• English
  • Login / Register

ಎಲೆಕ್ಟ್ರಿಕ್ ಕಾರ್ ಕಂಪನಿಗಳು ಕೇವಲ 0-80% ಚಾರ್ಜಿಂಗ್ ಸಮಯವನ್ನು ಹೈಲೈಟ್ ಮಾಡುತ್ತವೆ, ಯಾಕೆ ಅನ್ನೋದು ಗೊತ್ತಾ?

ಹುಂಡೈ ಅಯಾನಿಕ್ 5 ಗಾಗಿ tarun ಮೂಲಕ ಏಪ್ರಿಲ್ 14, 2023 10:54 pm ರಂದು ಮಾರ್ಪಡಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಹುತೇಕ ಎಲ್ಲಾ ಕಾರುಗಳಿಗೆ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ಏಕೆ ಕೇವಲ 80 ಪ್ರತಿಶತ ಚಾರ್ಜ್‌ವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳೋಣ.

Hyundai ioniq 5

ಎಲೆಕ್ಟ್ರಿಕ್ ಕಾರುಗಳ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಜನರು ತಮ್ಮ ಮುಂದಿನ ಕಾರು ಎಲೆಕ್ಟ್ರಿಕ್ ಆಗಿರಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ. ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ವೆಚ್ಚವು ಸಾಮಾನ್ಯ ಪೆಟ್ರೋಲ್-ಡೀಸೆಲ್ ಕಾರುಗಳಿಗಿಂತ ಸ್ವಲ್ಪ ಹೆಚ್ಚಾದರೂ, ಎಲೆಕ್ಟ್ರಿಕ್ ಕಾರುಗಳ ಚಾಲನೆಯ ವೆಚ್ಚವು ತುಂಬಾ ಕಡಿಮೆಯಾಗಿದೆ. ಮಹಾನಗರಗಳಲ್ಲಿ  ಅಥವಾ ಎತ್ತರದ ಪ್ರದೇಶಗಳಲ್ಲಿ ವಾಸಿಸುವವರು ತಮ್ಮ ಪಾರ್ಕಿಂಗ್ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಚಾರ್ಜರ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ, ಸಾರ್ವಜನಿಕ ಚಾರ್ಜರ್‌ಗಳ ಮೂಲಕ ವೇಗವಾಗಿ ಚಾರ್ಜ್ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.

ಫಾಸ್ಟ್ ಚಾರ್ಜಿಂಗ್ ಬಗ್ಗೆ ನಿಮಗೆ ಪರಿಚಯವಿದ್ದರೆ, ಕಾರು ಕಂಪನಿಗಳು ಪೂರ್ಣ ಚಾರ್ಜಿಂಗ್ ಅಲ್ಲದೇ ಕೇವಲ 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಸಮಯವನ್ನು ಏಕೆ ಹೈಲೈಟ್ ಮಾಡುತ್ತವೆ ಎಂದು ನಿಮಗೆ ಸಂದೇಹ ಉಂಟಾಗಿರಬಹುದು. ನಮ್ಮ ಎಲ್ಲಾ ಸಂದೇಹಗಳ ನಿವಾರಣೆಗಾಗಿ ನಾವು ಹ್ಯುಂಡೈ ಅಯಾನಿಕ್ 5 ಇವಿ ಅನ್ನು ನಮ್ಮ ಟೆಸ್ಟ್ ಕಾರು ಆಗಿ ಆಯ್ಕೆ ಮಾಡಿದ್ದೇವೆ. ಇವಿ ಯ ಫಾಸ್ಟ್ ಚಾರ್ಜಿಂಗ್ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ನಾವಿಲ್ಲಿ ತಿಳಿಯೋಣ:

 

ಹ್ಯುಂಡೈ ಅಯಾನಿಕ್ 5 ಇವಿ ಯಿಂದ ತಿಳಿದುಬಂದ ವಿಷಯಗಳು

Hyundai ioniq 5ನಾವು ಅಯಾನಿಕ್ 5 ಅನ್ನು ಸುಸ್ ರಸ್ತೆಯಲ್ಲಿರುವ (ಪುಣೆ, ಮಹಾರಾಷ್ಟ್ರ) ಶೆಲ್ ಸ್ಟೇಷನ್‌ಗೆ ತೆಗೆದುಕೊಂಡು ಹೋದೆವು, ಅಲ್ಲಿ 120kW ಫಾಸ್ಟ್ ಚಾರ್ಜರ್ ಅನ್ನು ಸ್ಥಾಪಿಸಲಾಗಿದೆ. ಬ್ಯಾಟರಿಯಲ್ಲಿ 25 ಪ್ರತಿಶತದಷ್ಟು ಬ್ಯಾಟರಿ ಉಳಿದಿರುವುದರಿಂದ, ಸಂಪೂರ್ಣವಾಗಿ ಚಾರ್ಜ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲು ನಾವು ವಾಹನವನ್ನು ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗೆ ಸಂಪರ್ಕಿಸಿದ್ದೇವೆ. ನಮ್ಮ ಪರೀಕ್ಷಾ ಫಲಿತಾಂಶಗಳು ಇಲ್ಲಿವೆ:

ಚಾರ್ಜಿಂಗ್ ಶೇಕಡ

ಸಮಯ

25 ರಿಂದ 30 ಶೇಕಡ

2 ನಿಮಿಷಗಳು

30 ರಿಂದ 40 ಶೇಕಡ

4 ನಿಮಿಷಗಳು

40 ರಿಂದ 50 ಶೇಕಡ

3 ನಿಮಿಷಗಳು

50 ರಿಂದ 60 ಶೇಕಡ

4 ನಿಮಿಷಗಳು

60 ರಿಂದ 70 ಶೇಕಡ

5 ನಿಮಿಷಗಳು

70 ರಿಂದ 80 ಶೇಕಡ

6 ನಿಮಿಷಗಳು

80 ರಿಂದ 90 ಶೇಕಡ

19 ನಿಮಿಷಗಳು

90 ರಿಂದ 95 ಶೇಕಡ

15 ನಿಮಿಷಗಳು

 ಮುಖ್ಯಾಂಶಗಳು:

  •  80 ಪ್ರತಿಶತದವರೆಗೆ ತಲುಪುವಲ್ಲಿ ಕೂಡಲಾದ ಪ್ರತಿ 10 ಪ್ರತಿಶತ ಚಾರ್ಜ್‌ಗೆ, ಅಯಾನಿಕ್ 5 ಸುಮಾರು ಮೂರರಿಂದ ಐದು ನಿಮಿಷಗಳು ಬೇಕಾದವು.
  •  120kW ಚಾರ್ಜರ್‌ನಿಂದ, ನೀವು ಇವಿ ಅನ್ನು ಸುಮಾರು 30 ರಿಂದ 40 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಮಾಡಬಹುದು.
  •  ಆದಾಗ್ಯೂ, ಒಮ್ಮೆ ಚಾರ್ಜ್ 80 ಪ್ರತಿಶತವನ್ನು ತಲುಪಿದ ಬಳಿಕ ಮುಂದಿನ 10 ಪ್ರತಿಶತ ಚಾರ್ಜ್ ಹೆಚ್ಚಳಕ್ಕೆ 20 ನಿಮಿಷಗಳು ಬೇಕಾಗುತ್ತವೆ.
  •  90 ರಿಂದ 95 ಪ್ರತಿಶತ ಚಾರ್ಜಿಂಗ್‌ಗೆ ಇನ್ನೂ 15 ನಿಮಿಷಗಳು ಬೇಕಾದವು.
  •  95 ಪ್ರತಿಶತದಷ್ಟು ಚಾರ್ಜ್‌ನೊಂದಿಗೆ, ಡ್ರೈವರ್ ಡಿಸ್‌ಪ್ಲೇಯು ಇಕೋ ಮೋಡ್‌ನಲ್ಲಿ 447 ಕಿಲೋಮೀಟರ್, ಸಾಧಾರಣದಲ್ಲಿ 434 ಕಿಲೋಮೀಟರ್ ಮತ್ತು ಸ್ಪೋರ್ಟ್‌ನಲ್ಲಿ 420 ಕಿಲೋಮೀಟರ್ ವ್ಯಾಪ್ತಿಯನ್ನು ತೋರಿಸುತ್ತಿತ್ತು.

 

ಅದು 80 ಪ್ರತಿಶತಕ್ಕಿಂತ ಹೆಚ್ಚಿನ ಚಾರ್ಜಿಂಗ್‌ಗೆ ಏಕೆ ಅಧಿಕ ಸಮಯ ತೆಗೆದುಕೊಂಡಿತು?

          View this post on Instagram                      

A post shared by CarDekho India (@cardekhoindia)

 80 ಪ್ರತಿಶತದವರೆಗೆ, ಅಯಾನಿಕ್ 5 ಗರಿಷ್ಠ 120kW ಸಾಮರ್ಥ್ಯದೊಂದಿಗೆ ಚಾರ್ಜ್ ಆಗುತ್ತಿತ್ತು, ಆದರೆ ಬಳಿಕ ಎಲ್ಲಾ ಇತರ ಎಲೆಕ್ಟ್ರಿಕ್ ಕಾರುಗಳಂತೆ, ವೇಗವು 10-20kW ಗೆ ಇಳಿಕೆಯಾಯಿತು. ಯಾವುದೇ ರೀತಿಯ ಫಾಸ್ಟ್ ಚಾರ್ಜರ್ ಆಗಿರಲಿ,  80 ಪ್ರತಿಶತದ ನಂತರ, ಪವರ್ 10-20kW ಗೆ ಇಳಿಕೆಯಾಗುತ್ತದೆ.

 80 ರಿಂದ 100 ಪ್ರತಿಶತದವರೆಗೆ ಚಾರ್ಜಿಂಗ್ ದೀರ್ಘವಾಗಿರಲು ಪ್ರಮುಖ ಕಾರಣವೆಂದರೆ ವೇಗದ ಚಾರ್ಜ್ ಚಕ್ರದಲ್ಲಿ ಬ್ಯಾಟರಿ ಬಿಸಿಯಾಗಲು ಪ್ರಾರಂಭಿಸುತ್ತದೆ. ನಿರಂತರ ಹೆಚ್ಚಿನ ತಾಪಮಾನವು ಬ್ಯಾಟರಿಗೆ ಆರೋಗ್ಯಕರವಲ್ಲ ಮತ್ತು ಚಾರ್ಜಿಂಗ್ ವೇಗವು ಕಡಿಮೆ ಯಾಗುವುದು ಅದನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಗಳು ಹೆಚ್ಚಿನ ವೋಲ್ಟೇಜ್‌ಗಳನ್ನು ದೀರ್ಘಕಾಲದವರೆಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಏಕೆಂದರೆ ಅದರಿಂದಾಗಿ ಕಾಲಾನಂತರದಲ್ಲಿ ಪ್ಯಾಕ್‌ನ ಆರೋಗ್ಯ ಕೆಡಲು ಪ್ರಾರಂಭವಾಗುತ್ತದೆ.

 ಫಾಸ್ಟ್ ಚಾರ್ಜಿಂಗ್‌ನಿಂದಾಗಿ ನಿಮ್ಮ ಮೊಬೈಲ್ ಬಿಸಿಯಾಗಲು ಪ್ರಾರಂಭಿಸಿದಾಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದೇ ರೀತಿ ಕಾರ್ಯನಿರ್ವಹಿಸುವುದನ್ನು ನೀವು ಗಮನಿಸಿರಬಹುದು. ಈ ರೀತಿ ಯೋಚಿಸಿ - ನೀವು ನಿಮ್ಮ ಚೀಲವನ್ನು ಪ್ಯಾಕ್ ಮಾಡುತ್ತಿದ್ದೀರಿ ಮತ್ತು ನೀವು ಬಟ್ಟೆಗಳನ್ನು 80 ಪ್ರತಿಶತದವರೆಗೆ ಅಥವಾ ಸೂಟ್‌ಕೇಸ್‌ನ ಬಹುತೇಕ ಭಾಗ ತುಂಬಿಸಿದ್ದೀರಿ. ಒಮ್ಮೆ ನೀವು ಆ ಮಟ್ಟವನ್ನು ತಲುಪಿದ ನಂತರ, ಮುಂದಿನ ಪ್ಯಾಕಿಂಗ್ ಅನ್ನು ವಿಶ್ಲೇಷಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ಹೆಚ್ಚು ಸಮಯ ಬೇಕಾಗುತ್ತದೆ.

Ever Wondered Why Electric Car Manufacturers Only Give 0-80% Charging Time? Here’s The Explanation

 ಯಾವುದೇ ಎಲೆಕ್ಟ್ರಿಕ್ ಕಾರಿಗೆ, ಶೇಕಡಾ 80 ರಷ್ಟು, ಬ್ಯಾಟರಿ ಸೆಲ್‌ಗಳು ಏಕರೂಪವಲ್ಲದ ರೀತಿಯಲ್ಲಿ ಚಾರ್ಜ್ ಆಗುತ್ತವೆ. ಆದಾಗ್ಯೂ, 80 ಪ್ರತಿಶತದಿಂದ ಮುಂದಕ್ಕೆ, ಕೋಶಗಳು ಭರ್ತಿಯಾಗುವವರೆಗೆ ಏಕರೂಪವಾಗಿ ಚಾರ್ಜ್ ಆಗುತ್ತವೆ. ಸಿಸ್ಟಮ್ ಕೋಶಗಳನ್ನು ಗುರುತಿಸುವುದರಿಂದ ಮತ್ತು ಬ್ಯಾಟರಿಯನ್ನು ಚಾರ್ಜ್ ಮಾಡುವುದರಿಂದ, ಇದು ಸ್ವಯಂಪ್ರೇರಣೆಯಿಂದ ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುತ್ತದೆ. ಈ ಸ್ಮಾರ್ಟ್ ಪತ್ತೆ ವ್ಯವಸ್ಥೆಯು ಐಫೋನ್‌ಗಳಲ್ಲಿಯೂ ಕಂಡುಬರುತ್ತದೆ, ಅಲ್ಲಿ ಅವು ತ್ವರಿತವಾಗಿ 80 ಪ್ರತಿಶತದಷ್ಟು ಚಾರ್ಜ್ ಆಗುತ್ತವೆ ಮತ್ತು ನಂತರ ಕಡಿಮೆ ಚಾರ್ಜಿಂಗ್ ವೇಗವನ್ನು ಹೊಂದಿರುತ್ತವೆ.

 ಈಗ ಈ ಚಾರ್ಜಿಂಗ್ ವ್ಯವಸ್ಥೆಯು ಫಾಸ್ಟ್ ಚಾರ್ಜರ್‌ಗೆ ಕಡ್ಡಾಯವಾಗಿರಬೇಕಾಗಿಲ್ಲ. ಹೆಚ್ಚಿನ ಎಸಿ ಚಾರ್ಜರ್‌ಗಳು 7kW ನಿಂದ 11kW ವರೆಗಿನ ಸಾಮರ್ಥ್ಯವನ್ನು ಹೊಂದಿರುವುದರಿಂದ, ವೋಲ್ಟೇಜ್ ದೊಡ್ಡ ವ್ಯತ್ಯಾಸದಿಂದ ಕಡಿಮೆಯಾಗುವುದಿಲ್ಲ, ಆದರೆ ಸಣ್ಣ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಅದಕ್ಕಾಗಿಯೇ ಕಾರ್ ಕಂಪನಿಗಳು ಹೆಚ್ಚಾಗಿ 0 ರಿಂದ 80 ಪ್ರತಿಶತ ಅಥವಾ 10-80 ಪ್ರತಿಶತದಷ್ಟು ಫಾಸ್ಟ್ ಚಾರ್ಜಿಂಗ್ ಸಮಯವನ್ನು ಹೈಲೈಟ್ ಮಾಡುತ್ತವೆ.

 ಇನ್ನಷ್ಟು ಓದಿ: ಹುಂಡೈ ಅಯಾನಿಕ್ 5 ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಅಯಾನಿಕ್ 5

Read Full News

explore ಇನ್ನಷ್ಟು on ಹುಂಡೈ ಅಯಾನಿಕ್ 5

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience