ಪ್ರೊಡಕ್ಷನ್-ಸ್ಪೆಕ್ Mercedes-Benz EQGನ ವಿವರಗಳು ಲೀಕ್! ನಾಲ್ಕು ಗೇರ್‌ಬಾಕ್ಸ್‌ಗಳ ಸೇರ್ಪಡೆಯೊಂದಿಗೆ 1,000 Nm ಗಿಂತ ಹೆಚ್ಚು ಟಾರ್ಕ್ ಉತ್ಪಾದಿಸಬಲ್ಲ ಆಲ್-ಎಲೆಕ್ಟ್ರಿಕ್ G-ಕ್ಲಾಸ್ 

published on ಏಪ್ರಿಲ್ 25, 2024 10:41 pm by rohit for ಮರ್ಸಿಡಿಸ್ eqg

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಲ್-ಎಲೆಕ್ಟ್ರಿಕ್ G-ವ್ಯಾಗನ್ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ (ಪ್ರತಿಯೊಂದು ವೀಲ್ ಗೆ ಒಂದು ಮೋಟಾರ್) ಆಲ್-ವೀಲ್ ಡ್ರೈವ್ (AWD) ಸೆಟಪ್ ಅನ್ನು ಹೊಂದಿದೆ

Mercedes-Benz EQG (G 580) revealed

  •  EQGಯು ರೆಗ್ಯುಲರ್ G-ಕ್ಲಾಸ್ SUV ಯ ಎಲೆಕ್ಟ್ರಿಕ್ ವರ್ಷನ್ ಆಗಿದೆ.
  •  ಇದರ ಕಾನ್ಸೆಪ್ಟ್ ವರ್ಷನ್ ಅನ್ನು 2024 ರ ಆರಂಭದಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.
  •  EQG 116 kWh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 473 ಕಿಮೀವರೆಗೆ WLTP ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ.
  •  ಆಫ್-ರೋಡಿಂಗ್‌ಗಾಗಿ ವರ್ಚುವಲ್ ಡಿಫರೆನ್ಷಿಯಲ್ ಲಾಕ್‌ಗಳು ಮತ್ತು ಪ್ರತಿ ಗೇರ್‌ಬಾಕ್ಸ್‌ಗೆ ಲೊ-ರೇಂಜ್ ಟ್ರಾನ್ಸ್‌ಫರ್ ಕೇಸ್ ಅನ್ನು ಹೊಂದಿವೆ.
  •  ಹೊರಭಾಗದಲ್ಲಿ ಕ್ಲೋಸ್ಡ್-ಆಫ್ ಗ್ರಿಲ್, ವೃತ್ತಾಕಾರದ LED DRL ಗಳೊಂದಿಗೆ LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು ಮತ್ತು ಸ್ಕ್ವಾರಿಶ್ ಟೈಲ್ಗೇಟ್-ಮೌಂಟೆಡ್ ಹೌಸಿಂಗ್ ಅನ್ನು ಒಳಗೊಂಡಿವೆ.
  •  ಕ್ಯಾಬಿನ್ ನಲ್ಲಿ ಸ್ಕ್ವೆರ್ ಆಕಾರದ AC ವೆಂಟ್‌ಗಳು ಮತ್ತು ಲೆದರ್ ಸೀಟ್‌ಗಳೊಂದಿಗೆ ಆಲ್ ಬ್ಲಾಕ್ ಲುಕ್ ಅನ್ನು ಹೊಂದಿದೆ.
  •  ಡ್ಯುಯಲ್ 12.3-ಇಂಚಿನ ಡಿಸ್‌ಪ್ಲೇಗಳು, ಐಚ್ಛಿಕ ರಿಯರ್ ಸ್ಕ್ರೀನ್ ಗಳು ಮತ್ತು ADAS ಫೀಚರ್ ಗಳನ್ನು ಪಡೆದುಕೊಂಡಿದೆ
  •  2025 ರ ಮಧ್ಯದಲ್ಲಿ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ; ಬೆಲೆಯು ರೂ 3 ಕೋಟಿಯಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).

G-ಕ್ಲಾಸ್‌ನ ಎಲೆಕ್ಟ್ರಿಕ್ ವರ್ಷನ್ ಆಗಿರುವ ಮರ್ಸಿಡಿಸ್-ಬೆಂಜ್ EQG ಇದೀಗ ಪ್ರೊಡಕ್ಷನ್ ರೆಡಿ ಅವತಾರದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದೆ. ಪ್ರೊಡಕ್ಷನ್ ಗೆ ಸಿದ್ಧವಾಗಿರುವ ಈ ಎಲೆಕ್ಟ್ರಿಕ್ ಆಫ್-ರೋಡರ್‌ನ ಕಾನ್ಸೆಪ್ಟ್ ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರಲ್ಲಿ ತೋರಿಸಲಾಯಿತು, ಇಲ್ಲಿ ಎಲೆಕ್ಟ್ರಿಕ್ G-ವ್ಯಾಗನ್‌ನ ವಿವರಗಳನ್ನು ನೀಡಲಾಗಿತ್ತು. ನಾವು ಇದನ್ನು EQG ಎಂದು ಕರೆಯುತ್ತಿದ್ದರೂ ಕೂಡ, ಇದಕ್ಕೆ ಬೇರೆ ಹೆಸರನ್ನು ನೀಡಲು ಮರ್ಸಿಡಿಸ್ ನಿರ್ಧರಿಸಿದೆ. ಇದಕ್ಕೆ EQ ತಂತ್ರಜ್ಞಾನದೊಂದಿಗೆ ಅಧಿಕೃತವಾಗಿ ಮರ್ಸಿಡಿಸ್-ಬೆಂಜ್ G 580 ಎಂದು ಹೆಸರಿಡಲಾಗಿದೆ. ಆದ್ದರಿಂದ, ಸರಳತೆಗಾಗಿ ನಾವು ಈ ಎಲೆಕ್ಟ್ರಿಕ್ ವಾಹನವನ್ನು ಮರ್ಸಿಡಿಸ್ G 580 ಎಂದು ಇನ್ನು ಮುಂದೆ ಎಲ್ಲಾ ಕಡೆ ಕರೆಯುತ್ತೇವೆ.

 ಮರ್ಸಿಡಿಸ್-ಬೆಂಜ್ G-ಕ್ಲಾಸ್ ನ ಮೊಟ್ಟಮೊದಲ ಎಲೆಕ್ಟ್ರಿಕ್ ಕಾರಿನ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ವಿವರಗಳು ಇಲ್ಲಿವೆ:

ನಾಲ್ಕು ಮೋಟಾರ್‌ಗಳು ಮತ್ತು 1,000 Nm ಗಿಂತ ಹೆಚ್ಚು ಟಾರ್ಕ್

ಮರ್ಸಿಡಿಸ್-ಬೆಂಜ್ ಈ ಕೆಳಗಿನ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಎಲೆಕ್ಟ್ರಿಕ್ G-ಕ್ಲಾಸ್ SUV ಅನ್ನು ನೀಡುತ್ತಿದೆ:

ಸ್ಪೆಸಿಫಿಕೇಷನ್

 ಮರ್ಸಿಡಿಸ್-ಬೆಂಜ್ G 580

 ಬ್ಯಾಟರಿ ಪ್ಯಾಕ್

 116 kWh (ಬಳಸಬಹುದಾದ)

 WLTP-ಕ್ಲೇಮ್ ಮಾಡಿರುವ ರೇಂಜ್

 473 ಕಿ.ಮೀ ವರೆಗೆ

 ಎಲೆಕ್ಟ್ರಿಕ್ ಮೋಟಾರ್ ಗಳು

 4 (ಪ್ರತಿಯೊಂದು ವೀಲ್ ಗೆ ಒಂದು)

 ಪವರ್

587 PS

 ಟಾರ್ಕ್

1164 Nm

 ಡ್ರೈವ್ ಟ್ರೈನ್

AWD

 G 580 ಹೆಚ್ಚು ಟಾರ್ಕ್‌ ಹೊಂದಿರುವ ಕಾರಣ, ಮೂರು ಟನ್‌ಗಳಿಗಿಂತ ಹೆಚ್ಚು ತೂಕದ ಹೊರತಾಗಿಯೂ, ಕೇವಲ 4.7 ಸೆಕೆಂಡುಗಳಲ್ಲಿ 0 ರಿಂದ 100 km/h ವೇಗವನ್ನು ತಲುಪಬಹುದು. EQG ಮೂರು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ: ಕಂಫರ್ಟ್, ಸ್ಪೋರ್ಟ್ ಮತ್ತು ಇಂಡಿವಿಜುವಲ್. ಇದು ಎರಡು ಆಫ್-ರೋಡ್ ಮೋಡ್‌ಗಳನ್ನು ಕೂಡ ಹೊಂದಿದೆ: ಟ್ರಯಲ್ ಮತ್ತು ರಾಕ್.

 ಆಫ್-ರೋಡ್ ಡ್ರೈವ್ ಮಾಡಲು ನೀಡಲಾಗಿರುವ ವಿಶೇಷತೆಗಳು

 ವರ್ಚುವಲ್ ಡಿಫರೆನ್ಷಿಯಲ್ ಲಾಕ್‌ಗಳನ್ನು ಉತ್ಪಾದಿಸಲು ಎಲೆಕ್ಟ್ರಿಕ್ G-ಕ್ಲಾಸ್ ಟಾರ್ಕ್ ವೆಕ್ಟರಿಂಗ್ ಅನ್ನು ಬಳಸುತ್ತದೆ. ಈ ತಂತ್ರಜ್ಞಾನವು ಕಠಿಣ ಪರಿಸ್ಥಿತಿಗಳಲ್ಲಿ ಡ್ರೈವ್ ಮಾಡಲು ಪ್ರತಿಯೊಂದು ಚಕ್ರಕ್ಕೆ ಸರಿಯಾದ ಪ್ರಮಾಣದ ಟಾರ್ಕ್ ಅನ್ನು ನೀಡಲು ಸಹಾಯ ಮಾಡುತ್ತದೆ. ನಿರ್ದಿಷ್ಟ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾದ ಉನ್ನತ-ಮಟ್ಟದ EVಗಳಿಗೆ ಪ್ರತಿಯೊಂದು ಚಕ್ರಕ್ಕೆ ಎಲೆಕ್ಟ್ರಿಕ್ ಮೋಟರ್ ಅನ್ನು ನೀಡುವುದು ಸಾಮಾನ್ಯ ವಿಷಯವಾಗಿದೆ. ಆದರೆ G 580, ಇಲ್ಲಿ ಪ್ರತಿಯೊಂದು ಮೋಟಾರ್ ಸೆಟಪ್ ಕೂಡ ಸ್ವಿಚ್ ಮಾಡಬಹುದಾದ ಲೊ-ರೇಂಜ್ ಸೆಟ್ಟಿಂಗ್‌ನೊಂದಿಗೆ ತನ್ನದೇ ಆದ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಈ ಫೀಚರ್ ಕಷ್ಟಕರವಾದ ಆಫ್-ರೋಡಿಂಗ್‌ಗೆ ಸೂಕ್ತವಾಗಿದೆ ಮತ್ತು ನೀವು 'ರಾಕ್' ಆಫ್-ರೋಡ್ ಮೋಡ್‌ಗೆ ಬದಲಾಯಿಸಿದಾಗ ಸಕ್ರಿಯಗೊಳ್ಳುತ್ತದೆ.

 ಆದರೆ EQG, ಅಥವಾ G 580 ನ ಅತ್ಯಂತ ಅದ್ಭುತವಾದ ಫೀಚರ್ ಎಂದರೆ ಬಹುಶಃ "G-ಟರ್ನ್" ಎಂದು ಹೇಳಬಹುದು. ಎಲೆಕ್ಟ್ರಿಕ್ SUVಯ ಟ್ಯಾಂಕ್‌ನಂತೆ ತಿರುಗುವ ಈ ಸಾಮರ್ಥ್ಯಕ್ಕೆ ಮರ್ಸಿಡಿಸ್ ಈ ಹೆಸರನ್ನು ನೀಡಿದೆ. ಈ ಫೀಚರ್ ಮೂಲಕ ಇದು 360 ಡಿಗ್ರಿಗಳ ಟರ್ನ್ ಅನ್ನು ಮಾಡಬಹುದು. ಇದು ಕಾರಿನ ಎಡ ಮತ್ತು ಬಲ ಬದಿಗಳಲ್ಲಿನ ಚಕ್ರಗಳನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುವ ಮೂಲಕ ಇದನ್ನು ಸಾಧಿಸುತ್ತದೆ.

 ನೀವು ಆಫ್-ರೋಡಿಂಗ್ ಮಾಡುತ್ತಿರುವಾಗ ರಸ್ತೆಯಲ್ಲಿರುವ ಉಬ್ಬು ತಗ್ಗುಗಳನ್ನು ಎದುರಿಸಲು EQG ಗೆ ಅಡಾಪ್ಟಿವ್ ಡ್ಯಾಂಪಿಂಗ್ ಸಿಸ್ಟಮ್ ಅನ್ನು ಕೂಡ ಮರ್ಸಿಡಿಸ್-ಬೆಂಜ್ ನೀಡುತ್ತಿದೆ. EQG ತನ್ನ ಆಕ್ಸಲ್‌ಗಳ ನಡುವೆ ಕನಿಷ್ಟ 250 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಮತ್ತು 850 ಮಿಮೀ ಆಳದವರೆಗೆ ನೀರಿನಲ್ಲಿ ಚಲಿಸಬಹುದು. ಇದರ ಅಪ್ರೋಚ್ ಆಂಗಲ್ 32 ಡಿಗ್ರಿ, ಬ್ರೇಕ್‌ಓವರ್ ಆಂಗಲ್ 20.3 ಡಿಗ್ರಿ ಮತ್ತು ಡಿಪಾರ್ಚರ್ ಆಂಗಲ್ 30.7 ಡಿಗ್ರಿಗಳಲ್ಲಿದೆ.

 ಇದನ್ನು ಕೂಡ ಓದಿ: 2024 ಆಸ್ಟನ್ ಮಾರ್ಟಿನ್ ವಾಂಟೇಜ್ ಭಾರತದಲ್ಲಿ ಬಿಡುಗಡೆಯಾಗಿದೆ, ಬೆಲೆಯು ರೂ. 3.99 ಕೋಟಿ

 ಚಾರ್ಜಿಂಗ್ ಆಯ್ಕೆಗಳು

 ಎಲೆಕ್ಟ್ರಿಕ್ G-ವ್ಯಾಗನ್ ಅನ್ನು 200 kW ವರೆಗೆ ತ್ವರಿತವಾಗಿ ಚಾರ್ಜ್ ಮಾಡಬಹುದು, ಇದು ಸುಮಾರು 32 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತ ಬ್ಯಾಟರಿಯನ್ನು ನೀಡುತ್ತದೆ. ನೀವು ಮನೆಯಲ್ಲಿ ಇರುವಾಗ ಅದರ ಬ್ಯಾಟರಿಯನ್ನು 11 kW AC ಚಾರ್ಜರ್‌ನೊಂದಿಗೆ ಕೂಡ ಚಾರ್ಜ್ ಮಾಡಬಹುದು, ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

 ಅತ್ಯಂತ ಅದ್ಭುತವಾದ ಹೊರಭಾಗ

 ಈ ಎಲೆಕ್ಟ್ರಿಕ್ SUV ಯನ್ನು ಒಂದು ಬಾರಿ ನೋಡಿದರೆ ಸಾಕು, ಇದು G-ಕ್ಲಾಸ್ ಎಂದು ನಿಮಗೆ ತಕ್ಷಣವೇ ತಿಳಿಯುತ್ತದೆ. ಮರ್ಸಿಡಿಸ್ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದೆ. ಇದು ದಕ್ಷತೆಗಾಗಿ ಏರೋ ಡೈನಾಮಿಕ್ಸ್ ಮೇಲೆ ಕೇಂದ್ರೀಕರಿಸುವ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸುವ ಸಾಮಾನ್ಯ ನಿಯಮಗಳಿಗೆ ವಿರುದ್ಧವಾಗಿದೆ. ಇದು ಸ್ಟ್ಯಾಂಡರ್ಡ್ G-ವ್ಯಾಗನ್‌ನಂತೆ ಬಾಕ್ಸ್ ಆಕಾರವನ್ನು ಹೊಂದಿದೆ ಆದರೆ ಎಲೆಕ್ಟ್ರಿಕ್ ವರ್ಷನ್ ಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳಲ್ಲಿ ನಾಲ್ಕು ಸ್ಲ್ಯಾಟೆಡ್ ಏರ್ ಇನ್‌ಟೇಕ್‌ಗಳ ಕ್ಲೋಸ್ಡ್ ಆಫ್ ಬ್ಲಾಕ್ ಗ್ರಿಲ್ ಮತ್ತು ಹೊಸ ಮೆಶ್ ಡಿಸೈನ್ ನೊಂದಿಗೆ ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಒಳಗೊಂಡಿದೆ. ಗ್ರಿಲ್‌ಗಾಗಿ ಇಲ್ಯುಮಿನೇಷನ್ ಸರೌಂಡ್ ಅನ್ನು ಆನ್ ಮಾಡುವ ಆಯ್ಕೆ ಕೂಡ ನೀಡಲಾಗಿದೆ. G 580 ತನ್ನ ರೆಗ್ಯುಲರ್ ಮಾಡೆಲ್ ನಲ್ಲಿರುವ 84 ಪ್ರತ್ಯೇಕ LEDಗಳನ್ನು ಹೊಂದಿರುವ ರೌಂಡ್ LED DRL ಮತ್ತು ಅಡ್ಜಸ್ಟ್ ಮಾಡಬಹುದಾದ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಹಾಗೆಯೇ ಇರಿಸಿದೆ.

 ಸೈಡ್ ನಿಂದ ನೋಡಿದರೆ, EQG ಅದರ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ನಂತೆ ಕಾಣುತ್ತದೆ. ಮರ್ಸಿಡಿಸ್-ಬೆಂಜ್ ಇಲ್ಲಿ 18-ಇಂಚಿನ 5-ಸ್ಪೋಕ್ ಬ್ಲಾಕ್ ಅಲೊಯ್ ವೀಲ್ಸ್ ಅನ್ನು ನೀಡಿದೆ, ಆದರೆ ನೀವು AMG ವರ್ಷನ್ ಗೆ ಹೋದರೆ 20-ಇಂಚಿನ ದೊಡ್ಡದಾದ ವೀಲ್ ಅನ್ನು ಪಡೆಯಬಹುದು.

 ಹಿಂಭಾಗದಲ್ಲಿ, ಇದು ಸ್ಟ್ಯಾಂಡರ್ಡ್ G-ಕ್ಲಾಸ್‌ನಂತೆ ಕಾಣುತ್ತದೆ, ಆದರೆ ಇದು ಸ್ಟ್ಯಾಂಡರ್ಡ್ ಮಾಡೆಲ್ ನಲ್ಲಿರುವ ರೌಂಡ್ ಯೂನಿಟ್ ಬದಲಿಗೆ ಟೈಲ್‌ಗೇಟ್‌ನಲ್ಲಿ ಜೋಡಿಸಲಾದ ಸ್ಕ್ವೆರ್-ಆಕಾರವನ್ನು ಹೊಂದಿದೆ. ಟೈಲ್‌ಗೇಟ್-ಮೌಂಟೆಡ್ ಹೌಸಿಂಗ್‌ನ ಒಳಗೆ ಒಂದು ಸ್ಪೇರ್ ವೀಲ್ ಬದಲಿಗೆ, EQG ಚಾರ್ಜಿಂಗ್ ಕೇಬಲ್‌ಗಾಗಿ ಸ್ಟೋರೇಜ್ ಜಾಗವನ್ನು ಹೊಂದಿದೆ.

 ಪ್ರೀಮಿಯಂ ಇಂಟೀರಿಯರ್ಸ್ ಮತ್ತು ಫೀಚರ್ ಗಳು

 G 580 ನ ಒಳಭಾಗವು ರೆಗ್ಯುಲರ್ G-ಕ್ಲಾಸ್‌ನ ಲೋಡೆಡ್ ವರ್ಷನ್ ಅನ್ನು ಹೋಲುತ್ತದೆ. ಇದು ಆಲ್ ಬ್ಲಾಕ್ ಥೀಮ್, ಟಚ್ ಹ್ಯಾಪ್ಟಿಕ್ ಕಂಟ್ರೋಲ್ ಗಳೊಂದಿಗೆ ಬ್ರ್ಯಾಂಡ್‌ನ ಇತ್ತೀಚಿನ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು AC ವೆಂಟ್‌ಗಳಿಗಾಗಿ ಸ್ಕ್ವೇರ್ಡ್-ಆಫ್ ಹೌಸಿಂಗ್‌ಗಳನ್ನು ಹೊಂದಿದೆ. ಮರ್ಸಿಡಿಸ್-ಬೆಂಜ್ ಈ ಎಲೆಕ್ಟ್ರಿಕ್ SUV ನಲ್ಲಿ ಲೆದರ್ ಸೀಟುಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಸ್ಟ್ಯಾಂಡರ್ಡ್ ಫೀಚರ್ ಗಳಾಗಿ ನೀಡುತ್ತಿದೆ.

 ಫೀಚರ್ ಗಳ ವಿಷಯದಲ್ಲಿ, EQG ಇಂಟಿಗ್ರೇಟೆಡ್ ಡ್ಯುಯಲ್ 12.3-ಇಂಚಿನ ಡಿಸ್ಪ್ಲೇ (ಒಂದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ವಾಯ್ಸ್ ಅಸಿಸ್ಟೆಂಟ್ ಮತ್ತು ಅಗ್ಮೆಂಟೆಡ್ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್ಪ್ಲೇ (HUD) ಯನ್ನು ನೀಡಲಾಗಿದೆ. ಹಿಂಬದಿಯ ಸೀಟ್ ಗಳಿಗೆ ಡ್ಯುಯಲ್ 11.6-ಇಂಚಿನ ಸ್ಕ್ರೀನ್ ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್‌ನಂತಹ ಹಲವಾರು ಹೆಚ್ಚುವರಿ ಫೀಚರ್ ಗಳು ಲಭ್ಯವಿದೆ.

 ಇದರ ಸುರಕ್ಷತಾ ಕಿಟ್ ನಲ್ಲಿ ಲೇನ್-ಕೀಪ್ ಅಸಿಸ್ಟ್, ಅಟಾನಮಸ್-ಎಮರ್ಜೆನ್ಸಿ ಬ್ರೇಕಿಂಗ್ (AEB), ಮತ್ತು ಡ್ರೈವರ್ ಅಟೆನ್ಟಿವ್‌ನೆಸ್ ಅಲರ್ಟ್ ಸೇರಿದಂತೆ ಹಲವಾರು ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಹೊಂದಿದೆ. EQB ಯು 360-ಡಿಗ್ರಿ ಕ್ಯಾಮೆರಾ ಮತ್ತು ಟ್ರಾಫಿಕ್ ಸೈನ್ ಅಸಿಸ್ಟ್‌ನೊಂದಿಗೆ ಕೂಡ ಬರುತ್ತದೆ. ಇದರ ಆಫ್-ರೋಡ್ ಕಾಕ್‌ಪಿಟ್ ಫೀಚರ್ ಉಬ್ಬು ತಗ್ಗುಗಳಿರುವ ರಸ್ತೆಗಳಲ್ಲಿ ಪಾರದರ್ಶಕ ಹುಡ್‌ನ ಅನುಭವವನ್ನು ನೀಡುತ್ತದೆ, ಇದರಿಂದ ನೀವು ಕಾರಿನ ಮುಂಭಾಗದಲ್ಲಿ ಮತ್ತು ಕೆಳಗೆ ಏನಿದೆ ಎಂಬುದನ್ನು ನೋಡಬಹುದು.

 ಇದನ್ನು ಕೂಡ ಓದಿ: ವೀಕ್ಷಿಸಿ: ಬೇಸಿಗೆಯಲ್ಲಿ ನಿಮ್ಮ ಕಾರಿನ AC ಉತ್ತಮವಾಗಿ ಕೆಲಸ ಮಾಡುವಂತೆ ಮಾಡುವುದು ಹೇಗೆ

 ಭಾರತದಲ್ಲಿ ಬಿಡುಗಡೆ ಯಾವಾಗ ಮತ್ತು ಬೆಲೆ

 ಮರ್ಸಿಡಿಸ್-ಬೆಂಜ್ EQG ಭಾರತದಲ್ಲಿ 2025 ರ ಮಧ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಮತ್ತು ಆರಂಭಿಕ ಬೆಲೆಯು ರೂ. 3 ಕೋಟಿ (ಎಕ್ಸ್ ಶೋರೂಂ) ಎಂದು ನಿರೀಕ್ಷಿಸಲಾಗಿದೆ. ಇದು ಮರ್ಸಿಡಿಸ್ ಬೆಂಝ್ G-ಕ್ಲಾಸ್ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ ಮಾಡೆಲ್ ಗಳಿಗೆ ಪರ್ಯಾಯ ಎಲೆಕ್ಟ್ರಿಕ್ ಆಯ್ಕೆಯಾಗಿದೆ.

 ಇನ್ನಷ್ಟು ಓದಿ: ಮರ್ಸಿಡಿಸ್-ಬೆಂಜ್ G-ಕ್ಲಾಸ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮರ್ಸಿಡಿಸ್ eqg

1 ಕಾಮೆಂಟ್
1
S
sumeet v shah
Apr 24, 2024, 9:18:02 PM

Nice article Rohit.

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಮರ್ಸಿಡಿಸ್ eqg

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience