುವಂತಹದು), ಎರಡು ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಬಿಸಿಯಾಗುವ ಮತ್ತು ವೆಂಟಿಲೇಟೆ ಆಗಿರುವ ಮುಂಭಾಗದ ಆಸನಗಳನ್ನು ಹೊಂದಿರುವ ಕನಿಷ್ಠ ಕ್ಯಾಬಿನ್ ಅನ್ನು ಹೊಂದಿದೆ ಮತ್ತು ಇದು ADAS ವೈಶಿಷ್ಟ್ಯಗಳ ಸಂಪೂರ್ಣ ಸೂಟ್‌ನೊಂದಿಗೆ ಬರುತ್ತದೆ. BYD ಸೀಲ್‌ನ ಎಕ್ಸ್ ಶೋರೂಂ ಬೆಲೆಗಳು 55 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನು ಸಹ ಓದಿ: ಎಕ್ಸ್‌ಕ್ಲೂಸಿವ್: BYD Seal ವೇರಿಯಂಟ್-ವಾರು ಫೀಚರ್‌ಗಳನ್ನು ಬಿಡುಗಡೆಗೆ ಮುಂಚಿತವಾಗಿಯೇ ಬಹಿರಂಗ

ಮಹೀಂದ್ರಾ ಎಕ್ಸ್‌ಯುವಿ300 ಫೇಸ್‌ಲಿಫ್ಟ್‌

2024 Mahindra XUV300

 ಈ ಮಾರ್ಚ್‌ನಲ್ಲಿ ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300ನ ಬೆಲೆಗಳನ್ನು  ಬಹಿರಂಗಪಡಿಸಲಾಗುವುದಿಲ್ಲ ಆದರೆ ಈ ತಿಂಗಳಲ್ಲಿ ಕಾರು ತಯಾರಕರು ನವೀಕರಿಸಿದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅನಾವರಣಗೊಳಿಸಬಹುದು. ಒಳಭಾಗದಲ್ಲಿ, ಇದು ದೊಡ್ಡ ಸ್ಕ್ರೀನ್‌ಗಳೊಂದಿಗೆ ಹೊಚ್ಚ ಹೊಸ ಕ್ಯಾಬಿನ್ ಅನ್ನು ಪಡೆಯಬಹುದು ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಹೊಸ ವೈಶಿಷ್ಟ್ಯಗಳೊಂದಿಗೆ ಕೂಡ ಬರಬಹುದು. ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300ನ ಎಕ್ಸ್ ಶೋರೂಂ ಬೆಲೆಗಳು 9 ಲಕ್ಷದಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನು ಸಹ ಓದಿ: Mahindra XUV300 ಫೇಸ್‌ಲಿಫ್ಟ್: ಏನೇನು ನಿರೀಕ್ಷಿಸಬಹುದು ?

ಇವುಗಳು 2024ರ ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿರುವ ಕಾರುಗಳಾಗಿವೆ. ಇವುಗಳಲ್ಲಿ ಯಾವುದಕ್ಕಾಗಿ ನೀವು ಉತ್ಸುಕರಾಗಿದ್ದೀರಿ? ಕೆಳಗೆ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಇಲ್ಲಿ ಇನ್ನಷ್ಟು ಓದಿ : ಎಕ್ಸ್‌ಯುವಿ300 ಎಎಮ್‌ಟಿ

was this article helpful ?

Write your Comment on Hyundai ಕ್ರೇಟಾ ಎನ್ ಲೈನ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience