• English
  • Login / Register

ಭಾರತದಲ್ಲಿನ ಟಾಪ್ 5 ಸ್ಪೀಡ್‌ EV ಚಾರ್ಜರ್‌ಗಳು

ಆಡಿ ಈ-ಟ್ರಾನ್ ಗಾಗಿ dipan ಮೂಲಕ ಮೇ 30, 2024 10:05 pm ರಂದು ಪ್ರಕಟಿಸಲಾಗಿದೆ

  • 181 Views
  • ಕಾಮೆಂಟ್‌ ಅನ್ನು ಬರೆಯಿರಿ

ದೇಶದಲ್ಲಿ EVಗಳ ಪ್ರಾರಂಭವು ವೇಗವಾದ ಚಾರ್ಜಿಂಗ್ ಆಯ್ಕೆಗಳಿಗೆ ದಾರಿ ಮಾಡಿಕೊಟ್ಟಿದೆ

Hyundai India Partners With Shell India To Expand The EV Charging Network |  CarDekho.com

ಭಾರತದ ಎಲೆಕ್ಟ್ರಿಕ್ ವೆಹಿಕಲ್ (EV) ಮಾರುಕಟ್ಟೆ ಬೆಳೆದಂತೆ, ವೇಗದ ಮತ್ತು ಸಮರ್ಥ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ರಮುಖ ವಾಹನ ತಯಾರಕರು ಮತ್ತು ಎನರ್ಜಿ ಕಂಪನಿಗಳು ದೇಶದಾದ್ಯಂತ ಹೈ-ಸ್ಪೀಡ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ ಈ ಬೇಡಿಕೆಯನ್ನು ಪೂರೈಸಲು ಮುಂದಾಗುತ್ತಿವೆ. ಈ ವಿಕಸನಗೊಳ್ಳುತ್ತಿರುವ ಮಾರುಕಟ್ಟೆಯಲ್ಲಿ ಇತ್ತೀಚಿನ ಪ್ರಮುಖ ಅಂಶವೆಂದರೆ ಹ್ಯುಂಡೈ 180 kW ಚಾರ್ಜರ್ ಅನ್ನು ಚೆನ್ನೈನಲ್ಲಿ ಸ್ಥಾಪಿಸಿದ್ದು, ತಮಿಳುನಾಡಿನಲ್ಲಿ ಈ ರೀತಿಯದ್ದು ಮೊದಲನೆಯದನ್ನು ಎನ್ನಲಾಗಿದೆ.  

ಹ್ಯುಂಡೈನ ಮಹತ್ವದ ಬೆಳವಣಿಗೆಯ ನಂತರ, ಭಾರತದಲ್ಲಿ ಬಳಕೆಗೆ ಪ್ರಸ್ತುತ ಲಭ್ಯವಿರುವ ವೇಗವಾದ EV ಚಾರ್ಜರ್‌ಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡಲು ನಾವು ನಿರ್ಧರಿಸಿದ್ದೇವೆ. ಭಾರತದ ವಿದ್ಯುತ್ ಚಲನಶೀಲತೆಯ ಭವಿಷ್ಯವನ್ನು ರೂಪಿಸುವ ಪ್ರಮುಖ ಸೌಲಭ್ಯಗಳ ಕುರಿತು ಒಂದು ವಿವರವಾದ ನೋಟ ಇಲ್ಲಿದೆ:

ಆಡಿ - 450 ಕಿ.ವ್ಯಾ

 ದೇಶದ ಅತ್ಯಂತ ಶಕ್ತಿಶಾಲಿ ಚಾರ್ಜಿಂಗ್ ಸ್ಟೇಷನ್ ಅನ್ನು ಅಭಿವೃದ್ಧಿಪಡಿಸಲು ಆಡಿ ಚಾರ್ಜ್‌ಝೋನ್‌ನೊಂದಿಗೆ ಸಹಭಾಗಿತ್ವಗೊಂಡಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆಡಿ ಚಾರ್ಜಿಂಗ್ ಹಬ್ ಒಟ್ಟು 450kW ಸಾಮರ್ಥ್ಯವನ್ನು ಹೊಂದಿದೆ, ಎಲೆಕ್ಟ್ರಿಕ್ ವಾಹನಕ್ಕೆ 360kW ಶಕ್ತಿಯನ್ನು ನೀಡುತ್ತದೆ ಮತ್ತು ಹೆಚ್ಚಿನ ಪರ್ಫಾರ್ಮೆನ್ಸ್‌ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು 500 amp ಲಿಕ್ವಿಡ್-ಕೂಲ್ಡ್ ಗನ್‌ನಿಂದ ಚಾಲಿತವಾಗಿದೆ. ನೀವು ಆಶ್ಚರ್ಯ ಪಡುತ್ತಿದ್ದರೆ, ಆಡಿ ಇ-ಟ್ರಾನ್ GT ಆಲ್ಟ್ರಾಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು 300kW ಗಿಂತ ಹೆಚ್ಚಿನ ವೇಗದ ಚಾರ್ಜಿಂಗ್‌ಗೆ ಸಪೋರ್ಟ್‌ ಆಗುತ್ತದೆ ಮತ್ತು 100 ಕಿಮೀ ವ್ಯಾಪ್ತಿಯನ್ನು ಕ್ರಮಿಸಲು ಸುಮಾರು 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Audi 450 kW charging hub at Banda-Kurla Complex, Mumbai

ಚಾರ್ಜಿಂಗ್ ಹಬ್ ಐದು ಚಾರ್ಜಿಂಗ್ ಪಾಯಿಂಟ್‌ಗಳನ್ನು ಮತ್ತು 24-ಗಂಟೆಗಳ ಪ್ರವೇಶದೊಂದಿಗೆ ಸಂಯೋಜಿತ ಲಾಂಜ್‌ ಅನ್ನು ಒಳಗೊಂಡಿದೆ. ಇದಲ್ಲದೆ, ಇದು ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯಿಂದ ಚಾಲಿತವಾಗಿದೆ ಮತ್ತು ಹೆಚ್ಚುವರಿ ವಿದ್ಯುತ್ ಅಗತ್ಯಗಳಿಗಾಗಿ ಸೋಲರ್‌ ರೂಫ್‌ ಪ್ಯಾನಲ್‌ಗಳನ್ನು ಹೊಂದಿದೆ. ಚಾರ್ಜರ್‌ಗಳು ಸಾರ್ವತ್ರಿಕವಾಗಿ ಹೊಂದಿಕೊಳ್ಳುತ್ತವೆ ಮತ್ತು ವಿಭಿನ್ನ ಚಾರ್ಜಿಂಗ್ ಪೋರ್ಟ್‌ಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ತೆರೆದಿರುತ್ತವೆ.

ಕಿಯಾ - 240 ಕಿ.ವ್ಯಾ

ಕಿಯಾ ಕೊಚ್ಚಿಯಲ್ಲಿ 240 ಕಿ.ವ್ಯಾ DC ಫಾಸ್ಟ್ ಚಾರ್ಜರ್ ಅನ್ನು ಸ್ಥಾಪಿಸಿದೆ. ಇದು 2022 ರಲ್ಲಿ ಪ್ರಾರಂಭವಾದಾಗ, ಇದು ಭಾರತದ ಅತ್ಯಂತ ವೇಗದ ಚಾರ್ಜಿಂಗ್ ಕೇಂದ್ರವಾಗಿತ್ತು. ಕೊಚ್ಚಿಯಲ್ಲಿರುವ ಕಿಯಾ  DC ಫಾಸ್ಟ್ ಚಾರ್ಜರ್ ಕೇವಲ ಕಿಯಾ ಗ್ರಾಹಕರಿಗೆ ಮಾತ್ರವಲ್ಲ, ಎಲ್ಲಾ EV ಮಾಲೀಕರಿಗೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಪ್ರತಿ ಬಳಕೆಗೆ ಪಾವತಿಸುವ ಮೂಲಕ ಈ ಸೌಲಭ್ಯದಲ್ಲಿ ಚಾರ್ಜ್ ಮಾಡಲು ಮುಕ್ತವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಮಾಹಿತಿಗಾಗಿ, ಕಿಯಾ EV6 350kW ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ, ಆದ್ದರಿಂದ ಆ ಮಾಲೀಕರು ಈ ರೀತಿಯ ಚಾರ್ಜರ್‌ಗಳಿಂದ ಅವರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ.

ಎಕ್ಸಿಕಾಮ್ - 200 ಕಿ.ವ್ಯಾ

ಎಕ್ಸಿಕಾಮ್ ಭಾರತದಲ್ಲಿ 5,000 ಕ್ಕೂ ಹೆಚ್ಚು EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. 200 ಕಿ.ವ್ಯಾ ಮೊಡೆಲ್‌ಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ! ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಕಂಪನಿಯು ಒಂದು ಹೆಜ್ಜೆ ಮುಂದೆ ಹೋಗಿ 400 ಕಿ.ವ್ಯಾ ಚಾರ್ಜರ್‌ಗಳನ್ನು ಪರಿಚಯಿಸಿದೆ. ಆದರೆ, ಅಂತಹ ಚಾರ್ಜರ್ ಅನ್ನು ಅಳವಡಿಸುವ ಬಗ್ಗೆ ಅಧಿಕೃತವಾಗಿ ಏನನ್ನೂ ಘೋಷಿಸಲಾಗಿಲ್ಲ. ಪರಿಣಾಮವಾಗಿ, ಈ ಪಟ್ಟಿಯಲ್ಲಿ ಇದು ಮೂರನೇ ಸ್ಥಾನವನ್ನು ಪಡೆದಿದೆ.

Exicom fast charger charging the MG ZS EV

ಹ್ಯುಂಡೈ - 180 ಕಿ.ವ್ಯಾ

 ಹ್ಯುಂಡೈ ಹೊಸ 180 ಕಿ.ವ್ಯಾಟ್‌ ಚಾರ್ಜರ್ ಅನ್ನು ಚೆನ್ನೈನಲ್ಲಿ ಸ್ಥಾಪಿಸಿದೆ, ಇದು ತಮಿಳುನಾಡಿನಲ್ಲಿ ಮೊದಲನೆಯದು. ಹಾಗೆಯೇ, ಕೊರಿಯನ್ ವಾಹನ ತಯಾರಕರು ಈ ಹಿಂದೆ ದೇಶದಾದ್ಯಂತ 11 ಸ್ಥಳಗಳಲ್ಲಿ 150 kW ಚಾರ್ಜರ್‌ಗಳನ್ನು ಸ್ಥಾಪಿಸಿದ್ದರು. ಕಿಯಾ ಒನ್‌ನಂತೆ ಈ ಚಾರ್ಜರ್‌ಗಳು ಸಾರ್ವತ್ರಿಕ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿವೆ. ಹ್ಯುಂಡೈ ತಮಿಳುನಾಡಿನಲ್ಲಿ ಇನ್ನೂ 1,000 ಚಾರ್ಜರ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದೆ. ಹ್ಯುಂಡೈನ ಲೈನ್‌ಆಪ್‌ನಲ್ಲಿ, Ioniq 5 EV ಈ ಚಾರ್ಜಿಂಗ್ ವೇಗವನ್ನು ಸುಲಭವಾಗಿ ಬಳಸಿಕೊಳ್ಳಬಹುದು ಆದರೆ ಕೋನಾ ಎಲೆಕ್ಟ್ರಿಕ್‌ಗೆ ಒಂದು ಗಂಟೆಯೊಳಗೆ 0-80 ಶೇಕಡಾ ಟಾಪ್ ಅಪ್‌ಗೆ 50kW ಮಾತ್ರ ಅಗತ್ಯವಿದೆ.

Hyundai 180 kW DC fast charger in Chennai

ಶೆಲ್ - 120 ಕಿ.ವ್ಯಾ

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ EV ಚಾರ್ಜರ್‌ಗಳನ್ನು ಹೊಂದಿರುವ ಕಂಪನಿಗಳಲ್ಲಿ ಶೆಲ್ ಒಂದಾಗಿದೆ, ಇದು ಆದರ ಅನೇಕ ಇಂಧನ ಕೇಂದ್ರಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ನ ಹೊಂದಿದೆ. ಈ EV ಚಾರ್ಜರ್‌ಗಳು ಯುನಿವರ್ಸಲ್‌ ಪ್ಲಗ್‌ಗಳೊಂದಿಗೆ 120 ಕಿ.ವ್ಯಾಟ್‌ವರೆಗಿನ ವೇಗವನ್ನು ನೀಡುತ್ತವೆ, ಆದ್ದರಿಂದ ಯಾವುದೇ ತಯಾರಕರ ಯಾವುದೇ EV ಅನ್ನು ಚಾರ್ಜ್ ಮಾಡಲು ಅವುಗಳನ್ನು ಬಳಸಬಹುದು. ಶೆಲ್ ಚಾರ್ಜಿಂಗ್ ಹಬ್ ದಿನದ 24 ಗಂಟೆಯೂ ಹಾಗು ವಾರದ ಏಳು ದಿನಗಳಲ್ಲಿಯೂ ಓಪನ್‌ ಇರುತ್ತದೆ ಅಥವಾ ಪ್ರತಿ ಶೆಲ್ ಸ್ಟೇಷನ್‌ನ ಕಾರ್ಯಾಚರಣೆಯ ಸಮಯವನ್ನು ಅವಲಂಬಿಸಿರುತ್ತದೆ.

Shell EV charger

ನೀವು ಭಾರತದಲ್ಲಿ ಬಳಸಿದ ಅತಿ ವೇಗದ EV ಚಾರ್ಜಿಂಗ್ ಸ್ಟೇಷನ್ ಯಾವುದು? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಇನ್ನಷ್ಟು ಓದಿ : ಇ-ಟ್ರಾನ್ ಆಟೋಮ್ಯಾಟಿಕ್‌

was this article helpful ?

Write your Comment on Audi ಈ-ಟ್ರಾನ್

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience